Proverbs 19 (IRVK)

1 ಕಪಟವಾಗಿ ಮಾತನಾಡುವ ಮೂಢನಿಗಿಂತಲೂ,ನಿರ್ದೋಷಿಯಾಗಿ ನಡೆಯುವ ದರಿದ್ರನೇ ಶ್ರೇಷ್ಠ. 2 ತಿಳಿವಳಿಕೆಯಿಲ್ಲದೆ ಕೋರುವುದು ಯುಕ್ತವಲ್ಲ,ದುಡುಕುವ ಕಾಲು ದಾರಿತಪ್ಪುವುದು. 3 ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು,ಯೆಹೋವನ ಮೇಲೆ ಕುದಿಯುವನು. 4 ಭಾಗ್ಯವಂತನಿಗೆ ಬಹು ಮಂದಿ ಸ್ನೇಹಿತರು,ಬಡವನಿಗೆ ಇದ್ದ ಸ್ನೇಹಿತನೂ ದೂರವಾಗುವನು. 5 ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ,ಸುಳ್ಳಾಡುವವನು ತಪ್ಪಿಸಿಕೊಳ್ಳನು. 6 ಉದಾರಿಯ ಕಟಾಕ್ಷವನ್ನು ಅನೇಕರು ಕೋರುವರು,ದಾನಶೂರನಿಗೆ ಪ್ರತಿಯೊಬ್ಬನೂ ಸ್ನೇಹಿತನಲ್ಲವೇ. 7 ಬಡವನನ್ನು ಬಂಧುಗಳೆಲ್ಲಾ ಹಗೆಮಾಡುವರು,ಹೌದು, ಮಿತ್ರರೂ ಅವನಿಗೆ ದೂರವಾಗುವರು.ಅವರ ಬರೀ ಮಾತುಗಳನ್ನು ನಂಬಿ ಹಿಂಬಾಲಿಸಿದರೆ ಏನೂ ಸಿಕ್ಕದು. 8 ಬುದ್ಧಿಯನ್ನು ಸಂಪಾದಿಸುವವನು ತನಗೆ ತಾನೇ ಮಿತ್ರನು,ವಿವೇಕವನ್ನು ಕಾಪಾಡುವವನು ಮೇಲನ್ನು ಪಡೆಯುವನು. 9 ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ,ಸುಳ್ಳಾಡುವವನು ಹಾಳಾಗುವನು. 10 ಮೂಢನಿಗೆ ಸುಖಭೋಗ ಜೀವನ ಯುಕ್ತವಲ್ಲ,ದಾಸನಿಗೆ ದೊರೆಗಳ ಮೇಲಣ ದೊರೆತನ ಯುಕ್ತವಲ್ಲ. 11 ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ,ಪರರ ದೋಷವನ್ನು ಲಕ್ಷಿಸದಿರುವುದು ಅವನಿಗೆ ಭೂಷಣ. 12 ರಾಜನ ರೋಷವು ಸಿಂಹದ ಗರ್ಜನೆ,ಅವನ ದಯೆಯು ಪೈರಿನ ಇಬ್ಬನಿ. 13 ಜ್ಞಾನಹೀನನಾದ ಮಗನು ತಂದೆಗೆ ಹಾನಿ,ಜಗಳವಾಡುವ ಹೆಂಡತಿಯು ತಟತಟನೆ ತೊಟ್ಟಿಕ್ಕುವ ಹನಿ. 14 ಮನೆಮಾರು, ಆಸ್ತಿಪಾಸ್ತಿಯು ಪೂರ್ವಿಕರಿಂದ ದೊರಕುವವು,ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ. 15 ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುವುದು,ಸೋಮಾರಿಯು ಹಸಿವೆಗೊಳ್ಳುವನು. 