Psalms 142 (BOKCV2)
undefined ದಾವೀದನ ಮಾಸ್ಕಿಲ ರಾಗದ ಪದ್ಯ. ಅವನು ಗುಹೆಯಲ್ಲಿ ಅಡಗಿಕೊಂಡಿದ್ದಾಗ ಮಾಡಿದ ಪ್ರಾರ್ಥನೆ. 1 ನನ್ನ ಸ್ವರವೆತ್ತಿ ಯೆಹೋವ ದೇವರಿಗೆ ಮೊರೆಯಿಟ್ಟಿದ್ದೇನೆ;ಸ್ವರವೆತ್ತಿ ನನ್ನ ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದೇನೆ. 2 ದೇವರ ಮುಂದೆ ನನ್ನ ಚಿಂತೆಯನ್ನು ಹೊಯ್ದಿದ್ದೇನೆ;ನನ್ನ ಇಕ್ಕಟ್ಟನ್ನು ದೇವರ ಮುಂದೆ ತಿಳಿಸಿದ್ದೇನೆ. 3 ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ,ದೇವರೇ ನೀವು ನನ್ನ ದಾರಿಯನ್ನು ಕಾಯುತ್ತೀರಿ;ನಾನು ನಡೆಯುವ ದಾರಿಯಲ್ಲಿ ವೈರಿಗಳು ಗುಪ್ತವಾಗಿನನಗೆ ಉರುಲನ್ನು ಒಡ್ಡಿದ್ದಾರೆ. 4 ನೋಡಿರಿ ನನ್ನ ಬಲಗಡೆಯಲ್ಲಿ,ನನ್ನ ಪರವಾಗಿ ಯಾರೂ ಇಲ್ಲ;ಆಶ್ರಯವು ನನಗೆ ಇಲ್ಲ;ನನಗಾಗಿ ಚಿಂತಿಸುವವರು ಯಾರೂ ಇಲ್ಲ. 5 ಯೆಹೋವ ದೇವರೇ, ನಿಮಗೆ ಹೀಗೆಂದು ಮೊರೆಯಿಡುತ್ತೇನೆ:“ನೀವು ನನ್ನ ಆಶ್ರಯವೂ,ಜೀವಿತರ ದೇಶದಲ್ಲಿ ನನ್ನ ಪಾಲೂ ಆಗಿದ್ದೀರಿ.” 6 ನನ್ನ ಕೂಗನ್ನು ಆಲೈಸಿರಿ,ಏಕೆಂದರೆ ನಾನು ಬಹಳ ಕುಂದಿಹೋಗಿದ್ದೇನೆ;ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸಿರಿ,ಏಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ. 7 ನಿಮ್ಮ ಹೆಸರನ್ನು ಕೊಂಡಾಡುವಹಾಗೆ ನನ್ನ ಸೆರೆಯಿಂದ ನನ್ನನ್ನು ಬಿಡಿಸಿರಿ;ಆಗ ನೀವು ನನಗೆ ಮಾಡಿದ ಉಪಕಾರವನ್ನು ಕಂಡುನೀತಿವಂತರು ನನ್ನ ಹತ್ತಿರ ಸೇರಿಬರುವರು.