Ezekiel 30 (BOKCV2)
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು, 2 “ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:“ ‘ “ಅಯ್ಯೋ ಆ ದಿನ!” ಎಂದು,ಅಳುತ್ತಾ ಹೇಳಿರಿ. 3 ಏಕೆಂದರೆ ಆ ದಿನವು ಸಮೀಪವಾಯಿತು,ಯೆಹೋವ ದೇವರ ದಿನವು,ಆ ಕಾರ್ಮುಗಿಲಿನ ದಿನವು ಸಮೀಪವಾಯಿತು.ಅದೇ ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವದು. 4 ಖಡ್ಗವು ಈಜಿಪ್ಟಿಗೆ ವಿರುದ್ಧವಾಗಿ ಬರುವುದು.ಕೂಷ್ ಪಟ್ಟಣವು ಸಂಕಟಪಡುವುದು.ಈಜಿಪ್ಟಿನಲ್ಲಿ ಕೊಲ್ಲಲಾದವರು ಬಿದ್ದಾಗ,ಅವಳ ಸಂಪತ್ತು ಸೂರೆಯಾಗುವುದು.ಅವಳ ಅಡಿಪಾಯಗಳು ಕಿತ್ತುಹೋಗುವವು. 5 ಕೂಷ್ಯರು, ಪೂಟ್ಯರು, ಲೂದ್ಯರು, ಎಲ್ಲಾ ಅರಬ್ಬಿಯರೂ ಕೂಬ್ಯರೂ ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಅವರ ಸಂಗಡ ಖಡ್ಗದಿಂದ ಹತರಾಗುವರು. 6 “ ‘ಯೆಹೋವ ದೇವರು ಹೀಗೆ ಹೇಳುತ್ತಾರೆ:“ ‘ಈಜಿಪ್ಟಿನ ಸಹಾಯಕರು ಬೀಳುವರು.ಅದರ ಶಕ್ತಿಯ ಮದವು ಇಳಿದುಹೋಗುವುದು.ಅಲ್ಲಿಯ ಜನರು ಮಿಗ್ದೋಲಿನಿಂದ ಸೆವೇನೆಯ ಗೋಪುರದವರೆಗೆಖಡ್ಗದಿಂದ ಹತರಾಗುವರುಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. 7 ಆಗ ಅವರು ಹಾಳಾಗಿರುವ ದೇಶಗಳೊಳಗೆತಾವೂ ಹಾಳಾಗುವರು.ಹಾಳಾದ ಪಟ್ಟಣಗಳ ಮಧ್ಯದಲ್ಲಿಅದರ ಪಟ್ಟಣಗಳು ಹಾಳಾಗಿ ಇರುವುವು. 8 ನಾನು ಈಜಿಪ್ಟಿನಲ್ಲಿ ಬೆಂಕಿಯಿಟ್ಟ ಮೇಲೆಅದಕ್ಕೆ ಸಹಾಯ ಮಾಡುವವರೆಲ್ಲರೂ ನಾಶವಾದ ಮೇಲೆಅವರಿಗೆ ನಾನೇ ಯೆಹೋವ ದೇವರೆಂದು ತಿಳಿಯುವುದು. 9 “ ‘ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು. ಈಜಿಪ್ಟಿನ ದಿನದಲ್ಲಿ ಆದ ಹಾಗೆ ಅವರ ಮೇಲೆ ದೊಡ್ಡ ದುಃಖ ಉಂಟಾಗುವುದು, ಏಕೆಂದರೆ ಇಗೋ, ಆ ದಿನ ಬರುವುದು ನಿಶ್ಚಯ. 10 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ :“ ‘ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದಈಜಿಪ್ಟಿನ ಜನಸಮೂಹವನ್ನು ಕೊನೆಗಾಣಿಸುವೆನು. 11 ಆ ದೇಶವನ್ನು ನಾಶಪಡಿಸುವುದಕ್ಕೆ ಅವನನ್ನುಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು.ಅವರು ಈಜಿಪ್ಟಿಗೆ ವಿರೋಧವಾಗಿ ಖಡ್ಗ ಹಿರಿದುದೇಶವನ್ನು ಹತರಾದವರಿಂದ ತುಂಬಿಸುವರು. 12 ಇದಲ್ಲದೆ ನಾನು ನದಿಗಳನ್ನು ಒಣಗಿಸಿದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು.ದೇಶವನ್ನೂ ಅದರಲ್ಲಿನ ಸಮಸ್ತವನ್ನೂವಿದೇಶಿಯರ ಕೈಯಿಂದ ನಾಶಮಾಡಿಸುವೆನು.ಯೆಹೋವ ದೇವರಾದ ನಾನೇ ಇದನ್ನು ನುಡಿದಿದ್ದೇನೆ. 13 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:“ ‘ನಾನು ಮೂರ್ತಿಗಳನ್ನು ನಾಶಮಾಡುವೆನು.ಮತ್ತು ನೋಫಿನ ವಿಗ್ರಹಗಳನ್ನು ಕೊನೆಗೊಳಿಸುವೆನು.ಈಜಿಪ್ಟ್ ದೇಶದ ರಾಜಕುಮಾರ ಇನ್ನು ಮುಂದೆ ಇರುವುದಿಲ್ಲ,ನಾನು ಈಜಿಪ್ಟ್ ದೇಶದಲ್ಲಿ ಭಯವನ್ನು ಉಂಟುಮಾಡುವೆನು. 