Job 21 (BOKCV2)

1 ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ: 2 “ನನ್ನ ಮಾತನ್ನು ಲಕ್ಷ್ಯವಿಟ್ಟು ಕೇಳಿರಿ,ಇವು ನೀವು ನನಗೆ ನೀಡುವ ಆದರಣೆಗಳಾಗಿರಲಿ. 3 ನಾನು ಮಾತನಾಡುವಾಗ, ನನ್ನನ್ನು ಸಹಿಸಿಕೊಳ್ಳಿರಿ;ನಾನು ಮಾತನಾಡಿದ ಮೇಲೆ ನೀವು ಪರಿಹಾಸ್ಯ ಮಾಡಬಹುದು. 4 “ನಾನೇನು ಮನುಷ್ಯನ ವಿಷಯವಾಗಿ ದೂರು ಹೇಳುತ್ತಿದ್ದೇನೋ?ನಾನೇಕೆ ಬೇಸರಪಡಬಾರದು. 5 ನನ್ನ ಕಡೆಗೆ ಗಮನಿಸಿರಿ;ನೀವು ನಿಮ್ಮ ಬಾಯಿಯ ಮೇಲೆ ಕೈ ಇಟ್ಟು ಬೆರಗಾಗಿರಿ. 6 ನಾನು ಈ ವಿಷಯವನ್ನು ನೆನಪು ಮಾಡಿಕೊಂಡಾಗ ಭಯಪಡುತ್ತೇನೆ;ನನ್ನ ದೇಹಕ್ಕೆ ನಡುಕ ಹಿಡಿಯುತ್ತದೆ. 7 ದುಷ್ಟರು ವೃದ್ಧರಾಗುವವರೆಗೆ ಏಕೆ ಬದುಕುತ್ತಾರೆ?ಅಂಥವರು ಬಲಿಷ್ಠರಾಗಿ ಪ್ರಬಲಿಸುವುದಕ್ಕೂ ಕಾರಣವೇನು? 8 ಅವರೊಂದಿಗೆ ಅವರ ಸಂತಾನದವರು ಅವರ ಮುಂದೆ ಸುಸ್ಥಿರವಾಗುವುದನ್ನೂ,ಅವರ ಮಕ್ಕಳು ನೆಲೆಯಾಗಿರುವುದನ್ನೂ ನೋಡುವರು. 9 ಅವರ ಮನೆ ಸುರಕ್ಷಿತವಾಗಿ ನಿರ್ಭಯದಿಂದಿರುವುದು;ದೇವರ ದಂಡನೆಯ ಕೋಲು ಅವರ ಮೇಲೆ ಬೀಳದಿರುವುದು. 10 ಅವರ ಹೋರಿಯು ಅಭಿವೃದ್ಧಿಯಾಗಿರುವುದು;ಅವರ ಆಕಳು ತಪ್ಪದೆ ಈಯುವುದು. 11 ಅವರ ಮಕ್ಕಳು ಮಂದೆಯಾಗಿ ಹೊರನಡೆಯುತ್ತಾರೆ;ಅವರ ಚಿಕ್ಕವರು ಕುಣಿದಾಡುತ್ತಾ ಹೋಗುತ್ತಾರೆ. 12 ಅವರು ದಮ್ಮಡಿಯಿಂದಲೂ, ಕಿನ್ನರಿಯಿಂದಲೂ ಹಾಡುತ್ತಾರೆ;ಕೊಳಲಿನ ಶಬ್ದಕ್ಕೆ ಸಂತೋಷಿಸುತ್ತಾರೆ. 13 ಅವರು ಸಂಪತ್ತಿನಲ್ಲಿ ತಮ್ಮ ದಿನಗಳನ್ನು ಕಳೆಯುತ್ತಾರೆ;ಕೊನೆಗೆ ಸಮಾಧಾನದಿಂದ ಸಮಾಧಿಗೆ ಸೇರುತ್ತಾರೆ. 