Ezekiel 12 (IRVK)

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 2 “ನರಪುತ್ರನೇ, ನೀನು ದ್ರೋಹಿ ವಂಶದ ಮಧ್ಯದಲ್ಲಿ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು. 3 “ನರಪುತ್ರನೇ, ವಲಸೆಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೆ ಹೊರಡು ಅಂದರೆ ನಿನ್ನ ವಾಸಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು. ಅವರು ದ್ರೋಹಿ ವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು. 4 ನೀನು ನಿನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ, ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮದಲ್ಲಿ ಹೊರಟು ಹೋಗು. 5 ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು. 6 ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆ ಹಾಕಿ, ಕತ್ತಲಲ್ಲಿ ಹೊತ್ತುಕೊಂಡು ಹೋಗು; ನೆಲವನ್ನು ನೋಡದಂತೆ ಮುಖವನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಗುರುತನ್ನಾಗಿ ಮಾಡಿದ್ದೇನೆ.” 7 ಆಗ ನಾನು ನನಗಾದ ಅಪ್ಪಣೆಯನ್ನು ನೆರವೇರಿಸಿದೆನು; ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಯನ್ನೋ ಎಂಬಂತೆ ಮನೆಯೊಳಗಿಂದ ಆಚೆಗೆ ಹಾಕಿ, ಸಾಯಂಕಾಲ ನನ್ನ ಕೈಯಿಂದಲೇ ಗೋಡೆಯಲ್ಲಿ ಕಿಂಡಿಯನ್ನು ಮಾಡಿ, ಕತ್ತಲಲ್ಲಿ ಆ ಸಾಮಾನನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆನು. 8 ಬೆಳಿಗ್ಗೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು, 9 “ನರಪುತ್ರನೇ, ದ್ರೋಹಿ ವಂಶದವರಾದ ಇಸ್ರಾಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೆ? 10 ನೀನು ಅವರಿಗೆ ಹೀಗೆ ನುಡಿ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಈ ಹೊರೆಯು ಯೆರೂಸಲೇಮಿನಲ್ಲಿರುವ ರಾಜನಿಗೂ, ಅಲ್ಲಿನ ಇಸ್ರಾಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ.’ 11 ಇದನ್ನೂ ನುಡಿ, ‘ನಾನು ನಿಮಗೆ ಗುರುತಾಗಿದ್ದೇನೆ; ನಾನು ಮಾಡಿದಂತೆಯೇ ಅವರಿಗಾಗುವುದು; ಅವರು ವಲಸೆಯಾಗಿ ಸೆರೆ ಹೋಗುವರು. 12 ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಆಚೆಗೆ ಸಾಗಿಸುವರು; ಅವನು ಮುಖವನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸುವುದಿಲ್ಲ.’ 13 ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು; ಕಸ್ದೀಯರ ದೇಶವಾದ ಬಾಬಿಲೋನಿಗೆ ಅವನನ್ನು ಒಯ್ಯುವೆನು, ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡುವುದಿಲ್ಲ. 14 ಅವನ ಸುತ್ತಲಿನ ಸಕಲ ಸಹಾಯಕರನ್ನೂ, ಅವನ ಸಮಸ್ತ ವ್ಯೂಹಗಳವರನ್ನೂ ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು. 