Isaiah 19 (BOKCV2)
1 ಈಜಿಪ್ಟಿನವರ ವಿಷಯವಾದ ಪ್ರವಾದನೆ:ಇಗೋ, ಯೆಹೋವ ದೇವರು ವೇಗವುಳ್ಳ ಮೇಘವನ್ನುಹತ್ತಿಕೊಂಡು ಈಜಿಪ್ಟಿಗೆ ಬರುತ್ತಾರೆ.ಅವರು ಸಮ್ಮುಖರಾದಾಗ ಈಜಿಪ್ಟಿನ ವಿಗ್ರಹಗಳು ನಡುಗುವುವು.ಈಜಿಪ್ಟಿನವರ ಹೃದಯಗಳು ಅದರ ಮಧ್ಯೆ ಭಯದಿಂದ ಕರಗುವುವು. 2 ಇದಲ್ಲದೆ ನಾನು ಈಜಿಪ್ಟಿನವನಿಗೆ ವಿರೋಧವಾಗಿ ಈಜಿಪ್ಟಿನವನನ್ನು ಎಬ್ಬಿಸುವೆನು.ಸಹೋದರನಿಗೆ ವಿರುದ್ಧವಾಗಿ ಸಹೋದರನೂ,ನೆರೆಯವನಿಗೆ ವಿರುದ್ಧವಾಗಿ ನೆರೆಯವನೂ,ಪಟ್ಟಣಕ್ಕೆ ವಿರೋಧವಾಗಿ ಪಟ್ಟಣವೂ,ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಹೊರಾಡುವವು. 3 ಈಜಿಪ್ಟಿನವರ ಮನಸ್ಸು ಭಯಗೊಳ್ಳುವುದುಅವರ ಆಲೋಚನೆಯನ್ನು ಭಂಗಪಡಿಸುವೆನು.ಅಲ್ಲಿಯವರು ವಿಗ್ರಹಗಳನ್ನೂ, ಮಾಟಗಾರರನ್ನೂ,ಯಕ್ಷಣಿಗಾರರನ್ನೂ, ಮಂತ್ರವಾದಿಗಳನ್ನೂ ಆಶ್ರಯಿಸುವರು. 4 ಈಜಿಪ್ಟಿನವರನ್ನು ಕ್ರೂರನಾದಒಡೆಯನ ಕೈಗೆ ಒಪ್ಪಿಸುವೆನು.ಭಯಂಕರನಾದ ರಾಜನು ಅವರನ್ನಾಳುವನು,ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 5 ನೈಲ್ ನದಿಯ ನೀರು ಬತ್ತಿಹೋಗುವುದು.ನದಿ ತೀರವೂ ಇಂಗಿ ಒಣಗಿಹೋಗುವುದು. 6 ಕಾಲುವೆಗಳು ನಾರುವುವು.ಈಜಿಪ್ಟನ ಉಪನದಿಗಳು ದೂರಕ್ಕೆ ಇಳಿದು ನೀರಿಲ್ಲದೆ ಹೋಗುವುವು.ಜಂಬು ಹುಲ್ಲು ಬಾಡುವುದು. 7 ನೈಲ್ ನದಿಯ ಹತ್ತಿರದತೀರವು ಬರುಡಾಗುವುದು.ನದಿಯ ಬಳಿಯಲ್ಲಿ ಬಿತ್ತಿದ ಬೀಜಗಳೆಲ್ಲವೂಒಣಗಿ, ಗಾಳಿಗೆ ತೂರಿಹೋಗುವುವು. 8 ಮೀನುಗಾರರು ಕೂಡ ದುಃಖಿಸುವರುಮತ್ತು ನೈಲ್ ನದಿಯಲ್ಲಿ ಗಾಳ ಹಾಕುವವರು ಪ್ರಲಾಪಿಸುವರು.ನೀರಿನ ಮೇಲೆ ಬಲೆ ಬೀಸುವವರುಕುಗ್ಗಿ ಹೋಗುವರು. 9 ನಯವಾದ ನಾರಿನ ಕೆಲಸದವರುಬಟ್ಟೆ ನೇಯುವವರು ನಿರಾಶರಾಗಿರುವರು. 10 ಬಟ್ಟೆಯಲ್ಲಿ ಕೆಲಸ ಮಾಡುವವರು ಖಿನ್ನರಾಗುತ್ತಾರೆ,ಮತ್ತು ಎಲ್ಲಾ ವೇತನದಾರರು ಹೃದಯದಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. 11 ಚೋವನ್ ಪಟ್ಟಣದ ಅಧಿಪತಿಗಳು ಕೇವಲ ಬುದ್ಧಿಹೀನರು;ಫರೋಹನ ಮಂತ್ರಿಗಳಲ್ಲಿ ಜ್ಞಾನವುಳ್ಳ ಸಲಹೆಗಾರರ ಆಲೋಚನೆಯೂ ಜ್ಞಾನರಹಿತವಾಗಿದೆ.ನೀವು ಫರೋಹನನಿಗೆ, “ನಾನು ಜ್ಞಾನಿಗಳ ಸಂತಾನದವನು,ಪುರಾತನ ರಾಜನ ಶಿಷ್ಯನೆಂದು ಹೇಳುವುದು ಹೇಗೆ”? 12 ನಿನ್ನ ಜ್ಞಾನಿಗಳು ಎಲ್ಲಿ?ನಿನಗೆ ಅವರು ಹೇಳಲಿ.ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿನವರ ವಿರೋಧವಾಗಿಉದ್ದೇಶಿಸಿದ್ದನ್ನು ಅವರು ತಿಳಿದುಕೊಳ್ಳಲಿ. 13 ಚೋವನಿನ ಶ್ರೇಷ್ಠರು ಮೂರ್ಖರಾಗಿದ್ದಾರೆ.ನೋಫಿನ ಶ್ರೇಷ್ಠರು ಮೋಸ ಹೋಗಿದ್ದಾರೆ.ಈಜಿಪ್ಟಿನ ಗೋತ್ರಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿದ್ದಾರೆ.ಅದನ್ನು ತಪ್ಪು ದಾರಿಗೆಳೆದಿದ್ದಾರೆ. 14 ಯೆಹೋವ ದೇವರು ಅವರ ಮಧ್ಯದಲ್ಲಿತತ್ತರಿಸುವ ಆತ್ಮವನ್ನು ಸುರಿಸಿದ್ದಾರೆ.ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರಈಜಿಪ್ಟ್ ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾರೆ. 15 ಈಜಿಪ್ಟಿನಲ್ಲಿ ತಲೆಯಾಗಲಿ, ಬಾಲವಾಗಲಿ, ಕೊಂಬೆಯಾಗಲಿ,ಒಂದು ಕಡ್ಡಿಯಾಗಲಿ ಸಾಧಿಸಲು ಸಾಧ್ಯವಾಗದ ಯಾವ ಕೆಲಸವೂ ಇರುವುದಿಲ್ಲ. 16 ಆ ದಿನದಲ್ಲಿ ಈಜಿಪ್ಟಿನವರು ಹೆಂಗಸರ ಹಾಗೆ ಇರುವರು. ಸೇನಾಧೀಶ್ವರ ಯೆಹೋವ ದೇವರು ಅದರ ಮೇಲೆ ಎತ್ತಿದ ಕೈಯನ್ನು ಬೀಸುತ್ತಿರುವುದರಿಂದ ಅವರು ಹೆದರಿ ಭಯಪಡುವರು. 17 ಈಜಿಪ್ಟ್ ಬೆಚ್ಚಿ ಬೀಳುವುದಕ್ಕೆ ಯೆಹೂದ ದೇಶವು ಕಾರಣವಾಗುವುದು, ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನು ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿಗೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆಯನ್ನು ತಿಳಿದು ಬೆರಗಾಗುವನು. 18 ಆ ದಿವಸದಲ್ಲಿ ಈಜಿಪ್ಟಿನ ಐದು ಪಟ್ಟಣಗಳು ಸೇನಾಧೀಶ್ವರ ಯೆಹೋವ ದೇವರಿಗೆ ಆಣೆಯಿಟ್ಟುಕೊಳ್ಳುವವು. ಕಾನಾನಿನ ಭಾಷೆಯನ್ನಾಡುವವರಿಂದ ತುಂಬಿದ ಐದು ಪಟ್ಟಣಗಳು ಈಜಿಪ್ಟ್ ದೇಶದಲ್ಲಿರುವುವು. ಅವುಗಳಲ್ಲಿ ಒಂದರ ಹೆಸರು “ನಾಶಪುರ.” 19 ಆ ದಿನದಲ್ಲಿ ಈಜಿಪ್ಟ್ ದೇಶದ ಮಧ್ಯದಲ್ಲಿ ಯೆಹೋವ ದೇವರಿಗೆ ಬಲಿಪೀಠವು ದೇಶದ ಎಲ್ಲೆಯಲ್ಲಿ ಯೆಹೋವ ದೇವರಿಗೆ ಒಂದು ಸ್ತಂಭವು ಇರುವುದು. 20 ಅದು ಸೇನಾಧೀಶ್ವರ ಯೆಹೋವ ದೇವರಿಗೆ ಈಜಿಪ್ಟ್ ದೇಶದಲ್ಲಿ ಗುರುತಾಗಿ ಸಾಕ್ಷಿಯಾಗಿರುವುದು. ಏಕೆಂದರೆ ಹಿಂಸಕರ ದೆಸೆಯಿಂದ ಯೆಹೋವ ದೇವರನ್ನು ಕೂಗಿಕೊಳ್ಳಲು, ದೇವರು ಅವರಿಗೆ ಒಬ್ಬ ಶೂರನಾದ ರಕ್ಷಕನನ್ನು ಕಳುಹಿಸಿ, ಅವರನ್ನು ಬಿಡುಗಡೆ ಮಾಡುವರು. 21 ಯೆಹೋವ ದೇವರು ತಮ್ಮನ್ನು ಈಜಿಪ್ಟಿನವರಿಗೆ ತಿಳಿಯಪಡಿಸಲು, ಅವರು ಆ ದಿನದಲ್ಲಿ ಯೆಹೋವ ದೇವರನ್ನು ತಿಳಿದುಕೊಳ್ಳುವರು ಮತ್ತು ಬಲಿಕಾಣಿಕೆಗಳಿಂದ ಸೇವೆಮಾಡುವರು. ಹೌದು, ಅವರು ಯೆಹೋವ ದೇವರಿಗೆ ಪ್ರಮಾಣ ಮಾಡಿಕೊಂಡು ನೆರವೇರಿಸುವರು. 22 ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರನ್ನು ಹೊಡೆಯುವರು; ಗಾಯಮಾಡಿ ಸ್ವಸ್ಥ ಮಾಡುವರು. ಅವರು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು, ದೇವರು ಅವರನ್ನು ಆಲೈಸಿ ಸ್ವಸ್ಥ ಮಾಡುವರು. 23 ಆ ದಿವಸದಲ್ಲಿ ಈಜಿಪ್ಟಿನಿಂದ ಅಸ್ಸೀರಿಯಕ್ಕೆ ಹೋಗುವ ಒಂದು ರಾಜ ಮಾರ್ಗವಿರುವುದು. ಅಸ್ಸೀರಿಯದವರು ಈಜಿಪ್ಟಿಗೂ, ಈಜಿಪ್ಟಿನವರು ಅಸ್ಸೀರಿಯಕ್ಕೂ ಹೋಗಿ ಬರುವರು. ಈಜಿಪ್ಟಿನವರು, ಅಸ್ಸೀರಿಯರೊಂದಿಗೆ ಯೆಹೋವ ದೇವರನ್ನು ಆರಾಧಿಸುವರು. 24 ಆ ದಿನದಲ್ಲಿ ಇಸ್ರಾಯೇಲು ಈಜಿಪ್ಟಿನವರ ಮತ್ತು ಅಸ್ಸೀರಿಯದವರ ಸಂಗಡ ಮೂರನೆಯದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವುದು. 25 ನನ್ನ ಪ್ರಜೆಯಾದ ಈಜಿಪ್ಟಿಗೂ, ನನ್ನ ಕೈಕೆಲಸವಾದ ಅಸ್ಸೀರಿಯಕ್ಕೂ ಮತ್ತು ನನ್ನ ಸೊತ್ತಾದ ಇಸ್ರಾಯೇಲಿಗೂ, “ನಿಮಗೆ ಆಶೀರ್ವಾದ,” ಎಂದು ಸೇನಾಧೀಶ್ವರ ಯೆಹೋವ ದೇವರು ಅವುಗಳನ್ನು ಆಶೀರ್ವಾದ ಮಾಡುವರು.
