1 Samuel 13 (IRVK)

1 ಸೌಲನು ಅರಸನಾದಾಗ ಮೂವತ್ತು ವರ್ಷದವನಾಗಿದ್ದನು. ಅವನು ಇಸ್ರಾಯೇಲರನ್ನು ಎರಡು ವರ್ಷಗಳ ಕಾಲ ಆಳಿದನು. 2 ಅವನು ಇಸ್ರಾಯೇಲರಿಂದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡನು, ಅವರಲ್ಲಿ ಎರಡು ಸಾವಿರ ಜನರು ಅವನೊಂದಿಗೆ ಮಿಕ್ಮಾಷಿನಲ್ಲಿಯೂ, ಬೇತೇಲಿನ ಗುಡ್ಡದಲ್ಲಿಯೂ ಇದ್ದರು. ಒಂದು ಸಾವಿರ ಜನರನ್ನು ಬೆನ್ಯಾಮೀನ್ಯರ ಗಿಬೆಯದಲ್ಲಿದ್ದ ಯೋನಾತಾನನ ವಶಕ್ಕೆ ಕೊಟ್ಟನು. ಉಳಿದ ಇಸ್ರಾಯೇಲರನ್ನು ಅವರವರ ಮನೆಗಳಿಗೆ ಕಳುಹಿಸಿದನು. 3 ಯೋನಾತಾನನು ಗೆಬದಲ್ಲಿದ್ದ ಫಿಲಿಷ್ಟಿಯರ ಕಾವಲುಪಡೆಯ ಪಾಳೆಯವನ್ನು ನಾಶಮಾಡಿದನು. ಈ ವರ್ತಮಾನವು ಫಿಲಿಷ್ಟಿಯರಿಗೆ ಮುಟ್ಟಿತು. ಸೌಲನು “ಎಲ್ಲಾ ಇಬ್ರಿಯರು ಕೇಳಲಿ” ಎಂದು ದೇಶದಲ್ಲೆಲ್ಲಾ ತುತ್ತೂರಿ ಊದಿಸಿದನು. 4 ಸೌಲನು ಫಿಲಿಷ್ಟಿಯರ ಕಾವಲುಪಡೆಯ ಪಾಳೆಯವನ್ನು ನಾಶಮಾಡಿದ್ದರಿಂದ ತಾವು ಅವರ ದ್ವೇಷಕ್ಕೆ ಗುರಿಯಾದೆವೆಂದು ಇಸ್ರಾಯೇಲರು ತಿಳಿದು ಗಿಲ್ಗಾಲಿಗೆ ಬಂದು ಸೌಲನನ್ನು ಕೂಡಿಕೊಂಡರು. 5 ಆಗ ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೋಸ್ಕರ ಮೂವತ್ತು ಸಾವಿರ ರಥಬಲವನ್ನೂ, ಆರು ಸಾವಿರ ಅಶ್ವಬಲವನ್ನೂ, ಸಮುದ್ರದ ಮರಳಿನಷ್ಟು ಅಸಂಖ್ಯವಾದ ಕಾಲಾಳುಗಳನ್ನೂ ತೆಗೆದುಕೊಂಡು ಬಂದು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡರು. 6 ಇಸ್ರಾಯೇಲರಿಗೆ ಕೇಡು ಬಂದಿತು. ತಾವು ಇಕ್ಕಟ್ಟಿನಲ್ಲಿದ್ದೇವೆಂದು ಅವರು ತಿಳಿದು ಗವಿ, ಕಾಡು, ಬಂಡೆ, ನೆಲಮನೆ, ಗುಂಡಿ ಇವುಗಳಲ್ಲಿ ಅಡಗಿಕೊಂಡರು. 