14 ಆದರೂ ಇವರು ದೇವರಿಗೆ, ‘ನಮ್ಮನ್ನು ಬಿಟ್ಟುಬಿಡು,ನಿಮ್ಮ ಮಾರ್ಗಗಳ ತಿಳುವಳಿಕೆ ನಮಗೆ ಬೇಡ. 15 ಸರ್ವಶಕ್ತರು ಯಾರು, ನಾವು ಅವರ ಸೇವೆ ಏಕೆ ಮಾಡಬೇಕು?ನಾವು ದೇವರಿಗೆ ಪ್ರಾರ್ಥನೆಮಾಡಿ ನಮಗೆ ಪ್ರಯೋಜನವೇನು?’ ಎಂದಿದ್ದಾರೆ. 16 ಆದರೆ ಅವರ ಸುಖವು ಅವರ ಕೈಯಲ್ಲಿ ಇಲ್ಲ;ಆದ್ದರಿಂದ ಆ ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ. 17 “ಆದರೂ ಎಷ್ಟು ಸಾರಿ ದುಷ್ಟರ ದೀಪವು ಆರಿಹೋಗುತ್ತದೆ?ಎಷ್ಟು ಸಾರಿ ವಿಪತ್ತು ಅವರ ಮೇಲೆ ಬರುತ್ತದೆ?ದೇವರು ವೇದನೆಗಳನ್ನು ತಮ್ಮ ಬೇಸರದಿಂದ ಹಂಚುವುದು ಎಷ್ಟು ಸಾರಿ? 18 ಅವರು ಗಾಳಿಯ ಮುಂದೆ ಹುಲ್ಲಿನ ಹಾಗೆ ಆದದ್ದು ಎಷ್ಟು ಸಾರಿ?ಬಿರುಗಾಳಿಯು ಹೊಡಕೊಂಡು ಹೋಗುವ ಹೊಟ್ಟಿನ ಹಾಗೆ ಕೊಚ್ಚಿಕೊಂಡು ಹೋದದ್ದು ಎಷ್ಟು ಸಾರಿ? 19 ‘ದೇವರು ದುಷ್ಟರ ಮಕ್ಕಳಿಗೆ ಅವರ ಅಪರಾಧ ಫಲವನ್ನು ಕಾದಿಡುತ್ತಾರೆ,’ಎಂದು ಹೇಳುತ್ತಾರಲ್ಲಾ?ಆ ದುಷ್ಟರು ಅನುಭವಿಸುವ ಹಾಗೆ ದೇವರು ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸಲಿ. 20 ದುಷ್ಟರು ತಮ್ಮ ವಿನಾಶವನ್ನು ತಾವಾಗಿಯೇ ನೋಡಲಿ;ಸರ್ವಶಕ್ತರ ದಂಡನೆಯನ್ನು ಅವನು ಅನುಭವಿಸಲಿ. 21 ದುಷ್ಟರಿಗೆ ನೇಮಕವಾದ ತಿಂಗಳುಗಳು ಮುಗಿದು ಹೋದ ಮೇಲೆತಾವು ಬಿಟ್ಟುಹೋಗುವ ಕುಟುಂಬದವರ ಚಿಂತೆ ಅವರಿಗೆ ಎಲ್ಲಿ? 22 “ದೇವರಿಗೆ ಅರಿವನ್ನು ಬೋಧಿಸಬಹುದೇ?ಉನ್ನತರಿಗೂ ನ್ಯಾಯತೀರಿಸುವುದು ದೇವರೇ ಅಲ್ಲವೇ? 23 ಒಬ್ಬ ವ್ಯಕ್ತಿಯು ಸುಖವಾಗಿಯೂ, ಸಮೃದ್ಧನಾಗಿಯೂ,ನೆಮ್ಮದಿಯಿಂದ ಇರುವಾಗಲೂ ಸಾಯುತ್ತಾನೆ. 