Jeremiah 20 (IRVK)

1 ಯೆರೆಮೀಯನು ಈ ಪ್ರವಾದನೆ ಮಾಡುವುದನ್ನು ಯಾಜಕನಾದ ಇಮ್ಮೇರನ ಮಗನೂ ಯೆಹೋವನ ಆಲಯದ ಮುಖ್ಯಾಧಿಕಾರಿಯೂ ಆದ ಪಷ್ಹೂರನು ಕೇಳಿದನು. 2 ಅವನು ಪ್ರವಾದಿಯಾದ ಯೆರೆಮೀಯನನ್ನು ಹೊಡೆಯಿಸಿ, ಯೆಹೋವನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ಬಾಗಿಲಲ್ಲಿದ್ದ ಕೋಳಕ್ಕೆ ಹಾಕಿಸಿದನು. 3 ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಅವನಿಗೆ ಹೀಗೆ ಹೇಳಿದನು, “ಯೆಹೋವನು ನಿನ್ನ ಹೆಸರನ್ನು ಪಷ್ಹೂರ್ ಎಂದು ಹೇಳದೆ ಮಾಗೋರ್ ಮಿಸ್ಸಾಬೀಬ್ ಎಂದು ಹೇಳಿದ್ದಾನೆ. 4 ಏಕೆಂದರೆ, ಇಗೋ, ನಾನು ನಿನ್ನನ್ನು ನಿನಗೂ ಮತ್ತು ನಿನ್ನ ಎಲ್ಲಾ ಸ್ನೇಹಿತರಿಗೂ ದಿಗಿಲಿಗಿ ಆಸ್ಪದನನ್ನಾಗಿ ಮಾಡುವೆನು; ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು, ನೀನು ಅದನ್ನು ಕಣ್ಣಾರೆ ಕಾಣುವಿ. ನಾನು ಯೆಹೂದ್ಯರನ್ನೆಲ್ಲಾ ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬಿಲೋನಿಗೆ ಸೆರೆಯಾಗಿ ಒಯ್ದು ಕತ್ತಿಯಿಂದ ಕಡಿಯುವನು. 5 ಈ ಪಟ್ಟಣದ ಎಲ್ಲಾ ಆಸ್ತಿಯನ್ನೂ, ಆದಾಯವನ್ನೂ ಮತ್ತು ಸಂಪತ್ತನ್ನೂ ಯೆಹೂದದ ಅರಸರ ಸಕಲ ನಿಧಿ, ನಿಕ್ಷೇಪಗಳನ್ನೂ ಅವರ ಶತ್ರುಗಳ ಕೈವಶಮಾಡುವೆನು; ಅವರು ಅವುಗಳನ್ನು ಕೊಳ್ಳೆಹೊಡೆದು ಬಾಬಿಲೋನಿಗೆ ತೆಗೆದುಕೊಂಡು ಹೋಗುವರು. 6 ಪಷ್ಹೂರನೇ, ನೀನೋ ನಿನ್ನ ಮನೆಯವರೆಲ್ಲರೊಡನೆ ಸೆರೆಗೆ ಹೋಗುವಿ. ನೀನೂ ಮತ್ತು ನಿನ್ನ ಮಿಥ್ಯಾ ಪ್ರವಾದನೆಯನ್ನು ಕೇಳಿದ ನಿನ್ನ ಸಕಲ ಸ್ನೇಹಿತರೂ ಬಾಬಿಲೋನಿಗೆ ಸೇರಿ ಅಲ್ಲೇ ಸತ್ತು ಮಣ್ಣಾಗುವಿರಿ” ಎಂದು ನುಡಿದಿದ್ದಾನೆ. 7 ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದಿ, ನಾನು ಮರುಳಾದೆನು; ನೀನು ನನಗಿಂತ ಬಲಿಷ್ಠನಾಗಿ ಗೆದ್ದುಕೊಂಡಿ;ನಾನು ಹಗಲೆಲ್ಲಾ ಗೇಲಿಗೆ ಗುರಿಯಾಗಿದ್ದೇನೆ, ಎಲ್ಲರೂ ನನ್ನನ್ನು ಅಣಕಿಸುತ್ತಾರೆ. 8 ನಾನು ಮಾತನಾಡುವುದೆಲ್ಲಾ ಅರಚಾಟವೇ. “ಬಲಾತ್ಕಾರ, ಕೊಳ್ಳೆ” ಎಂದೇ ಕೂಗಿಕೊಳ್ಳುತ್ತೇನೆ.ನಾನು ಸಾರುವ ಯೆಹೋವನ ವಾಕ್ಯವು ನನ್ನನ್ನು ಜನರ ದೂಷಣೆಗೂ ಪರಿಹಾಸ್ಯಕ್ಕೂ ಗುರಿಮಾಡಿದೆ. 