Ezekiel 41 (IRVK)
1 ಆಮೇಲೆ ಅವನು ನನ್ನನ್ನು ದೇವಾಲಯದ ಪರಿಶುದ್ಧ ಸ್ಥಳಕ್ಕೆ ಕರೆದುಕೊಂಡು ಬಂದು, ಅದರ ದ್ವಾರಕಂಬಗಳನ್ನು ಅಳತೆ ಮಾಡಲು, ಅದರ ಎರಡು ಕಡೆಗಳು ಆರು ಮೊಳ ಅಗಲವಾಗಿತ್ತು. 2 ದ್ವಾರದ ಅಗಲವು ಹತ್ತು ಮೊಳಗಳೂ, ದ್ವಾರದ ಎರಡು ಪಕ್ಕದ ಗೋಡೆಗಳ ಅಗಲವು ಐದೈದು ಮೊಳಗಳೂ ಆಗಿದ್ದವು. ಅವನು ಪರಿಶುದ್ಧ ಸ್ಥಳವನ್ನು ಅಳತೆಮಾಡಿದಾಗ ಅದರ ಉದ್ದ ನಲ್ವತ್ತು ಮೊಳಗಳೂ, ಅಗಲ ಇಪ್ಪತ್ತು ಮೊಳಗಳೂ ಇದ್ದವು. 3 ಆಮೇಲೆ ಅವನು ಇನ್ನೂ ಮುಂದಕ್ಕೆ ಹೋಗಿ, ಮಹಾಪರಿಶುದ್ಧ ಸ್ಥಳದ ಕಂಬಗಳನ್ನು ಅಳತೆ ಮಾಡಲು ದ್ವಾರದ ಒಂದೊಂದು ಕಂಬದ ಅಗಲ ಎರಡೆರಡು ಮೊಳಗಳೂ, ದ್ವಾರದ ಅಗಲವು ಆರು ಮೊಳಗಳೂ, ದ್ವಾರದ ಪಕ್ಕದ ಗೋಡೆಗಳ ಅಗಲವು ಏಳು ಮೊಳವೆಂದು ಅಳೆದನು. 4 ಅದರ ಕೋಣೆಗಳ ಉದ್ದವು ಇಪ್ಪತ್ತು ಮೊಳಗಳೂ, ಅಗಲವು ಇಪ್ಪತ್ತು ಮೊಳಗಳೂ ಇದ್ದವು. ಆಗ ಅವನು ನನಗೆ, “ಇದು ಮಹಾಪರಿಶುದ್ಧ ಸ್ಥಳ” ಎಂದು ಹೇಳಿದನು. 5 ಆಮೇಲೆ ಅವನು ಅಳತೆ ಮಾಡಲು, ದೇವಸ್ಥಾನದ ಗೋಡೆಯ ಅಗಲ ಆರು ಮೊಳಗಳೂ, ದೇವಸ್ಥಾನದ ಸುತ್ತುಮುತ್ತಲೂ ಎಲ್ಲಾ ಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ನಾಲ್ಕು ನಾಲ್ಕು ಮೊಳಗಳೂ ಇದ್ದವು. 6 ಆ ಕೊಠಡಿಗಳು ಒಂದರ ಮೇಲೊಂದು ಮೂರು ಅಂತಸ್ತು ಆಗಿದ್ದವು; ಒಂದೊಂದು ಅಂತಸ್ತಿನಲ್ಲಿ ಮೂವತ್ತು ಕೊಠಡಿಗಳಿದ್ದವು; ದೇವಸ್ಥಾನದ ಗೋಡೆಯು ಮೆಟ್ಟಿಲುಗಳಿಂದ ಕಟ್ಟಲ್ಪಟ್ಟಿತ್ತು. ಗೋಡೆಯಲ್ಲಿ ರಂಧ್ರವಿಲ್ಲದೆ ಆ ಮೆಟ್ಟಿಲುಗಳೇ ಸುತ್ತಣ ಕೊಠಡಿಗಳ ತೊಲೆಗಳಿಗೆ ಆಧಾರವಾಗಿದ್ದವು. ಆದರೆ ಮನೆಯ ಗೋಡೆಗೆ ಯಾವ ಆಧಾರವಿರಲಿಲ್ಲ. 7 ಸುತ್ತಣ ಅಂತಸ್ತುಗಳು ಮೇಲೆ ಹೋದ ಹಾಗೆಲ್ಲಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು. ಅವು ದೇವಸ್ಥಾನವನ್ನು ಸುತ್ತಿಕೊಂಡು ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಯಾಗಿ ತಬ್ಬಿಕೊಂಡಂತೆ ಕಟ್ಟಲ್ಪಟ್ಟಿತ್ತು. ಹೀಗೆ ಮೇಲಿನ ಅಂತಸ್ತುಗಳು ದೇವಸ್ಥಾನದ ಕಡೆಗೆ ಅಗಲವಾಗುತ್ತಾ ಬಂದವು. ಕೆಳಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದರು. 8 ದೇವಸ್ಥಾನದ ಸುತ್ತುಮುತ್ತಲೂ ಒಂದು ಜಗಲಿಯು ಕಾಣಿಸಿತು; ಅದು ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮೊಳದ ಅಳತೆ ಕೋಲಿನಷ್ಟು ಎತ್ತರವಾಗಿತ್ತು. 