Ezekiel 26 (IRVK)
1 ಹನ್ನೊಂದನೆಯ ವರ್ಷದ, ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 2 “ನರಪುತ್ರನೇ, ತೂರು, ಯೆರೂಸಲೇಮಿನ ವಿಷಯವಾಗಿ, ಅಹಾ!, ಜನಾಂಗಗಳಿಗೆ ಅಡ್ಡಿಯಾಗಿದ್ದ ಬಾಗಿಲು ಮುರಿದುಹೋಗಿದೆ! ಅದು ನನ್ನ ಕಡೆಗೆ ತಿರುಗಿಕೊಂಡಿದೆ, ಯೆರೂಸಲೇಮು ಹಾಳಾದ ಕಾರಣ ನಾನು ತುಂಬಿಕೊಳ್ಳುವೆನು ಎಂದು” ಅಂದುಕೊಳ್ಳುವೆನು. 3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ತೂರ್ ದೇಶವೇ, ನಾನು ನಿನಗೆ ವಿರುದ್ಧವಾಗಿದ್ದೇನೆ; ಸಮುದ್ರವು ತನ್ನ ತೆರೆಗಳನ್ನು ಎಬ್ಬಿಸುವಂತೆ ನಾನು ಅನೇಕ ಜನಾಂಗಗಳನ್ನು ನಿನ್ನ ಮೇಲೆ ಎಬ್ಬಿಸುವೆನು. 4 ಅವು ತೂರಿನ ಪೌಳಿಗೋಡೆಯನ್ನು ಉರುಳಿಸಿ, ಅದರ ಕೋಟೆ ಕೊತ್ತಲುಗಳನ್ನು ಕೆಡವಿ ಹಾಕುವವು; ನಾನು ಅದರ ಧೂಳನ್ನು ಒರೆಸಿ, ಅದನ್ನು ಬೋಳು ಬಂಡೆಯಂತೆ ಮಾಡುವೆನು. 5 ಅದು ಸಮುದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿರುವುದು. ನಾನೇ ಇದನ್ನು ನುಡಿದಿದ್ದೇನೆ ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ, ‘ಅದು ಜನಾಂಗಗಳಿಗೆ ಸೂರೆಯಾಗುವುದು.’ 6 ಬಯಲು ಭೂಮಿಯಲ್ಲಿನ ಅದರ ಕುಮಾರ್ತೆಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವನು” ಎಂದು ಎಲ್ಲರಿಗೂ ಗೊತ್ತಾಗುವುದು. 7 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ರಾಜಾಧಿರಾಜನೂ, ಬಾಬೆಲಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಅಶ್ವಗಳ ಸಂಗಡಲೂ, ರಥಗಳ ಸಂಗಡಲೂ, ರಾಹುತರ ಸಂಗಡಲೂ, ಬಹುಜನರ ಸಂಗಡಲೂ ಕೂಡಿದವನಾಗಿ ನಾನು ಪೂರ್ವದಿಂದ ತೂರಿನ ಮೇಲೆ ಬರಮಾಡುವೆನು. 8 ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಹತಿಸಿ, ನಿನಗೆ ವಿರುದ್ಧವಾಗಿ ಒಡ್ಡುಕಟ್ಟಿ, ದಿಬ್ಬವನ್ನು ಹಾಕುವನು. 9 ಗುರಾಣಿ ಹಿಡಿದಿರುವವರನ್ನು ಕಳುಹಿಸಿ, ತನ್ನ ಯುದ್ಧ ಯಂತ್ರಗಳಿಂದ ನಿನ್ನ ಪೌಳಿಗೋಡೆಯನ್ನು ಹೊಡೆಯಿಸಿ, ತನ್ನ ಆಯುಧಗಳಿಂದ ನಿನ್ನ ಕೋಟೆ ಕೊತ್ತಲಗಳನ್ನು ಒಡೆದು ಬಿಡುವನು. 10 ಅವನ ಲೆಕ್ಕವಿಲ್ಲದ ಕುದುರೆಗಳಿಂದ ಏಳುವ ಧೂಳಿನಿಂದ ನಿನ್ನನ್ನು ಮುಸುಕುವನು; ಒಡಕು ಬಿದ್ದ ಕೋಟೆಯೊಳಗೆ ಶತ್ರುವು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಗಾಡಿ, ರಥ ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಕದಲುವವು. 11 ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನು ತುಳಿಸಿ, ಖಡ್ಗದಿಂದ ನಿನ್ನ ಜನರನ್ನು ಸಂಹರಿಸಿ, ನಿನ್ನ ಬಲವಾದ ಕಲ್ಲು ಕಂಬಗಳನ್ನು ಕೆಡವಿ ಹಾಕುವನು. 