Ezekiel 26 (BOKCV2)
1 ಹನ್ನೊಂದನೆಯ ವರ್ಷ, ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು. 2 “ಮನುಷ್ಯಪುತ್ರನೇ, ಟೈರ್, ಯೆರೂಸಲೇಮಿನ ವಿಷಯವಾಗಿ, ‘ಆಹಾ, ಜನರ ದ್ವಾರವಾಗಿದ್ದದ್ದು ಮುರಿದುಹೋಯಿತು, ಅದು ನನ್ನ ಕಡೆಗೆ ತೆರೆದುಕೊಂಡಿದೆ. ಯೆರೂಸಲೇಮು ಹಾಳಾದದ್ದರಿಂದ ನಾನು ವೃದ್ಧಿಗೊಳ್ಳುವೆನು,’ 3 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಟೈರ್ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವುದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು. 4 ಅವರು ಟೈರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ಧೂಳನ್ನು ಒರಸಿ ಅದನ್ನು ಬೋಳು ಬಂಡೆಯಂತೆ ಮಾಡುವೆನು. 5 ಅದು ಸಮುದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿರುವುದು. ನಾನೇ ಅದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಅದು ಜನಾಂಗಗಳಿಗೆ ಕೊಳ್ಳೆಯಾಗಿರುವುದು, 6 ಮತ್ತು ಪ್ರಧಾನ ಭೂಮಿಯಲ್ಲಿರುವ ಅದರ ಪುತ್ರಿಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವ ದೇವರೆಂದು ಎಲ್ಲರಿಗೂ ತಿಳಿಯುವುದು. 7 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ಉತ್ತರದ ರಾಜಾಧಿರಾಜನೂ ಬಾಬಿಲೋನಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಕುದುರೆಗಳ ಸಂಗಡವೂ ಸವಾರರ ಸಂಗಡವೂ ರಥಗಳ ಸಂಗಡವೂ ಬಹುಜನರ ಸಂಗಡವೂ ಟೈರಿನ ಮೇಲೆ ತರುತ್ತೇನೆ. 8 ಅವನು ಪ್ರಧಾನ ಭೂಮಿಯಲ್ಲಿನ ನಿನ್ನ ಪುತ್ರಿಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಗುರಾಣಿಯನ್ನು ಎತ್ತುವನು. 9 ತನ್ನ ಯುದ್ಧ ಯಂತ್ರಗಳನ್ನು ನಿನ್ನ ಗೋಡೆಗಳಿಗೆ ತಾಕಿಸುವನು. ತನ್ನ ಆಯುಧಗಳಿಂದ ನಿನ್ನ ಗೋಪುರಗಳನ್ನು ಕೆಡವಿಬಿಡುವನು. 10 ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಸುಕುವದು, ಒಡಕು ಬಿದ್ದ ಕೋಟೆಯೊಳಗೆ ಶತ್ರುಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲುಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವುವು. 11 ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ನಿನ್ನ ಜನರನ್ನು ಖಡ್ಗದಿಂದ ಕೊಲ್ಲುವನು; ನಿನ್ನ ಬಲವಾದ ಕಂಬಗಳು ನೆಲಕ್ಕೆ ಬೀಳುವುವು. 12 ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಒಡೆದು, ನಿನ್ನ ರಮ್ಯವಾದ ಮನೆಗಳನ್ನು ಕೆಡವಿ, ನಿನ್ನ ಕಲ್ಲುಗಳನ್ನೂ ನಿನ್ನ ಮರಗಳನ್ನೂ ಧೂಳನ್ನೂ ನೀರಿನಲ್ಲಿ ಹಾಕುವರು. 13 ಆಗ ನಿನ್ನ ಹಾಡುಗಳ ಶಬ್ದವನ್ನು ನಿಲ್ಲಿಸುವೆನು. ನಿನ್ನ ಕಿನ್ನರಿಗಳ ಧ್ವನಿ ಇನ್ನು ಕೇಳಿಸುವುದಿಲ್ಲ. 14 ನಿನ್ನನ್ನು ಬೋಳು ಬಂಡೆಯಂತೆ ಮಾಡುವೆನು. ನೀನು ಅಲ್ಲಿ ಬಲೆಹಾಸುವ ಸ್ಥಳವಾಗುವೆ. ನೀನು ಪುನಃ ಕಟ್ಟಲಾಗದೆ ಹೋಗುವಿ. ಯೆಹೋವ ದೇವರಾದ ನಾನೇ ಅದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. 15 “ಸಾರ್ವಭೌಮ ಯೆಹೋವ ದೇವರು ಟೈರಿಗೆ ಹೀಗೆ ಹೇಳುತ್ತಾರೆ: ನಿನ್ನ ಪತನದ ಶಬ್ದಕ್ಕೂ, ಗಾಯಪಟ್ಟವರು ಕೂಗುವಾಗಲೂ, ನಿನ್ನ ಮಧ್ಯದಲ್ಲಿ ಕೊಲೆಯಾಗುವಾಗಲೂ ಸಮುದ್ರತೀರದ ಪ್ರದೇಶಗಳು ನಡುಗುವುದಿಲ್ಲವೇ? 16 ಆಮೇಲೆ ಸಮುದ್ರತೀರದ ಎಲ್ಲಾ ರಾಜಕುಮಾರರು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲುವಂಗಿಗಳನ್ನು ತೆಗೆದುಹಾಕುವರು, ಕಸೂತಿ ಕೆಲಸದಿಂದ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು. ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳುವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯವಾಗಿ ಭಯಭೀತರಾದರು. 17 ನಿನ್ನ ವಿಷಯದಲ್ಲಿ ಗೋಳಾಟವನ್ನೆತ್ತಿ ನಿನಗೆ ಹೇಳುವುದೇನೆಂದರೆ:“ ‘ಸಮುದ್ರಗಳ ಬಳಿಯಲ್ಲಿ ವಾಸಿಸಿದವಳೇ, ಪ್ರಸಿದ್ಧ ಪಟ್ಟಣವೇ,ಸಮುದ್ರದ ಮೇಲೆ ಬಲಗೊಂಡ ನಗರವೇ,ಅದರ ಸಮುದ್ರ ಸಂಚಾರವನ್ನೂ ಭಯಪಡಿಸಿದವಳೇ,ಅಯ್ಯೋ, ಹೇಗೆ ನಾಶವಾದೆ? 18 ಈಗ ನೀನು ಬೀಳುವ ದಿವಸದಲ್ಲಿಸಮುದ್ರ ತೀರಗಳು ನಡುಗುವುವು.ಹೌದು, ನೀನು ಅಳಿದು ಹೋದುದ್ದಕ್ಕೆಸಮುದ್ರ ತೀರಗಳು ಗಾಬರಿಯಾಗುವುವು.’ 19 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧ ಜಲರಾಶಿಯನ್ನು ನಿನ್ನ ಮೇಲೆ ಬರಮಾಡುವೆನು. 20 ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವವುಳ್ಳವರ ಲೋಕದಲ್ಲಿ ನೆಲೆಗೊಳಿಸದೆ ನಿರ್ಜನವಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರೊಂದಿಗೆ ವಾಸಿಸುವಂತೆ ಸೇರಿಸುವೆನು. 21 ನಾನೂ ನಿನ್ನನ್ನು ಭಯಂಕರವಾದ ಅಂತ್ಯಕ್ಕೆ ತರುವೆನು. ಇನ್ನು ಮೇಲೆ ನೀನು ಇರುವುದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡುಕಿದರೂ ನೀನು ಸಿಗುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
In Other Versions
Ezekiel 26 in the ANGEFD
Ezekiel 26 in the ANTPNG2D
Ezekiel 26 in the AS21
Ezekiel 26 in the BAGH
Ezekiel 26 in the BBPNG
Ezekiel 26 in the BBT1E
Ezekiel 26 in the BDS
Ezekiel 26 in the BEV
Ezekiel 26 in the BHAD
Ezekiel 26 in the BIB
Ezekiel 26 in the BLPT
Ezekiel 26 in the BNT
Ezekiel 26 in the BNTABOOT
Ezekiel 26 in the BNTLV
Ezekiel 26 in the BOATCB
Ezekiel 26 in the BOATCB2
Ezekiel 26 in the BOBCV
Ezekiel 26 in the BOCNT
Ezekiel 26 in the BOECS
Ezekiel 26 in the BOGWICC
Ezekiel 26 in the BOHCB
Ezekiel 26 in the BOHCV
Ezekiel 26 in the BOHLNT
Ezekiel 26 in the BOHNTLTAL
Ezekiel 26 in the BOICB
Ezekiel 26 in the BOILNTAP
Ezekiel 26 in the BOITCV
Ezekiel 26 in the BOKCV
Ezekiel 26 in the BOKHWOG
Ezekiel 26 in the BOKSSV
Ezekiel 26 in the BOLCB
Ezekiel 26 in the BOLCB2
Ezekiel 26 in the BOMCV
Ezekiel 26 in the BONAV
Ezekiel 26 in the BONCB
Ezekiel 26 in the BONLT
Ezekiel 26 in the BONUT2
Ezekiel 26 in the BOPLNT
Ezekiel 26 in the BOSCB
Ezekiel 26 in the BOSNC
Ezekiel 26 in the BOTLNT
Ezekiel 26 in the BOVCB
Ezekiel 26 in the BOYCB
Ezekiel 26 in the BPBB
Ezekiel 26 in the BPH
Ezekiel 26 in the BSB
Ezekiel 26 in the CCB
Ezekiel 26 in the CUV
Ezekiel 26 in the CUVS
Ezekiel 26 in the DBT
Ezekiel 26 in the DGDNT
Ezekiel 26 in the DHNT
Ezekiel 26 in the DNT
Ezekiel 26 in the ELBE
Ezekiel 26 in the EMTV
Ezekiel 26 in the ESV
Ezekiel 26 in the FBV
Ezekiel 26 in the FEB
Ezekiel 26 in the GGMNT
Ezekiel 26 in the GNT
Ezekiel 26 in the HARY
Ezekiel 26 in the HNT
