Deuteronomy 30 (IRVK)
1 ನಾನು ನಿಮ್ಮ ಮುಂದೆ ಇಟ್ಟಿರುವ ಆಶೀರ್ವಾದವೂ ಮತ್ತು ಶಾಪವೂ ನಿಮ್ಮ ಅನುಭವಕ್ಕೆ ಬಂದಾಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಚದರಿಸಿರುವ ದೇಶಗಳಲ್ಲಿ ನೀವು ಇವುಗಳನ್ನು ನೆನಪಿಗೆ ತಂದುಕೊಂಡು, 2 ನಿಮ್ಮ ಮಕ್ಕಳ ಸಹಿತವಾಗಿ ನಿಮ್ಮ ದೇವರಾದ ಯೆಹೋವನ ಆಶ್ರಯಕ್ಕೆ ತಿರುಗಿ ಬಂದು, ನಾನು ಈಗ ನಿಮಗೆ ಬೋಧಿಸುವ ಆತನ ಮಾತುಗಳಿಗೆ ಸಂಪೂರ್ಣವಾದ ಹೃದಯದಿಂದಲೂ, ಮನಸ್ಸಿನಿಂದಲೂ ವಿಧೇಯರಾದರೆ, 3 ನಿಮ್ಮ ದೇವರಾದ ಯೆಹೋವನು ದುರವಸ್ಥೆಯಿಂದ ನಿಮ್ಮನ್ನು ತಪ್ಪಿಸಿ, ನಿಮ್ಮನ್ನು ಕನಿಕರಿಸಿ, ತಾನು ನಿಮ್ಮನ್ನು ಚದರಿಸಿರುವ ಎಲ್ಲಾ ದೇಶಗಳಿಂದ ಪುನಃ ಕೂಡಿಸುವನು. 4 ನಿಮ್ಮಲ್ಲಿ ಯಾರಾದರೂ ಭೂಲೋಕದ ಕಟ್ಟಕಡೆಯವರೆಗೆ ಒಯ್ಯಲ್ಪಟ್ಟರೂ, ಅಲ್ಲಿಂದಲೂ ನಿಮ್ಮ ದೇವರಾದ ಯೆಹೋವನು ಅವರನ್ನೂ ಕರೆದುಕೊಂಡು ಬರುವನು. 5 ನಿಮ್ಮ ಪೂರ್ವಿಕರಿಗೆ ಸ್ವತ್ತಾಗಿದ್ದ ದೇಶದಲ್ಲಿ ಸೇರಿಸಿ, ಅದು ನಿಮಗೂ ಸ್ವದೇಶವಾಗುವಂತೆ ಮಾಡಿ, ನಿಮಗೆ ಮೇಲನ್ನುಂಟುಮಾಡಿ ಪೂರ್ವಿಕರಿಗಿಂತಲೂ ಅಧಿಕವಾಗಿ ನಿಮ್ಮನ್ನು ಹೆಚ್ಚಿಸುವನು. 6 ನಿಮ್ಮ ದೇವರಾದ ಯೆಹೋವನು ನಿಮ್ಮ ಮತ್ತು ನಿಮ್ಮ ಸಂತತಿಯವರ ಹೃದಯಕ್ಕೆ ಸುನ್ನತಿಮಾಡುವನು. ಆಗ ನೀವು ಆತನನ್ನು ಸಂಪೂರ್ಣವಾದ ಹೃದಯದಿಂದಲೂ ಮತ್ತು ಸಂಪೂರ್ಣವಾದ ಮನಸ್ಸಿನಿಂದಲೂ ಪ್ರೀತಿಸಿ ಬದುಕಿಕೊಳ್ಳುವಿರಿ. 7 ನಿಮ್ಮ ದೇವರಾದ ಯೆಹೋವನು ಆ ಶಾಪಗಳನ್ನೆಲ್ಲಾ, ನಿಮ್ಮನ್ನು ದ್ವೇಷಿಸಿ ಹಿಂಸಿಸಿದ ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವನು. 8 ನೀವಾದರೋ ಯೆಹೋವನ ಮಾತಿಗೆ ಪುನಃ ವಿಧೇಯರಾಗಿ, ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳಂತೆ ನಡೆಯುವಿರಿ. 9 ಮತ್ತು ನಿಮ್ಮ ದೇವರಾದ ಯೆಹೋವನು ನಿಮ್ಮ ಸಂತಾನ, ಪಶು ಮತ್ತು ವ್ಯವಸಾಯಗಳನ್ನು ಹೆಚ್ಚಿಸಿ ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಪಡಿಸಿ ನಿಮಗೆ ಮೇಲನ್ನು ಉಂಟುಮಾಡುವನು. 10 ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ವಿಧೇಯರಾಗಿ ಈ ಧರ್ಮಶಾಸ್ತ್ರದ ಆಜ್ಞಾವಿಧಿಗಳನ್ನು ಅನುಸರಿಸಿ ಸಂಪೂರ್ಣವಾದ ಹೃದಯದಿಂದಲೂ ಮತ್ತು ಸಂಪೂರ್ಣವಾದ ಮನಸ್ಸಿನಿಂದಲೂ ಆತನ ಕಡೆಗೆ ತಿರುಗಿಕೊಳ್ಳಲು, ಆತನು ನಿಮ್ಮ ಪೂರ್ವಿಕರ ವಿಷಯದಲ್ಲಿ ಸಂತೋಷಪಟ್ಟ ಹಾಗೆಯೇ ನಿಮ್ಮ ವಿಷಯದಲ್ಲಿಯೂ ತಿರುಗಿ ಸಂತೋಷಪಟ್ಟು ನಿಮಗೆ ಮೇಲನ್ನು ಉಂಟುಮಾಡುವನು. 11 ನಾನು ಈಗ ನಿಮಗೆ ಬೋಧಿಸಿದ ಧರ್ಮೋಪದೇಶವು ನಿಮಗೆ ಗ್ರಹಿಸುವುದಕ್ಕೆ ಕಷ್ಟವಾದದ್ದು ಯಾವುದು ಇಲ್ಲ, ಅನುಸರಿಸುವುದಕ್ಕೆ ಅಸಾಧ್ಯವಾದದ್ದೂ ಅಲ್ಲ. 12 ಇದು ಮೇಲಣ ಲೋಕದಲ್ಲಿರುವ ಮಾತಲ್ಲ. “ನಮಗೋಸ್ಕರ ಮೇಲಣ ಲೋಕವನ್ನು ಏರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದರೆ ನಾವು ಕೇಳಿ ಕೈಕೊಂಡೇವು” ಅಂದುಕೊಳ್ಳುವುದಕ್ಕೆ ಅವಕಾಶವೇನೂ ಇಲ್ಲ. 13 ಮತ್ತು “ಇದು ಸಮುದ್ರದ ಆಚೆ ಇರುವ ಮಾತಲ್ಲ. ನಮಗೋಸ್ಕರ ಸಮುದ್ರವನ್ನು ದಾಟಿ ಅದನ್ನು ತೆಗೆದುಕೊಂಡುಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದರೆ ನಾವು ಕೈಕೊಂಡೇವು” ಅಂದುಕೊಳ್ಳುವುದಕ್ಕೆ ಆಸ್ಪದವೇನೂ ಇಲ್ಲ. 14 ಈ ವಾಕ್ಯವು ನಿಮ್ಮ ಸಮೀಪದಲ್ಲಿಯೇ ಇದೆ; ಇದು ನಿಮ್ಮ ಬಾಯಲ್ಲಿಯೂ ಮತ್ತು ಹೃದಯದಲ್ಲಿಯೂ ಇದೆ; ಇದನ್ನು ಅನುಸರಿಸುವುದಕ್ಕೆ ಅವಕಾಶವುಂಟಷ್ಟೆ. 