12 ಅವನ ಸೈನಿಕರು ನಿನ್ನ ಆಸ್ತಿಯನ್ನು ಸುಲಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಉರುಳಿಸಿ, ನಿನ್ನ ರಮ್ಯವಾದ ಮನೆಗಳನ್ನು ಕೆಡವಿ, ನಿನ್ನ ಕಲ್ಲುಗಳನ್ನೂ, ಮರಗಳನ್ನೂ, ಮಣ್ಣುಗಳನ್ನೂ ಸಮುದ್ರದಲ್ಲಿ ಹಾಕುವರು. 13 ನಾನು ನಿನ್ನ ಸಂಗೀತಗಳ ಧ್ವನಿಯನ್ನು ನಿಲ್ಲಿಸಿಬಿಡುವೆನು; ನಿನ್ನ ಕಿನ್ನರಿಗಳ ನುಡಿಯು ಇನ್ನು ಕೇಳಿಸದು. 14 ನಾನು ನಿನ್ನನ್ನು ಬೋಳು ಬಂಡೆಯನ್ನಾಗಿ ಮಾಡುವೆನು; ನೀನು ಬಲೆಗಳನ್ನು ಹಾಕುವ ಸ್ಥಳವಾಗುವಿ; ನಿನ್ನ ಮೇಲೆ ಇನ್ನು ಕಟ್ಟಡವನ್ನು ಕಟ್ಟುವುದಿಲ್ಲ; ಯೆಹೋವನಾದ ನಾನೇ ಅಪ್ಪಣೆ ಕೊಟ್ಟಿದ್ದೇನೆ” ಇದು ಕರ್ತನಾದ ಯೆಹೋವನ ನುಡಿ. 15 ಕರ್ತನಾದ ಯೆಹೋವನು ತೂರಿಗೆ ಹೀಗೆ ಹೇಳುತ್ತಾನೆ, “ನಿನ್ನ ಪತನದ ಶಬ್ದಕ್ಕೂ, ಗಾಯಪಟ್ಟವರು ಕೂಗುವಾಗಲೂ, ನಿನ್ನ ಮಧ್ಯದಲ್ಲಿ ಕೊಲೆಯಾಗುವಾಗಲೂ ದ್ವೀಪಗಳು ಅದರುವುದಿಲ್ಲವೇ? 16 ಆಗ ಸಮುದ್ರದ ಸುತ್ತುಮುತ್ತಲಿನ ಸಕಲ ಅರಸರು ತಮ್ಮ ಸಿಂಹಾಸನದಿಂದ ಇಳಿದು, ನಿಲುವಂಗಿಗಳನ್ನು ತೆಗೆದುಹಾಕಿ, ವಿಚಿತ್ರವಾಗಿ ಹೊಲೆದ ತಮ್ಮ ಕಸೂತಿಯ ಬಟ್ಟೆಯನ್ನು ಕಿತ್ತುಹಾಕಿ, ತತ್ತರವನ್ನೇ ಹೊದ್ದುಕೊಂಡು, ನೆಲದ ಮೇಲೆ ಕುಳಿತು, ಕ್ಷಣ ಕ್ಷಣಕ್ಕೂ ನಡುಗುತ್ತಾ, ನಿನ್ನ ವಿಷಯವಾಗಿ ಆಶ್ಚರ್ಯಪಡುವರು. 17 ಇವರು ನಿನ್ನ ವಿಷಯದಲ್ಲಿ ಗೋಳಾಟವನ್ನೆತಿ, ನಾವಿಕರ ನಿವಾಸವೇ, ಹೆಸರುವಾಸಿಯ ಪುರಿಯೇ, ಸಮುದ್ರದಿಂದ ಬಲಗೊಂಡ ನಗರಿಯೇ, ನೀನು ಎಷ್ಟೋ ಹಾಳಾದಿ! ಸಮುದ್ರದ ಸಂಚಾರಿಗಳಿಗೆಲ್ಲಾ ಭಯಾಸ್ಪದರಾಗಿದ್ದ ನಿನ್ನ ನಿವಾಸಿಗಳು ಎಷ್ಟೋ ಹಾಳಾದವು! 18 ಈ ನಿನ್ನ ಪತನದ ದಿನದಲ್ಲಿ ಕರಾವಳಿಯು ನಡುಗುತ್ತದೆ; ನೀನು ಇಲ್ಲವಾದದ್ದಕ್ಕೆ ಸಮುದ್ರ ದ್ವೀಪಗಳು ಗಾಬರಿಯಾಗುವವು.” 19 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ಹಾಳು ಊರನ್ನಾಗಿ ಮಾಡಿ, ನಿರ್ಜನ ಪಟ್ಟಣಗಳ ಗತಿಗೆ ತಂದು, ನೀನು ಜಲರಾಶಿಯಲ್ಲಿ ಮುಳುಗಿ ಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಬರಮಾಡುವೆನು. 20 “ಪುರಾತನ ಕಾಲದಲ್ಲಿ ಹಾಳಾದ ಪಟ್ಟಣಗಳಂತೆ ನಿನ್ನನ್ನು ಅಧೋಲೋಕಕ್ಕೆ ತಳ್ಳಿ, ಪಾತಾಳಕ್ಕೆ ಇಳಿದ ಪೂರ್ವಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು; ಹೌದು, ನೀನು ನಿನ್ನ ಮಹಿಮೆಯನ್ನು ಜೀವಲೋಕದಲ್ಲಿ ನೆಲೆಗೊಳಿಸದೆ, ನಿರ್ಜನವಾಗುವಂತೆ ನಿನ್ನನ್ನು ಪಾತಾಳಕ್ಕೆ ಇಳಿದವರ ಸಹವಾಸದಲ್ಲಿ ಸೇರಿಸುವೆನು. 21 ನಿನ್ನನ್ನು ತೀರಾ ಧ್ವಂಸಮಾಡುವೆನು; ನೀನು ಇಲ್ಲವಾಗುವಿ; ಎಷ್ಟು ಹುಡುಕಿದರೂ ನೀನು ಎಂದಿಗೂ ಸಿಕ್ಕುವುದಿಲ್ಲ” ಇದು ಕರ್ತನಾದ ಯೆಹೋವನ ನುಡಿ.
In Other Versions
Ezekiel 26 in the ANGEFD
Ezekiel 26 in the ANTPNG2D
Ezekiel 26 in the AS21
Ezekiel 26 in the BAGH
Ezekiel 26 in the BBPNG
Ezekiel 26 in the BBT1E
Ezekiel 26 in the BDS
Ezekiel 26 in the BEV