9 ಕೊಠಡಿಗಳ ಹೊರ ಗೋಡೆಯ ದಪ್ಪವು ಐದು ಮೊಳವಿತ್ತು ಮತ್ತು ಉಳಿದದ್ದು, ಒಳಗಿನ ಪಕ್ಕದ ಕೊಠಡಿಗಳ ಸ್ಥಳವಾಗಿತ್ತು. 10 ದೇವಸ್ಥಾನಕ್ಕೆ ಅಂಟಿಕೊಂಡ ಆ ಕೊಠಡಿಗಳಿಗೂ, ಪ್ರತ್ಯೇಕಿಸಿದ ಸ್ಥಳದ ಕೋಣೆಗಳಿಗೂ ನಡುವೆ ದೇವಸ್ಥಾನದ ಸುತ್ತುಮುತ್ತಲೂ ಇಪ್ಪತ್ತು ಮೊಳ ಅಂತರವಿತ್ತು. 11 ಆ ಎಲ್ಲಾ ಕೊಠಡಿಗಳ ಪ್ರವೇಶಕ್ಕೂ ಎರಡೇ ಬಾಗಿಲು, ಉತ್ತರಕ್ಕೊಂದು, ದಕ್ಷಿಣಕ್ಕೊಂದು. ಅವೆರಡೂ ಜಗಲಿಯ ಕಡೆಗಿದ್ದವು. ಆ ಜಗಲಿಗಳೂ ಎಲ್ಲಾ ಸುತ್ತಲಿನ ಅಗಲವು ಐದು ಮೊಳವಾಗಿತ್ತು. 12 ಪಶ್ಚಿಮದಲ್ಲಿ ಪ್ರತ್ಯೇಕಿಸಿದ ಸ್ಥಳದ ಹಿಂದಿನ ಶಾಲೆಯ ಅಗಲ ಎಪ್ಪತ್ತು ಮೊಳವೂ, ಉದ್ದ ತೊಂಭತ್ತು ಮೊಳವೂ, ಅದರ ಗೋಡೆಯ ದಪ್ಪ ಐದು ಮೊಳವಾಗಿತ್ತು. 13 ಆ ಪುರುಷನು ಅಳೆಯಲು, ದೇವಸ್ಥಾನದ ಉದ್ದ ನೂರು ಮೊಳವೂ, ಪ್ರತ್ಯೇಕಿಸಿದ ಸ್ಥಳವನ್ನೂ ಮತ್ತು ಕಟ್ಟಡವನ್ನೂ ಗೋಡೆಗಳ ಸಹಿತವಾಗಿ ನೂರು ಮೊಳ ಉದ್ದವೆಂದು ಅಳೆದನು. 14 ಇದಲ್ಲದೆ ದೇವಸ್ಥಾನದ ಮುಂಭಾಗ ಮತ್ತು ಪೂರ್ವದ ಕಡೆಗೆ ಇದ್ದ ಪ್ರತ್ಯೇಕ ಸ್ಥಳ ಇವುಗಳ ಒಟ್ಟು ಅಗಲ ನೂರು ಮೊಳವಾಗಿದ್ದವು. 15 ಅವನು ಪ್ರತ್ಯೇಕಿಸಿದ ಸ್ಥಳವನ್ನೂ, ಹಿಂದಿನ ಶಾಲೆಯನ್ನು ಆ ಪ್ರಾಕಾರದ ಕಡೆಯಲ್ಲಿ ಅಳತೆ ಮಾಡಲು ಅದರ ಉದ್ದ ಎರಡು ಪಕ್ಕದ ಗೋಡೆಗಳ ಸಹಿತ ನೂರು ಮೊಳವಿತ್ತು. 16 ಅವನು ಬಾಗಿಲುಗಳ ಕಂಬಗಳನ್ನೂ, ಇಕ್ಕಟ್ಟಾದ ಕಿಟಕಿಗಳನ್ನೂ ಮತ್ತು ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತಿನ ಬಾಗಿಲಿಗೆ ಎದುರಾಗಿ ಸುತ್ತಲೂ ಕಟ್ಟಲ್ಪಟ್ಟ ಗೋಡೆಗಳನ್ನೂ ಅಳೆದನು. 17 ದ್ವಾರದಿಂದ ಗರ್ಭಗೃಹದವರೆಗೂ ಮತ್ತು ಗೃಹದ ಗೋಡೆಗೆಲ್ಲಾ ಸುತ್ತುಮುತ್ತಲೂ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳಿಗಿದ್ದವು. 18 ಗೋಡೆಯ ಚೌಕಗಳಲ್ಲಿ ಕೆರೂಬಿಗಳೂ ಮತ್ತು ಖರ್ಜೂರ ಮರಗಳೂ ಚಿತ್ರಿತವಾಗಿದ್ದವು; ಎರಡೆರಡು ಕೆರೂಬಿಗಳ ನಡುವೆ ಒಂದೊಂದು ಖರ್ಜೂರ ಮರ; ಒಂದೊಂದು ಕೆರೂಬಿಗೆ ಎರಡೆರಡು ಮುಖಗಳಿತ್ತು. 19 ಖರ್ಜೂರ ಮರದ ಒಂದು ಪಕ್ಕ ಮನುಷ್ಯನ ಮುಖಕ್ಕೆ ಎದುರಾಗಿಯೂ, ಇನ್ನೊಂದು ಪಕ್ಕ ಸಿಂಹದ ಮುಖಕ್ಕೆ ಎದುರಾಗಿತ್ತು. ಹೀಗೆ ದೇವಸ್ಥಾನದ ಒಳಗಿನ ಭಾಗವೆಲ್ಲಾ ಮತ್ತು ಸುತ್ತುಮುತ್ತಲೂ ಚಿತ್ರಮಯವಾಗಿತ್ತು. 20 ನೆಲದಿಂದ ದ್ವಾರದ ಮೇಲಿನ ತನಕ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳಿದ್ದವು. 