Leviticus 10 (IRVK)
1 ಆರೋನನ ಮಕ್ಕಳಲ್ಲಿ ನಾದಾಬ್ ಹಾಗೂ ಅಬೀಹೂ ಎಂಬ ಇಬ್ಬರು ತಮ್ಮ ತಮ್ಮ ಧೂಪಾರತಿಗಳಲ್ಲಿ ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನಿಟ್ಟು ಅದರ ಮೇಲೆ ಧೂಪದ್ರವ್ಯವನ್ನು ಹಾಕಿ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಿದರು. 2 ಆಗ ಯೆಹೋವನ ಸನ್ನಿಧಿಯಿಂದ ಬೆಂಕಿ ಹೊರಟು ಅವರನ್ನು ದಹಿಸಿಬಿಟ್ಟಿತು; ಅವರು ಯೆಹೋವನ ಸನ್ನಿಧಿಯಲ್ಲಿಯೇ ಸತ್ತರು. 3 ಆಗ ಮೋಶೆ ಆರೋನನಿಗೆ, “ಯೆಹೋವನು ಹೇಳಿದ ಮಾತಿಗೆ ಇದೇ ದೃಷ್ಟಾಂತ; ಆ ಮಾತು ಏನೆಂದರೆ,‘ನಾನು ಪರಿಶುದ್ಧನೆಂಬುದನ್ನು ನನ್ನ ಬಳಿಯಲ್ಲಿರುವವರ ಮೂಲಕವಾಗಿಯೇ ತೋರ್ಪಡಿಸುವೆನು,ಜನರೆಲ್ಲರಿಗೆ ತಿಳಿಯುವಂತೆ ನನ್ನ ಘನತೆಯನ್ನು ಸ್ಥಾಪಿಸುವೆನು ಎಂಬುದೇ’” ಎಂದು ಹೇಳಿದನು.ಅದಕ್ಕೆ ಆರೋನನು ಮೌನವಾಗಿದ್ದನು. 4 ಮೋಶೆ ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನ ಮಕ್ಕಳಾದ ಮೀಶಾಯೇಲನನ್ನು ಮತ್ತು ಎಲ್ಸಾಫಾನನನ್ನು ಕರೆಯಿಸಿ, “ನೀವು ಸಮೀಪಕ್ಕೆ ಬಂದು ನಿಮ್ಮ ಅಣ್ಣಂದಿರ ಶವಗಳನ್ನು ದೇವಮಂದಿರದ ಎದುರಿನಿಂದ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋಗಬೇಕು” ಅಂದನು. 5 ಮೋಶೆಯ ಅಪ್ಪಣೆಯ ಮೇರೆಗೆ ಅವರು ಸಮೀಪಕ್ಕೆ ಬಂದು ಸತ್ತವರು ತೊಟ್ಟುಕೊಂಡಿದ್ದ ನಿಲುವಂಗಿಗಳನ್ನು ತೆಗೆಯದೆ ಅವರ ಶವಗಳನ್ನು ಎತ್ತಿ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋದರು. 6 ಮೋಶೆ ಆರೋನನಿಗೂ ಅವನ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವವರಿಗೆ, “ನೀವು ತಲೆಯನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವೂ ಸಾಯುವಿರಿ; ಅದಲ್ಲದೆ ಯೆಹೋವನಿಗೆ ಜನಸಮೂಹದವರೆಲ್ಲರ ಮೇಲೆ ಸಿಟ್ಟು ಉಂಟಾಗುವುದು. ಯೆಹೋವನು ಹೊತ್ತಿಸಿದ ಈ ಬೆಂಕಿಯ ದೆಸೆಯಿಂದ ನಿಮ್ಮ ಸಹೋದರರಾಗಿರುವ ಎಲ್ಲಾ ಇಸ್ರಾಯೇಲರ ಮನೆತನದವರೇ ದುಃಖಿಸಲಿ. 7 ಯೆಹೋವನ ಅಭಿಷೇಕ ತೈಲವು ನಿಮ್ಮ ಮೇಲಿರುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು; ಹೋದರೆ ಸಾಯುವಿರಿ” ಎಂದು ಹೇಳಿದನು. ಮೋಶೆಯ ಮಾತಿನಂತೆಯೇ ಅವರು ನಡೆದುಕೊಂಡರು. 8 ಯೆಹೋವನು ಆರೋನನೊಂದಿಗೆ ಮಾತನಾಡಿ, 9 “ನೀನೂ ಹಾಗು ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾಗಲಿ ಅಥವಾ ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು; ಹಾಗೆ ಬಂದರೆ ಸಾಯುವಿರಿ. ಇದು ನಿನಗೂ ಮತ್ತು ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತನಿಯಮ. 10 ಅದಲ್ಲದೆ ದೇವರಿಗೆ ಮೀಸಲಾದ ವಸ್ತುಗಳನ್ನು ಅಲ್ಲದ ವಸ್ತುಗಳನ್ನು, ಶುದ್ಧವಾದವುಗಳನ್ನು, ಅಶುದ್ಧವಾದವುಗಳನ್ನು ವಿವೇಚಿಸುವುದೂ, 11 ಯೆಹೋವನು ಮೋಶೆಯ ಮೂಲಕ ಇಸ್ರಾಯೇಲರಿಗೆ ಮಾಡಿದ ಎಲ್ಲಾ ಆಜ್ಞೆಗಳನ್ನು ಜನರಿಗೆ ಬೋಧಿಸುವುದೂ ನಿಮ್ಮ ಕರ್ತವ್ಯವಾಗಿದೆ” ಎಂದು ಹೇಳಿದನು. 