Isaiah 47 (IRVK)
1 ಯುವತಿಯೇ, ಬಾಬೆಲ್ ಪುರಿಯೇ, ಕೆಳಕ್ಕಿಳಿದು ಧೂಳಿನಲ್ಲಿ ಕುಳಿತುಕೋ,ಕಸ್ದೀಯರ ಯುವತಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ!ನಿನ್ನನ್ನು ಇನ್ನು ಕೋಮಲೆ ಮತ್ತು ಸುಕುಮಾರಿ ಎಂದು ಕರೆಯುವುದಿಲ್ಲ. 2 ಬೀಸುವ ಕಲ್ಲನ್ನು ಹಿಡಿದು ಹಿಟ್ಟನ್ನು ಬೀಸು, ಮುಸುಕನ್ನು ತೆಗೆದುಹಾಕಿ,ಈಜಾಡುವ ಬಟ್ಟೆಯ ನೆರಿಗೆಯನ್ನು ಹರಿದುಬಿಟ್ಟು, ಬೆತ್ತಲಾಗಿ ನದಿಗಳನ್ನು ಹಾದುಹೋಗು. 3 ನಿನ್ನ ಬೆತ್ತಲೆತನವು ಬಯಲಿಗೆ ಬಂದು, ನೀನು ನಾಚಿಕೆಗೀಡಾಗುವಿ,ನಾನು ಯಾರನ್ನೂ ಕರುಣಿಸದೆ ಮುಯ್ಯಿತೀರಿಸುವೆನು. 4 ನಮ್ಮ ವಿಮೋಚಕನಿಗೆ ಸೇನಾಧೀಶ್ವರನಾದ ಯೆಹೋವನೆಂಬ ನಾಮಧೇಯ, ಆತನೇ ಇಸ್ರಾಯೇಲಿನ ಪರಿಶುದ್ಧನು! 5 ಕಸ್ದೀಯರ ಯುವತಿಯೇ (ನಗರವೇ), ಮೌನವಾಗಿ ಕುಳಿತುಕೋ, ಕತ್ತಲೊಳಗೆ ಹೋಗು.ಏಕೆಂದರೆ ನೀನು ಇನ್ನು ರಾಜ್ಯಗಳ ರಾಣಿ ಎಂದು ಕರೆಯಲ್ಪಡುವುದಿಲ್ಲ. 6 ನಾನು ನನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವತ್ತನ್ನು ಹೊಲೆಗೆಡಿಸಿದೆನು.ಅವರನ್ನು ನಿನ್ನ ಕೈವಶ ಮಾಡಳು, ನೀನು ಅವರನ್ನು ಕರುಣಿಸದೆ ಬಹುಭಾರವಾದ ನೊಗವನ್ನು ಹೊರಿಸಿದಿ. 7 “ನಾನು ಶಾಶ್ವತವಾದ ರಾಣಿ” ಎಂದು ನೀನು ಅಂದುಕೊಂಡುಅವರ ಹಿಂಸೆಗಳನ್ನು ಮನಸ್ಸಿಗೆ ತಾರದೆ, ಅವುಗಳಿಂದ ನಿನಗಾಗುವ ಪರಿಣಾಮವನ್ನು ನೆನಸಿಕೊಳ್ಳಲಿಲ್ಲ. 8 “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ,ನಾನು ವಿಧವೆಯಾಗಿ ಕುಳಿತುಕೊಳ್ಳುವುದಿಲ್ಲ, ಪುತ್ರಶೋಕವನ್ನು ಅನುಭವಿಸುವುದಿಲ್ಲ” ಎಂದುಅಂದುಕೊಳ್ಳುವವಳೇ, ಭೋಗಾಸಕ್ತಳೇ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು. 9 ಒಂದೇ ದಿನದೊಳಗೆ, ಒಂದು ಕ್ಷಣದಲ್ಲಿ,ಪುತ್ರಶೋಕ ಮತ್ತು ವಿಧವೆಯ ಸ್ಥಿತಿ ಇವೆರಡೂ ನಿನಗುಂಟಾಗುವವು.ನೀನು ಎಷ್ಟು ಮಾಟಮಾಡಿದರೂ, ಎಷ್ಟೇ ಮಂತ್ರತಂತ್ರಗಳನ್ನು ನಡೆಸಿದರೂ ಇವುಗಳನ್ನು ಸಂಪೂರ್ಣವಾಗಿ ಅನುಭವಿಸುವಿ. 10 ನೀನು ನಿನ್ನ ಕೆಟ್ಟತನದಲ್ಲಿ ನಂಬಿಕೆಯಿಟ್ಟು, “ನನ್ನನ್ನು ಯಾರೂ ನೋಡರು?” ಎಂದುಕೊಂಡಿದ್ದಿ.ನನ್ನ ಜ್ಞಾನವಿವೇಕಗಳು ನಿನ್ನನ್ನು ಸೊಟ್ಟಗೆ ತಿರುಗಿಸಿದ್ದರಿಂದ,“ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ” ಎಂದು ಯೋಚಿಸಿಕೊಂಡಿದ್ದಿ. 11 ಹೀಗಿರಲು ನೀನು ಮಂತ್ರಿಸಿ ನಿವಾರಿಸಲಾರದ ಕೇಡು ನಿನಗೆ ಸಂಭವಿಸುವುದು,ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವುದು.ನೀನು ತಪ್ಪಿಸಿಕೊಳ್ಳಲಾಗದ ನಾಶನವು ನಿನ್ನ ಮೇಲೆ ಪಕ್ಕನೆ ಬರುವುದು. 12 ನೀನು ಬಾಲ್ಯಾರಭ್ಯ ಪ್ರಯಾಸಪಟ್ಟು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ,ಲೆಕ್ಕವಿಲ್ಲದ ನಿನ್ನ ಮಾಟಮಂತ್ರಗಳನ್ನೂ ಪ್ರಯೋಗಿಸಿ ಎದ್ದು ನಿಲ್ಲು.ಇದರಿಂದ ಒಂದು ವೇಳೆ ನಿನಗೆ ಪ್ರಯೋಜನವಾದೀತು. ಒಂದು ವೇಳೆ ನಿನ್ನ ಶತ್ರುವಿನಲ್ಲಿ ಭಯ ಹುಟ್ಟೀತು. 13 ಮಂತ್ರಾಲೋಚನೆಗಳನ್ನು ಕೇಳಿ ಕೇಳಿ ನಿನಗೆ ಸಾಕಾಯಿತಲ್ಲವೇ.ಖಗೋಳಜ್ಞರು, ಜೋಯಿಸರು, ಪಂಚಾಂಗದವರು ಇವರೆಲ್ಲರೂ,ನಿಂತು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ಉದ್ಧರಿಸಲಿ. 