15 “ನಾನು ಅವರನ್ನು ಜನಾಂಗಗಳೊಳಗೆ ಚದರಿಸಿಬಿಟ್ಟು ಅನ್ಯದೇಶಗಳಲ್ಲಿ ಚೆಲ್ಲಾಪಿಲ್ಲಿ ಮಾಡುವಾಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು. 16 ನಾನು ಕೆಲವರನ್ನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಉಳಿಸಿ ಅವರು ತಮ್ಮ ಅಸಹ್ಯ ಕಾರ್ಯಗಳ ವಿಷಯವನ್ನು ತಾವು ಸೇರಿದ ಜನಾಂಗಗಳಲ್ಲಿ ತಿಳಿಸುವುದಕ್ಕೆ ಅವಕಾಶ ಮಾಡುವೆನು; ನಾನೇ ಯೆಹೋವನು ಎಂದು ಆ ಜನಾಂಗಗಳಿಗೂ ಗೊತ್ತಾಗುವುದು.” 17 ಇದಲ್ಲದೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 18 “ನರಪುತ್ರನೇ, ನೀನು ಅನ್ನವನ್ನು ನಡುಗುತ್ತಾ ತಿನ್ನು ಮತ್ತು ನೀರನ್ನು ಹೆದರಿಕೆಯಿಂದ ಕುಡಿ. 19 ಆ ದೇಶದಲ್ಲಿರುವ ಜನರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಸ್ರಾಯೇಲ್ ದೇಶದ ಯೆರೂಸಲೇಮಿನ ನಿವಾಸಿಗಳ ವಿಷಯವಾಗಿ ಇಂತೆನ್ನುತ್ತಾನೆ, ಅವರು ಅನ್ನವನ್ನು ನಡಗುತ್ತಾ ತಿನ್ನುವರು ಮತ್ತು ನೀರನ್ನು ಹೆದರಿಕೆಯಿಂದ ಕುಡಿಯುವರು; ಏಕೆಂದರೆ ಆ ದೇಶದವರೆಲ್ಲರು ಬಲಾತ್ಕಾರಿಗಳಾಗಿರುವುದರಿಂದ ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ, ದೇಶವು ಬರಿದಾಗುವುದು. 20 ಆಗ ಜನ ತುಂಬಿದ ಊರುಗಳು ಹಾಳಾಗಿ ದೇಶವು ಬೀಡುಬೀಳುವುದು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’” 21 ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 22 “ನರಪುತ್ರನೇ, ಕ್ಲುಪ್ತಕಾಲವು ದೂರ ಹೋಗುತ್ತಲಿದೆ; ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂಬುದಾಗಿ ಇಸ್ರಾಯೇಲ್ ದೇಶದವರು ಆಡಿಕೊಳ್ಳುವ ಈ ಗಾದೆ ಮಾತು ಎಂಥದ್ದು?” 23 ಅವರಿಗೆ ಹೀಗೆ ಹೇಳು, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ನಾನು ಈ ಗಾದೆಯನ್ನು ಬಳಸುವುದನ್ನು ನಿಲ್ಲಿಸಿಬಿಡುವೆನು, ಅದು ಇಸ್ರಾಯೇಲಿನಲ್ಲಿ ಇನ್ನು ಸಲ್ಲದು; ನಾನು ನುಡಿಯುವ ಈ ಮಾತನ್ನು ಕೇಳಿರಿ, ‘ಕ್ಲುಪ್ತಕಾಲವು ಸಮೀಪಿಸಿದೆ, ದಿವ್ಯದರ್ಶನಗಳೆಲ್ಲಾ ಸಾರ್ಥಕವಾಗುವ ಕಾಲ ಸಮೀಪಿಸಿದೆ. 24 ಇನ್ನು ಮೇಲೆ ಇಸ್ರಾಯೇಲ್ ವಂಶದವರಲ್ಲಿ ಯಾರಿಗೂ ಸುಳ್ಳು ದರ್ಶನವಾಗದು, ಮೋಸದ ಕಣಿಯೂ ಇರದು. 25 ನಾನೇ ಯೆಹೋವನು; ನಾನು ನುಡಿದೇ ನುಡಿಯುವೆನು; ನಾನು ನುಡಿದ ಮಾತು ನೆರವೇರುವುದು, ಇನ್ನು ನಿಧಾನವಾಗದು; ದ್ರೋಹಿ ವಂಶದವರೇ, ನಾನು ನಿಮ್ಮ ಕಾಲದಲ್ಲಿ ನುಡಿಯುವುದು ಮಾತ್ರವಲ್ಲದೆ ನುಡಿದದ್ದನ್ನು ನೆರವೇರಿಸುವೆನು’” ಇದು ಕರ್ತನಾದ ಯೆಹೋವನ ವಾಕ್ಯ. 26 ಮತ್ತು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 27 “ನರಪುತ್ರನೇ, ಇಗೋ, ಇಸ್ರಾಯೇಲ್ ವಂಶದವರು, ‘ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ’ ಎಂದು ಹೇಳುತ್ತಾರೆ. 28 “ಆದಕಾರಣ ನೀನು ಅವರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವುದೂ ನೆರವೇರದೆ ಇರದು; ನಾನಾಡುವ ಮಾತು ನೆರವೇರುವುದು ಖಂಡಿತ’ ಇದು ಕರ್ತನಾದ ಯೆಹೋವನ ನುಡಿ.”