Ezekiel 26 in the IRVA
Ezekiel 26 in the IRVB
Ezekiel 26 in the IRVG
Ezekiel 26 in the IRVH
Ezekiel 26 in the IRVK
Ezekiel 26 in the IRVM
Ezekiel 26 in the IRVM2
Ezekiel 26 in the IRVO
Ezekiel 26 in the IRVP
Ezekiel 26 in the IRVT
Ezekiel 26 in the IRVT2
Ezekiel 26 in the IRVU
Ezekiel 26 in the ISVN
Ezekiel 26 in the JSNT
Ezekiel 26 in the KAPI
Ezekiel 26 in the KBT1ETNIK
Ezekiel 26 in the KBV
Ezekiel 26 in the KJV
Ezekiel 26 in the KNFD
Ezekiel 26 in the LBA
Ezekiel 26 in the LBLA
Ezekiel 26 in the LNT
Ezekiel 26 in the LSV
Ezekiel 26 in the MAAL
Ezekiel 26 in the MBV
Ezekiel 26 in the MBV2
Ezekiel 26 in the MHNT
Ezekiel 26 in the MKNFD
Ezekiel 26 in the MNG
Ezekiel 26 in the MNT
Ezekiel 26 in the MNT2
Ezekiel 26 in the MRS1T
Ezekiel 26 in the NAA
Ezekiel 26 in the NASB
Ezekiel 26 in the NBLA
Ezekiel 26 in the NBS
Ezekiel 26 in the NBVTP
Ezekiel 26 in the NET2
Ezekiel 26 in the NIV11
Ezekiel 26 in the NNT
Ezekiel 26 in the NNT2
Ezekiel 26 in the NNT3
Ezekiel 26 in the PDDPT
Ezekiel 26 in the PFNT
Ezekiel 26 in the RMNT
Ezekiel 26 in the SBIAS
Ezekiel 26 in the SBIBS
Ezekiel 26 in the SBIBS2
Ezekiel 26 in the SBICS
Ezekiel 26 in the SBIDS
Ezekiel 26 in the SBIGS
Ezekiel 26 in the SBIHS
Ezekiel 26 in the SBIIS
Ezekiel 26 in the SBIIS2
Ezekiel 26 in the SBIIS3
Ezekiel 26 in the SBIKS
Ezekiel 26 in the SBIKS2
Ezekiel 26 in the SBIMS
Ezekiel 26 in the SBIOS
Ezekiel 26 in the SBIPS
Ezekiel 26 in the SBISS
Ezekiel 26 in the SBITS
Ezekiel 26 in the SBITS2
Ezekiel 26 in the SBITS3
Ezekiel 26 in the SBITS4
Ezekiel 26 in the SBIUS
Ezekiel 26 in the SBIVS
Ezekiel 26 in the SBT
Ezekiel 26 in the SBT1E
Ezekiel 26 in the SCHL
Ezekiel 26 in the SNT
Ezekiel 26 in the SUSU
Ezekiel 26 in the SUSU2
Ezekiel 26 in the SYNO
Ezekiel 26 in the TBIAOTANT
Ezekiel 26 in the TBT1E
Ezekiel 26 in the TBT1E2
Ezekiel 26 in the TFTIP
Ezekiel 26 in the TFTU
Ezekiel 26 in the TGNTATF3T
Ezekiel 26 in the THAI
Ezekiel 26 in the TNFD
Ezekiel 26 in the TNT
Ezekiel 26 in the TNTIK
Ezekiel 26 in the TNTIL
Ezekiel 26 in the TNTIN
Ezekiel 26 in the TNTIP
Ezekiel 26 in the TNTIZ
Ezekiel 26 in the TOMA
Ezekiel 26 in the TTENT
Ezekiel 26 in the UBG
Ezekiel 26 in the UGV
Ezekiel 26 in the UGV2
Ezekiel 26 in the UGV3
Ezekiel 26 in the VBL
Ezekiel 26 in the VDCC
Ezekiel 26 in the YALU
Ezekiel 26 in the YAPE
Ezekiel 26 in the YBVTP
Ezekiel 26 in the ZBP