In Other Versions
Isaiah 19 in the ANGEFD
Isaiah 19 in the ANTPNG2D
Isaiah 19 in the AS21
Isaiah 19 in the BAGH
Isaiah 19 in the BBPNG
Isaiah 19 in the BBT1E
Isaiah 19 in the BDS
Isaiah 19 in the BEV
Isaiah 19 in the BHAD
Isaiah 19 in the BIB
Isaiah 19 in the BLPT
Isaiah 19 in the BNT
Isaiah 19 in the BNTABOOT
Isaiah 19 in the BNTLV
Isaiah 19 in the BOATCB
Isaiah 19 in the BOATCB2
Isaiah 19 in the BOBCV
Isaiah 19 in the BOCNT
Isaiah 19 in the BOECS
Isaiah 19 in the BOGWICC
Isaiah 19 in the BOHCB
Isaiah 19 in the BOHCV
Isaiah 19 in the BOHLNT
Isaiah 19 in the BOHNTLTAL
Isaiah 19 in the BOICB
Isaiah 19 in the BOILNTAP
Isaiah 19 in the BOITCV
Isaiah 19 in the BOKCV
Isaiah 19 in the BOKHWOG
Isaiah 19 in the BOKSSV
Isaiah 19 in the BOLCB
Isaiah 19 in the BOLCB2
Isaiah 19 in the BOMCV
Isaiah 19 in the BONAV
Isaiah 19 in the BONCB
Isaiah 19 in the BONLT
Isaiah 19 in the BONUT2
Isaiah 19 in the BOPLNT
Isaiah 19 in the BOSCB
Isaiah 19 in the BOSNC
Isaiah 19 in the BOTLNT
Isaiah 19 in the BOVCB
Isaiah 19 in the BOYCB
Isaiah 19 in the BPBB
Isaiah 19 in the BPH
Isaiah 19 in the BSB
Isaiah 19 in the CCB
Isaiah 19 in the CUV
Isaiah 19 in the CUVS
Isaiah 19 in the DBT
Isaiah 19 in the DGDNT
Isaiah 19 in the DHNT
Isaiah 19 in the DNT
Isaiah 19 in the ELBE
Isaiah 19 in the EMTV
Isaiah 19 in the ESV
Isaiah 19 in the FBV
Isaiah 19 in the FEB
Isaiah 19 in the GGMNT
Isaiah 19 in the GNT
Isaiah 19 in the HARY
Isaiah 19 in the HNT
Isaiah 19 in the IRVA
Isaiah 19 in the IRVB
Isaiah 19 in the IRVG
Isaiah 19 in the IRVH
Isaiah 19 in the IRVK
Isaiah 19 in the IRVM
Isaiah 19 in the IRVM2
Isaiah 19 in the IRVO
Isaiah 19 in the IRVP
Isaiah 19 in the IRVT
Isaiah 19 in the IRVT2
Isaiah 19 in the IRVU
Isaiah 19 in the ISVN
Isaiah 19 in the JSNT
Isaiah 19 in the KAPI
Isaiah 19 in the KBT1ETNIK
Isaiah 19 in the KBV