14 ನಾನು ಪತ್ರೋಸನ್ನು ನಾಶಮಾಡಿ,ಚೋವನ್ ಪಟ್ಟಣಕ್ಕೆ ಬೆಂಕಿಯಿಡುವೆನು.ತೆಬೆಸ್ ಪಟ್ಟಣವನ್ನು ದಂಡಿಸುವೆನು. 15 ಈಜಿಪ್ಟಿಗೆ ರಕ್ಷಣೆಯ ಕೋಟೆಯಾದಪೆಲೂಸಿಯಮ್ ಪಟ್ಟಣದ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ,ತೆಬೆಸಿನ ನಿವಾಸಿಗಳನ್ನೆಲ್ಲಾ ಕಡಿದುಬಿಡುವೆನು. 16 ನಾನು ಈಜಿಪ್ಟಿಗೆ ಕಿಚ್ಚನ್ನು ಹಚ್ಚಿಸಲುಪೆಲೂಸಿಯಮ್ ಪ್ರಾಣಸಂಕಟ ಪಡುವುದು.ತೆಬೆಸವು ಬಿರುಗಾಳಿಯಿಂದ ತೆಗೆದುಕೊಳ್ಳಲಾಗುವುದು,ನೋಫಿನ ಮೇಲೆ ನಿರಂತರವಾಗಿ ಇಕ್ಕಟ್ಟು ಇರುವುದು. 17 ಓನಿನ ಮತ್ತು ಪಿಬೇಸೆತಿನ ಯೌವನಸ್ಥರುಖಡ್ಗದಿಂದ ಸಾಯುವರು.ಈ ಪಟ್ಟಣಗಳ ನಿವಾಸಿಗಳು ತಾವಾಗಿಯೇ ಸೆರೆಯಾಗಿ ಹೋಗುವುವು. 18 ನಾನು ಈಜಿಪ್ಟಿನ ನೊಗಗಳನ್ನು ಮುರಿಯುವಾಗತಹಪನೇಸಿನಲ್ಲಿ ಹಗಲು ಕತ್ತಲಾಗುವುದು.ಅದರ ಶಕ್ತಿಯ ಮದವು ಅಡಗಿಹೋಗುವುದು.ಅದನ್ನು ಮೇಘವು ಮುಚ್ಚುವುದು.ಅದರ ಪುತ್ರಿಯರು ಸೆರೆಗೆ ಹೋಗುವರು. 19 ಹೀಗೆ ನಾನು ಈಜಿಪ್ಟನ್ನು ದಂಡಿಸುವೆನು.ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ” 20 ಇದಲ್ಲದೆ ಹನ್ನೊಂದನೆಯ ವರ್ಷದ ಮೊದಲನೆಯ ತಿಂಗಳಿನ, ಏಳನೆಯ ದಿನದಲ್ಲಿ, ಯೆಹೋವ ದೇವರ ವಾಕ್ಯವು ನನಗೆ ಬಂದು ಹೇಳಿದ್ದೇನೆಂದರೆ, 21 “ಮನುಷ್ಯಪುತ್ರನೇ, ನಾನು ಈಜಿಪ್ಟಿನ ಅರಸನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ. ಇಗೋ, ಆ ದೇಶವನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ. ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ ಅದನ್ನು ಬಿಗಿಸಲಿಲ್ಲ. 22 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಈಜಿಪ್ಟ್ ದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿಯುತ್ತೇನೆ. ಅವನ ಕೈಯಿಂದ ಖಡ್ಗವನ್ನು ಬೀಳಿಸುತ್ತೇನೆ. 23 ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು. 24 ಬಾಬಿಲೋನಿನ ಅರಸನ ತೋಳುಗಳನ್ನು ನಾನು ಬಲಪಡಿಸುವೆನು, ಅವನ ಕೈಯಲ್ಲಿ ನನ್ನ ಖಡ್ಗವನ್ನಿಡುವೆನು. ಫರೋಹನ ತೋಳುಗಳು ಬಿದ್ದು ಹೋಗುವುವು. ಇವನು ಅವನ ಮುಂದೆ ಗಾಯ ಹೊಂದಿದವನಂತೆ ನರಳಾಡುವನು. 25 ನಾನು ಬಾಬಿಲೋನಿನ ಅರಸನ ಕೈಗಳನ್ನು ಬಲಪಡಿಸುತ್ತೇನೆ, ಆದರೆ ಫರೋಹನ ಕೈಗಳು ಬಲಹೀನವಾಗುವುವು. ನಾನು ನನ್ನ ಖಡ್ಗವನ್ನು ಬಾಬಿಲೋನಿನ ಅರಸನ ಕೈಗೆ ಕೊಡುವೆನು. ಅವನು ಅದನ್ನು ಈಜಿಪ್ಟಿನ ವಿರೋಧವಾಗಿ ಪ್ರಯೋಗಿಸುವನು. ಆಗ ಅವರು ನಾನೇ ಯೆಹೋವ ದೇವರು ಎಂದು ತಿಳಿದುಕೊಳ್ಳುವರು. 26 ನಾನು ಈಜಿಪ್ಟಿನವರನ್ನು ಜನಾಂಗಗಳೊಗೆ ಚದುರಿಸಿ ದೇಶಗಳಲ್ಲಿ ಹರಡಿಸುತ್ತೇನೆ; ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”
In Other Versions
Ezekiel 30 in the ANGEFD
Ezekiel 30 in the ANTPNG2D
Ezekiel 30 in the AS21