12 ಮೋಶೆ ಆರೋನನಿಗೂ ಅವನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೆ, “ಯೆಹೋವನಿಗೆ ಅಗ್ನಿಯ ಮೂಲಕ ಸಮರ್ಪಿತವಾದ ದ್ರವ್ಯಗಳಲ್ಲಿ ಉಳಿದಿರುವ ಧಾನ್ಯನೈವೇದ್ಯ ದ್ರವ್ಯವನ್ನು ತೆಗೆದುಕೊಂಡು, ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿ, ಯಜ್ಞವೇದಿಯ ಬಳಿಯಲ್ಲಿ ಊಟಮಾಡಬೇಕು. ಅದು ಮಹಾಪರಿಶುದ್ಧವಾಗಿದೆ. 13 ಪವಿತ್ರಸ್ಥಳದೊಳಗೇ ಅದನ್ನು ಊಟಮಾಡಬೇಕು. ಜನರು ಯೆಹೋವನಿಗೆ ಸಮರ್ಪಿಸಿದ ಹೋಮದ್ರವ್ಯಗಳಲ್ಲಿ ಅದು ನಿನಗೂ ಮತ್ತು ನಿನ್ನ ಮಕ್ಕಳಿಗೂ ಸಲ್ಲತಕ್ಕದ್ದೆಂದು ಅಪ್ಪಣೆಯಾಗಿದೆ. 14 ನೀವು ನೈವೇದ್ಯ ಮಾಡಿದ ಎದೆಯ ಭಾಗವನ್ನು, ಯಾಜಕರಿಗೋಸ್ಕರ ಪ್ರತ್ಯೇಕಿಸಿದ ತೊಡೆಯನ್ನು ಯಾವುದಾದರೂ ಒಂದು ಶುದ್ಧಸ್ಥಳದಲ್ಲಿ ಊಟಮಾಡಬಹುದು. ನೀನೂ, ನಿನ್ನ ಗಂಡುಮಕ್ಕಳೂ ಹಾಗು ಹೆಣ್ಣುಮಕ್ಕಳೂ ಅದನ್ನು ತಿನ್ನಬಹುದು. ಏಕೆಂದರೆ ಇಸ್ರಾಯೇಲರು ಸಮರ್ಪಿಸುವ ಸಮಾಧಾನಯಜ್ಞದ್ರವ್ಯಗಳಲ್ಲಿ ಇವೇ ನಿನಗೂ ಮತ್ತು ನಿನ್ನ ಮಕ್ಕಳಿಗೂ ಸಲ್ಲಬೇಕೆಂದು ನೇಮಕವಾಗಿದೆ. 15 ಜನರು ಹೋಮಕ್ಕಾಗಿ ಕೊಬ್ಬನ್ನು ತಂದು ಸಮರ್ಪಿಸುವಾಗೆಲ್ಲಾ ಯಾಜಕರಿಗೋಸ್ಕರ ಪ್ರತ್ಯೇಕಿಸಬೇಕಾದ ಆ ತೊಡೆಯನ್ನು ನೈವೇದ್ಯವಾಗಿ ನಿವಾಳಿಸಬೇಕಾದ ಆ ಎದೆಯ ಭಾಗವನ್ನು ಯೆಹೋವನ ಸನ್ನಿಧಿಯಲ್ಲಿ ತರಬೇಕು. ಯೆಹೋವನು ಆಜ್ಞಾಪಿಸಿದಂತೆ ಅವು ನಿನಗೂ ಮತ್ತು ನಿನ್ನ ವಂಶದವರಿಗೂ ಸಲ್ಲತಕ್ಕದ್ದು; ಇದು ಶಾಶ್ವತನಿಯಮ” ಎಂದು ಹೇಳಿದನು. 16 ಜನರೆಲ್ಲರಿಗೋಸ್ಕರ ದೋಷಪರಿಹಾರ ಮಾಡಲು ಸಮರ್ಪಿತವಾದ ಹೋತದ ವಿಷಯದಲ್ಲಿ ಅದು ಏನಾಯಿತೆಂದು ಮೋಶೆ ವಿಚಾರಿಸಲಾಗಿ ಅದನ್ನು ಸುಟ್ಟುಬಿಟ್ಟರೆಂದು ತಿಳಿಯಬಂತು. ಇದನ್ನು ಕೇಳಿದಾಗ ಅವನು ಆರೋನನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರ ಮೇಲೆ ಸಿಟ್ಟುಗೊಂಡು, 17 “ಆ ದೋಷಪರಿಹಾರಕ ಯಜ್ಞದ್ರವ್ಯವು ಮಹಾಪರಿಶುದ್ಧವಾದದ್ದಲ್ಲವೇ? ನೀವು ಜನಸಮೂಹದ ಪಾಪಗಳನ್ನು ಪರಿಹಾರಮಾಡುವಂತೆಯೂ, ಅವರಿಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವಂತೆಯೂ ಅದು ನಿಮ್ಮ ಭಾಗವಾಗಿ ನೇಮಕವಾಗಿದೆಯಲ್ಲಾ. ನೀವು ಯಾಕೆ ಅದನ್ನು ಪವಿತ್ರಸ್ಥಳದೊಳಗೆ ಊಟಮಾಡಲಿಲ್ಲ? 18 ಅದರ ರಕ್ತವು ಪವಿತ್ರಸ್ಥಾನದೊಳಗೆ ತರಬಾರದಾಗಿತ್ತು, ನಾನು ಆಜ್ಞಾಪಿಸಿದಂತೆ ನೀವು ದೇವಸ್ಥಾನದ ಪ್ರಾಕಾರದೊಳಗೆ ಅದನ್ನು ತಿನ್ನಬೇಕಾಗಿತ್ತು” ಅಂದನು. 19 ಅದಕ್ಕೆ ಆರೋನನು ಮೋಶೆಗೆ, “ಇವರು ಈ ಹೊತ್ತು ಯೆಹೋವನ ಸನ್ನಿಧಿಯಲ್ಲಿ ತಮಗೋಸ್ಕರ ದೋಷಪರಿಹಾರಕ ಯಜ್ಞವನ್ನು ಮತ್ತು ಸರ್ವಾಂಗಹೋಮವನ್ನು ಸಮರ್ಪಿಸಿದ್ದರೂ ಈ ಆಪತ್ತು ನನಗೆ ಸಂಭವಿಸಿತು; ಹೀಗಿರುವಾಗ ನಾನು ದೋಷಪರಿಹಾರಕ ಯಜ್ಞದ್ರವ್ಯವನ್ನು ಈ ಹೊತ್ತು ಊಟಮಾಡಿದ್ದರೆ ಅದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋರುತ್ತಿತ್ತೋ?” 20 ಎಂದು ಉತ್ತರಕೊಡಲಾಗಿ ಮೋಶೆ ಆ ಮಾತನ್ನು ಕೇಳಿ ತೃಪ್ತಿಗೊಂಡನು.
In Other Versions
Leviticus 10 in the ANGEFD
Leviticus 10 in the ANTPNG2D
Leviticus 10 in the AS21
Leviticus 10 in the BAGH
Leviticus 10 in the BBPNG
Leviticus 10 in the BBT1E