15 “ನೋಡಿರಿ, ಈಗ ನಾನು ಜೀವ ಮತ್ತು ಶುಭಗಳನ್ನೂ ಹಾಗೂ ಮರಣ ಮತ್ತು ಅಶುಭಗಳನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ. 16 ನಾನು ಈಗ ನಿಮಗೆ ಬೋಧಿಸುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನು ಹೇಳಿದ ಮಾರ್ಗದಲ್ಲಿ ನಡೆದು, ಆತನ ಆಜ್ಞಾವಿಧಿ ನಿಯಮಗಳನ್ನು ಅನುಸರಿಸಿದರೆ ನೀವು ಬದುಕಿಕೊಂಡು ಹೆಚ್ಚುವಿರಿ; ಮತ್ತು ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸುವನು. 17 ಆದರೆ ನೀವು ಆತನನ್ನು ಬಿಟ್ಟು ಆತನ ಮಾತನ್ನು ಕೇಳಲೊಲ್ಲದೆ ಮರುಳುಗೊಂಡವರಾಗಿ, ಇತರ ದೇವರುಗಳನ್ನು ಪೂಜಿಸಿ, ಸೇವಿಸಿದರೆ, 18 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನ್ ನದಿಯನ್ನು ದಾಟಿ ಹೋಗುವ ದೇಶದಲ್ಲಿ ಬಹುಕಾಲ ಇರದೆ ನಾಶವಾಗಿಯೇ ಹೋಗುವಿರೆಂದು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. 19 ನಾನು ಜೀವ ಮತ್ತು ಮರಣಗಳನ್ನೂ ಹಾಗು ಆಶೀರ್ವಾದ ಮತ್ತು ಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಮತ್ತು ಆಕಾಶಗಳು ಸಾಕ್ಷಿಗಳಾಗಿರಲಿ. ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆರಿಸಿಕೊಳ್ಳಿರಿ. 20 ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನ ಮಾತಿಗೆ ವಿಧೇಯರಾಗಿರಿ, ಆತನನ್ನು ಹೊಂದಿಕೊಂಡೇ ಇರಿ. ಯೆಹೋವನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣ ಮಾಡಿಕೊಟ್ಟ ದೇಶದಲ್ಲಿ ನೀವು ಬದುಕಿಕೊಳ್ಳುವುದಕ್ಕೂ ಬಹುಕಾಲ ಇರುವುದಕ್ಕೂ ಆತನೇ ಆಧಾರ” ಎಂದು ಹೇಳಿದನು.
In Other Versions
Deuteronomy 30 in the ANGEFD
Deuteronomy 30 in the ANTPNG2D
Deuteronomy 30 in the AS21
Deuteronomy 30 in the BAGH
Deuteronomy 30 in the BBPNG
Deuteronomy 30 in the BBT1E
Deuteronomy 30 in the BDS
Deuteronomy 30 in the BEV
Deuteronomy 30 in the BHAD
Deuteronomy 30 in the BIB
Deuteronomy 30 in the BLPT
Deuteronomy 30 in the BNT
Deuteronomy 30 in the BNTABOOT
Deuteronomy 30 in the BNTLV
Deuteronomy 30 in the BOATCB
Deuteronomy 30 in the BOATCB2
Deuteronomy 30 in the BOBCV
Deuteronomy 30 in the BOCNT
Deuteronomy 30 in the BOECS
Deuteronomy 30 in the BOGWICC
Deuteronomy 30 in the BOHCB
