Numbers 24 (IRVK)
1 ಇಸ್ರಾಯೇಲರಿಗೆ ಶುಭವಾಗಬೇಕೆಂಬುದು ಯೆಹೋವನ ಚಿತ್ತವೆಂದು ಬಿಳಾಮನು ತಿಳಿದು ಮೊದಲಿನಂತೆ ಶಕುನ ನೋಡುವುದಕ್ಕೆ ಹೋಗದೆ ಅರಣ್ಯದ ಕಡೆಗೆ ಮುಖವನ್ನು ತಿರುಗಿಸಿಕೊಂಡನು. 2 ಬಿಳಾಮನು ಕಣ್ಣೆತ್ತಿ ನೋಡಲಾಗಿ ಕುಲಗಳ ಪ್ರಕಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಾಯೇಲರು ಅವನಿಗೆ ಕಾಣಿಸಿದರು. ಆಗ ಅವನು ದೇವರಾತ್ಮಪ್ರೇರಿತನಾಗಿ, 3 ಹೀಗೆ ಪ್ರವಾದಿಸಿದನು,“ಬೆಯೋರನ ಮಗನಾದ ಬಿಳಾಮನು ಹೇಳಿದ್ದು,ಮನೋದೃಷ್ಟಿಯಿಂದ ನೋಡುವ ಪುರುಷನು ನುಡಿದದ್ದು. 4 ದೇವರ ಮಾತುಗಳನ್ನು ಕೇಳುವವನಾಗಿಯೂ,ಸರ್ವಶಕ್ತನ ದರ್ಶನವನ್ನು ಹೊಂದುವವನಾಗಿಯೂಪರವಶವಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು. 5 ಯಾಕೋಬೇ, ನಿಮ್ಮ ಡೇರೆಗಳು ಎಷ್ಟೋ ಚೆಲುವಾಗಿವೆ,ಇಸ್ರಾಯೇಲರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ. 6 ಅವು ಕಣಿವೆಗಳ ಹಾಗೆಯೇ ವಿಸ್ತರಿಸಿದೆ.ನದಿಯ ಬಳಿಯಲ್ಲಿರುವ ತೋಟಗಳಂತೆಯೂ,ಯೆಹೋವನು ನೆಟ್ಟ ಅಗರು ಮರಗಳ ಹಾಗೆಯೂನೀರಿನ ಬಳಿಯಲ್ಲಿರುವ ದೇವದಾರುವೃಕ್ಷಗಳಿಗೂ ಸಮಾನವಾಗಿವೆ. 7 ತನ್ನ ತೊಟ್ಟಿಗಳಿಂದ ನೀರು ಹರಿಯುತ್ತಲೇ ಇದೆ,ಅವರ ಬಿತ್ತನೆಗೆ ಬೇಕಾದಷ್ಟು ನೀರು ಇರುವುದು.ಅವರ ಅರಸನು ಅಗಾಗ್ ರಾಜನಿಗಿಂತಲೂ ದೊಡ್ಡವನಾಗಿರುವನು.ಅವರ ರಾಜ್ಯವು ಅಭಿವೃದ್ಧಿಯಲ್ಲಿರುವುದು. 8 ದೇವರು ಅವನನ್ನು ಐಗುಪ್ತ ದೇಶದಿಂದ ಕರೆದುಕೊಂಡು ಬಂದನು.ಅವರು ಕಾಡುಕೋಣದಷ್ಟು ಬಲವುಳ್ಳವರು.ಅವರು ಶತ್ರುಜನರನ್ನು ನಿರ್ಮೂಲಮಾಡುವರು.ವೈರಿಗಳ ಎಲುಬುಗಳನ್ನು ಮುರಿದುಹಾಕುವರು.ಅವರನ್ನು ಬಾಣಗಳಿಂದ ಗಾಯಪಡಿಸುವರು. 9 ಆ ಜನಾಂಗವು ಸಿಂಹದಂತೆ ಕಾಲುಮುದುರಿ ಹೊಂಚುಹಾಕಿಕೊಂಡಿದೆ,ಮೃಗೇಂದ್ರನಿಗೆ ಸಮನಾದ ಆ ಜನರನ್ನು ಕೆಣಕುವುದು ಯಾರಿಂದಾದೀತು?ಇಸ್ರಾಯೇಲರೇ, ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದವೂ,ಶಪಿಸುವವನಿಗೆ ಶಾಪವೂ ಉಂಟಾಗುವುದು” ಎಂದನು. 10 ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆಹೊಡೆದು ಅವನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ. 11 ಆದಕಾರಣ ನನ್ನನ್ನು ಬಿಟ್ಟು ನಿನ್ನ ಊರಿಗೆ ಹೋಗಿಬಿಡು. ನಿನ್ನನ್ನು ಬಹಳವಾಗಿ ಸನ್ಮಾನಿಸಿ ಘನಪಡಿಸುವೆನೆಂದು ಹೇಳಿಕೊಂಡೆನು. ಆದರೆ ನಿನಗೆ ಸನ್ಮಾನಮಾಡದಂತೆ ಯೆಹೋವನು ಅಡ್ಡಿಮಾಡಿದ್ದಾನೆ” ಎಂದು ಹೇಳಿದನು. 12 ಅದಕ್ಕೆ ಬಿಳಾಮನು ಬಾಲಾಕನಿಗೆ, “ನೀನು ನನ್ನ ಬಳಿ ಕಳುಹಿಸಿದ ಸೇವಕನಿಗೆ, 13 ‘ಬಾಲಾಕನು ನನಗೆ ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನ್ನ ಇಷ್ಟದಂತೆ ಒಳ್ಳೇಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡಲಾರೆ. ಯೆಹೋವನು ಏನು ಹೇಳುತ್ತಾನೋ ಅದನ್ನೇ ಮಾತನಾಡುವೆನು ಎಂದು ಹೇಳಲಿಲ್ಲವೋ?’ 