Job 28 (IRVK)
1 “ಬೆಳ್ಳಿ ಸಿಕ್ಕುವ ಗಣಿಯೂ,ಚಿನ್ನದ ಅದುರು ದೊರಕುವ ಸ್ಥಳವೂ ಉಂಟಷ್ಟೆ. 2 ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು,ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು. 3 ಮನುಷ್ಯರು ಕತ್ತಲನ್ನು ನಿವಾರಿಸಿ ಕಾರ್ಗತ್ತಲಲ್ಲಿಯೂ,ಘೋರಾಂಧಕಾರದಲ್ಲಿಯೂ ಮರೆಯಾಗಿರುವ ಕಲ್ಲುಗಳನ್ನು ಕಟ್ಟಕಡೆಯ ವರೆಗೆ ಹುಡುಕುವರು. 4 ಗಣಿಯನ್ನು ತೋಡಿ ತೋಡಿ ಭೂಮಿಯೊಳಗೆ ಬಹುದೂರ ಜನರು ವಾಸಸ್ಥಳಗಳಿಂದ ದೂರವಾಗುವರು,ಭೂಮಿಯ ಮೇಲೆ ನಡೆದಾಡುವವರಿಗೆ ಕಾಣದೆ, ನರಲೋಕಕ್ಕೆ ಅನ್ಯರಾಗಿ ಅತ್ತಿತ್ತ ಅಲೆದಾಡುವರು. 5 ಭೂಮಿಯು ಅನ್ನವನ್ನು ಕೊಡುವುದು,ಅದರ ಕೆಳಭಾಗವು ಬೆಂಕಿ ಬಿದ್ದಂತೆ ಹಾಳಾಗಿರುವುದು. 6 ಅದರ ಕಲ್ಲುಗಳಲ್ಲಿ ಇಂದ್ರನೀಲ ಮಣಿಗಳು ಸಿಕ್ಕುವವು,ಅದರಲ್ಲಿ ಚಿನ್ನದ ಪುಡಿಯೂ ಇರುವುದು. 7 ಆ ದಾರಿಯು ಯಾವ ಹದ್ದಿಗೂ ತಿಳಿಯದು,ಗಿಡಗದ ಕಣ್ಣಿಗೂ ಬಿದ್ದಿಲ್ಲ. 8 ಸೊಕ್ಕಿದ ಮೃಗಗಳು ಅದನ್ನು ತುಳಿದಿಲ್ಲ,ಸಿಂಹವು ಆ ಮಾರ್ಗವನ್ನು ತುಳಿದಿಲ್ಲ. 9 ಮನುಷ್ಯನು ಕಗ್ಗಲ್ಲಿನ ಮೇಲೆ ಕೈಮಾಡಿ ಬೆಟ್ಟಗಳನ್ನು ಬುಡದ ತನಕ ಕೆಡವಿಬಿಡುವನು. 10 ಬಂಡೆಗಳಲ್ಲಿ ಸುರಂಗಗಳನ್ನು ಕೊರೆಯುವನು;ಅವನ ಕಣ್ಣು ಅಮೂಲ್ಯ ಪದಾರ್ಥಗಳನ್ನೆಲ್ಲಾ ಕಾಣುವುದು. 11 ನೀರಿನ ಒರತೆಗಳನ್ನು ಹುಡುಕಿ ಹೊರತರುತ್ತಾನೆ,ಮರೆಯಾಗಿದ್ದ ವಸ್ತುವನ್ನು ಬೆಳಕಿಗೆ ತರುವನು. 12 ಜ್ಞಾನವಾದರೋ ಎಲ್ಲಿ ಸಿಕ್ಕೀತು? ವಿವೇಕವು ದೊರೆಯುವ ಸ್ಥಳವೆಲ್ಲಿ? 13 ಅದರ ಕ್ರಯವು ಯಾರಿಗೂ ಗೊತ್ತಿಲ್ಲ,ಭೂಲೋಕದಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು. 14 ಭೂಮಿಯ ಕೆಳಗಣ ಸಾಗರವು ನನ್ನಲ್ಲಿ ಇಲ್ಲ ಎನ್ನುವುದು,ಸಮುದ್ರವು, ತನ್ನ ಹತ್ತಿರ ಇಲ್ಲ ಎಂದು ಹೇಳುವುದು. 