Ezekiel 26 in the BHAD
Ezekiel 26 in the BIB
Ezekiel 26 in the BLPT
Ezekiel 26 in the BNT
Ezekiel 26 in the BNTABOOT
Ezekiel 26 in the BNTLV
Ezekiel 26 in the BOATCB
Ezekiel 26 in the BOATCB2
Ezekiel 26 in the BOBCV
Ezekiel 26 in the BOCNT
Ezekiel 26 in the BOECS
Ezekiel 26 in the BOGWICC
Ezekiel 26 in the BOHCB
Ezekiel 26 in the BOHCV
Ezekiel 26 in the BOHLNT
Ezekiel 26 in the BOHNTLTAL
Ezekiel 26 in the BOICB
Ezekiel 26 in the BOILNTAP
Ezekiel 26 in the BOITCV
Ezekiel 26 in the BOKCV
Ezekiel 26 in the BOKCV2
Ezekiel 26 in the BOKHWOG
Ezekiel 26 in the BOKSSV
Ezekiel 26 in the BOLCB
Ezekiel 26 in the BOLCB2
Ezekiel 26 in the BOMCV
Ezekiel 26 in the BONAV
Ezekiel 26 in the BONCB
Ezekiel 26 in the BONLT
Ezekiel 26 in the BONUT2
Ezekiel 26 in the BOPLNT
Ezekiel 26 in the BOSCB
Ezekiel 26 in the BOSNC
Ezekiel 26 in the BOTLNT
Ezekiel 26 in the BOVCB
Ezekiel 26 in the BOYCB
Ezekiel 26 in the BPBB
Ezekiel 26 in the BPH
Ezekiel 26 in the BSB
Ezekiel 26 in the CCB
Ezekiel 26 in the CUV
Ezekiel 26 in the CUVS
Ezekiel 26 in the DBT
Ezekiel 26 in the DGDNT
Ezekiel 26 in the DHNT
Ezekiel 26 in the DNT
Ezekiel 26 in the ELBE
Ezekiel 26 in the EMTV
Ezekiel 26 in the ESV
Ezekiel 26 in the FBV
Ezekiel 26 in the FEB
Ezekiel 26 in the GGMNT
Ezekiel 26 in the GNT
Ezekiel 26 in the HARY
Ezekiel 26 in the HNT
Ezekiel 26 in the IRVA
Ezekiel 26 in the IRVB
Ezekiel 26 in the IRVG
Ezekiel 26 in the IRVH
Ezekiel 26 in the IRVM
Ezekiel 26 in the IRVM2
Ezekiel 26 in the IRVO
Ezekiel 26 in the IRVP
Ezekiel 26 in the IRVT
Ezekiel 26 in the IRVT2
Ezekiel 26 in the IRVU
Ezekiel 26 in the ISVN
Ezekiel 26 in the JSNT
Ezekiel 26 in the KAPI
Ezekiel 26 in the KBT1ETNIK
Ezekiel 26 in the KBV
Ezekiel 26 in the KJV
Ezekiel 26 in the KNFD
Ezekiel 26 in the LBA
Ezekiel 26 in the LBLA
Ezekiel 26 in the LNT
Ezekiel 26 in the LSV
