Isaiah 33 (IRVK)

1 ಸೂರೆಯಾಗದಿದ್ದರೂ ಸೂರೆಮಾಡಿದಿ!ಬಾಧೆಪಡದಿದ್ದರೂ ಬಾಧಿಸಿದಿ!ನಿನ್ನ ಗತಿಯನ್ನು ಏನು ಹೇಳಲಿ; ನೀನು ಸೂರೆಮಾಡಿ ಬಿಟ್ಟ ಮೇಲೆ ನೀನೂ ಸೂರೆಯಾಗುವಿ.ಬಾಧಿಸಿ ಬಿಟ್ಟ ಮೇಲೆ ನಿನ್ನನ್ನೂ ಬಾಧಿಸುವರು. 2 ಯೆಹೋವನೇ, ನಮ್ಮನ್ನು ಕರುಣಿಸು! ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.ಪ್ರತಿಮುಂಜಾನೆಯೂ ನಮಗೆ ಭುಜಬಲವಾಗಿಯೂ, ಇಕ್ಕಟ್ಟಿನಲ್ಲಿ ನಮಗೆ ರಕ್ಷಣೆಯಾಗಿಯೂ ಇರು. 3 ಭೋರ್ಗರೆಯುವ ಶಬ್ದಕ್ಕೆ ಜನಾಂಗಗಳು ಓಡುವವು; ನೀನು ಏಳುವಾಗ ರಾಜ್ಯಗಳು ದಿಕ್ಕಾಪಾಲಾಗುವವು. 4 ನಿಮ್ಮ ಕೊಳ್ಳೆಯು ಮಿಡತೆಗಳು ಕೂಡಿಸುವ ಹಾಗೆ ಕೂಡಿಸಲ್ಪಡುವುದು, ಮಿಡತೆಗಳು ಓಡಾಡುವ ಹಾಗೆ ಮನುಷ್ಯರು ಅದರ ಮೇಲೆ ಓಡಾಡುವರು. 5 ಯೆಹೋವನು ಉನ್ನತೋನ್ನತನಾಗಿದ್ದಾನೆ. ಆತನು ಮೇಲಣ ಲೋಕದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿನ್ಯಾಯಗಳಿಂದ ತುಂಬಿಸಿದ್ದಾನೆ. 6 ಜ್ಞಾನವೂ, ತಿಳಿವಳಿಕೆಯೂ,ರಕ್ಷಣಾಕಾರ್ಯದ ಸಮೃದ್ಧಿಯೂ ಇರುವುದರಿಂದ ನಿನ್ನ ಕಾಲದಲ್ಲಿ ಸ್ಥೈರ್ಯವಿರುವುದು; ಯೆಹೋವನ ಮೇಲಣ ಭಯಭಕ್ತಿಯು ನಿನಗೆ ನಿಧಿಯಾಗುವುದು. 7 ಇಗೋ, ಅವರ ಸಿಂಹವೀರರು ಹೊರಗೆ ಹಾಹಾಕಾರ ಮಾಡುತ್ತಿದ್ದಾರೆ, ಸಮಾಧಾನದ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ. 8 ರಾಜಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ಇಲ್ಲವೇ ಇಲ್ಲ;ಶತ್ರುವು ಒಪ್ಪಂದವನ್ನು ಮೀರಿದ್ದಾನೆ, ಪಟ್ಟಣಗಳನ್ನು ತಿರಸ್ಕರಿಸಿದ್ದಾನೆ, ಯಾವ ಮನುಷ್ಯರನ್ನೂ ಗಣನೆಗೆ ತಾರನು. 9 ದೇಶವು ಪ್ರಲಾಪಿಸಿ ಕುಗ್ಗುತ್ತದೆ, ಲೆಬನೋನ್ ನಾಚಿಕೊಂಡು ಒಣಗುತ್ತದೆ,ಶಾರೋನ್ ಬೆಂಗಾಡಾಗಿದೆ, ಬಾಷಾನ್ ಮತ್ತು ಕರ್ಮೆಲ್ ಎಲೆಗಳನ್ನು ಉದುರಿಸಿಬಿಟ್ಟಿವೆ. 10 ಯೆಹೋವನು ಹೀಗೆನ್ನುತ್ತಾನೆ, “ನಾನು ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿಕೊಳ್ಳುವೆನು, ಈಗ ಉನ್ನತೋನ್ನತನಾಗುವೆನು. 11 ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರುವಿರಿ. ನಿಮ್ಮ ಉಸಿರೇ ನಿಮ್ಮನ್ನು ನುಂಗುವ ಜ್ವಾಲೆಯಾಗುವುದು. 12 ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು. ಕತ್ತರಿಸಿದ ಮುಳ್ಳುಕೊಂಪೆಗೆ ಬೆಂಕಿಹಚ್ಚಿದಂತಾಗುವುದು. 13 ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸಮೀಪದಲ್ಲಿರುವವರೇ, ನನ್ನ ಪರಾಕ್ರಮವನ್ನು ತಿಳಿದುಕೊಳ್ಳಿರಿ. 