Jeremiah 16 (IRVK)
1 ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು, 2 “ನೀನು ಮದುವೆಯಾಗಬೇಡ, ಗಂಡು ಮತ್ತು ಹೆಣ್ಣು ಮಕ್ಕಳು ಈ ಸ್ಥಳದಲ್ಲಿ ಹುಟ್ಟದಿರಲಿ. 3 ಏಕೆಂದರೆ ಈ ಸ್ಥಳದಲ್ಲಿ ಹುಟ್ಟುವ ಗಂಡು ಹೆಣ್ಣು ಮಕ್ಕಳು, ಅವರನ್ನು ಹೆತ್ತ ತಾಯಿಯರು, ಅವರನ್ನು ಈ ದೇಶದಲ್ಲಿ ಪಡೆದ ತಂದೆಯಂದಿರಿಗೆ, ಇವರೆಲ್ಲರ ವಿಷಯವಾಗಿ ಯೆಹೋವನು ಹೀಗೆ ನುಡಿದಿದ್ದಾನೆ, 4 ಅವರು ಘೋರವಾದ ಮರಣಕ್ಕೆ ಗುರಿಯಾಗುವರು, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಹೂಣಿಡುವುದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು. ಖಡ್ಗವೂ, ಕ್ಷಾಮವೂ ಅವರನ್ನು ನಿರ್ಮೂಲ ಮಾಡುವವು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವಾಗುವವು” ಎಂಬುದೇ. 5 ಯೆಹೋವನು ನನಗೆ, “ಗೋಳಾಟದ ಮನೆಯಲ್ಲಿ ಸೇರಬೇಡ, ಪ್ರಲಾಪಿಸಲಿಕ್ಕೆ ಹೋಗಬೇಡ, ಅವರಿಗಾಗಿ ಎದೆ ಬಡಿದುಕೊಳ್ಳಲೂ ಬೇಡ. ನಾನು ದಯಪಾಲಿಸಿದ ಸಮಾಧಾನವನ್ನು, ಅಂದರೆ ನನ್ನ ಪ್ರೀತಿಯನ್ನೂ ಹಾಗು ಕೃಪೆಯನ್ನೂ ಈ ಜನರಿಂದ ತೆಗೆದುಬಿಟ್ಟಿದ್ದೇನಷ್ಟೆ. 6 ಈ ದೇಶದಲ್ಲಿನ ದೊಡ್ಡವರೂ. ಅಲ್ಪರೂ ಸಾಯುವರು. ಅವರನ್ನು ಯಾರೂ ಹೂಣಿಡುವುದಿಲ್ಲ, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಗಾಯಮಾಡಿಕೊಳ್ಳುವುದಿಲ್ಲ, ತಲೆಬೋಳಿಸಿಕೊಳ್ಳುವುದಿಲ್ಲ. 7 ಸತ್ತವನಿಗೋಸ್ಕರ ದುಃಖಪಡುವವರನ್ನು ಸಂತೈಸುವುದಕ್ಕಾಗಿ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ ತಾಯಿಯನ್ನಾಗಲಿ ಕಳಕೊಂಡವರಿಗೆ ಯಾರೂ ಸಮಾಧಾನದಾಯಕ ಪಾನಪಾತ್ರೆಯನ್ನು ನೀಡುವುದಿಲ್ಲ. 8 ಔತಣದ ಮನೆಯಲ್ಲಿಯೂ ಸೇರಬೇಡ, ಅಲ್ಲಿನವರೊಂದಿಗೆ ಕುಳಿತು ತಿನ್ನಬೇಡ, ಕುಡಿಯಬೇಡ. 9 ಇಸ್ರಾಯೇಲಿನ ದೇವರೂ ಸೇನಾಧೀಶ್ವರನಾದ ಯೆಹೋವನೂ ಆಗಿರುವಾತನು ಹೀಗೆಂದಿದ್ದಾನೆ, ‘ಇಗೋ, ನಿಮ್ಮ ಕಾಲದಲ್ಲಿ ನಿಮ್ಮ ಕಣ್ಣೆದುರಿಗೆ ಹರ್ಷಸಂಭ್ರಮಗಳ ಧ್ವನಿಯನ್ನೂ ಮತ್ತು ವಧೂವರರ ಸ್ವರವನ್ನೂ ಈ ಸ್ಥಳದೊಳಗೆ ನಿಲ್ಲಿಸಿಬಿಡುವೆನು.’ 10 ಈ ಮಾತುಗಳನ್ನೆಲ್ಲಾ ಈ ಜನರಿಗೆ ತಿಳಿಸುತ್ತಿರುವ ನಿನಗೆ ಪ್ರತ್ಯುತ್ತರವಾಗಿ ಅವರು, ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಯೆಹೋವನು ಏಕೆ ವಿಧಿಸಿದ್ದಾನೆ? ನಮ್ಮ ಅಪರಾಧವೇನು? ನಮ್ಮ ದೇವರಾದ ಯೆಹೋವನ ವಿರುದ್ಧವಾಗಿ ನಾವು ಮಾಡಿದ ಪಾಪವೇನು?’ ಎಂದು ಕೇಳುವಾಗ, 11 ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನ ಮಾತನ್ನು ಕೇಳಿರಿ, ನಿಮ್ಮ ಪೂರ್ವಿಕರು ನನ್ನನ್ನು ತೊರೆದು ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ, ಪೂಜಿಸಿ ನನ್ನನ್ನು ಬಿಟ್ಟು, ನನ್ನ ಧರ್ಮವಿಧಿಗಳನ್ನು ಮೀರಿದ್ದರಿಂದಲೂ, 12 ಇಗೋ, ನೀವೆಲ್ಲರೂ ನಿಮ್ಮ ದುಷ್ಟಹೃದಯದ ಹಟದಂತೆ ನಡೆಯುತ್ತಾ ನನ್ನನ್ನು ಕೇಳದೆ ನಿಮ್ಮ ಪೂರ್ವಿಕರಿಗಿಂತ ಹೆಚ್ಚು ಕೇಡನ್ನು ಮಾಡಿದ್ದರಿಂದಲೂ, 13 ನೀವಾಗಲಿ ಅಥವಾ ನಿಮ್ಮ ಪೂರ್ವಿಕರಾಗಲಿ ನೋಡದ ದೇಶಕ್ಕೆ ನಿಮ್ಮನ್ನು ಈ ದೇಶದೊಳಗಿಂದ ಎಸೆದುಬಿಡುವೆನು; ಅಲ್ಲಿ ಹಗಲಿರುಳೂ ಅನ್ಯದೇವತೆಗಳನ್ನು ಸೇವಿಸುವಿರಿ; ನಾನು ನಿಮಗೆ ದಯೆತೋರಿಸುವುದಿಲ್ಲ’” ಎಂದು ಹೇಳಿದನು. 