Deuteronomy 27 (BOKCV2)
1 ಮೋಶೆ ಮತ್ತು ಇಸ್ರಾಯೇಲಿನ ಹಿರಿಯರು ಜನರಿಗೆ, “ನಾವು ಈ ಹೊತ್ತು ನಿಮಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು. 2 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಯೊರ್ದನನ್ನು ದಾಟಿ ಪ್ರವೇಶಿಸುವಾಗ, ದೊಡ್ಡ ಕಲ್ಲುಗಳನ್ನು ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಿ, 3 ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಪ್ರಕಾರ ಅಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಹಾಲೂ ಜೇನೂ ಹರಿಯುವಂಥ ದೇಶವನ್ನು ನೀವು ಪ್ರವೇಶಿಸುವಂತೆ ಯೊರ್ದನ್ ನದಿಯನ್ನು ದಾಟುವಾಗ, ಅವುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಆ ಕಲ್ಲಿನ ಮೇಲೆ ಬರೆಯಬೇಕು. 4 ನೀವು ಯೊರ್ದನನ್ನು ದಾಟಿದ ಮೇಲೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಕಲ್ಲುಗಳನ್ನು ಏಬಾಲ್ ಬೆಟ್ಟದಲ್ಲಿ ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಬೇಕು. 5 ಅಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಬೇಕು. ಕಬ್ಬಿಣದ ಉಪಕರಣವನ್ನು ನೀವು ಕಲ್ಲುಗಳ ಮೇಲೆ ಉಪಯೋಗಿಸಬಾರದು. 6 ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠವನ್ನು ಹುಟ್ಟುಕಲ್ಲುಗಳಿಂದಲೇ ಕಟ್ಟಬೇಕು. ನೀವು ಅದರ ಮೇಲೆ ನಿಮ್ಮ ದೇವರಾದ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಬೇಕು. 7 ಅಲ್ಲಿ ದಹನಬಲಿಗಳನ್ನೂ ಸಮಾಧಾನ ಬಲಿಗಳನ್ನೂ ಸಮರ್ಪಿಸಿ, ಸಹಭೋಜನ ಮಾಡಿ, ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು. 8 ನೀವು ಆ ಕಲ್ಲುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಬಹುಸ್ಪಷ್ಟವಾಗಿ ಬರೆಸಬೇಕು,” ಎಂದು ಆಜ್ಞಾಪಿಸಿದರು. 9 ಆಗ ಮೋಶೆಯೂ ಯಾಜಕರಾದ ಲೇವಿಯರೂ ಸಮಸ್ತ ಇಸ್ರಾಯೇಲಿನ ಸಂಗಡ ಮಾತನಾಡಿ, “ಇಸ್ರಾಯೇಲರೇ, ಶಾಂತರಾಗಿದ್ದು ಕೇಳಿರಿ. ನೀವು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಜನಾಂಗವಾಗಿದ್ದೀರಿ. 10 ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ವಿಧೇಯರಾಗಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಆಜ್ಞೆಗಳನ್ನೂ ತೀರ್ಪುಗಳನ್ನೂ ಅನುಸರಿಸಬೇಕು,” ಎಂದು ಹೇಳಿದನು. 11 ಇದಲ್ಲದೆ ಮೋಶೆ ಅದೇ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನೆಂದರೆ: 12 “ನೀವು ಯೊರ್ದನನ್ನು ದಾಟಿದ ಮೇಲೆ ಜನರನ್ನು ಆಶೀರ್ವದಿಸುವುದಕ್ಕೆ ಗೆರಿಜೀಮ್ ಬೆಟ್ಟದಲ್ಲಿ ನಿಲ್ಲತಕ್ಕವರು ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ, ಬೆನ್ಯಾಮೀನ್ ಮುಂತಾದವರು; 13 ಶಪಿಸುವುದಕ್ಕೆ ಏಬಾಲ್ ಬೆಟ್ಟದಲ್ಲಿ ನಿಲ್ಲತಕ್ಕವರು ಯಾರೆಂದರೆ ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್, ನಫ್ತಾಲಿ,” ಎಂದು ಆಜ್ಞಾಪಿಸಿ ಹೇಳಿದನು. 14 ಲೇವಿಯರು ಇಸ್ರಾಯೇಲ್ ಜನರೆಲ್ಲರಿಗೆ ಗಟ್ಟಿಯಾದ ಧ್ವನಿಯಿಂದ, 15 “ಯೆಹೋವ ದೇವರಿಗೆ ಅಸಹ್ಯವಾಗಿರುವ ವಿಗ್ರಹವನ್ನಾಗಲಿ, ಎರಕ ಹೊಯ್ದದ್ದನ್ನಾಗಲಿ ಮಾಡಿಕೊಂಡು, ಶಿಲ್ಪಿಯ ಕೈಯಿಂದ ಮಾಡಿಸಿ, ಗುಪ್ತವಾಗಿ ನಿಲ್ಲಿಸಿಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 16 ಅವರು, “ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 17 ಅವರು, “ತನ್ನ ನೆರೆಯವನ ಗಡಿ ಮೇರೆಯನ್ನು ಸರಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 18 ಅವರು, “ಕಣ್ಣು ಕಾಣದವನನ್ನು ದಾರಿತಪ್ಪಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 19 ಅವರು, “ಪರವಾಸಿಗೂ, ದಿಕ್ಕಿಲ್ಲದವನಿಗೂ, ವಿಧವೆಗೂ ನ್ಯಾಯಬಿಟ್ಟು ತೀರ್ಪು ಹೇಳಿದವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 20 