14 “ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಆ ಭ್ರಷ್ಟರು ನಡುಕಕ್ಕೆ ಒಳಗಾಗಿ,ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗುವರು” ಎಂದುಕೊಳ್ಳುತ್ತಾರೆ. 15 ಸನ್ಮಾರ್ಗದಲ್ಲಿ ನಡೆದು, ಯಥಾರ್ಥವಾಗಿ ನುಡಿದು, ದೋಚಿಕೊಂಡ ಲಾಭ ಬೇಡವೆಂದು,ಲಂಚಮುಟ್ಟದಂತೆ ಕೈ ಒದರಿ, ಕೊಲೆಯ ಮಾತಿಗೆ ಕಿವಿಗೊಡದೆ, ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತಸನ್ನಿಧಾನದಲ್ಲಿ ವಾಸಿಸುವನು. 16 ಇವನಿಗೆ ಗಿರಿದುರ್ಗಗಳೇ, ಆಶ್ರಯಅನ್ನವು ಉಚಿತವಾಗಿ ಒದಗುವುದು, ನೀರು ನಿಸ್ಸಂದೇಹವಾಗಿ ದೊರಕುವುದು. 17 ನೀವು ಭೂಷಿತ ರಾಜನನ್ನು ಕಣ್ಣಾರೆ ದರ್ಶನ ಮಾಡುವಿರಿ. ಅತಿವಿಸ್ತಾರವಾದ ಸ್ವದೇಶವನ್ನು ನೀವು ಕಣ್ಣು ತುಂಬಾ ನೋಡುವಿರಿ. 18 ಆಗ ನೀವು ಹಿಂದಿನ ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ, “ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? ತೂಕಮಾಡಿದವನು ಎಲ್ಲಿ? ಗೋಪುರಗಳನ್ನು ಎಣಿಸಿದವನು ಎಲ್ಲಿ?” ಎಂದುಕೊಳ್ಳುವಿರಿ. 19 ನಿಮಗೆ ತಿಳಿಯದ ಅನ್ಯಭಾಷೆಯನ್ನೂ, ನೀವು ಗ್ರಹಿಸಲಾರದ ತೊದಲು ಮಾತುಗಳನ್ನೂ ಆಡುವ ಆ ಕ್ರೂರ ಜನರನ್ನು ಇನ್ನು ಮುಂದೆ ನೋಡುವುದಿಲ್ಲ. 20 ನಮ್ಮ ಉತ್ಸವಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ,ಯೆರೂಸಲೇಮ್ ನೆಮ್ಮದಿಯ ನಿವಾಸವಾಗಿಯೂ,ಗೂಟಕೀಳದ, ಹಗ್ಗಹರಿಯದ ಒಂದೇ ಕಡೆ ಇರುವ ಗುಡಾರವಾಗಿಯೂ ಇರುವುದನ್ನು ನೀವು ಕಣ್ಣಾರೆ ಕಾಣುವಿರಿ. 21 ಅಲ್ಲಿ ಯೆಹೋವನು ಘನಹೊಂದಿದವನಾಗಿ ನದಿಸರೋವರಗಳಂತೆ ನಮ್ಮೊಂದಿಗಿರುವನು.ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡ ಹಡಗಾಗಲಿ ಅದನ್ನು ದಾಟುವುದಿಲ್ಲ. 22 ಏಕೆಂದರೆ ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಆಜ್ಞೆಕೊಡುವಾತನು, ಯೆಹೋವನು ನಮ್ಮ ರಾಜನು, ಆತನೇ ನಮ್ಮನ್ನು ರಕ್ಷಿಸುವನು. 23 ನಿನ್ನ ಹಗ್ಗಗಳು ಸಡಿಲವಾಗಿ ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು, ಹಾಯಿಯನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ.ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವುದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆ ಮಾಡಿದರು. 24 ಚೀಯೋನಿನ ಯಾವ ನಿವಾಸಿಯೂ “ನಾನು ಅಸ್ವಸ್ಥನು” ಎಂದು ಹೇಳುವುದಿಲ್ಲ. ಅಲ್ಲಿಯ ಜನರ ಪಾಪವು ಪರಿಹಾರವಾಗುವುದು.