14 “ಇಗೋ, ಮುಂದಿನ ಕಾಲದಲ್ಲಿ ಜನರು, ‘ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂಬುದಾಗಿ ಪ್ರಮಾಣಮಾಡುವುದನ್ನು ಬಿಟ್ಟು, 15 ‘ಇಸ್ರಾಯೇಲರನ್ನು ಬಡಗಣ ದೇಶದಿಂದಲೂ, ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂದು ಪ್ರಮಾಣಮಾಡುವರು; ನಾನು ಅವರ ಪೂರ್ವಿಕರಿಗೆ ದಯಪಾಲಿಸಿದ ದೇಶಕ್ಕೆ ಅವರನ್ನು ಹಿಂದಿರುಗಿಸುವೆನಷ್ಟೆ” ಎಂದು ಯೆಹೋವನು ಘೋಷಿಸುತ್ತಾನೆ. 16 ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಜನರನ್ನು ಹಿಡಿಯುವುದಕ್ಕೆ ಬಹು ಮಂದಿ ಬೆಸ್ತರನ್ನು ಕರೆಯಿಸುವೆನು; ಆ ಮೇಲೆ ಎಲ್ಲಾ ಬೆಟ್ಟಗುಡ್ಡಗಳಿಂದಲೂ, ಬಂಡೆಗಳ ಸಂದುಗೊಂದುಗಳಿಂದಲೂ ಅವರನ್ನು ಹೊರಡಿಸಿ, ಬೇಟೆಯಾಡುವುದಕ್ಕೆ ಬಹುಜನ ಬೇಡರನ್ನು ಕರೆಯಿಸುವೆನು. 17 ನಾನು ಅವರ ನಡತೆಯನ್ನೆಲ್ಲಾ ದೃಷ್ಟಿಸುತ್ತೇನೆ, ಅದು ನನ್ನ ಮುಖಕ್ಕೆ ಮರೆಯಾಗಿಲ್ಲ; ಅವರ ಅಧರ್ಮವು ನನಗೆ ಗುಟ್ಟಾಗಿ ಇಲ್ಲ, ಪ್ರತ್ಯಕ್ಷವಾಗೇ ಇದೆ. 18 ಅವರ ಅಧರ್ಮಕ್ಕೂ, ಪಾಪಕ್ಕೂ ಎರಡರಷ್ಟು ಶಿಕ್ಷೆಯನ್ನು ಮೊದಲು ಕೊಡುವೆನು; ಹೆಣಗಳಂತಿರುವ ತಮ್ಮ ಹೇಯವಿಗ್ರಹಗಳಿಂದ ನನ್ನ ದೇಶವನ್ನು ಹೊಲಸುಮಾಡಿ, ನನ್ನ ಸ್ವತ್ತನ್ನು ತಮ್ಮ ಅಸಹ್ಯ ವಸ್ತುಗಳಿಂದ ತುಂಬಿಸಿದ್ದಾರಷ್ಟೆ.” 19 ಯೆಹೋವನೇ, ನನ್ನ ಬಲವೇ, ಬಲವಾದ ನನ್ನ ದುರ್ಗವೇ, ಇಕ್ಕಟ್ಟಿನ ದಿನದಲ್ಲಿ ನನ್ನ ಆಶ್ರಯವೇ, ಲೋಕದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಸೇರಿ, “ನಮ್ಮ ಪೂರ್ವಿಕರು ಶುದ್ಧ ಸುಳ್ಳನ್ನು, ಮಾಯವನ್ನು, ಪ್ರಯೋಜನವಿಲ್ಲದವುಗಳನ್ನು ಪಾರಂಪರ್ಯವಾಗಿ ಹೊಂದಿದ್ದಾರೆ” ಎಂದು ಅರಿಕೆ ಮಾಡುವರು. 20 ಮನುಷ್ಯ ಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೇ? ಇವು ದೇವರುಗಳೇ ಅಲ್ಲ. 21 ಈ ನಿಮಿತ್ತವಾಗಿ, ಇಗೋ, ಇದೊಂದೇ ಸಲ ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು, ಹೌದು, ಗ್ರಹಿಸಮಾಡುವೆನು; ನನ್ನ ನಾಮಧೇಯವು “ಯೆಹೋವ” ಎಂದು ಅವರಿಗೆ ಗೊತ್ತಾಗುವುದು.
In Other Versions
Jeremiah 16 in the ANGEFD
Jeremiah 16 in the ANTPNG2D
Jeremiah 16 in the AS21
Jeremiah 16 in the BAGH
Jeremiah 16 in the BBPNG
Jeremiah 16 in the BBT1E
Jeremiah 16 in the BDS
Jeremiah 16 in the BEV
Jeremiah 16 in the BHAD
Jeremiah 16 in the BIB
Jeremiah 16 in the BLPT