ಅವರು, “ಮಲತಾಯಿಯ ಸಂಗಡ ಅನೈತಿಕವಾಗಿ ನಡೆದು ತನ್ನ ತಂದೆಯ ಹಾಸಿಗೆಯನ್ನು ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 21 ಅವರು, “ಪಶುಸಂಗಮ ಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 22 ಅವರು, “ತನ್ನ ತಂದೆಯ ಮಗಳ ಸಂಗಡವಾಗಲಿ, ತಾಯಿಯ ಮಗಳ ಸಂಗಡವಾಗಲಿ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 23 ಅವರು, “ತನ್ನ ಅತ್ತೆಯ ಸಂಗಡ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 24 ಅವರು, “ತನ್ನ ನೆರೆಯವನನ್ನು ರಹಸ್ಯವಾಗಿ ಕೊಲೆಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 25 ಅವರು, “ನಿರಪರಾಧಿಯನ್ನು ಕೊಲ್ಲಲು ಲಂಚ ತೆಗೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 26 ಅವರು, “ದೇವರ ನಿಯಮದ ಈ ಮಾತುಗಳನ್ನು ಸನ್ಮಾನಿಸಿ ಕೈಗೊಳ್ಳದೆ ಇರುವವನು ಶಾಪಗ್ರಸ್ತನು,” ಎಂದು ಹೇಳಿದಾಗ,ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
In Other Versions
Deuteronomy 27 in the ANGEFD
Deuteronomy 27 in the ANTPNG2D
Deuteronomy 27 in the AS21
Deuteronomy 27 in the BAGH
Deuteronomy 27 in the BBPNG
Deuteronomy 27 in the BBT1E
Deuteronomy 27 in the BDS
Deuteronomy 27 in the BEV
Deuteronomy 27 in the BHAD
Deuteronomy 27 in the BIB
Deuteronomy 27 in the BLPT
Deuteronomy 27 in the BNT
Deuteronomy 27 in the BNTABOOT
Deuteronomy 27 in the BNTLV
Deuteronomy 27 in the BOATCB
Deuteronomy 27 in the BOATCB2
Deuteronomy 27 in the BOBCV
Deuteronomy 27 in the BOCNT
Deuteronomy 27 in the BOECS
Deuteronomy 27 in the BOGWICC
Deuteronomy 27 in the BOHCB
Deuteronomy 27 in the BOHCV
Deuteronomy 27 in the BOHLNT
Deuteronomy 27 in the BOHNTLTAL
Deuteronomy 27 in the BOICB
Deuteronomy 27 in the BOILNTAP
Deuteronomy 27 in the BOITCV
Deuteronomy 27 in the BOKCV
Deuteronomy 27 in the BOKHWOG
Deuteronomy 27 in the BOKSSV
Deuteronomy 27 in the BOLCB
Deuteronomy 27 in the BOLCB2
Deuteronomy 27 in the BOMCV
Deuteronomy 27 in the BONAV
Deuteronomy 27 in the BONCB
Deuteronomy 27 in the BONLT
Deuteronomy 27 in the BONUT2
Deuteronomy 27 in the BOPLNT
Deuteronomy 27 in the BOSCB
Deuteronomy 27 in the BOSNC
Deuteronomy 27 in the BOTLNT
Deuteronomy 27 in the BOVCB
Deuteronomy 27 in the BOYCB
Deuteronomy 27 in the BPBB
Deuteronomy 27 in the BPH
Deuteronomy 27 in the BSB
Deuteronomy 27 in the CCB
Deuteronomy 27 in the CUV
Deuteronomy 27 in the CUVS
Deuteronomy 27 in the DBT
Deuteronomy 27 in the DGDNT
Deuteronomy 27 in the DHNT
Deuteronomy 27 in the DNT
Deuteronomy 27 in the ELBE
Deuteronomy 27 in the EMTV
Deuteronomy 27 in the ESV
Deuteronomy 27 in the FBV
Deuteronomy 27 in the FEB
Deuteronomy 27 in the GGMNT
Deuteronomy 27 in the GNT
Deuteronomy 27 in the HARY
Deuteronomy 27 in the HNT
Deuteronomy 27 in the IRVA
Deuteronomy 27 in the IRVB
Deuteronomy 27 in the IRVG
Deuteronomy 27 in the IRVH
Deuteronomy 27 in the IRVK
Deuteronomy 27 in the IRVM