Leviticus 10 in the BDS
Leviticus 10 in the BEV
Leviticus 10 in the BHAD
Leviticus 10 in the BIB
Leviticus 10 in the BLPT
Leviticus 10 in the BNT
Leviticus 10 in the BNTABOOT
Leviticus 10 in the BNTLV
Leviticus 10 in the BOATCB
Leviticus 10 in the BOATCB2
Leviticus 10 in the BOBCV
Leviticus 10 in the BOCNT
Leviticus 10 in the BOECS
Leviticus 10 in the BOGWICC
Leviticus 10 in the BOHCB
Leviticus 10 in the BOHCV
Leviticus 10 in the BOHLNT
Leviticus 10 in the BOHNTLTAL
Leviticus 10 in the BOICB
Leviticus 10 in the BOILNTAP
Leviticus 10 in the BOITCV
Leviticus 10 in the BOKCV
Leviticus 10 in the BOKCV2
Leviticus 10 in the BOKHWOG
Leviticus 10 in the BOKSSV
Leviticus 10 in the BOLCB
Leviticus 10 in the BOLCB2
Leviticus 10 in the BOMCV
Leviticus 10 in the BONAV
Leviticus 10 in the BONCB
Leviticus 10 in the BONLT
Leviticus 10 in the BONUT2
Leviticus 10 in the BOPLNT
Leviticus 10 in the BOSCB
Leviticus 10 in the BOSNC
Leviticus 10 in the BOTLNT
Leviticus 10 in the BOVCB
Leviticus 10 in the BOYCB
Leviticus 10 in the BPBB
Leviticus 10 in the BPH
Leviticus 10 in the BSB
Leviticus 10 in the CCB
Leviticus 10 in the CUV
Leviticus 10 in the CUVS
Leviticus 10 in the DBT
Leviticus 10 in the DGDNT
Leviticus 10 in the DHNT
Leviticus 10 in the DNT
Leviticus 10 in the ELBE
Leviticus 10 in the EMTV
Leviticus 10 in the ESV
Leviticus 10 in the FBV
Leviticus 10 in the FEB
Leviticus 10 in the GGMNT
Leviticus 10 in the GNT
Leviticus 10 in the HARY
Leviticus 10 in the HNT
Leviticus 10 in the IRVA
Leviticus 10 in the IRVB
Leviticus 10 in the IRVG
Leviticus 10 in the IRVH
Leviticus 10 in the IRVM
Leviticus 10 in the IRVM2
Leviticus 10 in the IRVO
Leviticus 10 in the IRVP
Leviticus 10 in the IRVT
Leviticus 10 in the IRVT2
Leviticus 10 in the IRVU
Leviticus 10 in the ISVN
Leviticus 10 in the JSNT
Leviticus 10 in the KAPI
Leviticus 10 in the KBT1ETNIK
Leviticus 10 in the KBV
Leviticus 10 in the KJV
Leviticus 10 in the KNFD
Leviticus 10 in the LBA
Leviticus 10 in the LBLA
Leviticus 10 in the LNT