16 ಆಜ್ಞೆಯನ್ನು ಪಾಲಿಸುವವನು ಆತ್ಮವನ್ನು ಪಾಲಿಸುವನು,ನಡತೆಯನ್ನು ಲಕ್ಷಿಸದವನು ಸಾಯುವನು. 17 ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು,ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು. 18 ಬುದ್ಧಿ ಬರುವುದೆಂಬ ನಿರೀಕ್ಷೆಯಿಂದ ಮಗನನ್ನು ಶಿಕ್ಷಿಸು,ಹಾಳುಮಾಡಲು ಮನಸ್ಸು ಮಾಡಬೇಡ, 19 ಕೋಪಿಷ್ಠನು ತನಗಾಗುವ ದಂಡನೆಯನ್ನು ಅನುಭವಿಸಲಿ,ಬಿಡಿಸಿದರೆ ಪ್ರತಿಬಾರಿಯೂ ಬಿಡಿಸಬೇಕಾಗುವುದು. 20 ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು,ಮುಂದೆ ಜ್ಞಾನಿಯಾಗುವಿ. 21 ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ,ಯೆಹೋವನ ಸಂಕಲ್ಪವೇ ಈಡೇರುವುದು. 22 ಮನುಷ್ಯನು ತನ್ನ ಹೃದಯದಲ್ಲಿ ಬಯಸುವಂಥದ್ದು ನಿಷ್ಠೆಯಾಗಿದೆ,ಬಡವನಾಗಿರುವುದು ಉತ್ತಮ. 23 ಯೆಹೋವನ ಭಯವು ಜೀವದಾಯಕವು,ಭಯಭಕ್ತಿಯುಳ್ಳವನು ತೃಪ್ತನಾಗಿ ನೆಲೆಗೊಳ್ಳುವನು,ಅವನಿಗೆ ಕೇಡು ಸಂಭವಿಸದು. 24 ಮೈಗಳ್ಳನು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ,ತಿರುಗಿ ಬಾಯಿಯ ಹತ್ತಿರಕ್ಕೆ ತರಲಾರನು. 25 ಧರ್ಮನಿಂದಕನಿಗೆ ಪೆಟ್ಟುಹೊಡೆ, ನೋಡಿದ ಅವಿವೇಕಿ ಜಾಣನಾಗುವನು,ವಿವೇಕಿಯನ್ನು ಗದರಿಸು, ತಾನೇ ತಿಳಿವಳಿಕೆಯನ್ನು ಗ್ರಹಿಸುವನು. 26 ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು,ನಾಚಿಕೆಯನ್ನು ಮತ್ತು ಅವಮಾನವನ್ನು ಉಂಟುಮಾಡುವನು. 27 ಮಗನೇ, ಬುದ್ಧಿವಾದಗಳನ್ನು ಅನುಸರಿಸಲಿಕ್ಕೆ ಮನಸ್ಸಿಲ್ಲದಿದ್ದರೆ,ಉಪದೇಶ ಕೇಳುವುದನ್ನೇ ಬಿಟ್ಟುಬಿಡು. 28 ನೀಚ ಸಾಕ್ಷಿಯು ನ್ಯಾಯವನ್ನು ಗೇಲಿಮಾಡುವನು,ದುಷ್ಟರ ಬಾಯಿ ದ್ರೋಹವನ್ನು ಆತುರದಿಂದ ನುಂಗುವುದು. 29 ಧರ್ಮನಿಂದಕರಿಗೆ ದಂಡನೆಯ ತೀರ್ಪು ಸಿದ್ಧ,ಮೂಢರ ಬೆನ್ನಿಗೆ ಪೆಟ್ಟು ಖಂಡಿತ.