Ezekiel 30 in the BAGH
Ezekiel 30 in the BBPNG
Ezekiel 30 in the BBT1E
Ezekiel 30 in the BDS
Ezekiel 30 in the BEV
Ezekiel 30 in the BHAD
Ezekiel 30 in the BIB
Ezekiel 30 in the BLPT
Ezekiel 30 in the BNT
Ezekiel 30 in the BNTABOOT
Ezekiel 30 in the BNTLV
Ezekiel 30 in the BOATCB
Ezekiel 30 in the BOATCB2
Ezekiel 30 in the BOBCV
Ezekiel 30 in the BOCNT
Ezekiel 30 in the BOECS
Ezekiel 30 in the BOGWICC
Ezekiel 30 in the BOHCB
Ezekiel 30 in the BOHCV
Ezekiel 30 in the BOHLNT
Ezekiel 30 in the BOHNTLTAL
Ezekiel 30 in the BOICB
Ezekiel 30 in the BOILNTAP
Ezekiel 30 in the BOITCV
Ezekiel 30 in the BOKCV
Ezekiel 30 in the BOKHWOG
Ezekiel 30 in the BOKSSV
Ezekiel 30 in the BOLCB
Ezekiel 30 in the BOLCB2
Ezekiel 30 in the BOMCV
Ezekiel 30 in the BONAV
Ezekiel 30 in the BONCB
Ezekiel 30 in the BONLT
Ezekiel 30 in the BONUT2
Ezekiel 30 in the BOPLNT
Ezekiel 30 in the BOSCB
Ezekiel 30 in the BOSNC
Ezekiel 30 in the BOTLNT
Ezekiel 30 in the BOVCB
Ezekiel 30 in the BOYCB
Ezekiel 30 in the BPBB
Ezekiel 30 in the BPH
Ezekiel 30 in the BSB
Ezekiel 30 in the CCB
Ezekiel 30 in the CUV
Ezekiel 30 in the CUVS
Ezekiel 30 in the DBT
Ezekiel 30 in the DGDNT
Ezekiel 30 in the DHNT
Ezekiel 30 in the DNT
Ezekiel 30 in the ELBE
Ezekiel 30 in the EMTV
Ezekiel 30 in the ESV
Ezekiel 30 in the FBV
Ezekiel 30 in the FEB
Ezekiel 30 in the GGMNT
Ezekiel 30 in the GNT
Ezekiel 30 in the HARY
Ezekiel 30 in the HNT
Ezekiel 30 in the IRVA
Ezekiel 30 in the IRVB
Ezekiel 30 in the IRVG
Ezekiel 30 in the IRVH
Ezekiel 30 in the IRVK
Ezekiel 30 in the IRVM
Ezekiel 30 in the IRVM2
Ezekiel 30 in the IRVO
Ezekiel 30 in the IRVP
Ezekiel 30 in the IRVT
Ezekiel 30 in the IRVT2
Ezekiel 30 in the IRVU
Ezekiel 30 in the ISVN
Ezekiel 30 in the JSNT
Ezekiel 30 in the KAPI
Ezekiel 30 in the KBT1ETNIK
Ezekiel 30 in the KBV
Ezekiel 30 in the KJV
Ezekiel 30 in the KNFD
Ezekiel 30 in the LBA
