Deuteronomy 30 (BOKCV2)
1 ನಾನು ನಿಮ್ಮ ಮುಂದೆ ಇಟ್ಟ ಈ ಎಲ್ಲಾ ಆಶೀರ್ವಾದವೂ, ಶಾಪವೂ, ನಿಮಗೆ ಸಂಭವಿಸಿದಾಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಚದರಿಸಿರುವ ಎಲ್ಲಾ ಜನಾಂಗಗಳ ಮಧ್ಯದಲ್ಲಿಯೇ ನೀವು ಇವುಗಳನ್ನು ನೆನಪಿಗೆ ತಂದುಕೊಳ್ಳಬೇಕು. 2 ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡು, ನೀವೂ, ನಿಮ್ಮ ಮಕ್ಕಳೂ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಮಾತುಗಳಿಗೆ, ನೀವು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ದೇವರಿಗೆ ವಿಧೇಯರಾಗಬೇಕು. 3 ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಸೆರೆಯಿಂದ ಬಿಡಿಸಿ, ನಿಮ್ಮ ಮೇಲೆ ಕನಿಕರಿಸಿ, ಅವರು ನಿಮ್ಮನ್ನು ಚದರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿಮ್ಮನ್ನು ಕೂಡಿಸುವರು. 4 ನಿಮ್ಮಲ್ಲಿ ಯಾರಾದರೂ ಭೂಮಿಯ ಕಟ್ಟಕಡೆಯವರೆಗೂ ಚದರಿ ಹೋಗಿದ್ದರೂ, ಅಲ್ಲಿಂದ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ಸಹ ಕರೆದುತರುವರು. 5 ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳು ಸ್ವಾಧೀನ ಮಾಡಿಕೊಂಡ ದೇಶಕ್ಕೆ ನಿಮ್ಮನ್ನು ತರುವರು. ನೀವು ಅದನ್ನು ಸ್ವಾಧೀನಮಾಡಿಕೊಳ್ಳುವಿರಿ. ದೇವರು ನಿಮ್ಮ ಪಿತೃಗಳಿಗಿಂತಲೂ ನಿಮ್ಮನ್ನು ಸಮೃದ್ಧಿಗೊಳಿಸಿ ಹೆಚ್ಚಿಸುವರು. 6 ಆಗ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಪ್ರೀತಿಸಿ, ನೀವು ಬದುಕಿ ಬಾಳುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಹೃದಯವನ್ನೂ, ನಿಮ್ಮ ಸಂತತಿಯ ಹೃದಯವನ್ನೂ ಪರಿಚ್ಛೇದಿಸುವರು. 7 ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ಆ ಶಾಪಗಳನ್ನೆಲ್ಲಾ ನಿಮ್ಮ ಶತ್ರುಗಳ ಮೇಲೆಯೂ, ನಿಮ್ಮನ್ನು ಹಿಂಸಿಸಿದ ನಿಮ್ಮ ಹಗೆಯವರ ಮೇಲೆಯೂ ಬರಮಾಡುವರು. 8 ಆದರೆ ನೀವು ಪುನಃ ಯೆಹೋವ ದೇವರ ಮಾತನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳಂತೆ ನಡೆಯುವಿರಿ. 9 ಇದಲ್ಲದೆ ಯೆಹೋವ ದೇವರು ನಿಮ್ಮನ್ನು ನಿಮ್ಮ ಎಲ್ಲಾ ಕೈಕೆಲಸದಲ್ಲಿಯೂ, ನಿಮ್ಮ ಗರ್ಭದ ಫಲದಲ್ಲಿಯೂ, ನಿಮ್ಮ ಪಶುಗಳ ಫಲದಲ್ಲಿಯೂ, ನಿಮ್ಮ ಭೂಮಿಯ ಫಲದಲ್ಲಿಯೂ ಅತ್ಯಂತ ಅಭಿವೃದ್ಧಿಯನ್ನು ಮಾಡುವರು. ಯೆಹೋವ ದೇವರು ನಿಮ್ಮ ಪಿತೃಗಳಲ್ಲಿ ಸಂತೋಷಿಸಿದ ಹಾಗೆ ನಿಮ್ಮಲ್ಲಿಯೂ ಸಂತೋಷಿಸುವರು. 10 ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳಿ, ಈ ನಿಯಮದ ಗ್ರಂಥದಲ್ಲಿ ಬರೆದಿರುವ ಅವರ ಆಜ್ಞಾತೀರ್ಪುಗಳನ್ನು ಕಾಪಾಡಿ, ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡರೆ, ನಿಮ್ಮಲ್ಲಿ ಸಂತೋಷಿಸುವರು. 