Deuteronomy 27 in the IRVM2
Deuteronomy 27 in the IRVO
Deuteronomy 27 in the IRVP
Deuteronomy 27 in the IRVT
Deuteronomy 27 in the IRVT2
Deuteronomy 27 in the IRVU
Deuteronomy 27 in the ISVN
Deuteronomy 27 in the JSNT
Deuteronomy 27 in the KAPI
Deuteronomy 27 in the KBT1ETNIK
Deuteronomy 27 in the KBV
Deuteronomy 27 in the KJV
Deuteronomy 27 in the KNFD
Deuteronomy 27 in the LBA
Deuteronomy 27 in the LBLA
Deuteronomy 27 in the LNT
Deuteronomy 27 in the LSV
Deuteronomy 27 in the MAAL
Deuteronomy 27 in the MBV
Deuteronomy 27 in the MBV2
Deuteronomy 27 in the MHNT
Deuteronomy 27 in the MKNFD
Deuteronomy 27 in the MNG
Deuteronomy 27 in the MNT
Deuteronomy 27 in the MNT2
Deuteronomy 27 in the MRS1T
Deuteronomy 27 in the NAA
Deuteronomy 27 in the NASB
Deuteronomy 27 in the NBLA
Deuteronomy 27 in the NBS
Deuteronomy 27 in the NBVTP
Deuteronomy 27 in the NET2
Deuteronomy 27 in the NIV11
Deuteronomy 27 in the NNT
Deuteronomy 27 in the NNT2
Deuteronomy 27 in the NNT3
Deuteronomy 27 in the PDDPT
Deuteronomy 27 in the PFNT
Deuteronomy 27 in the RMNT
Deuteronomy 27 in the SBIAS
Deuteronomy 27 in the SBIBS
Deuteronomy 27 in the SBIBS2
Deuteronomy 27 in the SBICS
Deuteronomy 27 in the SBIDS
Deuteronomy 27 in the SBIGS
Deuteronomy 27 in the SBIHS
Deuteronomy 27 in the SBIIS
Deuteronomy 27 in the SBIIS2
Deuteronomy 27 in the SBIIS3
Deuteronomy 27 in the SBIKS
Deuteronomy 27 in the SBIKS2
Deuteronomy 27 in the SBIMS
Deuteronomy 27 in the SBIOS
Deuteronomy 27 in the SBIPS
Deuteronomy 27 in the SBISS
Deuteronomy 27 in the SBITS
Deuteronomy 27 in the SBITS2
Deuteronomy 27 in the SBITS3
Deuteronomy 27 in the SBITS4
Deuteronomy 27 in the SBIUS
Deuteronomy 27 in the SBIVS
Deuteronomy 27 in the SBT
Deuteronomy 27 in the SBT1E
Deuteronomy 27 in the SCHL
Deuteronomy 27 in the SNT
Deuteronomy 27 in the SUSU
Deuteronomy 27 in the SUSU2
Deuteronomy 27 in the SYNO
Deuteronomy 27 in the TBIAOTANT
Deuteronomy 27 in the TBT1E
Deuteronomy 27 in the TBT1E2
Deuteronomy 27 in the TFTIP
Deuteronomy 27 in the TFTU
Deuteronomy 27 in the TGNTATF3T
Deuteronomy 27 in the THAI
Deuteronomy 27 in the TNFD
Deuteronomy 27 in the TNT
Deuteronomy 27 in the TNTIK
Deuteronomy 27 in the TNTIL
Deuteronomy 27 in the TNTIN
Deuteronomy 27 in the TNTIP
Deuteronomy 27 in the TNTIZ
Deuteronomy 27 in the TOMA
Deuteronomy 27 in the TTENT
Deuteronomy 27 in the UBG
Deuteronomy 27 in the UGV
Deuteronomy 27 in the UGV2
Deuteronomy 27 in the UGV3
Deuteronomy 27 in the VBL
Deuteronomy 27 in the VDCC
Deuteronomy 27 in the YALU
Deuteronomy 27 in the YAPE
Deuteronomy 27 in the YBVTP
Deuteronomy 27 in the ZBP