14 ಈಗ ನಾನು ನನ್ನ ಜನರ ಬಳಿಗೆ ಹೋಗುತ್ತೇನೆ. ಆದರೆ ಕಡೆಗೆ ಆ ಜನರು ನಿನ್ನ ಜನರಿಗೆ ಮುಂದಿನ ದಿನಗಳಲ್ಲಿ ಏನು ಮಾಡುವರೋ ಅದನ್ನು ನಿನಗೆ ತಿಳಿಸುತ್ತೇನೆ” ಎಂದನು. 15 ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದನು,“ಬೆಯೋರನ ಮಗನಾದ ಬಿಳಾಮನಿಗುಂಟಾದ ದೈವೋಕ್ತಿ,ಮನೋದೃಷ್ಟಿಯಿಂದ ನೋಡುವ ಪುರುಷನು ನುಡಿದದ್ದು. 16 ದೇವರ ಮಾತುಗಳನ್ನು ಕೇಳುವವನೂ,ಪರಾತ್ಪರನಾದ ದೇವರ ಜ್ಞಾನವನ್ನು ಪಡೆದವನೂ,ಪರವಶವಾಗಿ ಕಣ್ಣುತೆರೆದು,ಸರ್ವಶಕ್ತನ ದರ್ಶನವನ್ನು ಹೊಂದುವವನೂ ಆಗಿರುವ ಪುರುಷನು ನುಡಿದದ್ದು. 17 ನಾನು ಅವನನ್ನು ನೋಡುವೆನು, ಈಗಲ್ಲ.ಆತನನ್ನು ದೃಷ್ಟಿಸುವೆನು, ಆದರೆ ಸಮೀಪದಲ್ಲಿ ಅಲ್ಲ.ಯಾಕೋಬ ವಂಶದವರಲ್ಲಿ ನಕ್ಷತ್ರವು ಉದಯಿಸುವುದು.ಇಸ್ರಾಯೇಲರಲ್ಲಿ ರಾಜದಂಡವು ಏಳುವುದು.ಅದು ಮೋವಾಬ್ಯರ ತಲೆಯನ್ನು ಸೀಳಿಹಾಕುವುದು ಸೇತನ ಎಲ್ಲಾ ಮಕ್ಕಳನ್ನು ಸಂಹರಿಸಿವುದು. 18 ಅದಲ್ಲದೆ ಇಸ್ರಾಯೇಲರು ಎದೋಮ್ಯರ ದೇಶವನ್ನೂ ಸ್ವಾಧೀನಪಡಿಸಿಕೊಂಡಿದ್ದಾರೆ,ಹಗೆಗಳಾದ ಸೇಯೀರಿನವರು ಅವನಿಗೆ ಅಧೀನರಾದರು. 19 ಇಸ್ರಾಯೇಲರೋ ಬಲಗೊಂಡವರು, ಯಾಕೋಬ್ಯರಿಗೇ ದೊರೆತನವಾಯಿತು,ಪಟ್ಟಣಗಳಿಂದ ತಪ್ಪಿಸಿಕೊಂಡವರೂ ನಾಶವಾದರು” ಎಂದನು. 20 ತರುವಾಯ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ಪ್ರವಾದಿಸಿದ್ದೇನೆಂದರೆ,“ಅಮಾಲೇಕ್ಯರು ಜನಾಂಗಗಳಲ್ಲಿ ಪ್ರಮುಖರಲ್ಲವೇ,ಆದರೂ ನಾಶನವೇ ಅವರ ಗತಿ.” 21 ಬಳಿಕ ಅವನು ಕೇನ್ಯರನ್ನು ನೋಡಿ ಅವರ ವಿಷಯದಲ್ಲಿ ಪ್ರವಾದಿಸಿದ್ದೇನೆಂದರೆ,“ನಿಮ್ಮ ನಿವಾಸ ಸ್ಥಳವು ಶಾಶ್ವತವಾಗಿಯೇ ತೋರುತ್ತದೆ,ಬೆಟ್ಟದ ತುದಿಯಲ್ಲಿ ಗೂಡನ್ನು ಮಾಡಿಕೊಂಡಿದ್ದೀರಿ. 22 ಆದರೂ ಕೇನ್ಯರೂ ನಾಶವಾಗುವರು. ಅದು ಎಷ್ಟು ದೂರ ಅನ್ನುತ್ತೀರೋ?ಅಶ್ಶೂರ್ಯರೇ ನಿಮ್ಮನ್ನು ಸೆರೆಹಿಡಿದುಕೊಂಡು ಹೋಗುವರು.” 23 ಅವನು ಮತ್ತೂ ಕಡೆಯದಾಗಿ ಪ್ರವಾದಿಸಿದ್ದೇನೆಂದರೆ,“ಅಯ್ಯೋ! ದೇವರು ಹೀಗೆ ಮಾಡುವಾಗ ಯಾರು ಉಳಿಯುವರು? 24 ಕಿತ್ತೀಮೆಂಬ ಸ್ಥಳದಿಂದ ಜನರು ಹಡಗುಗಳಲ್ಲಿ ಬಂದುಅಶ್ಶೂರ್ಯರನ್ನೂ ಏಬೆರ್ ಜನರನ್ನೂ ಸೋಲಿಸುವರು;ಅವರಿಗೂ ನಾಶನವುಂಟಾಗುವುದು” ಎಂದನು. 25 ತರುವಾಯ ಬಿಳಾಮನು ಸ್ವದೇಶಕ್ಕೆ ತಿರುಗಿ ಹೋದನು, ಬಾಲಾಕನೂ ಹೊರಟುಹೋದನು.
In Other Versions
Numbers 24 in the ANGEFD
Numbers 24 in the ANTPNG2D
Numbers 24 in the AS21
Numbers 24 in the BAGH
Numbers 24 in the BBPNG
Numbers 24 in the BBT1E
Numbers 24 in the BDS
Numbers 24 in the BEV
Numbers 24 in the BHAD
Numbers 24 in the BIB