7 ಕೆಲವರು ಯೊರ್ದನ್ ಹೊಳೆದಾಟಿ ಗಾದ್ಯರ ದೇಶಕ್ಕೂ, ಗಿಲ್ಯಾದ್ ಪ್ರಾಂತ್ಯಕ್ಕೂ ಹೊರಟುಹೋದರು. ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸಂಗಡ ಇದ್ದವರು ಭಯದಿಂದ ನಡುಗುತ್ತ ಅವನನ್ನು ಹಿಂಬಾಲಿಸಿದರು. 8 ಸೌಲನು ಸಮುವೇಲನ ಆಜ್ಞೆಯಂತೆ ಗಿಲ್ಗಾಲಿನಲ್ಲೇ ಏಳು ದಿನ ಇದ್ದರೂ ಸಮುವೇಲನು ಬರಲಿಲ್ಲ; ಅಷ್ಟರಲ್ಲಿ ಜನರು ಚದರಿಹೋದರು. 9 ಆಗ ಸೌಲನು ಜನರಿಂದ ಸರ್ವಾಂಗಹೋಮಕ್ಕೂ, ಸಮಾಧಾನ ಯಜ್ಞಕ್ಕೂ ಬೇಕಾದದ್ದನ್ನು ತರಿಸಿ ಸರ್ವಾಂಗಹೋಮವನ್ನು ಅರ್ಪಿಸಿದನು. 10 ಅದು ಮುಗಿಯುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವುದಕ್ಕೋಸ್ಕರ ಎದುರಿಗೆ ಹೋಗಲು 11 ಸಮುವೇಲನು ಅವನನ್ನು, “ಇದೇನು ನೀನು ಮಾಡಿದ್ದು?” ಎಂದು ಕೇಳಲು ಅವನು, “ಜನರು ಚದರಿಹೋಗುವುದನ್ನೂ, ನೀನು ನಿಯಮಿತಕಾಲದಲ್ಲಿ ಬಾರದಿರುವುದನ್ನೂ, ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವುದನ್ನೂ ನೋಡಿದೆನು. 12 ಆಗ ನಾನು ‘ಫಿಲಿಷ್ಟಿಯರು ಗಿಲ್ಗಾಲಿನಲ್ಲಿರುವ ನನ್ನ ಬಳಿಗೆ ಬಂದು ನನ್ನ ಮೇಲೆ ಬಿದ್ದಾರು, ನಾನು ಯೆಹೋವನ ದಯೆಯನ್ನು ಬೇಡಿಕೊಳ್ಳಲಿಲ್ಲ’ ಎಂದು, ಭಯಪಟ್ಟು ಸರ್ವಾಂಗಹೋಮವನ್ನು ಸಮರ್ಪಿಸುವುದಕ್ಕೆ ಮುಂದಾದೆನು” ಅಂದನು. 13 ಆಗ ಸಮುವೇಲನು, “ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು. 14 ಈಗಲಾದರೋ ನಿನ್ನ ಅರಸುತನವು ನಿಲ್ಲುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ಕೈಕೊಳ್ಳದೆ ಹೋದುದರಿಂದ ಆತನು ತನಗೆ ಒಪ್ಪುವ ಬೇರೊಬ್ಬ ಪುರುಷನನ್ನು ತನ್ನ ಪ್ರಜೆಯ ಮೇಲೆ ಪ್ರಭುವಾಗಿ ನೇಮಿಸಿದ್ದಾನೆ” ಎಂದು ಹೇಳಿದನು. 