24 ಅವನ ದೇಹ ಚೆನ್ನಾಗಿ ಬೆಳೆದು ಪೋಷಣೆಯಾಗಿರುತ್ತದೆ;ಅವನ ಎಲುಬುಗಳು ಮಜ್ಜೆಯಿಂದ ತುಂಬಿರುತ್ತದೆ. 25 ಮತ್ತೊಬ್ಬನು ಎಂದಿಗೂ ಒಳ್ಳೆಯದನ್ನು ಅನುಭವಿಸದೆ,ಕಹಿಯಾದ ಮನೋವ್ಯಥೆಪಡುತ್ತಾ ಸಾಯುತ್ತಾನೆ. 26 ಇವರಿಬ್ಬರೂ ಮಣ್ಣಿಗೆ ಸೇರುತ್ತಾರೆ;ಹುಳುಗಳು ಅವರನ್ನು ಮುತ್ತಿಕೊಳ್ಳುತ್ತವೆ. 27 “ನೋಡಿರಿ, ನಿಮ್ಮ ಆಲೋಚನೆಗಳನ್ನು ನಾನು ಬಲ್ಲೆನು.ನೀವು ನನಗೆ ವಿರೋಧವಾಗಿ ಮಾಡುವ ಕುಯುಕ್ತಿಗಳನ್ನೂ ತಿಳಿದಿದ್ದೇನೆ. 28 ನೀವು, ‘ಪ್ರಧಾನನ ಮನೆ ಈಗ ಎಲ್ಲಿದೆ?ದುಷ್ಟರು ವಾಸಿಸಿದ ಗುಡಾರ ಎಲ್ಲಿ?’ ಎನ್ನುತ್ತೀರಿ. 29 ಮಾರ್ಗದಲ್ಲಿ ಹಾದು ಹೋಗುವವರನ್ನು ನೀವು ವಿಚಾರಿಸಲಿಲ್ಲವೋ?ಅವರ ಅನುಭವಗಳು ನಿಮಗೆ ಹಿಡಿಸಲಿಲ್ಲವೋ? 30 ಹೀಗೆ ಆಪತ್ತಿನ ದಿನ ದುಷ್ಟರು ತಪ್ಪಿಸಿಕೊಳ್ಳುತ್ತಾರೆ;ದೇವರ ದಂಡನೆಯ ದಿನದಲ್ಲಿ ಅವರು ಬಿಡುಗಡೆಯಾಗುತ್ತಾರೆ. 31 ದುಷ್ಟರ ಮಾರ್ಗವನ್ನು ಮುಖಾಮುಖಿಯಾಗಿ ಅವರಿಗೆ ತೋರಿಸುವವರು ಯಾರು?ಅವರು ಮಾಡಿದ ದುಷ್ಕೃತ್ಯಗಳಿಗೆ ಮುಯ್ಯಿ ತೀರಿಸುವವರು ಯಾರು? 32 ದುಷ್ಟರನ್ನು ಸಮಾಧಿಗೆ ಒಯ್ಯುತ್ತಾರೆ.ಅವರ ಗೋರಿಗೆ ಕಾವಲು ಇಡುತ್ತಾರೆ. 33 ಕಣಿವೆಯಲ್ಲಿನ ಮಣ್ಣು ಅವರಿಗೆ ಸಿಹಿಯಾಗಿರುತ್ತದೆ;ಪ್ರತಿಯೊಬ್ಬರೂ ಅವರನ್ನು ಹಿಂಬಾಲಿಸುತ್ತಾರೆ.ಹೀಗೆ ಅವರನ್ನು ಲೆಕ್ಕವಿಲ್ಲದಷ್ಟು ಜನರು ಹಿಂಬಾಲಿಸುತ್ತಾರೆ. 34 “ವ್ಯರ್ಥವಾದ ನಿಮ್ಮ ಮಾತುಗಳಿಂದ ನೀವು ನನ್ನನ್ನು ಸಂತೈಸುವುದು ಹೇಗೆ?ನಿಮ್ಮ ಉತ್ತರಗಳಲ್ಲಿ ವಿಶ್ವಾಸದ್ರೋಹ ಬಿಟ್ಟು ಮತ್ತೇನೂ ಉಳಿದಿರುವುದಿಲ್ಲ.”