11 ನಿಶ್ಚಯವಾಗಿ ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಆಜ್ಞೆಯು ನಿಮಗೆ ಕಠಿಣವಾದದ್ದಲ್ಲ; ದೂರವಾದದ್ದೂ ಅಲ್ಲ. 12 “ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಆಕಾಶಕ್ಕೆ ಏರಿಹೋಗಿ, ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಆಕಾಶದಲ್ಲಿ ಇರುವಂಥದ್ದೂ ಅಲ್ಲ. 13 “ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಸಮುದ್ರವನ್ನು ದಾಟಿ, ನಮಗೆ ತೆಗೆದುಕೊಂಡು ಬಂದು ಅದನ್ನು ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಸಮುದ್ರದ ಆಚೆಯಲ್ಲಿ ಇರುವಂಥದ್ದೂ ಅಲ್ಲ. 14 ಆ ವಾಕ್ಯವು ನಿಮಗೆ ಬಹಳ ಸಮೀಪವಾಗಿದೆ. ಅದನ್ನು ಕೈಗೊಳ್ಳುವ ಹಾಗೆ ವಾಕ್ಯವು ನಿಮ್ಮ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ. 15 ನೋಡಿರಿ, ನಾನು ಈ ಹೊತ್ತು ಜೀವ ಸಮೃದ್ಧಿಯನ್ನೂ, ಮರಣ ನಾಶನವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ. 16 ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾರ್ಗಗಳಲ್ಲಿ ನಡೆದುಕೊಂಡು, ಅವರ ಆಜ್ಞಾತೀರ್ಪುಗಳನ್ನೂ, ಅನುಸರಿಸಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ. ಹಾಗೆ ಮಾಡಿದರೆ, ನೀವು ಬದುಕಿ ಹೆಚ್ಚುವಿರಿ. ನಿಮ್ಮ ದೇವರಾದ ಯೆಹೋವ ದೇವರು ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮನ್ನು ಆಶೀರ್ವದಿಸುವರು. 17 ಆದರೆ ನಿಮ್ಮ ಹೃದಯವು ತಿರುಗಿಬಿದ್ದು ನೀವು ಮಾತು ಕೇಳದೆ ಹೋದರೆ ಇಲ್ಲವೆ ಬೇರೆ ದೇವರುಗಳ ಕಡೆಗೆ ಸೆಳೆದವರಾಗಿ ಅಡ್ಡಬಿದ್ದು, ಅವುಗಳಿಗೆ ಸೇವೆ ಮಾಡಿದರೆ, 18 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟಿ ಹೋಗುವ ದೇಶದಲ್ಲಿ ಬಹುಕಾಲ ಬಾಳದೆ, ನಾಶವಾಗಿಹೋಗುವಿರಿ ಎಂದು ಈ ಹೊತ್ತು ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. 19 ನಾನು ಜೀವ ಮರಣವನ್ನೂ, ಆಶೀರ್ವಾದ ಶಾಪವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆಂಬುದಕ್ಕೆ ಆಕಾಶವನ್ನೂ, ಭೂಮಿಯನ್ನೂ ಈ ಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ. ಆದುದರಿಂದ ನೀವೂ, ನಿಮ್ಮ ಸಂತತಿಯೂ, ಬದುಕಿ ಬಾಳುವಂತೆ ಜೀವವನ್ನೇ ಆಯ್ದುಕೊಳ್ಳಿರಿ. 20 ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾತನ್ನು ಕೇಳಿ, ಅವರನ್ನೇ ಹೊಂದಿಕೊಂಡಿರಿ. ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ಭೂಮಿಯಲ್ಲಿ ನೀವು ಬಹುಕಾಲ ವಾಸಮಾಡುವಿರಿ.
