Ruth 3 (BOKCV2)
1 ಒಂದು ದಿನ ರೂತಳ ಅತ್ತೆ ನೊವೊಮಿಯು ಅವಳಿಗೆ, “ನನ್ನ ಮಗಳೇ, ನೀನು ಮತ್ತೆ ಗೃಹಿಣಿಯಾಗಿ ಸುಖದಿಂದ ಬಾಳುವಂತೆ, ನಾನು ನಿನಗೆ ವಿಶ್ರಾಂತಿ ಸ್ಥಳ ಏರ್ಪಾಟು ಮಾಡುವುದು ನನ್ನ ಕರ್ತವ್ಯವಲ್ಲವೇ? 2 ಈಗ ನೀನು ಯಾರ ದಾಸಿಯರ ಸಂಗಡ ಇದ್ದೀಯೋ, ಆ ಬೋವಜನು ನಮ್ಮ ಬಂಧುವಾಗಿದ್ದಾನೆ. ಇಗೋ, ಅವನು ರಾತ್ರಿಯಲ್ಲಿ ಕಣದಲ್ಲಿ ಜವೆಗೋಧಿಯನ್ನು ತೂರುವನು. 3 ನೀನು ಸ್ನಾನಮಾಡಿ ಎಣ್ಣೆ ಹಚ್ಚಿಕೊಂಡು ನಿನ್ನ ಒಳ್ಳೆಯ ವಸ್ತ್ರಗಳನ್ನು ಧರಿಸಿಕೊಂಡು ಆ ಕಣಕ್ಕೆ ಹೋಗು. ಆದರೆ ಆ ಮನುಷ್ಯನು ತಿಂದು ಕುಡಿದು ತೀರಿಸುವವರೆಗೂ ಅವನಿಗೆ ನೀನು ಅಲ್ಲಿರುವದು ಅವನಿಗೆ ತಿಳಿಯದಿರಲಿ. 4 ಅವನು ಮಲಗಿಕೊಂಡಾಗ ಅವನು ಮಲಗಿರುವ ಸ್ಥಳವನ್ನು ನೀನು ತಿಳಿದುಕೊಂಡು ಹೋಗಿ ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಮಲಗಿಕೋ. ಆಗ ನೀನು ಮಾಡಬೇಕಾದದ್ದೇನೆಂದು ಅವನು ನಿನಗೆ ತಿಳಿಸುವನು,” ಎಂದಳು. 5 ಅದಕ್ಕೆ ರೂತಳು, “ನೀವು ನನಗೆ ಹೇಳಿದ್ದನ್ನೆಲ್ಲಾ ಮಾಡುವೆನು,” ಎಂದಳು. 6 ಅವಳು ಆ ಕಣಕ್ಕೆ ಹೋಗಿ ತನ್ನ ಅತ್ತೆ ತನಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದಳು. 7 ಬೋವಜನು ತಿಂದು ಕುಡಿದು ಸಂತುಷ್ಟನಾಗಿದ್ದನು. ಅವನು ಕಾಳಿನ ರಾಶಿಯ ಕೊನೆಯಲ್ಲಿ ಬಂದು ಮಲಗಿಕೊಂಡನು. ಆಗ ರೂತಳು ಮೆಲ್ಲಗೆ ಬಂದು ಅವನ ಪಾದಗಳ ಮೇಲಿದ್ದ ಹೊದಿಕೆಯನ್ನು ತೆಗೆದು ಮಲಗಿಕೊಂಡಳು. 8 ಆದರೆ ಮಧ್ಯರಾತ್ರಿಯಲ್ಲಿ ಬೋವಜನು ಹೆದರಿ ತಿರುಗಿ ನೋಡಿದಾಗ ಇಗೋ, ಒಬ್ಬ ಸ್ತ್ರೀ ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವುದನ್ನು ಕಂಡನು. 9 ಆಗ ಅವನು, “ನೀನು ಯಾರು?” ಎಂದನು.ಅದಕ್ಕವಳು, “ನಾನು ನಿಮ್ಮ ದಾಸಿಯಾದ ರೂತಳು. ನೀವು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿರಿ. ಏಕೆಂದರೆ ನೀವು ನನ್ನನ್ನು ವಿಮೋಚಿಸತಕ್ಕ ಹತ್ತಿರ ಸಂಬಂಧಿಕನು,” ಎಂದಳು. 10 ಅದಕ್ಕೆ ಅವನು, “ನನ್ನ ಮಗಳೇ, ಯೆಹೋವ ದೇವರಿಂದ ನಿನಗೆ ಆಶೀರ್ವಾದವಾಗಲಿ, ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ನೀನು ಹೋಗದೆ ಇದ್ದುದರಿಂದ ಮೊದಲು ತೋರಿಸಿದ್ದಕ್ಕಿಂತ ಕಡೆಯಲ್ಲಿ ನೀನು ತೋರಿಸಿದ ದಯೆಯು ಹೆಚ್ಚಾಗಿದೆ. 