9 “ನಾನು ಯೆಹೋವನ ವಿಷಯವನ್ನು ಪ್ರಕಟಿಸುವುದಿಲ್ಲ, ಆತನ ಹೆಸರಿನಲ್ಲಿ ಇನ್ನು ಮಾತನಾಡುವುದಿಲ್ಲ” ಎಂದುಕೊಂಡರೆ,ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ,ಸಹಿಸಿ ಸಹಿಸಿ ಆಯಾಸಗೊಂಡಿದ್ದೇನೆ, ಇನ್ನು ಸಹಿಸಲಾರೆ. 10 “ಇವನ ಮೇಲೆ ದೂರು ಹೇಳಿರಿ, ನಾವೂ ಹೇಳುವೆವು” ಎಂದು ಬಹು ಜನರು ಗುಸುಗುಟ್ಟುವುದನ್ನು ಕೇಳಿದ್ದೇನೆ.ಸುತ್ತುಮುತ್ತಲೂ ದಿಗಿಲು; ನನ್ನ ಆಪ್ತ ಸ್ನೇಹಿತರೆಲ್ಲರೂ “ಇವನು ಎಡವಿ ಬೀಳಲಿ” ಎಂದು ನನ್ನನ್ನು ಹೊಂಚಿನೋಡುತ್ತಾ,“ಒಂದು ವೇಳೆ ಸಿಕ್ಕಿಬಿದ್ದಾನು, ಇವನನ್ನು ಗೆದ್ದು ಮುಯ್ಯಿತೀರಿಸಿಕೊಳ್ಳುವೆವು” ಎಂದು ತಮ್ಮತಮ್ಮೊಳಗೆ ಅಂದುಕೊಳ್ಳುತ್ತಿದ್ದಾರೆ. 11 ಯೆಹೋವನಾದರೋ ಭಯಂಕರಶೂರನಾಗಿ ನನ್ನ ಸಂಗಡ ಇದ್ದಾನೆ. ಆದುದರಿಂದ ನನ್ನ ಹಿಂಸಕರು ಗೆಲ್ಲದೆ ಮುಗ್ಗರಿಸುವರು.ತಮ್ಮ ಇಷ್ಟಾರ್ಥವು ನೆರವೇರದ ಕಾರಣ ದೊಡ್ಡ ನಾಚಿಕೆಗೆ ಈಡಾಗುವರು, ಎಂದಿಗೂ ಮರೆಯದ ಶಾಶ್ವತ ಅವಮಾನಕ್ಕೆ ಒಳಗಾಗುವರು. 12 ಹೃದಯವನ್ನೂ ಮತ್ತು ಅಂತರಿಂದ್ರಿಯವನ್ನೂ ಪರೀಕ್ಷಿಸಿ ಶಿಷ್ಟರನ್ನು ಶೋಧಿಸುವ ಸೇನಾಧೀಶ್ವರನಾದ ಯೆಹೋವನೇ,ನೀನು ನನ್ನ ಹಿಂಸಕರಿಗೆ ಕೊಡುವ ಪ್ರತಿಫಲವನ್ನು ನನ್ನ ಕಣ್ಣು ನೋಡಲಿ; ನಿನಗೇ ನನ್ನ ವ್ಯಾಜ್ಯವನ್ನು ಅರಿಕೆಮಾಡಿದ್ದೇನಷ್ಟೆ. 13 ಯೆಹೋವನನ್ನು ಕೀರ್ತಿಸಿರಿ, ಯೆಹೋವನನ್ನು ಸ್ತುತಿಸಿರಿ; ಆತನು ಕೆಡುಕರ ಕೈಯಿಂದ ದೀನನ ಪ್ರಾಣವನ್ನು ರಕ್ಷಿಸಿದ್ದಾನೆ. 14 ನಾನು ಹುಟ್ಟಿದ ದಿನ ಶಾಪಗ್ರಸ್ತವಾಗಲಿ, ತಾಯಿಯು ನನ್ನನ್ನು ಹೆತ್ತ ದಿನವು ಅಶುಭವೆನ್ನಿಸಿಕೊಳ್ಳಲಿ! 15 “ನಿನಗೆ ಗಂಡುಮಗು ಹುಟ್ಟಿದೆ” ಎಂಬ ಸಮಾಚಾರವನ್ನು ನನ್ನ ತಂದೆಗೆ ತಿಳಿಸಿ ಅವನಿಗೆ ಕೇವಲ ಆನಂದವನ್ನು ಉಂಟುಮಾಡಿದವನು ಶಪಿಸಲ್ಪಡಲಿ! 16 ಯೆಹೋವನು ಕನಿಕರಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ.ಮುಂಜಾನೆಯಲ್ಲಿ ಅರಚಾಟವು, ಮಧ್ಯಾಹ್ನದಲ್ಲಿ ಕೂಗಾಟವು ಅವನ ಕಿವಿಗೆ ಬೀಳಲಿ! 17 ಅವನು ನನ್ನನ್ನು ಗರ್ಭದಲ್ಲೇ ಕೊಲ್ಲಲಿಲ್ಲವಲ್ಲಾ; ಹೀಗೆ ಮಾಡಿದ್ದರೆ ನನ್ನ ತಾಯಿಯೇ ನನಗೆ ಗೋರಿಯಾಗುತ್ತಿದ್ದಳು, ಆಕೆಯ ಗರ್ಭವು ಯಾವಾಗಲೂ ಬಸುರಾಗಿಯೇ ಇರುತ್ತಿತ್ತು. 18 ನಾನು ಶ್ರಮದುಃಖಗಳನ್ನು ನೋಡುವುದಕ್ಕೂ, ನನ್ನ ಆಯುಸ್ಸು ಅವಮಾನದಿಂದ ಕ್ಷಯಿಸುವುದಕ್ಕೂ ಗರ್ಭದಿಂದ ಏಕೆ ಹೊರಟು ಬಂದೆನು?