In Other Versions

Job 21 in the ANGEFD

Job 21 in the ANTPNG2D

Job 21 in the AS21

Job 21 in the BAGH

Job 21 in the BBPNG

Job 21 in the BBT1E

Job 21 in the BDS

Job 21 in the BEV

Job 21 in the BHAD

Job 21 in the BIB

Job 21 in the BLPT

Job 21 in the BNT

Job 21 in the BNTABOOT

Job 21 in the BNTLV

Job 21 in the BOATCB

Job 21 in the BOATCB2

Job 21 in the BOBCV

Job 21 in the BOCNT

Job 21 in the BOECS

Job 21 in the BOGWICC

Job 21 in the BOHCB

Job 21 in the BOHCV

Job 21 in the BOHLNT

Job 21 in the BOHNTLTAL

Job 21 in the BOICB

Job 21 in the BOILNTAP

Job 21 in the BOITCV

Job 21 in the BOKCV

Job 21 in the BOKHWOG

Job 21 in the BOKSSV

Job 21 in the BOLCB

Job 21 in the BOLCB2

Job 21 in the BOMCV

Job 21 in the BONAV

Job 21 in the BONCB

Job 21 in the BONLT

Job 21 in the BONUT2

Job 21 in the BOPLNT

Job 21 in the BOSCB

Job 21 in the BOSNC

Job 21 in the BOTLNT

Job 21 in the BOVCB

Job 21 in the BOYCB

Job 21 in the BPBB

Job 21 in the BPH

Job 21 in the BSB

Job 21 in the CCB

Job 21 in the CUV

Job 21 in the CUVS

Job 21 in the DBT

Job 21 in the DGDNT

Job 21 in the DHNT

Job 21 in the DNT

Job 21 in the ELBE

Job 21 in the EMTV

Job 21 in the ESV

Job 21 in the FBV

Job 21 in the FEB

Job 21 in the GGMNT

Job 21 in the GNT

Job 21 in the HARY

Job 21 in the HNT

Job 21 in the IRVA

Job 21 in the IRVB

Job 21 in the IRVG

Job 21 in the IRVH

Job 21 in the IRVK

Job 21 in the IRVM

Job 21 in the IRVM2

Job 21 in the IRVO

Job 21 in the IRVP

Job 21 in the IRVT

Job 21 in the IRVT2

Job 21 in the IRVU

Job 21 in the ISVN

Job 21 in the JSNT

Job 21 in the KAPI

Job 21 in the KBT1ETNIK

Job 21 in the KBV

Job 21 in the KJV

Job 21 in the KNFD

Job 21 in the LBA

Job 21 in the LBLA

Job 21 in the LNT

Job 21 in the LSV

Job 21 in the MAAL

Job 21 in the MBV

Job 21 in the MBV2

Job 21 in the MHNT

Job 21 in the MKNFD

Job 21 in the MNG

Job 21 in the MNT

Job 21 in the MNT2

Job 21 in the MRS1T

Job 21 in the NAA

Job 21 in the NASB

Job 21 in the NBLA

Job 21 in the NBS

Job 21 in the NBVTP

Job 21 in the NET2

Job 21 in the NIV11

Job 21 in the NNT

Job 21 in the NNT2

Job 21 in the NNT3

Job 21 in the PDDPT

Job 21 in the PFNT

Job 21 in the RMNT

Job 21 in the SBIAS

Job 21 in the SBIBS

Job 21 in the SBIBS2

Job 21 in the SBICS

Job 21 in the SBIDS

Job 21 in the SBIGS

Job 21 in the SBIHS

Job 21 in the SBIIS

Job 21 in the SBIIS2

Job 21 in the SBIIS3

Job 21 in the SBIKS

Job 21 in the SBIKS2

Job 21 in the SBIMS

Job 21 in the SBIOS

Job 21 in the SBIPS

Job 21 in the SBISS

Job 21 in the SBITS

Job 21 in the SBITS2

Job 21 in the SBITS3

Job 21 in the SBITS4

Job 21 in the SBIUS

Job 21 in the SBIVS

Job 21 in the SBT

Job 21 in the SBT1E

Job 21 in the SCHL

Job 21 in the SNT

Job 21 in the SUSU

Job 21 in the SUSU2

Job 21 in the SYNO

Job 21 in the TBIAOTANT

Job 21 in the TBT1E

Job 21 in the TBT1E2

Job 21 in the TFTIP

Job 21 in the TFTU

Job 21 in the TGNTATF3T

Job 21 in the THAI

Job 21 in the TNFD

Job 21 in the TNT

Job 21 in the TNTIK

Job 21 in the TNTIL

Job 21 in the TNTIN

Job 21 in the TNTIP

Job 21 in the TNTIZ

Job 21 in the TOMA

Job 21 in the TTENT

Job 21 in the UBG

Job 21 in the UGV

Job 21 in the UGV2

Job 21 in the UGV3

Job 21 in the VBL

Job 21 in the VDCC

Job 21 in the YALU

Job 21 in the YAPE

Job 21 in the YBVTP

Job 21 in the ZBP