15 ಅನಂತರ ಸಮುವೇಲನು ಗಿಲ್ಗಾಲನ್ನು ಬಿಟ್ಟು ಬೆನ್ಯಾಮೀನ್ಯರ ಗಿಬೆಯಕ್ಕೆ ಹೋದನು. 16 ಸೌಲನು ತನ್ನ ಜೊತೆಯಲ್ಲಿದ್ದ ಸೈನಿಕರನ್ನು ಲೆಕ್ಕಿಸಿದಾಗ ಆರು ನೂರು ಪುರುಷರಿದ್ದರು. ಅವರೊಡನೆ ಅವನೂ ಅವನ ಮಗನಾದ ಯೋನಾತಾನನೂ ಬೆನ್ಯಾಮೀನ್ಯರ ಗೆಬದಲ್ಲಿ ಇಳಿದುಕೊಂಡರು. ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದರು. 17 ಸುಲಿಗೆ ಮಾಡುವುದಕ್ಕೋಸ್ಕರ ಫಿಲಿಷ್ಟಿಯರ ಪಾಳೆಯದಿಂದ ಮೂರು ಗುಂಪುಗಳು ಹೊರಟು, ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್‌ ನಾಡಿಗೂ, 18 ಇನ್ನೊಂದು ಗುಂಪು ಬೇತ್‌ಹೋರೋನಿನ ಕಡೆಗೂ, ಮತ್ತೊಂದು ಜೆಬೋಯೀಮಿನ ಕಣಿವೆಯ ಕೆಳಗಿರುವ ಅರಣ್ಯವನ್ನು ನೋಡಬಹುದಾದ ಸ್ಥಳಕ್ಕೂ ಹೋದವು. 19 ಇಬ್ರಿಯರು ಈಟಿಕತ್ತಿಗಳನ್ನು ಮಾಡಿಕೊಳ್ಳಬಾರದೆಂದು ಫಿಲಿಷ್ಟಿಯರ ಆಜ್ಞೆಯಿದ್ದದರಿಂದ ಇಸ್ರಾಯೇಲ್‌ ದೇಶದಲ್ಲಿ ಅವುಗಳನ್ನು ಮಾಡುವ ಕಮ್ಮಾರರೇ ಇರಲಿಲ್ಲ. 20 ಅವರು ತಮ್ಮ ನೇಗಿಲಿನ ಗುಳ, ಸಲಿಕೆ, ಕೊಡಲಿ, ಗುದ್ದಲಿ ಇವುಗಳನ್ನು ಹರಿತ ಮಾಡಿಸುವುದಕ್ಕೆ ಫಿಲಿಷ್ಟಿಯರ ಹತ್ತಿರವೇ ಹೋಗಬೇಕಿತ್ತು. 21 ಗುದ್ದಲಿ, ಸಲಿಕೆ, ತ್ರಿಶೂಲ, ಕೊಡಲಿ, ಮುಳ್ಳುಗೋಲು ಇವುಗಳನ್ನು ಹದಮಾಡುವುದಕ್ಕೋಸ್ಕರ ಅವರಲ್ಲಿ ಹರಿತ ಮಾಡುವ ಕಲ್ಲು ಮಾತ್ರ ಇತ್ತು. 22 ಹೀಗಿರುವುದರಿಂದ ಯುದ್ಧ ಪ್ರಾರಂಭಿಸಿದಾಗ ಸೌಲ ಮತ್ತು ಯೋನಾತಾನರ ಹೊರತು ಅವರ ಜೊತೆಯಲ್ಲಿದ್ದ ಜನರಲ್ಲಿ ಒಬ್ಬನ ಕೈಯಲ್ಲಾದರೂ, ಕತ್ತಿಯಾಗಲಿ ಬರ್ಜಿಯಾಗಲಿ ಇರಲಿಲ್ಲ. 23 ಫಿಲಿಷ್ಟಿಯರ ಕಾವಲುದಂಡು ಮಿಕ್ಮಾಷಿನ ಕಣಿವೆಯ ಕಡೆಗೆ ಹೊರಟಿತು.