In Other Versions

Jeremiah 20 in the ANGEFD

Jeremiah 20 in the ANTPNG2D

Jeremiah 20 in the AS21

Jeremiah 20 in the BAGH

Jeremiah 20 in the BBPNG

Jeremiah 20 in the BBT1E

Jeremiah 20 in the BDS

Jeremiah 20 in the BEV

Jeremiah 20 in the BHAD

Jeremiah 20 in the BIB

Jeremiah 20 in the BLPT

Jeremiah 20 in the BNT

Jeremiah 20 in the BNTABOOT

Jeremiah 20 in the BNTLV

Jeremiah 20 in the BOATCB

Jeremiah 20 in the BOATCB2

Jeremiah 20 in the BOBCV

Jeremiah 20 in the BOCNT

Jeremiah 20 in the BOECS

Jeremiah 20 in the BOGWICC

Jeremiah 20 in the BOHCB

Jeremiah 20 in the BOHCV

Jeremiah 20 in the BOHLNT

Jeremiah 20 in the BOHNTLTAL

Jeremiah 20 in the BOICB

Jeremiah 20 in the BOILNTAP

Jeremiah 20 in the BOITCV

Jeremiah 20 in the BOKCV

Jeremiah 20 in the BOKCV2

Jeremiah 20 in the BOKHWOG

Jeremiah 20 in the BOKSSV

Jeremiah 20 in the BOLCB

Jeremiah 20 in the BOLCB2

Jeremiah 20 in the BOMCV

Jeremiah 20 in the BONAV

Jeremiah 20 in the BONCB

Jeremiah 20 in the BONLT

Jeremiah 20 in the BONUT2

Jeremiah 20 in the BOPLNT

Jeremiah 20 in the BOSCB

Jeremiah 20 in the BOSNC

Jeremiah 20 in the BOTLNT

Jeremiah 20 in the BOVCB

Jeremiah 20 in the BOYCB

Jeremiah 20 in the BPBB

Jeremiah 20 in the BPH

Jeremiah 20 in the BSB

Jeremiah 20 in the CCB

Jeremiah 20 in the CUV

Jeremiah 20 in the CUVS

Jeremiah 20 in the DBT

Jeremiah 20 in the DGDNT

Jeremiah 20 in the DHNT

Jeremiah 20 in the DNT

Jeremiah 20 in the ELBE

Jeremiah 20 in the EMTV

Jeremiah 20 in the ESV

Jeremiah 20 in the FBV

Jeremiah 20 in the FEB

Jeremiah 20 in the GGMNT

Jeremiah 20 in the GNT

Jeremiah 20 in the HARY

Jeremiah 20 in the HNT

Jeremiah 20 in the IRVA

Jeremiah 20 in the IRVB

Jeremiah 20 in the IRVG

Jeremiah 20 in the IRVH

Jeremiah 20 in the IRVM

Jeremiah 20 in the IRVM2

Jeremiah 20 in the IRVO

Jeremiah 20 in the IRVP

Jeremiah 20 in the IRVT

Jeremiah 20 in the IRVT2

Jeremiah 20 in the IRVU

Jeremiah 20 in the ISVN

Jeremiah 20 in the JSNT

Jeremiah 20 in the KAPI

Jeremiah 20 in the KBT1ETNIK

Jeremiah 20 in the KBV

Jeremiah 20 in the KJV