In Other Versions

Isaiah 33 in the ANGEFD

Isaiah 33 in the ANTPNG2D

Isaiah 33 in the AS21

Isaiah 33 in the BAGH

Isaiah 33 in the BBPNG

Isaiah 33 in the BBT1E

Isaiah 33 in the BDS

Isaiah 33 in the BEV

Isaiah 33 in the BHAD

Isaiah 33 in the BIB

Isaiah 33 in the BLPT

Isaiah 33 in the BNT

Isaiah 33 in the BNTABOOT

Isaiah 33 in the BNTLV

Isaiah 33 in the BOATCB

Isaiah 33 in the BOATCB2

Isaiah 33 in the BOBCV

Isaiah 33 in the BOCNT

Isaiah 33 in the BOECS

Isaiah 33 in the BOGWICC

Isaiah 33 in the BOHCB

Isaiah 33 in the BOHCV

Isaiah 33 in the BOHLNT

Isaiah 33 in the BOHNTLTAL

Isaiah 33 in the BOICB

Isaiah 33 in the BOILNTAP

Isaiah 33 in the BOITCV

Isaiah 33 in the BOKCV

Isaiah 33 in the BOKCV2

Isaiah 33 in the BOKHWOG

Isaiah 33 in the BOKSSV

Isaiah 33 in the BOLCB

Isaiah 33 in the BOLCB2

Isaiah 33 in the BOMCV

Isaiah 33 in the BONAV

Isaiah 33 in the BONCB

Isaiah 33 in the BONLT

Isaiah 33 in the BONUT2

Isaiah 33 in the BOPLNT

Isaiah 33 in the BOSCB

Isaiah 33 in the BOSNC

Isaiah 33 in the BOTLNT

Isaiah 33 in the BOVCB

Isaiah 33 in the BOYCB

Isaiah 33 in the BPBB

Isaiah 33 in the BPH

Isaiah 33 in the BSB

Isaiah 33 in the CCB

Isaiah 33 in the CUV

Isaiah 33 in the CUVS

Isaiah 33 in the DBT

Isaiah 33 in the DGDNT

Isaiah 33 in the DHNT

Isaiah 33 in the DNT

Isaiah 33 in the ELBE

Isaiah 33 in the EMTV

Isaiah 33 in the ESV

Isaiah 33 in the FBV

Isaiah 33 in the FEB

Isaiah 33 in the GGMNT

Isaiah 33 in the GNT

Isaiah 33 in the HARY

Isaiah 33 in the HNT

Isaiah 33 in the IRVA

Isaiah 33 in the IRVB

Isaiah 33 in the IRVG

Isaiah 33 in the IRVH

Isaiah 33 in the IRVM

Isaiah 33 in the IRVM2

Isaiah 33 in the IRVO

Isaiah 33 in the IRVP

Isaiah 33 in the IRVT

Isaiah 33 in the IRVT2

Isaiah 33 in the IRVU

Isaiah 33 in the ISVN

Isaiah 33 in the JSNT

Isaiah 33 in the KAPI

Isaiah 33 in the KBT1ETNIK

Isaiah 33 in the KBV

Isaiah 33 in the KJV