Isaiah 19 in the KJV
Isaiah 19 in the KNFD
Isaiah 19 in the LBA
Isaiah 19 in the LBLA
Isaiah 19 in the LNT
Isaiah 19 in the LSV
Isaiah 19 in the MAAL
Isaiah 19 in the MBV
Isaiah 19 in the MBV2
Isaiah 19 in the MHNT
Isaiah 19 in the MKNFD
Isaiah 19 in the MNG
Isaiah 19 in the MNT
Isaiah 19 in the MNT2
Isaiah 19 in the MRS1T
Isaiah 19 in the NAA
Isaiah 19 in the NASB
Isaiah 19 in the NBLA
Isaiah 19 in the NBS
Isaiah 19 in the NBVTP
Isaiah 19 in the NET2
Isaiah 19 in the NIV11
Isaiah 19 in the NNT
Isaiah 19 in the NNT2
Isaiah 19 in the NNT3
Isaiah 19 in the PDDPT
Isaiah 19 in the PFNT
Isaiah 19 in the RMNT
Isaiah 19 in the SBIAS
Isaiah 19 in the SBIBS
Isaiah 19 in the SBIBS2
Isaiah 19 in the SBICS
Isaiah 19 in the SBIDS
Isaiah 19 in the SBIGS
Isaiah 19 in the SBIHS
Isaiah 19 in the SBIIS
Isaiah 19 in the SBIIS2
Isaiah 19 in the SBIIS3
Isaiah 19 in the SBIKS
Isaiah 19 in the SBIKS2
Isaiah 19 in the SBIMS
Isaiah 19 in the SBIOS
Isaiah 19 in the SBIPS
Isaiah 19 in the SBISS
Isaiah 19 in the SBITS
Isaiah 19 in the SBITS2
Isaiah 19 in the SBITS3
Isaiah 19 in the SBITS4
Isaiah 19 in the SBIUS
Isaiah 19 in the SBIVS
Isaiah 19 in the SBT
Isaiah 19 in the SBT1E
Isaiah 19 in the SCHL
Isaiah 19 in the SNT
Isaiah 19 in the SUSU
Isaiah 19 in the SUSU2
Isaiah 19 in the SYNO
Isaiah 19 in the TBIAOTANT
Isaiah 19 in the TBT1E
Isaiah 19 in the TBT1E2
Isaiah 19 in the TFTIP
Isaiah 19 in the TFTU
Isaiah 19 in the TGNTATF3T
Isaiah 19 in the THAI
Isaiah 19 in the TNFD
Isaiah 19 in the TNT
Isaiah 19 in the TNTIK
Isaiah 19 in the TNTIL
Isaiah 19 in the TNTIN
Isaiah 19 in the TNTIP
Isaiah 19 in the TNTIZ
Isaiah 19 in the TOMA
Isaiah 19 in the TTENT
Isaiah 19 in the UBG
Isaiah 19 in the UGV
Isaiah 19 in the UGV2
Isaiah 19 in the UGV3
Isaiah 19 in the VBL
Isaiah 19 in the VDCC
Isaiah 19 in the YALU
Isaiah 19 in the YAPE
Isaiah 19 in the YBVTP
Isaiah 19 in the ZBP