Deuteronomy 30 in the BOHCV
Deuteronomy 30 in the BOHLNT
Deuteronomy 30 in the BOHNTLTAL
Deuteronomy 30 in the BOICB
Deuteronomy 30 in the BOILNTAP
Deuteronomy 30 in the BOITCV
Deuteronomy 30 in the BOKCV
Deuteronomy 30 in the BOKCV2
Deuteronomy 30 in the BOKHWOG
Deuteronomy 30 in the BOKSSV
Deuteronomy 30 in the BOLCB
Deuteronomy 30 in the BOLCB2
Deuteronomy 30 in the BOMCV
Deuteronomy 30 in the BONAV
Deuteronomy 30 in the BONCB
Deuteronomy 30 in the BONLT
Deuteronomy 30 in the BONUT2
Deuteronomy 30 in the BOPLNT
Deuteronomy 30 in the BOSCB
Deuteronomy 30 in the BOSNC
Deuteronomy 30 in the BOTLNT
Deuteronomy 30 in the BOVCB
Deuteronomy 30 in the BOYCB
Deuteronomy 30 in the BPBB
Deuteronomy 30 in the BPH
Deuteronomy 30 in the BSB
Deuteronomy 30 in the CCB
Deuteronomy 30 in the CUV
Deuteronomy 30 in the CUVS
Deuteronomy 30 in the DBT
Deuteronomy 30 in the DGDNT
Deuteronomy 30 in the DHNT
Deuteronomy 30 in the DNT
Deuteronomy 30 in the ELBE
Deuteronomy 30 in the EMTV
Deuteronomy 30 in the ESV
Deuteronomy 30 in the FBV
Deuteronomy 30 in the FEB
Deuteronomy 30 in the GGMNT
Deuteronomy 30 in the GNT
Deuteronomy 30 in the HARY
Deuteronomy 30 in the HNT
Deuteronomy 30 in the IRVA
Deuteronomy 30 in the IRVB
Deuteronomy 30 in the IRVG
Deuteronomy 30 in the IRVH
Deuteronomy 30 in the IRVM
Deuteronomy 30 in the IRVM2
Deuteronomy 30 in the IRVO
Deuteronomy 30 in the IRVP
Deuteronomy 30 in the IRVT
Deuteronomy 30 in the IRVT2
Deuteronomy 30 in the IRVU
Deuteronomy 30 in the ISVN
Deuteronomy 30 in the JSNT
Deuteronomy 30 in the KAPI
Deuteronomy 30 in the KBT1ETNIK
Deuteronomy 30 in the KBV
Deuteronomy 30 in the KJV
Deuteronomy 30 in the KNFD
Deuteronomy 30 in the LBA
Deuteronomy 30 in the LBLA
Deuteronomy 30 in the LNT
Deuteronomy 30 in the LSV
Deuteronomy 30 in the MAAL
Deuteronomy 30 in the MBV
Deuteronomy 30 in the MBV2
Deuteronomy 30 in the MHNT
Deuteronomy 30 in the MKNFD
Deuteronomy 30 in the MNG
Deuteronomy 30 in the MNT