11 ಈಗ ನನ್ನ ಮಗಳೇ, ನೀನು ಭಯಪಡಬೇಡ. ನಿನಗೆ ಬೇಕಾಗಿರುವುದನ್ನು ನಿನಗೆ ಮಾಡುವೆನು. ನೀನು ಗುಣವತಿಯಾದ ಸ್ತ್ರೀ ಎಂದು ಪಟ್ಟಣದಲ್ಲಿರುವ ನನ್ನ ಜನರೆಲ್ಲರೂ ಬಲ್ಲರು. 12 ಈಗ ನಾನು ನಿನ್ನ ವಿಮೋಚಿಸತಕ್ಕ ಸಮೀಪ ಬಂಧುವಾಗಿದ್ದೇನೆ ಎಂಬುದು ನಿಜವೇ. ಆದರೆ ನನಗಿಂತಲೂ ಸಮೀಪಸ್ಥನಾದ ಬಂಧುವು ಒಬ್ಬನಿದ್ದಾನೆ. 13 ಈ ರಾತ್ರಿಯಲ್ಲಿ ಇಲ್ಲಿರು. ನಾಳೆ ಬೆಳಿಗ್ಗೆ ಅವನು ನಿನಗೆ ವಿಮೋಚಕ ಬಂಧುವಿನ ಕರ್ತವ್ಯ ಮಾಡಿದರೆ ಒಳ್ಳೆಯದು. ಅವನು ನಿನಗೆ ವಿಮೋಚಕ ಬಂಧುವಿನ ಕರ್ತವ್ಯ ಮಾಡಲು ಮನಸ್ಸಿಲ್ಲದಿದ್ದರೆ ಯೆಹೋವ ದೇವರ ಜೀವದಾಣೆ, ನಾನೇ ಅದನ್ನು ಮಾಡುವೆನು. ಉದಯಕಾಲದವರೆಗೂ ಇಲ್ಲಿಯೇ ಮಲಗಿರು,” ಎಂದನು. 14 ಅವಳು ಹಾಗೆಯೇ ಉದಯಕಾಲದವರೆಗೂ ಅವನ ಪಾದಗಳ ಬಳಿಯಲ್ಲಿ ಮಲಗಿದ್ದು ಯಾರಿಗೂ ಗೊತ್ತಾಗಬಾರದೆಂದು ಹೊತ್ತಿಗೆ ಮುಂಚೆ ಎದ್ದಳು. ಅವನು, “ಒಬ್ಬ ಸ್ತ್ರೀ ಕಣದಲ್ಲಿ ಬಂದಳೆಂದು ಯಾರಿಗೂ ತಿಳಿಯದಿರಲಿ,” ಎಂದನು. 15 ಅವನು, “ನಿನ್ನ ಮೇಲ್ಹೊದಿಕೆಯನ್ನು ಹಿಡಿ,” ಎಂದನು. ಅವಳು ಅದನ್ನು ಹಿಡಿದಾಗ ಅವನು ಅದರಲ್ಲಿ ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ಅಳೆದು ಹಾಕಿ ಆಕೆಯ ಮೇಲೆ ಹೊರಿಸಿದನು. ಅವಳು ಅದನ್ನು ಹೊತ್ತುಕೊಂಡು ಪಟ್ಟಣಕ್ಕೆ ಬಂದಳು. 16 ಅವಳು ತನ್ನ ಅತ್ತೆಯ ಬಳಿಗೆ ಬಂದಾಗ ಅವಳ ಅತ್ತೆಯು, “ನನ್ನ ಮಗಳೇ, ಏನು ನಡೆಯಿತು?” ಎಂದಳು.ಆಗ ಅವಳು ಆ ಮನುಷ್ಯನು ತನಗೆ ಮಾಡಿದ್ದನ್ನೆಲ್ಲಾ ಅವಳಿಗೆ ತಿಳಿಸಿದಳು. 17 “ ‘ನೀನು ನಿನ್ನ ಅತ್ತೆಯ ಬಳಿಗೆ ಬರೀ ಕೈಯಾಗಿ ಹೋಗಬಾರದು’ ಎಂದು ಅವನು ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ನನಗೆ ಕೊಟ್ಟನು,” ಎಂದಳು. 18 ಅದಕ್ಕೆ ನೊವೊಮಿ, “ನನ್ನ ಮಗಳೇ, ಈ ಕಾರ್ಯ ಏನಾಗುವುದೋ, ಎಂದು ನೀನು ತಿಳಿಯುವವರೆಗೂ ಸುಮ್ಮನೆ ಇರು. ಆ ಮನುಷ್ಯನು ಈ ಹೊತ್ತು ಈ ಕಾರ್ಯವನ್ನು ತೀರಿಸುವವರೆಗೂ ವಿಶ್ರಾಂತಿಯಲ್ಲಿ ಇರಲಾರನು,” ಎಂದಳು.
In Other Versions
Ruth 3 in the ANGEFD
Ruth 3 in the ANTPNG2D
Ruth 3 in the AS21
Ruth 3 in the BAGH
Ruth 3 in the BBPNG
Ruth 3 in the BBT1E
Ruth 3 in the BDS
Ruth 3 in the BEV
Ruth 3 in the BHAD
Ruth 3 in the BIB
Ruth 3 in the BLPT