21 ಪರಿಶುದ್ಧ ಸ್ಥಳದ ಇನ್ನೊಂದು ಕಡೆಯ ಗೋಡೆಯ ಬಾಗಿಲ ಚೌಕಟ್ಟು ಚಚ್ಚೌಕವಾಗಿತ್ತು. ಮಹಾಪರಿಶುದ್ಧ ಸ್ಥಳದ ಈಚಿನ ಗೋಡೆಯ ಚೌಕಟ್ಟೂ ಹಾಗೆಯೇ ಇತ್ತು. 22 ಅಲ್ಲಿ ಮರದ ವೇದಿಕೆಯೊಂದಿತ್ತು. ಅದರ ಎತ್ತರ ಮೂರು ಮೊಳ, ಉದ್ದ ಎರಡು ಮೊಳವಾಗಿತ್ತು. ಅದರ ಮೂಲೆಗಳೂ, ಪೀಠವೂ, ಪಕ್ಕಗಳೂ ಮರದ್ದೇ ಆಗಿದ್ದವು. ಆ ಪುರುಷನು ನನಗೆ, “ಇದು ಯೆಹೋವನ ಸಮ್ಮುಖದ ಮೇಜು” ಎಂದು ಹೇಳಿದನು. 23 ಪರಿಶುದ್ಧ ಸ್ಥಳಕ್ಕೆ ಮತ್ತು ಮಹಾಪರಿಶುದ್ಧ ಸ್ಥಳಕ್ಕೆ ಎರಡೆರಡು ಬಾಗಿಲುಗಳಿದ್ದವು. 24 ಒಂದೊಂದು ಬಾಗಿಲಿಗೆ ಎರಡೆರಡು ಮಡಚುವ ಭಾಗಗಳಿದ್ದವು. ಈ ಕಡೆಯ ಬಾಗಿಲಿಗೆ ಎರಡು ಭಾಗ, ಆ ಕಡೆಯ ಬಾಗಿಲಿಗೆ ಎರಡು ಭಾಗಗಳು ಇದ್ದವು. 25 ಆ ಬಾಗಿಲುಗಳಲ್ಲಿ ಅಂದರೆ ಪರಿಶುದ್ಧ ಸ್ಥಳದ ಬಾಗಿಲುಗಳಲ್ಲಿ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳು ಗೋಡೆಗಳಲ್ಲಿ ಚಿತ್ರಿಸಲ್ಪಟ್ಟ ಹಾಗೆಯೇ ಇದ್ದವು. ದ್ವಾರಮಂಟಪದ ಹೊರಗಡೆ ಮರದ ಹಲಗೆಗಳಿದ್ದವು. 26 ದ್ವಾರಮಂಟಪದ ಪಕ್ಕದ ಗೋಡೆಗಳಲ್ಲಿ ತೆರೆಯಲಾಗದ ಕಿಟಕಿಗಳೂ ಇದ್ದವು. ಅವುಗಳ ಮೇಲೆ ಖರ್ಜೂರ ಮರಗಳು ಚಿತ್ರಿತವಾಗಿದ್ದವು ಮತ್ತು ಮೇಲೆ ತೂಗಾಡುವ ಮೇಲ್ಛಾವಣಿಗಳು ಇದ್ದವು.
In Other Versions
Ezekiel 41 in the ANGEFD
Ezekiel 41 in the ANTPNG2D
Ezekiel 41 in the AS21
Ezekiel 41 in the BAGH
Ezekiel 41 in the BBPNG
Ezekiel 41 in the BBT1E
Ezekiel 41 in the BDS
Ezekiel 41 in the BEV
Ezekiel 41 in the BHAD
Ezekiel 41 in the BIB
Ezekiel 41 in the BLPT
Ezekiel 41 in the BNT
Ezekiel 41 in the BNTABOOT
Ezekiel 41 in the BNTLV
Ezekiel 41 in the BOATCB
Ezekiel 41 in the BOATCB2
Ezekiel 41 in the BOBCV
Ezekiel 41 in the BOCNT
Ezekiel 41 in the BOECS
Ezekiel 41 in the BOGWICC
Ezekiel 41 in the BOHCB
Ezekiel 41 in the BOHCV
Ezekiel 41 in the BOHLNT
Ezekiel 41 in the BOHNTLTAL
Ezekiel 41 in the BOICB
Ezekiel 41 in the BOILNTAP
Ezekiel 41 in the BOITCV
Ezekiel 41 in the BOKCV
Ezekiel 41 in the BOKCV2
Ezekiel 41 in the BOKHWOG
Ezekiel 41 in the BOKSSV
