Psalms 131 (BOKCV2)
undefined ದಾವೀದನ ಯಾತ್ರಾ ಗೀತೆ. 1 ಯೆಹೋವ ದೇವರೇ, ನನ್ನ ಹೃದಯವು ಗರ್ವದ್ದಲ್ಲ,ನನಗೆ ಸೊಕ್ಕಿನ ಕಣ್ಣಿಲ್ಲದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂನಾನು ಕೈ ಹಾಕುವುದಿಲ್ಲ. 2 ಆದರೆ ಹಾಲುಬಿಡಿಸಿದ ಕೂಸು ತನ್ನ ತಾಯಿಯ ಮಡಿಲಲ್ಲಿರುವಂತೆನನ್ನ ಪ್ರಾಣವನ್ನು ಸಮಾಧಾನ ಪಡಿಸಿದ್ದೇನೆ.ನಾನು ತಾಯಿಯ ಮಡಿಲಲ್ಲಿರುವ ಕೂಸಿನಂತೆ ಸಂತೃಪ್ತಿಯಿಂದ ಇದ್ದೇನೆ. 3 ಇಸ್ರಾಯೇಲೇ, ಯೆಹೋವ ದೇವರಲ್ಲಿ ನಿನ್ನ ನಿರೀಕ್ಷೆಯನ್ನಿಡು.ಈಗಲೂ, ಎಂದೆಂದಿಗೂ ನಿರೀಕ್ಷೆಯಿಂದಿರು.