Ruth 3 in the BNT
Ruth 3 in the BNTABOOT
Ruth 3 in the BNTLV
Ruth 3 in the BOATCB
Ruth 3 in the BOATCB2
Ruth 3 in the BOBCV
Ruth 3 in the BOCNT
Ruth 3 in the BOECS
Ruth 3 in the BOGWICC
Ruth 3 in the BOHCB
Ruth 3 in the BOHCV
Ruth 3 in the BOHLNT
Ruth 3 in the BOHNTLTAL
Ruth 3 in the BOICB
Ruth 3 in the BOILNTAP
Ruth 3 in the BOITCV
Ruth 3 in the BOKCV
Ruth 3 in the BOKHWOG
Ruth 3 in the BOKSSV
Ruth 3 in the BOLCB
Ruth 3 in the BOLCB2
Ruth 3 in the BOMCV
Ruth 3 in the BONAV
Ruth 3 in the BONCB
Ruth 3 in the BONLT
Ruth 3 in the BONUT2
Ruth 3 in the BOPLNT
Ruth 3 in the BOSCB
Ruth 3 in the BOSNC
Ruth 3 in the BOTLNT
Ruth 3 in the BOVCB
Ruth 3 in the BOYCB
Ruth 3 in the BPBB
Ruth 3 in the BPH
Ruth 3 in the BSB
Ruth 3 in the CCB
Ruth 3 in the CUV
Ruth 3 in the CUVS
Ruth 3 in the DBT
Ruth 3 in the DGDNT
Ruth 3 in the DHNT
Ruth 3 in the DNT
Ruth 3 in the ELBE
Ruth 3 in the EMTV
Ruth 3 in the ESV
Ruth 3 in the FBV
Ruth 3 in the FEB
Ruth 3 in the GGMNT
Ruth 3 in the GNT
Ruth 3 in the HARY
Ruth 3 in the HNT
Ruth 3 in the IRVA
Ruth 3 in the IRVB
Ruth 3 in the IRVG
Ruth 3 in the IRVH
Ruth 3 in the IRVK
Ruth 3 in the IRVM
Ruth 3 in the IRVM2
Ruth 3 in the IRVO
Ruth 3 in the IRVP
Ruth 3 in the IRVT
Ruth 3 in the IRVT2
Ruth 3 in the IRVU
Ruth 3 in the ISVN
Ruth 3 in the JSNT
Ruth 3 in the KAPI
Ruth 3 in the KBT1ETNIK
Ruth 3 in the KBV
Ruth 3 in the KJV
Ruth 3 in the KNFD
Ruth 3 in the LBA
Ruth 3 in the LBLA
Ruth 3 in the LNT
Ruth 3 in the LSV
Ruth 3 in the MAAL