Jeremiah 16 in the BNT
Jeremiah 16 in the BNTABOOT
Jeremiah 16 in the BNTLV
Jeremiah 16 in the BOATCB
Jeremiah 16 in the BOATCB2
Jeremiah 16 in the BOBCV
Jeremiah 16 in the BOCNT
Jeremiah 16 in the BOECS
Jeremiah 16 in the BOGWICC
Jeremiah 16 in the BOHCB
Jeremiah 16 in the BOHCV
Jeremiah 16 in the BOHLNT
Jeremiah 16 in the BOHNTLTAL
Jeremiah 16 in the BOICB
Jeremiah 16 in the BOILNTAP
Jeremiah 16 in the BOITCV
Jeremiah 16 in the BOKCV
Jeremiah 16 in the BOKCV2
Jeremiah 16 in the BOKHWOG
Jeremiah 16 in the BOKSSV
Jeremiah 16 in the BOLCB
Jeremiah 16 in the BOLCB2
Jeremiah 16 in the BOMCV
Jeremiah 16 in the BONAV
Jeremiah 16 in the BONCB
Jeremiah 16 in the BONLT
Jeremiah 16 in the BONUT2
Jeremiah 16 in the BOPLNT
Jeremiah 16 in the BOSCB
Jeremiah 16 in the BOSNC
Jeremiah 16 in the BOTLNT
Jeremiah 16 in the BOVCB
Jeremiah 16 in the BOYCB
Jeremiah 16 in the BPBB
Jeremiah 16 in the BPH
Jeremiah 16 in the BSB
Jeremiah 16 in the CCB
Jeremiah 16 in the CUV
Jeremiah 16 in the CUVS
Jeremiah 16 in the DBT
Jeremiah 16 in the DGDNT
Jeremiah 16 in the DHNT
Jeremiah 16 in the DNT
Jeremiah 16 in the ELBE
Jeremiah 16 in the EMTV
Jeremiah 16 in the ESV
Jeremiah 16 in the FBV
Jeremiah 16 in the FEB
Jeremiah 16 in the GGMNT
Jeremiah 16 in the GNT
Jeremiah 16 in the HARY
Jeremiah 16 in the HNT
Jeremiah 16 in the IRVA
Jeremiah 16 in the IRVB
Jeremiah 16 in the IRVG
Jeremiah 16 in the IRVH
Jeremiah 16 in the IRVM
Jeremiah 16 in the IRVM2
Jeremiah 16 in the IRVO
Jeremiah 16 in the IRVP
Jeremiah 16 in the IRVT
Jeremiah 16 in the IRVT2
Jeremiah 16 in the IRVU
Jeremiah 16 in the ISVN
Jeremiah 16 in the JSNT
Jeremiah 16 in the KAPI
Jeremiah 16 in the KBT1ETNIK
Jeremiah 16 in the KBV
Jeremiah 16 in the KJV
Jeremiah 16 in the KNFD
Jeremiah 16 in the LBA
Jeremiah 16 in the LBLA
Jeremiah 16 in the LNT
Jeremiah 16 in the LSV
Jeremiah 16 in the MAAL