14 ಇಗೋ, ಇವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವುದು;ಜ್ಞಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು;ಅದು ಕಾಯಿಸಿಕೊಳ್ಳುವ ಕೆಂಡವಲ್ಲ, ಮುಂದೆ ಕುಳಿತರೆ ಹಾಯಾಗಿರುವ ಬೆಂಕಿಯೂ ಅಲ್ಲ. 15 ನೀನು ಪ್ರಯಾಸಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು. ನಿನ್ನ ಬಾಲ್ಯದಿಂದ ನಿನ್ನಲ್ಲಿ ವ್ಯಾಪಾರ ಮಾಡಿದವರೆಲ್ಲರೂ;ಚದರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿಬಿಡುವರು. ನಿನ್ನನ್ನು ರಕ್ಷಿಸಲು ಒಬ್ಬನೂ ಇರುವುದಿಲ್ಲ.
In Other Versions
Isaiah 47 in the ANGEFD
Isaiah 47 in the ANTPNG2D
Isaiah 47 in the AS21
Isaiah 47 in the BAGH
Isaiah 47 in the BBPNG
Isaiah 47 in the BBT1E
Isaiah 47 in the BDS
Isaiah 47 in the BEV
Isaiah 47 in the BHAD
Isaiah 47 in the BIB
Isaiah 47 in the BLPT
Isaiah 47 in the BNT
Isaiah 47 in the BNTABOOT
Isaiah 47 in the BNTLV
Isaiah 47 in the BOATCB
Isaiah 47 in the BOATCB2
Isaiah 47 in the BOBCV
Isaiah 47 in the BOCNT
Isaiah 47 in the BOECS
Isaiah 47 in the BOGWICC
Isaiah 47 in the BOHCB
Isaiah 47 in the BOHCV
Isaiah 47 in the BOHLNT
Isaiah 47 in the BOHNTLTAL
Isaiah 47 in the BOICB
Isaiah 47 in the BOILNTAP
Isaiah 47 in the BOITCV
Isaiah 47 in the BOKCV
Isaiah 47 in the BOKCV2
Isaiah 47 in the BOKHWOG
Isaiah 47 in the BOKSSV
Isaiah 47 in the BOLCB
Isaiah 47 in the BOLCB2
Isaiah 47 in the BOMCV
Isaiah 47 in the BONAV
Isaiah 47 in the BONCB
Isaiah 47 in the BONLT
Isaiah 47 in the BONUT2
Isaiah 47 in the BOPLNT
Isaiah 47 in the BOSCB
Isaiah 47 in the BOSNC
Isaiah 47 in the BOTLNT
Isaiah 47 in the BOVCB
Isaiah 47 in the BOYCB
Isaiah 47 in the BPBB
Isaiah 47 in the BPH
Isaiah 47 in the BSB
Isaiah 47 in the CCB
Isaiah 47 in the CUV
Isaiah 47 in the CUVS
Isaiah 47 in the DBT
Isaiah 47 in the DGDNT
Isaiah 47 in the DHNT
Isaiah 47 in the DNT
Isaiah 47 in the ELBE
Isaiah 47 in the EMTV
Isaiah 47 in the ESV
Isaiah 47 in the FBV
Isaiah 47 in the FEB
Isaiah 47 in the GGMNT
Isaiah 47 in the GNT
Isaiah 47 in the HARY
Isaiah 47 in the HNT
Isaiah 47 in the IRVA
Isaiah 47 in the IRVB
Isaiah 47 in the IRVG
Isaiah 47 in the IRVH
Isaiah 47 in the IRVM
Isaiah 47 in the IRVM2
Isaiah 47 in the IRVO
Isaiah 47 in the IRVP