Deuteronomy 30 in the MNT2
Deuteronomy 30 in the MRS1T
Deuteronomy 30 in the NAA
Deuteronomy 30 in the NASB
Deuteronomy 30 in the NBLA
Deuteronomy 30 in the NBS
Deuteronomy 30 in the NBVTP
Deuteronomy 30 in the NET2
Deuteronomy 30 in the NIV11
Deuteronomy 30 in the NNT
Deuteronomy 30 in the NNT2
Deuteronomy 30 in the NNT3
Deuteronomy 30 in the PDDPT
Deuteronomy 30 in the PFNT
Deuteronomy 30 in the RMNT
Deuteronomy 30 in the SBIAS
Deuteronomy 30 in the SBIBS
Deuteronomy 30 in the SBIBS2
Deuteronomy 30 in the SBICS
Deuteronomy 30 in the SBIDS
Deuteronomy 30 in the SBIGS
Deuteronomy 30 in the SBIHS
Deuteronomy 30 in the SBIIS
Deuteronomy 30 in the SBIIS2
Deuteronomy 30 in the SBIIS3
Deuteronomy 30 in the SBIKS
Deuteronomy 30 in the SBIKS2
Deuteronomy 30 in the SBIMS
Deuteronomy 30 in the SBIOS
Deuteronomy 30 in the SBIPS
Deuteronomy 30 in the SBISS
Deuteronomy 30 in the SBITS
Deuteronomy 30 in the SBITS2
Deuteronomy 30 in the SBITS3
Deuteronomy 30 in the SBITS4
Deuteronomy 30 in the SBIUS
Deuteronomy 30 in the SBIVS
Deuteronomy 30 in the SBT
Deuteronomy 30 in the SBT1E
Deuteronomy 30 in the SCHL
Deuteronomy 30 in the SNT
Deuteronomy 30 in the SUSU
Deuteronomy 30 in the SUSU2
Deuteronomy 30 in the SYNO
Deuteronomy 30 in the TBIAOTANT
Deuteronomy 30 in the TBT1E
Deuteronomy 30 in the TBT1E2
Deuteronomy 30 in the TFTIP
Deuteronomy 30 in the TFTU
Deuteronomy 30 in the TGNTATF3T
Deuteronomy 30 in the THAI
Deuteronomy 30 in the TNFD
Deuteronomy 30 in the TNT
Deuteronomy 30 in the TNTIK
Deuteronomy 30 in the TNTIL
Deuteronomy 30 in the TNTIN
Deuteronomy 30 in the TNTIP
Deuteronomy 30 in the TNTIZ
Deuteronomy 30 in the TOMA
Deuteronomy 30 in the TTENT
Deuteronomy 30 in the UBG
Deuteronomy 30 in the UGV
Deuteronomy 30 in the UGV2
Deuteronomy 30 in the UGV3
Deuteronomy 30 in the VBL
Deuteronomy 30 in the VDCC
Deuteronomy 30 in the YALU
Deuteronomy 30 in the YAPE
Deuteronomy 30 in the YBVTP
Deuteronomy 30 in the ZBP