Ezekiel 30 in the LBLA
Ezekiel 30 in the LNT
Ezekiel 30 in the LSV
Ezekiel 30 in the MAAL
Ezekiel 30 in the MBV
Ezekiel 30 in the MBV2
Ezekiel 30 in the MHNT
Ezekiel 30 in the MKNFD
Ezekiel 30 in the MNG
Ezekiel 30 in the MNT
Ezekiel 30 in the MNT2
Ezekiel 30 in the MRS1T
Ezekiel 30 in the NAA
Ezekiel 30 in the NASB
Ezekiel 30 in the NBLA
Ezekiel 30 in the NBS
Ezekiel 30 in the NBVTP
Ezekiel 30 in the NET2
Ezekiel 30 in the NIV11
Ezekiel 30 in the NNT
Ezekiel 30 in the NNT2
Ezekiel 30 in the NNT3
Ezekiel 30 in the PDDPT
Ezekiel 30 in the PFNT
Ezekiel 30 in the RMNT
Ezekiel 30 in the SBIAS
Ezekiel 30 in the SBIBS
Ezekiel 30 in the SBIBS2
Ezekiel 30 in the SBICS
Ezekiel 30 in the SBIDS
Ezekiel 30 in the SBIGS
Ezekiel 30 in the SBIHS
Ezekiel 30 in the SBIIS
Ezekiel 30 in the SBIIS2
Ezekiel 30 in the SBIIS3
Ezekiel 30 in the SBIKS
Ezekiel 30 in the SBIKS2
Ezekiel 30 in the SBIMS
Ezekiel 30 in the SBIOS
Ezekiel 30 in the SBIPS
Ezekiel 30 in the SBISS
Ezekiel 30 in the SBITS
Ezekiel 30 in the SBITS2
Ezekiel 30 in the SBITS3
Ezekiel 30 in the SBITS4
Ezekiel 30 in the SBIUS
Ezekiel 30 in the SBIVS
Ezekiel 30 in the SBT
Ezekiel 30 in the SBT1E
Ezekiel 30 in the SCHL
Ezekiel 30 in the SNT
Ezekiel 30 in the SUSU
Ezekiel 30 in the SUSU2
Ezekiel 30 in the SYNO
Ezekiel 30 in the TBIAOTANT
Ezekiel 30 in the TBT1E
Ezekiel 30 in the TBT1E2
Ezekiel 30 in the TFTIP
Ezekiel 30 in the TFTU
Ezekiel 30 in the TGNTATF3T
Ezekiel 30 in the THAI
Ezekiel 30 in the TNFD
Ezekiel 30 in the TNT
Ezekiel 30 in the TNTIK
Ezekiel 30 in the TNTIL
Ezekiel 30 in the TNTIN
Ezekiel 30 in the TNTIP
Ezekiel 30 in the TNTIZ
Ezekiel 30 in the TOMA
Ezekiel 30 in the TTENT
Ezekiel 30 in the UBG
Ezekiel 30 in the UGV
Ezekiel 30 in the UGV2
Ezekiel 30 in the UGV3
Ezekiel 30 in the VBL
Ezekiel 30 in the VDCC
Ezekiel 30 in the YALU
Ezekiel 30 in the YAPE
Ezekiel 30 in the YBVTP
Ezekiel 30 in the ZBP