Ezekiel 41 in the BOLCB
Ezekiel 41 in the BOLCB2
Ezekiel 41 in the BOMCV
Ezekiel 41 in the BONAV
Ezekiel 41 in the BONCB
Ezekiel 41 in the BONLT
Ezekiel 41 in the BONUT2
Ezekiel 41 in the BOPLNT
Ezekiel 41 in the BOSCB
Ezekiel 41 in the BOSNC
Ezekiel 41 in the BOTLNT
Ezekiel 41 in the BOVCB
Ezekiel 41 in the BOYCB
Ezekiel 41 in the BPBB
Ezekiel 41 in the BPH
Ezekiel 41 in the BSB
Ezekiel 41 in the CCB
Ezekiel 41 in the CUV
Ezekiel 41 in the CUVS
Ezekiel 41 in the DBT
Ezekiel 41 in the DGDNT
Ezekiel 41 in the DHNT
Ezekiel 41 in the DNT
Ezekiel 41 in the ELBE
Ezekiel 41 in the EMTV
Ezekiel 41 in the ESV
Ezekiel 41 in the FBV
Ezekiel 41 in the FEB
Ezekiel 41 in the GGMNT
Ezekiel 41 in the GNT
Ezekiel 41 in the HARY
Ezekiel 41 in the HNT
Ezekiel 41 in the IRVA
Ezekiel 41 in the IRVB
Ezekiel 41 in the IRVG
Ezekiel 41 in the IRVH
Ezekiel 41 in the IRVM
Ezekiel 41 in the IRVM2
Ezekiel 41 in the IRVO
Ezekiel 41 in the IRVP
Ezekiel 41 in the IRVT
Ezekiel 41 in the IRVT2
Ezekiel 41 in the IRVU
Ezekiel 41 in the ISVN
Ezekiel 41 in the JSNT
Ezekiel 41 in the KAPI
Ezekiel 41 in the KBT1ETNIK
Ezekiel 41 in the KBV
Ezekiel 41 in the KJV
Ezekiel 41 in the KNFD
Ezekiel 41 in the LBA
Ezekiel 41 in the LBLA
Ezekiel 41 in the LNT
Ezekiel 41 in the LSV
Ezekiel 41 in the MAAL
Ezekiel 41 in the MBV
Ezekiel 41 in the MBV2
Ezekiel 41 in the MHNT
Ezekiel 41 in the MKNFD
Ezekiel 41 in the MNG
Ezekiel 41 in the MNT
Ezekiel 41 in the MNT2
Ezekiel 41 in the MRS1T
Ezekiel 41 in the NAA
Ezekiel 41 in the NASB
Ezekiel 41 in the NBLA