Ezekiel 26 in the MAAL
Ezekiel 26 in the MBV
Ezekiel 26 in the MBV2
Ezekiel 26 in the MHNT
Ezekiel 26 in the MKNFD
Ezekiel 26 in the MNG
Ezekiel 26 in the MNT
Ezekiel 26 in the MNT2
Ezekiel 26 in the MRS1T
Ezekiel 26 in the NAA
Ezekiel 26 in the NASB
Ezekiel 26 in the NBLA
Ezekiel 26 in the NBS
Ezekiel 26 in the NBVTP
Ezekiel 26 in the NET2
Ezekiel 26 in the NIV11
Ezekiel 26 in the NNT
Ezekiel 26 in the NNT2
Ezekiel 26 in the NNT3
Ezekiel 26 in the PDDPT
Ezekiel 26 in the PFNT
Ezekiel 26 in the RMNT
Ezekiel 26 in the SBIAS
Ezekiel 26 in the SBIBS
Ezekiel 26 in the SBIBS2
Ezekiel 26 in the SBICS
Ezekiel 26 in the SBIDS
Ezekiel 26 in the SBIGS
Ezekiel 26 in the SBIHS
Ezekiel 26 in the SBIIS
Ezekiel 26 in the SBIIS2
Ezekiel 26 in the SBIIS3
Ezekiel 26 in the SBIKS
Ezekiel 26 in the SBIKS2
Ezekiel 26 in the SBIMS
Ezekiel 26 in the SBIOS
Ezekiel 26 in the SBIPS
Ezekiel 26 in the SBISS
Ezekiel 26 in the SBITS
Ezekiel 26 in the SBITS2
Ezekiel 26 in the SBITS3
Ezekiel 26 in the SBITS4
Ezekiel 26 in the SBIUS
Ezekiel 26 in the SBIVS
Ezekiel 26 in the SBT
Ezekiel 26 in the SBT1E
Ezekiel 26 in the SCHL
Ezekiel 26 in the SNT
Ezekiel 26 in the SUSU
Ezekiel 26 in the SUSU2
Ezekiel 26 in the SYNO
Ezekiel 26 in the TBIAOTANT
Ezekiel 26 in the TBT1E
Ezekiel 26 in the TBT1E2
Ezekiel 26 in the TFTIP
Ezekiel 26 in the TFTU
Ezekiel 26 in the TGNTATF3T
Ezekiel 26 in the THAI
Ezekiel 26 in the TNFD
Ezekiel 26 in the TNT
Ezekiel 26 in the TNTIK
Ezekiel 26 in the TNTIL
Ezekiel 26 in the TNTIN
Ezekiel 26 in the TNTIP
Ezekiel 26 in the TNTIZ
Ezekiel 26 in the TOMA
Ezekiel 26 in the TTENT
Ezekiel 26 in the UBG
Ezekiel 26 in the UGV
Ezekiel 26 in the UGV2
Ezekiel 26 in the UGV3
Ezekiel 26 in the VBL
Ezekiel 26 in the VDCC
Ezekiel 26 in the YALU
Ezekiel 26 in the YAPE
Ezekiel 26 in the YBVTP
Ezekiel 26 in the ZBP