Leviticus 10 in the LSV
Leviticus 10 in the MAAL
Leviticus 10 in the MBV
Leviticus 10 in the MBV2
Leviticus 10 in the MHNT
Leviticus 10 in the MKNFD
Leviticus 10 in the MNG
Leviticus 10 in the MNT
Leviticus 10 in the MNT2
Leviticus 10 in the MRS1T
Leviticus 10 in the NAA
Leviticus 10 in the NASB
Leviticus 10 in the NBLA
Leviticus 10 in the NBS
Leviticus 10 in the NBVTP
Leviticus 10 in the NET2
Leviticus 10 in the NIV11
Leviticus 10 in the NNT
Leviticus 10 in the NNT2
Leviticus 10 in the NNT3
Leviticus 10 in the PDDPT
Leviticus 10 in the PFNT
Leviticus 10 in the RMNT
Leviticus 10 in the SBIAS
Leviticus 10 in the SBIBS
Leviticus 10 in the SBIBS2
Leviticus 10 in the SBICS
Leviticus 10 in the SBIDS
Leviticus 10 in the SBIGS
Leviticus 10 in the SBIHS
Leviticus 10 in the SBIIS
Leviticus 10 in the SBIIS2
Leviticus 10 in the SBIIS3
Leviticus 10 in the SBIKS
Leviticus 10 in the SBIKS2
Leviticus 10 in the SBIMS
Leviticus 10 in the SBIOS
Leviticus 10 in the SBIPS
Leviticus 10 in the SBISS
Leviticus 10 in the SBITS
Leviticus 10 in the SBITS2
Leviticus 10 in the SBITS3
Leviticus 10 in the SBITS4
Leviticus 10 in the SBIUS
Leviticus 10 in the SBIVS
Leviticus 10 in the SBT
Leviticus 10 in the SBT1E
Leviticus 10 in the SCHL
Leviticus 10 in the SNT
Leviticus 10 in the SUSU
Leviticus 10 in the SUSU2
Leviticus 10 in the SYNO
Leviticus 10 in the TBIAOTANT
Leviticus 10 in the TBT1E
Leviticus 10 in the TBT1E2
Leviticus 10 in the TFTIP
Leviticus 10 in the TFTU
Leviticus 10 in the TGNTATF3T
Leviticus 10 in the THAI
Leviticus 10 in the TNFD
Leviticus 10 in the TNT
Leviticus 10 in the TNTIK
Leviticus 10 in the TNTIL
Leviticus 10 in the TNTIN
Leviticus 10 in the TNTIP
Leviticus 10 in the TNTIZ
Leviticus 10 in the TOMA
Leviticus 10 in the TTENT
Leviticus 10 in the UBG
Leviticus 10 in the UGV
Leviticus 10 in the UGV2
Leviticus 10 in the UGV3
Leviticus 10 in the VBL
Leviticus 10 in the VDCC
Leviticus 10 in the YALU
Leviticus 10 in the YAPE
Leviticus 10 in the YBVTP
Leviticus 10 in the ZBP