Isaiah 47 in the IRVT
Isaiah 47 in the IRVT2
Isaiah 47 in the IRVU
Isaiah 47 in the ISVN
Isaiah 47 in the JSNT
Isaiah 47 in the KAPI
Isaiah 47 in the KBT1ETNIK
Isaiah 47 in the KBV
Isaiah 47 in the KJV
Isaiah 47 in the KNFD
Isaiah 47 in the LBA
Isaiah 47 in the LBLA
Isaiah 47 in the LNT
Isaiah 47 in the LSV
Isaiah 47 in the MAAL
Isaiah 47 in the MBV
Isaiah 47 in the MBV2
Isaiah 47 in the MHNT
Isaiah 47 in the MKNFD
Isaiah 47 in the MNG
Isaiah 47 in the MNT
Isaiah 47 in the MNT2
Isaiah 47 in the MRS1T
Isaiah 47 in the NAA
Isaiah 47 in the NASB
Isaiah 47 in the NBLA
Isaiah 47 in the NBS
Isaiah 47 in the NBVTP
Isaiah 47 in the NET2
Isaiah 47 in the NIV11
Isaiah 47 in the NNT
Isaiah 47 in the NNT2
Isaiah 47 in the NNT3
Isaiah 47 in the PDDPT
Isaiah 47 in the PFNT
Isaiah 47 in the RMNT
Isaiah 47 in the SBIAS
Isaiah 47 in the SBIBS
Isaiah 47 in the SBIBS2
Isaiah 47 in the SBICS
Isaiah 47 in the SBIDS
Isaiah 47 in the SBIGS
Isaiah 47 in the SBIHS
Isaiah 47 in the SBIIS
Isaiah 47 in the SBIIS2
Isaiah 47 in the SBIIS3
Isaiah 47 in the SBIKS
Isaiah 47 in the SBIKS2
Isaiah 47 in the SBIMS
Isaiah 47 in the SBIOS
Isaiah 47 in the SBIPS
Isaiah 47 in the SBISS
Isaiah 47 in the SBITS
Isaiah 47 in the SBITS2
Isaiah 47 in the SBITS3
Isaiah 47 in the SBITS4
Isaiah 47 in the SBIUS
Isaiah 47 in the SBIVS
Isaiah 47 in the SBT
Isaiah 47 in the SBT1E
Isaiah 47 in the SCHL
Isaiah 47 in the SNT
Isaiah 47 in the SUSU
Isaiah 47 in the SUSU2
Isaiah 47 in the SYNO
Isaiah 47 in the TBIAOTANT
Isaiah 47 in the TBT1E
Isaiah 47 in the TBT1E2
Isaiah 47 in the TFTIP
Isaiah 47 in the TFTU
Isaiah 47 in the TGNTATF3T
Isaiah 47 in the THAI
Isaiah 47 in the TNFD
Isaiah 47 in the TNT
Isaiah 47 in the TNTIK
Isaiah 47 in the TNTIL
Isaiah 47 in the TNTIN
Isaiah 47 in the TNTIP
Isaiah 47 in the TNTIZ
Isaiah 47 in the TOMA
Isaiah 47 in the TTENT
Isaiah 47 in the UBG
Isaiah 47 in the UGV
Isaiah 47 in the UGV2
Isaiah 47 in the UGV3
Isaiah 47 in the VBL
Isaiah 47 in the VDCC
Isaiah 47 in the YALU
Isaiah 47 in the YAPE
Isaiah 47 in the YBVTP
Isaiah 47 in the ZBP