Numbers 24 in the BLPT
Numbers 24 in the BNT
Numbers 24 in the BNTABOOT
Numbers 24 in the BNTLV
Numbers 24 in the BOATCB
Numbers 24 in the BOATCB2
Numbers 24 in the BOBCV
Numbers 24 in the BOCNT
Numbers 24 in the BOECS
Numbers 24 in the BOGWICC
Numbers 24 in the BOHCB
Numbers 24 in the BOHCV
Numbers 24 in the BOHLNT
Numbers 24 in the BOHNTLTAL
Numbers 24 in the BOICB
Numbers 24 in the BOILNTAP
Numbers 24 in the BOITCV
Numbers 24 in the BOKCV
Numbers 24 in the BOKCV2
Numbers 24 in the BOKHWOG
Numbers 24 in the BOKSSV
Numbers 24 in the BOLCB
Numbers 24 in the BOLCB2
Numbers 24 in the BOMCV
Numbers 24 in the BONAV
Numbers 24 in the BONCB
Numbers 24 in the BONLT
Numbers 24 in the BONUT2
Numbers 24 in the BOPLNT
Numbers 24 in the BOSCB
Numbers 24 in the BOSNC
Numbers 24 in the BOTLNT
Numbers 24 in the BOVCB
Numbers 24 in the BOYCB
Numbers 24 in the BPBB
Numbers 24 in the BPH
Numbers 24 in the BSB
Numbers 24 in the CCB
Numbers 24 in the CUV
Numbers 24 in the CUVS
Numbers 24 in the DBT
Numbers 24 in the DGDNT
Numbers 24 in the DHNT
Numbers 24 in the DNT
Numbers 24 in the ELBE
Numbers 24 in the EMTV
Numbers 24 in the ESV
Numbers 24 in the FBV
Numbers 24 in the FEB
Numbers 24 in the GGMNT
Numbers 24 in the GNT
Numbers 24 in the HARY
Numbers 24 in the HNT
Numbers 24 in the IRVA
Numbers 24 in the IRVB
Numbers 24 in the IRVG
Numbers 24 in the IRVH
Numbers 24 in the IRVM
Numbers 24 in the IRVM2
Numbers 24 in the IRVO
Numbers 24 in the IRVP
Numbers 24 in the IRVT
Numbers 24 in the IRVT2
Numbers 24 in the IRVU
Numbers 24 in the ISVN
Numbers 24 in the JSNT
Numbers 24 in the KAPI
Numbers 24 in the KBT1ETNIK
Numbers 24 in the KBV
Numbers 24 in the KJV
Numbers 24 in the KNFD
Numbers 24 in the LBA
Numbers 24 in the LBLA
Numbers 24 in the LNT
Numbers 24 in the LSV
Numbers 24 in the MAAL