Jeremiah 16 in the MBV
Jeremiah 16 in the MBV2
Jeremiah 16 in the MHNT
Jeremiah 16 in the MKNFD
Jeremiah 16 in the MNG
Jeremiah 16 in the MNT
Jeremiah 16 in the MNT2
Jeremiah 16 in the MRS1T
Jeremiah 16 in the NAA
Jeremiah 16 in the NASB
Jeremiah 16 in the NBLA
Jeremiah 16 in the NBS
Jeremiah 16 in the NBVTP
Jeremiah 16 in the NET2
Jeremiah 16 in the NIV11
Jeremiah 16 in the NNT
Jeremiah 16 in the NNT2
Jeremiah 16 in the NNT3
Jeremiah 16 in the PDDPT
Jeremiah 16 in the PFNT
Jeremiah 16 in the RMNT
Jeremiah 16 in the SBIAS
Jeremiah 16 in the SBIBS
Jeremiah 16 in the SBIBS2
Jeremiah 16 in the SBICS
Jeremiah 16 in the SBIDS
Jeremiah 16 in the SBIGS
Jeremiah 16 in the SBIHS
Jeremiah 16 in the SBIIS
Jeremiah 16 in the SBIIS2
Jeremiah 16 in the SBIIS3
Jeremiah 16 in the SBIKS
Jeremiah 16 in the SBIKS2
Jeremiah 16 in the SBIMS
Jeremiah 16 in the SBIOS
Jeremiah 16 in the SBIPS
Jeremiah 16 in the SBISS
Jeremiah 16 in the SBITS
Jeremiah 16 in the SBITS2
Jeremiah 16 in the SBITS3
Jeremiah 16 in the SBITS4
Jeremiah 16 in the SBIUS
Jeremiah 16 in the SBIVS
Jeremiah 16 in the SBT
Jeremiah 16 in the SBT1E
Jeremiah 16 in the SCHL
Jeremiah 16 in the SNT
Jeremiah 16 in the SUSU
Jeremiah 16 in the SUSU2
Jeremiah 16 in the SYNO
Jeremiah 16 in the TBIAOTANT
Jeremiah 16 in the TBT1E
Jeremiah 16 in the TBT1E2
Jeremiah 16 in the TFTIP
Jeremiah 16 in the TFTU
Jeremiah 16 in the TGNTATF3T
Jeremiah 16 in the THAI
Jeremiah 16 in the TNFD
Jeremiah 16 in the TNT
Jeremiah 16 in the TNTIK
Jeremiah 16 in the TNTIL
Jeremiah 16 in the TNTIN
Jeremiah 16 in the TNTIP
Jeremiah 16 in the TNTIZ
Jeremiah 16 in the TOMA
Jeremiah 16 in the TTENT
Jeremiah 16 in the UBG
Jeremiah 16 in the UGV
Jeremiah 16 in the UGV2
Jeremiah 16 in the UGV3
Jeremiah 16 in the VBL
Jeremiah 16 in the VDCC
Jeremiah 16 in the YALU
Jeremiah 16 in the YAPE
Jeremiah 16 in the YBVTP
Jeremiah 16 in the ZBP