15 ಚೊಕ್ಕ ಬಂಗಾರವನ್ನು ಕೊಟ್ಟು ಅದನ್ನು ಕೊಂಡುಕೊಳ್ಳುವುದು ಅಸಾಧ್ಯ,ಅದರ ಬೆಲೆಗೆ ಬೆಳ್ಳಿಯನ್ನು ತೂಗುವುದು ಅಶಕ್ಯ. 16 ಓಫೀರ್ ದೇಶದ ಅಪರಂಜಿ, ಅಮೂಲ್ಯ ಗೋಮೇಧಿಕ,ಇಂದ್ರನೀಲ, ಇವುಗಳಿಂದ ಜ್ಞಾನದ ಬೆಲೆ ಇಷ್ಟೆಂದು ಗೊತ್ತು ಮಾಡುವುದಕ್ಕೆ ಆಗದು. 17 ಬಂಗಾರವಾಗಲಿ, ಸ್ಫಟಿಕವಾಗಲಿ ಅದಕ್ಕೆ ಸಮವಾದೀತೇ?ಚಿನ್ನದ ಆಭರಣಗಳನ್ನು ಅದಕ್ಕೆ ಬದಲಾಗಿಕೊಡುವುದು ಸಾಧ್ಯವೋ? 18 ಜ್ಞಾನವಿರುವಲ್ಲಿ ಹವಳವೂ, ಸ್ಫಟಿಕವೂ ನೆನಪಿಗೆ ಬರುವುದಿಲ್ಲ.ಮುತ್ತುಗಳನ್ನು ಸಂಪಾದಿಸುವುದಕ್ಕಿಂತಲೂ ಜ್ಞಾನವನ್ನು ಸಂಪಾದಿಸುವುದು ಕಷ್ಟ! 19 ಕೂಷ್ ದೇಶದ ಪುಷ್ಯರಾಗವು ಅದಕ್ಕೆ ಸಾಟಿಯಿಲ್ಲ,ಶುದ್ಧ ಕನಕದೊಡನೆ ಅದನ್ನು ತೂಗಲಾಗದು. 20 ಹೀಗಿರಲು ಜ್ಞಾನವು ಎಲ್ಲಿಂದ ಬರುವುದು?ವಿವೇಕವು ಯಾವ ಸ್ಥಳದಲ್ಲಿ ದೊರಕೀತು? 21 ಅದು ಎಲ್ಲಾ ಜೀವಿಗಳ ದೃಷ್ಟಿಗೆ ಅಗೋಚರವಾಗಿದೆ,ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ. 22 ನಾಶನವೂ, ಮೃತ್ಯುವೂ,‘ಅದರ ಸುದ್ದಿ ಮಾತ್ರ ನಮ್ಮ ಕಿವಿಗೆ ಬಿದ್ದಿದೆ’ ಎಂದು ಹೇಳುವವು. 23 ಅದರ ಮಾರ್ಗವನ್ನು ಬಲ್ಲವನು ದೇವರೇ;ಅದರ ಸ್ಥಳವು ಆತನೊಬ್ಬನಿಗೇ ಗೊತ್ತು. 24 ಆತನೊಬ್ಬನೇ ಭೂಮಿಯ ಕಟ್ಟಕಡೆಯ ತನಕದೃಷ್ಟಿಸಿ ಆಕಾಶದ ಕೆಳಗಿನ ಸಮಸ್ತವನ್ನೂ ನೋಡುವವನಾಗಿದ್ದಾನೆ. 25 ಆತನು ಗಾಳಿಗೆ ತಕ್ಕಷ್ಟು ತೂಕವನ್ನು ನೇಮಿಸಿನೀರುಗಳನ್ನು ತಕ್ಕ ಪರಿಮಾಣಗಳಿಂದ ಅಳತೆಮಾಡಿದನು. 26 ಮಳೆಗೆ ಕಟ್ಟಳೆಯನ್ನೂ,ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ, 27 ಜ್ಞಾನವನ್ನು ಕಂಡು ಲಕ್ಷಿಸಿದನು,ಅದನ್ನು ಸ್ಥಾಪಿಸಿದ್ದಲ್ಲದೆ ವಿಮರ್ಶೆಮಾಡಿದನು. 28 ಆಮೇಲೆ ಮನುಷ್ಯರಿಗೆ,‘ಇಗೋ, ಕರ್ತನ ಭಯವೇ ಜ್ಞಾನ; ದುಷ್ಟತನವನ್ನು ತ್ಯಜಿಸುವುದೇ ವಿವೇಕ’” ಎಂದು ಹೇಳಿದನು.