In Other Versions

1 Samuel 13 in the ANGEFD

1 Samuel 13 in the ANTPNG2D

1 Samuel 13 in the AS21

1 Samuel 13 in the BAGH

1 Samuel 13 in the BBPNG

1 Samuel 13 in the BBT1E

1 Samuel 13 in the BDS

1 Samuel 13 in the BEV

1 Samuel 13 in the BHAD

1 Samuel 13 in the BIB

1 Samuel 13 in the BLPT

1 Samuel 13 in the BNT

1 Samuel 13 in the BNTABOOT

1 Samuel 13 in the BNTLV

1 Samuel 13 in the BOATCB

1 Samuel 13 in the BOATCB2

1 Samuel 13 in the BOBCV

1 Samuel 13 in the BOCNT

1 Samuel 13 in the BOECS

1 Samuel 13 in the BOGWICC

1 Samuel 13 in the BOHCB

1 Samuel 13 in the BOHCV

1 Samuel 13 in the BOHLNT

1 Samuel 13 in the BOHNTLTAL

1 Samuel 13 in the BOICB

1 Samuel 13 in the BOILNTAP

1 Samuel 13 in the BOITCV

1 Samuel 13 in the BOKCV

1 Samuel 13 in the BOKCV2

1 Samuel 13 in the BOKHWOG

1 Samuel 13 in the BOKSSV

1 Samuel 13 in the BOLCB

1 Samuel 13 in the BOLCB2

1 Samuel 13 in the BOMCV

1 Samuel 13 in the BONAV

1 Samuel 13 in the BONCB

1 Samuel 13 in the BONLT

1 Samuel 13 in the BONUT2

1 Samuel 13 in the BOPLNT

1 Samuel 13 in the BOSCB

1 Samuel 13 in the BOSNC

1 Samuel 13 in the BOTLNT

1 Samuel 13 in the BOVCB

1 Samuel 13 in the BOYCB

1 Samuel 13 in the BPBB

1 Samuel 13 in the BPH

1 Samuel 13 in the BSB

1 Samuel 13 in the CCB

1 Samuel 13 in the CUV

1 Samuel 13 in the CUVS

1 Samuel 13 in the DBT

1 Samuel 13 in the DGDNT

1 Samuel 13 in the DHNT

1 Samuel 13 in the DNT

1 Samuel 13 in the ELBE

1 Samuel 13 in the EMTV

1 Samuel 13 in the ESV

1 Samuel 13 in the FBV

1 Samuel 13 in the FEB

1 Samuel 13 in the GGMNT

1 Samuel 13 in the GNT

1 Samuel 13 in the HARY

1 Samuel 13 in the HNT

1 Samuel 13 in the IRVA

1 Samuel 13 in the IRVB

1 Samuel 13 in the IRVG

1 Samuel 13 in the IRVH

1 Samuel 13 in the IRVM

1 Samuel 13 in the IRVM2

1 Samuel 13 in the IRVO

1 Samuel 13 in the IRVP

1 Samuel 13 in the IRVT

1 Samuel 13 in the IRVT2

1 Samuel 13 in the IRVU

1 Samuel 13 in the ISVN

1 Samuel 13 in the JSNT

1 Samuel 13 in the KAPI

1 Samuel 13 in the KBT1ETNIK

1 Samuel 13 in the KBV

1 Samuel 13 in the KJV

1 Samuel 13 in the KNFD

1 Samuel 13 in the LBA

1 Samuel 13 in the LBLA

1 Samuel 13 in the LNT

1 Samuel 13 in the LSV

1 Samuel 13 in the MAAL

1 Samuel 13 in the MBV

1 Samuel 13 in the MBV2

1 Samuel 13 in the MHNT

1 Samuel 13 in the MKNFD

1 Samuel 13 in the MNG

1 Samuel 13 in the MNT

1 Samuel 13 in the MNT2

1 Samuel 13 in the MRS1T

1 Samuel 13 in the NAA

1 Samuel 13 in the NASB

1 Samuel 13 in the NBLA

1 Samuel 13 in the NBS

1 Samuel 13 in the NBVTP

1 Samuel 13 in the NET2

1 Samuel 13 in the NIV11

1 Samuel 13 in the NNT

1 Samuel 13 in the NNT2

1 Samuel 13 in the NNT3

1 Samuel 13 in the PDDPT

1 Samuel 13 in the PFNT

1 Samuel 13 in the RMNT

1 Samuel 13 in the SBIAS

1 Samuel 13 in the SBIBS

1 Samuel 13 in the SBIBS2

1 Samuel 13 in the SBICS

1 Samuel 13 in the SBIDS

1 Samuel 13 in the SBIGS

1 Samuel 13 in the SBIHS

1 Samuel 13 in the SBIIS

1 Samuel 13 in the SBIIS2

1 Samuel 13 in the SBIIS3

1 Samuel 13 in the SBIKS

1 Samuel 13 in the SBIKS2

1 Samuel 13 in the SBIMS

1 Samuel 13 in the SBIOS

1 Samuel 13 in the SBIPS

1 Samuel 13 in the SBISS

1 Samuel 13 in the SBITS

1 Samuel 13 in the SBITS2

1 Samuel 13 in the SBITS3

1 Samuel 13 in the SBITS4

1 Samuel 13 in the SBIUS

1 Samuel 13 in the SBIVS

1 Samuel 13 in the SBT

1 Samuel 13 in the SBT1E

1 Samuel 13 in the SCHL

1 Samuel 13 in the SNT

1 Samuel 13 in the SUSU

1 Samuel 13 in the SUSU2

1 Samuel 13 in the SYNO

1 Samuel 13 in the TBIAOTANT

1 Samuel 13 in the TBT1E

1 Samuel 13 in the TBT1E2

1 Samuel 13 in the TFTIP

1 Samuel 13 in the TFTU

1 Samuel 13 in the TGNTATF3T

1 Samuel 13 in the THAI

1 Samuel 13 in the TNFD

1 Samuel 13 in the TNT

1 Samuel 13 in the TNTIK

1 Samuel 13 in the TNTIL

1 Samuel 13 in the TNTIN

1 Samuel 13 in the TNTIP

1 Samuel 13 in the TNTIZ

1 Samuel 13 in the TOMA

1 Samuel 13 in the TTENT

1 Samuel 13 in the UBG

1 Samuel 13 in the UGV

1 Samuel 13 in the UGV2

1 Samuel 13 in the UGV3

1 Samuel 13 in the VBL

1 Samuel 13 in the VDCC

1 Samuel 13 in the YALU

1 Samuel 13 in the YAPE

1 Samuel 13 in the YBVTP

1 Samuel 13 in the ZBP