Isaiah 33 in the KNFD

Isaiah 33 in the LBA

Isaiah 33 in the LBLA

Isaiah 33 in the LNT

Isaiah 33 in the LSV

Isaiah 33 in the MAAL

Isaiah 33 in the MBV

Isaiah 33 in the MBV2

Isaiah 33 in the MHNT

Isaiah 33 in the MKNFD

Isaiah 33 in the MNG

Isaiah 33 in the MNT

Isaiah 33 in the MNT2

Isaiah 33 in the MRS1T

Isaiah 33 in the NAA

Isaiah 33 in the NASB

Isaiah 33 in the NBLA

Isaiah 33 in the NBS

Isaiah 33 in the NBVTP

Isaiah 33 in the NET2

Isaiah 33 in the NIV11

Isaiah 33 in the NNT

Isaiah 33 in the NNT2

Isaiah 33 in the NNT3

Isaiah 33 in the PDDPT

Isaiah 33 in the PFNT

Isaiah 33 in the RMNT

Isaiah 33 in the SBIAS

Isaiah 33 in the SBIBS

Isaiah 33 in the SBIBS2

Isaiah 33 in the SBICS

Isaiah 33 in the SBIDS

Isaiah 33 in the SBIGS

Isaiah 33 in the SBIHS

Isaiah 33 in the SBIIS

Isaiah 33 in the SBIIS2

Isaiah 33 in the SBIIS3

Isaiah 33 in the SBIKS

Isaiah 33 in the SBIKS2

Isaiah 33 in the SBIMS

Isaiah 33 in the SBIOS

Isaiah 33 in the SBIPS

Isaiah 33 in the SBISS

Isaiah 33 in the SBITS

Isaiah 33 in the SBITS2

Isaiah 33 in the SBITS3

Isaiah 33 in the SBITS4

Isaiah 33 in the SBIUS

Isaiah 33 in the SBIVS

Isaiah 33 in the SBT

Isaiah 33 in the SBT1E

Isaiah 33 in the SCHL

Isaiah 33 in the SNT

Isaiah 33 in the SUSU

Isaiah 33 in the SUSU2

Isaiah 33 in the SYNO

Isaiah 33 in the TBIAOTANT

Isaiah 33 in the TBT1E

Isaiah 33 in the TBT1E2

Isaiah 33 in the TFTIP

Isaiah 33 in the TFTU

Isaiah 33 in the TGNTATF3T

Isaiah 33 in the THAI

Isaiah 33 in the TNFD

Isaiah 33 in the TNT

Isaiah 33 in the TNTIK

Isaiah 33 in the TNTIL

Isaiah 33 in the TNTIN

Isaiah 33 in the TNTIP

Isaiah 33 in the TNTIZ

Isaiah 33 in the TOMA

Isaiah 33 in the TTENT

Isaiah 33 in the UBG

Isaiah 33 in the UGV

Isaiah 33 in the UGV2

Isaiah 33 in the UGV3

Isaiah 33 in the VBL

Isaiah 33 in the VDCC

Isaiah 33 in the YALU

Isaiah 33 in the YAPE

Isaiah 33 in the YBVTP

Isaiah 33 in the ZBP