Ezekiel 41 in the NBS
Ezekiel 41 in the NBVTP
Ezekiel 41 in the NET2
Ezekiel 41 in the NIV11
Ezekiel 41 in the NNT
Ezekiel 41 in the NNT2
Ezekiel 41 in the NNT3
Ezekiel 41 in the PDDPT
Ezekiel 41 in the PFNT
Ezekiel 41 in the RMNT
Ezekiel 41 in the SBIAS
Ezekiel 41 in the SBIBS
Ezekiel 41 in the SBIBS2
Ezekiel 41 in the SBICS
Ezekiel 41 in the SBIDS
Ezekiel 41 in the SBIGS
Ezekiel 41 in the SBIHS
Ezekiel 41 in the SBIIS
Ezekiel 41 in the SBIIS2
Ezekiel 41 in the SBIIS3
Ezekiel 41 in the SBIKS
Ezekiel 41 in the SBIKS2
Ezekiel 41 in the SBIMS
Ezekiel 41 in the SBIOS
Ezekiel 41 in the SBIPS
Ezekiel 41 in the SBISS
Ezekiel 41 in the SBITS
Ezekiel 41 in the SBITS2
Ezekiel 41 in the SBITS3
Ezekiel 41 in the SBITS4
Ezekiel 41 in the SBIUS
Ezekiel 41 in the SBIVS
Ezekiel 41 in the SBT
Ezekiel 41 in the SBT1E
Ezekiel 41 in the SCHL
Ezekiel 41 in the SNT
Ezekiel 41 in the SUSU
Ezekiel 41 in the SUSU2
Ezekiel 41 in the SYNO
Ezekiel 41 in the TBIAOTANT
Ezekiel 41 in the TBT1E
Ezekiel 41 in the TBT1E2
Ezekiel 41 in the TFTIP
Ezekiel 41 in the TFTU
Ezekiel 41 in the TGNTATF3T
Ezekiel 41 in the THAI
Ezekiel 41 in the TNFD
Ezekiel 41 in the TNT
Ezekiel 41 in the TNTIK
Ezekiel 41 in the TNTIL
Ezekiel 41 in the TNTIN
Ezekiel 41 in the TNTIP
Ezekiel 41 in the TNTIZ
Ezekiel 41 in the TOMA
Ezekiel 41 in the TTENT
Ezekiel 41 in the UBG
Ezekiel 41 in the UGV
Ezekiel 41 in the UGV2
Ezekiel 41 in the UGV3
Ezekiel 41 in the VBL
Ezekiel 41 in the VDCC
Ezekiel 41 in the YALU
Ezekiel 41 in the YAPE
Ezekiel 41 in the YBVTP
Ezekiel 41 in the ZBP