In Other Versions

Ezekiel 12 in the ANGEFD

Ezekiel 12 in the ANTPNG2D

Ezekiel 12 in the AS21

Ezekiel 12 in the BAGH

Ezekiel 12 in the BBPNG

Ezekiel 12 in the BBT1E

Ezekiel 12 in the BDS

Ezekiel 12 in the BEV

Ezekiel 12 in the BHAD

Ezekiel 12 in the BIB

Ezekiel 12 in the BLPT

Ezekiel 12 in the BNT

Ezekiel 12 in the BNTABOOT

Ezekiel 12 in the BNTLV

Ezekiel 12 in the BOATCB

Ezekiel 12 in the BOATCB2

Ezekiel 12 in the BOBCV

Ezekiel 12 in the BOCNT

Ezekiel 12 in the BOECS

Ezekiel 12 in the BOGWICC

Ezekiel 12 in the BOHCB

Ezekiel 12 in the BOHCV

Ezekiel 12 in the BOHLNT

Ezekiel 12 in the BOHNTLTAL

Ezekiel 12 in the BOICB

Ezekiel 12 in the BOILNTAP

Ezekiel 12 in the BOITCV

Ezekiel 12 in the BOKCV

Ezekiel 12 in the BOKCV2

Ezekiel 12 in the BOKHWOG

Ezekiel 12 in the BOKSSV

Ezekiel 12 in the BOLCB

Ezekiel 12 in the BOLCB2

Ezekiel 12 in the BOMCV

Ezekiel 12 in the BONAV

Ezekiel 12 in the BONCB

Ezekiel 12 in the BONLT

Ezekiel 12 in the BONUT2

Ezekiel 12 in the BOPLNT

Ezekiel 12 in the BOSCB

Ezekiel 12 in the BOSNC

Ezekiel 12 in the BOTLNT

Ezekiel 12 in the BOVCB

Ezekiel 12 in the BOYCB

Ezekiel 12 in the BPBB

Ezekiel 12 in the BPH

Ezekiel 12 in the BSB

Ezekiel 12 in the CCB

Ezekiel 12 in the CUV

Ezekiel 12 in the CUVS

Ezekiel 12 in the DBT

Ezekiel 12 in the DGDNT

Ezekiel 12 in the DHNT

Ezekiel 12 in the DNT

Ezekiel 12 in the ELBE

Ezekiel 12 in the EMTV

Ezekiel 12 in the ESV

Ezekiel 12 in the FBV

Ezekiel 12 in the FEB

Ezekiel 12 in the GGMNT

Ezekiel 12 in the GNT

Ezekiel 12 in the HARY

Ezekiel 12 in the HNT

Ezekiel 12 in the IRVA

Ezekiel 12 in the IRVB

Ezekiel 12 in the IRVG

Ezekiel 12 in the IRVH

Ezekiel 12 in the IRVM

Ezekiel 12 in the IRVM2

Ezekiel 12 in the IRVO

Ezekiel 12 in the IRVP

Ezekiel 12 in the IRVT

Ezekiel 12 in the IRVT2

Ezekiel 12 in the IRVU

Ezekiel 12 in the ISVN

Ezekiel 12 in the JSNT

Ezekiel 12 in the KAPI

Ezekiel 12 in the KBT1ETNIK

Ezekiel 12 in the KBV

Ezekiel 12 in the KJV

Ezekiel 12 in the KNFD

Ezekiel 12 in the LBA

Ezekiel 12 in the LBLA

Ezekiel 12 in the LNT

Ezekiel 12 in the LSV

Ezekiel 12 in the MAAL

Ezekiel 12 in the MBV

Ezekiel 12 in the MBV2

Ezekiel 12 in the MHNT

Ezekiel 12 in the MKNFD

Ezekiel 12 in the MNG

Ezekiel 12 in the MNT

Ezekiel 12 in the MNT2

Ezekiel 12 in the MRS1T

Ezekiel 12 in the NAA

Ezekiel 12 in the NASB

Ezekiel 12 in the NBLA

Ezekiel 12 in the NBS

Ezekiel 12 in the NBVTP

Ezekiel 12 in the NET2

Ezekiel 12 in the NIV11

Ezekiel 12 in the NNT

Ezekiel 12 in the NNT2

Ezekiel 12 in the NNT3

Ezekiel 12 in the PDDPT

Ezekiel 12 in the PFNT

Ezekiel 12 in the RMNT

Ezekiel 12 in the SBIAS

Ezekiel 12 in the SBIBS

Ezekiel 12 in the SBIBS2

Ezekiel 12 in the SBICS

Ezekiel 12 in the SBIDS

Ezekiel 12 in the SBIGS

Ezekiel 12 in the SBIHS

Ezekiel 12 in the SBIIS

Ezekiel 12 in the SBIIS2

Ezekiel 12 in the SBIIS3

Ezekiel 12 in the SBIKS

Ezekiel 12 in the SBIKS2

Ezekiel 12 in the SBIMS

Ezekiel 12 in the SBIOS

Ezekiel 12 in the SBIPS

Ezekiel 12 in the SBISS

Ezekiel 12 in the SBITS

Ezekiel 12 in the SBITS2

Ezekiel 12 in the SBITS3

Ezekiel 12 in the SBITS4

Ezekiel 12 in the SBIUS

Ezekiel 12 in the SBIVS

Ezekiel 12 in the SBT

Ezekiel 12 in the SBT1E

Ezekiel 12 in the SCHL

Ezekiel 12 in the SNT

Ezekiel 12 in the SUSU

Ezekiel 12 in the SUSU2

Ezekiel 12 in the SYNO

Ezekiel 12 in the TBIAOTANT

Ezekiel 12 in the TBT1E

Ezekiel 12 in the TBT1E2

Ezekiel 12 in the TFTIP

Ezekiel 12 in the TFTU

Ezekiel 12 in the TGNTATF3T

Ezekiel 12 in the THAI

Ezekiel 12 in the TNFD

Ezekiel 12 in the TNT

Ezekiel 12 in the TNTIK

Ezekiel 12 in the TNTIL

Ezekiel 12 in the TNTIN

Ezekiel 12 in the TNTIP

Ezekiel 12 in the TNTIZ

Ezekiel 12 in the TOMA

Ezekiel 12 in the TTENT

Ezekiel 12 in the UBG

Ezekiel 12 in the UGV

Ezekiel 12 in the UGV2

Ezekiel 12 in the UGV3

Ezekiel 12 in the VBL

Ezekiel 12 in the VDCC

Ezekiel 12 in the YALU

Ezekiel 12 in the YAPE

Ezekiel 12 in the YBVTP

Ezekiel 12 in the ZBP