In Other Versions
Job 28 in the ANGEFD
Job 28 in the ANTPNG2D
Job 28 in the AS21
Job 28 in the BAGH
Job 28 in the BBPNG
Job 28 in the BBT1E
Job 28 in the BDS
Job 28 in the BEV
Job 28 in the BHAD
Job 28 in the BIB
Job 28 in the BLPT
Job 28 in the BNT
Job 28 in the BNTABOOT
Job 28 in the BNTLV
Job 28 in the BOATCB
Job 28 in the BOATCB2
Job 28 in the BOBCV
Job 28 in the BOCNT
Job 28 in the BOECS
Job 28 in the BOGWICC
Job 28 in the BOHCB
Job 28 in the BOHCV
Job 28 in the BOHLNT
Job 28 in the BOHNTLTAL
Job 28 in the BOICB
Job 28 in the BOILNTAP
Job 28 in the BOITCV
Job 28 in the BOKCV
Job 28 in the BOKCV2
Job 28 in the BOKHWOG
Job 28 in the BOKSSV
Job 28 in the BOLCB
Job 28 in the BOLCB2
Job 28 in the BOMCV
Job 28 in the BONAV
Job 28 in the BONCB
Job 28 in the BONLT
Job 28 in the BONUT2
Job 28 in the BOPLNT
Job 28 in the BOSCB
Job 28 in the BOSNC
Job 28 in the BOTLNT
Job 28 in the BOVCB
Job 28 in the BOYCB
Job 28 in the BPBB
Job 28 in the BPH
Job 28 in the BSB
Job 28 in the CCB
Job 28 in the CUV
Job 28 in the CUVS
Job 28 in the DBT
Job 28 in the DGDNT
Job 28 in the DHNT
Job 28 in the DNT
Job 28 in the ELBE
Job 28 in the EMTV
Job 28 in the ESV
Job 28 in the FBV
Job 28 in the FEB
Job 28 in the GGMNT
Job 28 in the GNT
Job 28 in the HARY
Job 28 in the HNT
Job 28 in the IRVA
Job 28 in the IRVB
Job 28 in the IRVG
Job 28 in the IRVH
Job 28 in the IRVM
Job 28 in the IRVM2
Job 28 in the IRVO
Job 28 in the IRVP
Job 28 in the IRVT
Job 28 in the IRVT2
Job 28 in the IRVU
Job 28 in the ISVN
Job 28 in the JSNT
Job 28 in the KAPI
Job 28 in the KBT1ETNIK
Job 28 in the KBV
Job 28 in the KJV
Job 28 in the KNFD
Job 28 in the LBA
Job 28 in the LBLA
Job 28 in the LNT
Job 28 in the LSV
Job 28 in the MAAL
Job 28 in the MBV
Job 28 in the MBV2
Job 28 in the MHNT
Job 28 in the MKNFD
Job 28 in the MNG
Job 28 in the MNT
Job 28 in the MNT2
Job 28 in the MRS1T
Job 28 in the NAA
Job 28 in the NASB
Job 28 in the NBLA
Job 28 in the NBS
Job 28 in the NBVTP
Job 28 in the NET2
Job 28 in the NIV11
Job 28 in the NNT
Job 28 in the NNT2
Job 28 in the NNT3
Job 28 in the PDDPT
Job 28 in the PFNT
Job 28 in the RMNT
Job 28 in the SBIAS
Job 28 in the SBIBS
Job 28 in the SBIBS2
Job 28 in the SBICS
Job 28 in the SBIDS
Job 28 in the SBIGS
Job 28 in the SBIHS
Job 28 in the SBIIS
Job 28 in the SBIIS2
Job 28 in the SBIIS3
Job 28 in the SBIKS
Job 28 in the SBIKS2
Job 28 in the SBIMS
Job 28 in the SBIOS
Job 28 in the SBIPS
Job 28 in the SBISS
Job 28 in the SBITS
Job 28 in the SBITS2
Job 28 in the SBITS3
Job 28 in the SBITS4
Job 28 in the SBIUS
Job 28 in the SBIVS
Job 28 in the SBT
Job 28 in the SBT1E
Job 28 in the SCHL
Job 28 in the SNT
Job 28 in the SUSU
Job 28 in the SUSU2
Job 28 in the SYNO
Job 28 in the TBIAOTANT
Job 28 in the TBT1E
Job 28 in the TBT1E2
Job 28 in the TFTIP
Job 28 in the TFTU
Job 28 in the TGNTATF3T
Job 28 in the THAI
Job 28 in the TNFD
Job 28 in the TNT
Job 28 in the TNTIK
Job 28 in the TNTIL
Job 28 in the TNTIN
Job 28 in the TNTIP
Job 28 in the TNTIZ
Job 28 in the TOMA
Job 28 in the TTENT
Job 28 in the UBG
Job 28 in the UGV
Job 28 in the UGV2
Job 28 in the UGV3
Job 28 in the VBL
Job 28 in the VDCC
Job 28 in the YALU
Job 28 in the YAPE
Job 28 in the YBVTP
Job 28 in the ZBP