Ruth 3 in the MBV
Ruth 3 in the MBV2
Ruth 3 in the MHNT
Ruth 3 in the MKNFD
Ruth 3 in the MNG
Ruth 3 in the MNT
Ruth 3 in the MNT2
Ruth 3 in the MRS1T
Ruth 3 in the NAA
Ruth 3 in the NASB
Ruth 3 in the NBLA
Ruth 3 in the NBS
Ruth 3 in the NBVTP
Ruth 3 in the NET2
Ruth 3 in the NIV11
Ruth 3 in the NNT
Ruth 3 in the NNT2
Ruth 3 in the NNT3
Ruth 3 in the PDDPT
Ruth 3 in the PFNT
Ruth 3 in the RMNT
Ruth 3 in the SBIAS
Ruth 3 in the SBIBS
Ruth 3 in the SBIBS2
Ruth 3 in the SBICS
Ruth 3 in the SBIDS
Ruth 3 in the SBIGS
Ruth 3 in the SBIHS
Ruth 3 in the SBIIS
Ruth 3 in the SBIIS2
Ruth 3 in the SBIIS3
Ruth 3 in the SBIKS
Ruth 3 in the SBIKS2
Ruth 3 in the SBIMS
Ruth 3 in the SBIOS
Ruth 3 in the SBIPS
Ruth 3 in the SBISS
Ruth 3 in the SBITS
Ruth 3 in the SBITS2
Ruth 3 in the SBITS3
Ruth 3 in the SBITS4
Ruth 3 in the SBIUS
Ruth 3 in the SBIVS
Ruth 3 in the SBT
Ruth 3 in the SBT1E
Ruth 3 in the SCHL
Ruth 3 in the SNT
Ruth 3 in the SUSU
Ruth 3 in the SUSU2
Ruth 3 in the SYNO
Ruth 3 in the TBIAOTANT
Ruth 3 in the TBT1E
Ruth 3 in the TBT1E2
Ruth 3 in the TFTIP
Ruth 3 in the TFTU
Ruth 3 in the TGNTATF3T
Ruth 3 in the THAI
Ruth 3 in the TNFD
Ruth 3 in the TNT
Ruth 3 in the TNTIK
Ruth 3 in the TNTIL
Ruth 3 in the TNTIN
Ruth 3 in the TNTIP
Ruth 3 in the TNTIZ
Ruth 3 in the TOMA
Ruth 3 in the TTENT
Ruth 3 in the UBG
Ruth 3 in the UGV
Ruth 3 in the UGV2
Ruth 3 in the UGV3
Ruth 3 in the VBL
Ruth 3 in the VDCC
Ruth 3 in the YALU
Ruth 3 in the YAPE
Ruth 3 in the YBVTP
Ruth 3 in the ZBP