Numbers 24 in the MBV
Numbers 24 in the MBV2
Numbers 24 in the MHNT
Numbers 24 in the MKNFD
Numbers 24 in the MNG
Numbers 24 in the MNT
Numbers 24 in the MNT2
Numbers 24 in the MRS1T
Numbers 24 in the NAA
Numbers 24 in the NASB
Numbers 24 in the NBLA
Numbers 24 in the NBS
Numbers 24 in the NBVTP
Numbers 24 in the NET2
Numbers 24 in the NIV11
Numbers 24 in the NNT
Numbers 24 in the NNT2
Numbers 24 in the NNT3
Numbers 24 in the PDDPT
Numbers 24 in the PFNT
Numbers 24 in the RMNT
Numbers 24 in the SBIAS
Numbers 24 in the SBIBS
Numbers 24 in the SBIBS2
Numbers 24 in the SBICS
Numbers 24 in the SBIDS
Numbers 24 in the SBIGS
Numbers 24 in the SBIHS
Numbers 24 in the SBIIS
Numbers 24 in the SBIIS2
Numbers 24 in the SBIIS3
Numbers 24 in the SBIKS
Numbers 24 in the SBIKS2
Numbers 24 in the SBIMS
Numbers 24 in the SBIOS
Numbers 24 in the SBIPS
Numbers 24 in the SBISS
Numbers 24 in the SBITS
Numbers 24 in the SBITS2
Numbers 24 in the SBITS3
Numbers 24 in the SBITS4
Numbers 24 in the SBIUS
Numbers 24 in the SBIVS
Numbers 24 in the SBT
Numbers 24 in the SBT1E
Numbers 24 in the SCHL
Numbers 24 in the SNT
Numbers 24 in the SUSU
Numbers 24 in the SUSU2
Numbers 24 in the SYNO
Numbers 24 in the TBIAOTANT
Numbers 24 in the TBT1E
Numbers 24 in the TBT1E2
Numbers 24 in the TFTIP
Numbers 24 in the TFTU
Numbers 24 in the TGNTATF3T
Numbers 24 in the THAI
Numbers 24 in the TNFD
Numbers 24 in the TNT
Numbers 24 in the TNTIK
Numbers 24 in the TNTIL
Numbers 24 in the TNTIN
Numbers 24 in the TNTIP
Numbers 24 in the TNTIZ
Numbers 24 in the TOMA
Numbers 24 in the TTENT
Numbers 24 in the UBG
Numbers 24 in the UGV
Numbers 24 in the UGV2
Numbers 24 in the UGV3
Numbers 24 in the VBL
Numbers 24 in the VDCC
Numbers 24 in the YALU
Numbers 24 in the YAPE
Numbers 24 in the YBVTP
Numbers 24 in the ZBP