In Other Versions
Deuteronomy 30 in the ANGEFD
Deuteronomy 30 in the ANTPNG2D
Deuteronomy 30 in the AS21
Deuteronomy 30 in the BAGH
Deuteronomy 30 in the BBPNG
Deuteronomy 30 in the BBT1E
Deuteronomy 30 in the BDS
Deuteronomy 30 in the BEV
Deuteronomy 30 in the BHAD
Deuteronomy 30 in the BIB
Deuteronomy 30 in the BLPT
Deuteronomy 30 in the BNT
Deuteronomy 30 in the BNTABOOT
Deuteronomy 30 in the BNTLV
Deuteronomy 30 in the BOATCB
Deuteronomy 30 in the BOATCB2
Deuteronomy 30 in the BOBCV
Deuteronomy 30 in the BOCNT
Deuteronomy 30 in the BOECS
Deuteronomy 30 in the BOGWICC
Deuteronomy 30 in the BOHCB
Deuteronomy 30 in the BOHCV
Deuteronomy 30 in the BOHLNT
Deuteronomy 30 in the BOHNTLTAL
Deuteronomy 30 in the BOICB
Deuteronomy 30 in the BOILNTAP
Deuteronomy 30 in the BOITCV
Deuteronomy 30 in the BOKCV
Deuteronomy 30 in the BOKHWOG
Deuteronomy 30 in the BOKSSV
Deuteronomy 30 in the BOLCB
Deuteronomy 30 in the BOLCB2
Deuteronomy 30 in the BOMCV
Deuteronomy 30 in the BONAV
Deuteronomy 30 in the BONCB
Deuteronomy 30 in the BONLT
Deuteronomy 30 in the BONUT2
Deuteronomy 30 in the BOPLNT
Deuteronomy 30 in the BOSCB
Deuteronomy 30 in the BOSNC
Deuteronomy 30 in the BOTLNT
Deuteronomy 30 in the BOVCB
Deuteronomy 30 in the BOYCB
Deuteronomy 30 in the BPBB
Deuteronomy 30 in the BPH
Deuteronomy 30 in the BSB
Deuteronomy 30 in the CCB
Deuteronomy 30 in the CUV
Deuteronomy 30 in the CUVS
Deuteronomy 30 in the DBT
Deuteronomy 30 in the DGDNT
Deuteronomy 30 in the DHNT
Deuteronomy 30 in the DNT
Deuteronomy 30 in the ELBE
Deuteronomy 30 in the EMTV
Deuteronomy 30 in the ESV
Deuteronomy 30 in the FBV
Deuteronomy 30 in the FEB
Deuteronomy 30 in the GGMNT
Deuteronomy 30 in the GNT
Deuteronomy 30 in the HARY
Deuteronomy 30 in the HNT
Deuteronomy 30 in the IRVA
Deuteronomy 30 in the IRVB
Deuteronomy 30 in the IRVG
Deuteronomy 30 in the IRVH
Deuteronomy 30 in the IRVK
Deuteronomy 30 in the IRVM
Deuteronomy 30 in the IRVM2
Deuteronomy 30 in the IRVO
Deuteronomy 30 in the IRVP
Deuteronomy 30 in the IRVT
Deuteronomy 30 in the IRVT2
Deuteronomy 30 in the IRVU
Deuteronomy 30 in the ISVN
Deuteronomy 30 in the JSNT
Deuteronomy 30 in the KAPI
Deuteronomy 30 in the KBT1ETNIK
Deuteronomy 30 in the KBV
Deuteronomy 30 in the KJV