In Other Versions

Proverbs 19 in the ANGEFD

Proverbs 19 in the ANTPNG2D

Proverbs 19 in the AS21

Proverbs 19 in the BAGH

Proverbs 19 in the BBPNG

Proverbs 19 in the BBT1E

Proverbs 19 in the BDS

Proverbs 19 in the BEV

Proverbs 19 in the BHAD

Proverbs 19 in the BIB

Proverbs 19 in the BLPT

Proverbs 19 in the BNT

Proverbs 19 in the BNTABOOT

Proverbs 19 in the BNTLV

Proverbs 19 in the BOATCB

Proverbs 19 in the BOATCB2

Proverbs 19 in the BOBCV

Proverbs 19 in the BOCNT

Proverbs 19 in the BOECS

Proverbs 19 in the BOGWICC

Proverbs 19 in the BOHCB

Proverbs 19 in the BOHCV

Proverbs 19 in the BOHLNT

Proverbs 19 in the BOHNTLTAL

Proverbs 19 in the BOICB

Proverbs 19 in the BOILNTAP

Proverbs 19 in the BOITCV

Proverbs 19 in the BOKCV

Proverbs 19 in the BOKCV2

Proverbs 19 in the BOKHWOG

Proverbs 19 in the BOKSSV

Proverbs 19 in the BOLCB

Proverbs 19 in the BOLCB2

Proverbs 19 in the BOMCV

Proverbs 19 in the BONAV

Proverbs 19 in the BONCB

Proverbs 19 in the BONLT

Proverbs 19 in the BONUT2

Proverbs 19 in the BOPLNT

Proverbs 19 in the BOSCB

Proverbs 19 in the BOSNC

Proverbs 19 in the BOTLNT

Proverbs 19 in the BOVCB

Proverbs 19 in the BOYCB

Proverbs 19 in the BPBB

Proverbs 19 in the BPH

Proverbs 19 in the BSB

Proverbs 19 in the CCB

Proverbs 19 in the CUV

Proverbs 19 in the CUVS

Proverbs 19 in the DBT

Proverbs 19 in the DGDNT

Proverbs 19 in the DHNT

Proverbs 19 in the DNT

Proverbs 19 in the ELBE

Proverbs 19 in the EMTV

Proverbs 19 in the ESV

Proverbs 19 in the FBV

Proverbs 19 in the FEB

Proverbs 19 in the GGMNT

Proverbs 19 in the GNT

Proverbs 19 in the HARY

Proverbs 19 in the HNT

Proverbs 19 in the IRVA

Proverbs 19 in the IRVB

Proverbs 19 in the IRVG

Proverbs 19 in the IRVH

Proverbs 19 in the IRVM

Proverbs 19 in the IRVM2

Proverbs 19 in the IRVO

Proverbs 19 in the IRVP

Proverbs 19 in the IRVT

Proverbs 19 in the IRVT2

Proverbs 19 in the IRVU

Proverbs 19 in the ISVN

Proverbs 19 in the JSNT

Proverbs 19 in the KAPI

Proverbs 19 in the KBT1ETNIK

Proverbs 19 in the KBV

Proverbs 19 in the KJV

Proverbs 19 in the KNFD

Proverbs 19 in the LBA

Proverbs 19 in the LBLA

Proverbs 19 in the LNT

Proverbs 19 in the LSV

Proverbs 19 in the MAAL

Proverbs 19 in the MBV

Proverbs 19 in the MBV2

Proverbs 19 in the MHNT

Proverbs 19 in the MKNFD

Proverbs 19 in the MNG

Proverbs 19 in the MNT

Proverbs 19 in the MNT2

Proverbs 19 in the MRS1T

Proverbs 19 in the NAA

Proverbs 19 in the NASB

Proverbs 19 in the NBLA

Proverbs 19 in the NBS

Proverbs 19 in the NBVTP

Proverbs 19 in the NET2

Proverbs 19 in the NIV11

Proverbs 19 in the NNT

Proverbs 19 in the NNT2

Proverbs 19 in the NNT3

Proverbs 19 in the PDDPT

Proverbs 19 in the PFNT

Proverbs 19 in the RMNT

Proverbs 19 in the SBIAS

Proverbs 19 in the SBIBS

Proverbs 19 in the SBIBS2

Proverbs 19 in the SBICS

Proverbs 19 in the SBIDS

Proverbs 19 in the SBIGS

Proverbs 19 in the SBIHS

Proverbs 19 in the SBIIS

Proverbs 19 in the SBIIS2

Proverbs 19 in the SBIIS3

Proverbs 19 in the SBIKS

Proverbs 19 in the SBIKS2

Proverbs 19 in the SBIMS

Proverbs 19 in the SBIOS

Proverbs 19 in the SBIPS

Proverbs 19 in the SBISS

Proverbs 19 in the SBITS

Proverbs 19 in the SBITS2

Proverbs 19 in the SBITS3

Proverbs 19 in the SBITS4

Proverbs 19 in the SBIUS

Proverbs 19 in the SBIVS

Proverbs 19 in the SBT

Proverbs 19 in the SBT1E

Proverbs 19 in the SCHL

Proverbs 19 in the SNT

Proverbs 19 in the SUSU

Proverbs 19 in the SUSU2

Proverbs 19 in the SYNO

Proverbs 19 in the TBIAOTANT

Proverbs 19 in the TBT1E

Proverbs 19 in the TBT1E2

Proverbs 19 in the TFTIP

Proverbs 19 in the TFTU

Proverbs 19 in the TGNTATF3T

Proverbs 19 in the THAI

Proverbs 19 in the TNFD

Proverbs 19 in the TNT

Proverbs 19 in the TNTIK

Proverbs 19 in the TNTIL

Proverbs 19 in the TNTIN

Proverbs 19 in the TNTIP

Proverbs 19 in the TNTIZ

Proverbs 19 in the TOMA

Proverbs 19 in the TTENT

Proverbs 19 in the UBG

Proverbs 19 in the UGV

Proverbs 19 in the UGV2

Proverbs 19 in the UGV3

Proverbs 19 in the VBL

Proverbs 19 in the VDCC

Proverbs 19 in the YALU

Proverbs 19 in the YAPE

Proverbs 19 in the YBVTP

Proverbs 19 in the ZBP