Jeremiah 20 in the KNFD

Jeremiah 20 in the LBA

Jeremiah 20 in the LBLA

Jeremiah 20 in the LNT

Jeremiah 20 in the LSV

Jeremiah 20 in the MAAL

Jeremiah 20 in the MBV

Jeremiah 20 in the MBV2

Jeremiah 20 in the MHNT

Jeremiah 20 in the MKNFD

Jeremiah 20 in the MNG

Jeremiah 20 in the MNT

Jeremiah 20 in the MNT2

Jeremiah 20 in the MRS1T

Jeremiah 20 in the NAA

Jeremiah 20 in the NASB

Jeremiah 20 in the NBLA

Jeremiah 20 in the NBS

Jeremiah 20 in the NBVTP

Jeremiah 20 in the NET2

Jeremiah 20 in the NIV11

Jeremiah 20 in the NNT

Jeremiah 20 in the NNT2

Jeremiah 20 in the NNT3

Jeremiah 20 in the PDDPT

Jeremiah 20 in the PFNT

Jeremiah 20 in the RMNT

Jeremiah 20 in the SBIAS

Jeremiah 20 in the SBIBS

Jeremiah 20 in the SBIBS2

Jeremiah 20 in the SBICS

Jeremiah 20 in the SBIDS

Jeremiah 20 in the SBIGS

Jeremiah 20 in the SBIHS

Jeremiah 20 in the SBIIS

Jeremiah 20 in the SBIIS2

Jeremiah 20 in the SBIIS3

Jeremiah 20 in the SBIKS

Jeremiah 20 in the SBIKS2

Jeremiah 20 in the SBIMS

Jeremiah 20 in the SBIOS

Jeremiah 20 in the SBIPS

Jeremiah 20 in the SBISS

Jeremiah 20 in the SBITS

Jeremiah 20 in the SBITS2

Jeremiah 20 in the SBITS3

Jeremiah 20 in the SBITS4

Jeremiah 20 in the SBIUS

Jeremiah 20 in the SBIVS

Jeremiah 20 in the SBT

Jeremiah 20 in the SBT1E

Jeremiah 20 in the SCHL

Jeremiah 20 in the SNT

Jeremiah 20 in the SUSU

Jeremiah 20 in the SUSU2

Jeremiah 20 in the SYNO

Jeremiah 20 in the TBIAOTANT

Jeremiah 20 in the TBT1E

Jeremiah 20 in the TBT1E2

Jeremiah 20 in the TFTIP

Jeremiah 20 in the TFTU

Jeremiah 20 in the TGNTATF3T

Jeremiah 20 in the THAI

Jeremiah 20 in the TNFD

Jeremiah 20 in the TNT

Jeremiah 20 in the TNTIK

Jeremiah 20 in the TNTIL

Jeremiah 20 in the TNTIN

Jeremiah 20 in the TNTIP

Jeremiah 20 in the TNTIZ

Jeremiah 20 in the TOMA

Jeremiah 20 in the TTENT

Jeremiah 20 in the UBG

Jeremiah 20 in the UGV

Jeremiah 20 in the UGV2

Jeremiah 20 in the UGV3

Jeremiah 20 in the VBL

Jeremiah 20 in the VDCC

Jeremiah 20 in the YALU

Jeremiah 20 in the YAPE

Jeremiah 20 in the YBVTP

Jeremiah 20 in the ZBP