Deuteronomy 30 in the KNFD
Deuteronomy 30 in the LBA
Deuteronomy 30 in the LBLA
Deuteronomy 30 in the LNT
Deuteronomy 30 in the LSV
Deuteronomy 30 in the MAAL
Deuteronomy 30 in the MBV
Deuteronomy 30 in the MBV2
Deuteronomy 30 in the MHNT
Deuteronomy 30 in the MKNFD
Deuteronomy 30 in the MNG
Deuteronomy 30 in the MNT
Deuteronomy 30 in the MNT2
Deuteronomy 30 in the MRS1T
Deuteronomy 30 in the NAA
Deuteronomy 30 in the NASB
Deuteronomy 30 in the NBLA
Deuteronomy 30 in the NBS
Deuteronomy 30 in the NBVTP
Deuteronomy 30 in the NET2
Deuteronomy 30 in the NIV11
Deuteronomy 30 in the NNT
Deuteronomy 30 in the NNT2
Deuteronomy 30 in the NNT3
Deuteronomy 30 in the PDDPT
Deuteronomy 30 in the PFNT
Deuteronomy 30 in the RMNT
Deuteronomy 30 in the SBIAS
Deuteronomy 30 in the SBIBS
Deuteronomy 30 in the SBIBS2
Deuteronomy 30 in the SBICS
Deuteronomy 30 in the SBIDS
Deuteronomy 30 in the SBIGS
Deuteronomy 30 in the SBIHS
Deuteronomy 30 in the SBIIS
Deuteronomy 30 in the SBIIS2
Deuteronomy 30 in the SBIIS3
Deuteronomy 30 in the SBIKS
Deuteronomy 30 in the SBIKS2
Deuteronomy 30 in the SBIMS
Deuteronomy 30 in the SBIOS
Deuteronomy 30 in the SBIPS
Deuteronomy 30 in the SBISS
Deuteronomy 30 in the SBITS
Deuteronomy 30 in the SBITS2
Deuteronomy 30 in the SBITS3
Deuteronomy 30 in the SBITS4
Deuteronomy 30 in the SBIUS
Deuteronomy 30 in the SBIVS
Deuteronomy 30 in the SBT
Deuteronomy 30 in the SBT1E
Deuteronomy 30 in the SCHL
Deuteronomy 30 in the SNT
Deuteronomy 30 in the SUSU
Deuteronomy 30 in the SUSU2
Deuteronomy 30 in the SYNO
Deuteronomy 30 in the TBIAOTANT
Deuteronomy 30 in the TBT1E
Deuteronomy 30 in the TBT1E2
Deuteronomy 30 in the TFTIP
Deuteronomy 30 in the TFTU
Deuteronomy 30 in the TGNTATF3T
Deuteronomy 30 in the THAI
Deuteronomy 30 in the TNFD
Deuteronomy 30 in the TNT
Deuteronomy 30 in the TNTIK
Deuteronomy 30 in the TNTIL
Deuteronomy 30 in the TNTIN
Deuteronomy 30 in the TNTIP
Deuteronomy 30 in the TNTIZ
Deuteronomy 30 in the TOMA
Deuteronomy 30 in the TTENT
Deuteronomy 30 in the UBG
Deuteronomy 30 in the UGV
Deuteronomy 30 in the UGV2
Deuteronomy 30 in the UGV3
Deuteronomy 30 in the VBL
Deuteronomy 30 in the VDCC
Deuteronomy 30 in the YALU
Deuteronomy 30 in the YAPE
Deuteronomy 30 in the YBVTP
Deuteronomy 30 in the ZBP