Job 30 (IRVK)

1 ಈಗಲಾದರೋ ನನಗಿಂತ ಚಿಕ್ಕವಯಸ್ಸಿನವರು ನನ್ನನ್ನು ಪರಿಹಾಸ್ಯಮಾಡುತ್ತಾರೆ;ಇವರ ಹೆತ್ತವರನ್ನು ನನ್ನ ಕುರಿ ಮಂದೆಯ ನಾಯಿಗಳ ಸಂಗಡ ಸೇರಿಸುವುದಕ್ಕೂ ಉದಾಸಿನ ಮಾಡಿದೆನು. 2 ಅವರ ಕೈ ಬಲದಿಂದ ನನಗೆ ಏನಾದೀತು?ಅವರ ಪುಷ್ಟಿಯು ಕುಗ್ಗಿಹೋಗಿದೆಯಷ್ಟೆ. 3 ಅವರು ಕೊರತೆಯಿಂದಲೂ, ಹಸಿವಿನಿಂದಲೂ ಸೊರಗಿ,ನಿನ್ನೆಯವರೆಗೂ ಹಾಳುಬೀಳಾದ ಒಣ ನೆಲವನ್ನು ನೆಕ್ಕುವರು. 4 ಪೊದೆಗಳಲ್ಲಿ ಉಪ್ಪಿನ ಸೊಪ್ಪನ್ನು ಕಿತ್ತು, ತಿಂದುಜಾಲಿಯ ಬೇರುಗಳನ್ನೂ ಆಹಾರಮಾಡಿಕೊಳ್ಳುವರು. 5 ಜನರು ಅವರನ್ನು ತಮ್ಮ ಮಧ್ಯದಿಂದ ತಳ್ಳಿಬಿಟ್ಟು,ಕಳ್ಳನನ್ನು ಓಡಿಸುವ ಹಾಗೆ ಕೂಗಾಡಿ ಓಡಿಸುವರು. 6 ಅವರು ಭಯಂಕರವಾದ ತಗ್ಗುಗಳ ಸಂದುಗಳಲ್ಲಿ ವಾಸಿಸತಕ್ಕವರು,ಭೂಮಿಯಲ್ಲಿಯೂ, ಬಂಡೆಗಳಲ್ಲಿಯೂ ಇರುವ ಗುಹೆಗಳೇ ಅವರ ಮನೆಗಳು. 7 ಪೊದೆಗಳ ಮಧ್ಯದಲ್ಲಿ ಅರಚುವರು ಕತ್ತೆಗಳಂತೆ,ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುವರು. 8 ಮೂರ್ಖರ ಮಕ್ಕಳಾದ ಈ ನೀಚ ಜಾತಿಯವರು ದೇಶಭ್ರಷ್ಟರು.ಅವರು ಕೊರಡೆಗಳ ಪೆಟ್ಟಿನಿಂದ ದೇಶದಿಂದ ಹೊರಹಾಕಲ್ಪಟ್ಟಿದ್ದರೆ. 9 ಈಗಲಾದರೋ ನನ್ನ ಮೇಲೆ ಗೇಲಿಮಾಡುವ ಹಾಡುಗಳನ್ನು ಕಟ್ಟುವರು.ಮತ್ತು ಅವರ ಕಟ್ಟುಕಥೆಗಳಿಗೆ ಆಸ್ಪದವಾಗಿದ್ದೇನೆ. 10 ನನಗೆ ಅಸಹ್ಯಪಟ್ಟು ದೂರ ನಿಂತು,ನನ್ನ ಮೇಲೆ ಉಗುಳುವುದಕ್ಕೂ ಹಿಂದೆಗೆಯರು. 11 ದೇವರು ತಾನು ಹಾಕಿದ್ದ ಕಟ್ಟನ್ನು ಸಡಲಿಸಿ ನನ್ನನ್ನು ಬಾಧಿಸುವುದಕ್ಕೆ ಅವರನ್ನು ಬಿಟ್ಟಿದ್ದಾನೆ.ಅವರು ನನ್ನ ಎದುರಿನಲ್ಲಿಯೇ ಕಡಿವಾಣವನ್ನು ಕಿತ್ತು ಹಾಕಿದ್ದಾರೆ. 12 ಆ ಕಲಹಗಾರರು ನನ್ನ ಬಲಗಡೆ ಎದ್ದು,ನನ್ನ ಕಾಲುಗಳನ್ನು ಹಿಂದಕ್ಕೆ ತಳ್ಳುತ್ತಾ ನನ್ನ ನಾಶಕ್ಕಾಗಿ ಹೊಂಚು ಹಾಕಿದ್ದಾರೆ. 13 ಅವರು ನನ್ನ ದಾರಿಯನ್ನು ಕಡಿದು, ನನ್ನ ಉಪದ್ರವವನ್ನು ಹೆಚ್ಚಿಸುತ್ತಾರೆ;ಅವರನ್ನು ಎದುರಿಸತಕ್ಕ ಸಹಾಯಕನು ಯಾರೂ ಇಲ್ಲ. 14 ಕೋಟೆ ಬಿರುಕುಗಳಲ್ಲಿ ನುಗ್ಗಿ,ಹಾಳುಬೀಳಿನಲ್ಲಿ ನಿಂತಿರುವ ನನ್ನ ಮೇಲೆ ಹೊರಳುತ್ತಾರೆ. 15 ಅಪಾಯಗಳು ನನ್ನ ಮೇಲೆ ತಿರುಗಿಬಿದ್ದು;ನನ್ನ ಮಾನವನ್ನು ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿವೆ;ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಯಿತು. 16 ಈಗ ನನ್ನ ಆತ್ಮವು ಕರಗಿಹೋಗಿದೆ,ಬಾಧೆಯ ದಿನಗಳು ನನ್ನನ್ನು ಹಿಡಿದುಕೊಂಡಿವೆ. 17 ರಾತ್ರಿಯು ನನ್ನ ಎಲುಬುಗಳನ್ನು ಕೊರೆದು ಕೀಳುತ್ತದೆ,ನನ್ನನ್ನು ಕಚ್ಚುತ್ತಿರುವ ಸಂಕಟಗಳು ಸುಮ್ಮನಿರುವುದಿಲ್ಲ. 18 ನನ್ನ ಬಟ್ಟೆಯು ರೋಗದ ಅಧಿಕ ಬಲದಿಂದ ಕೆಟ್ಟುಹೋಗಿ;ಅಂಗಿಯ ಕೊರಳ ಪಟ್ಟಿಯ ಹಾಗೆ ನನ್ನನ್ನು ಸುತ್ತಿಕೊಂಡಿದೆ. 19 ಆತನು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾನೆ,ಧೂಳುಬೂದಿಗಳಿಗೆ ಸಮಾನನಾಗಿದ್ದೇನೆ. 20 ಓ ದೇವರೇ ನಾನು ನಿನಗೆ ಮೊರೆಯಿಟ್ಟರೂ ನೀನು ಉತ್ತರಕೊಡುವುದಿಲ್ಲ,ಎದ್ದು ನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿ. 21 ನೀನು ನನಗೆ ಕ್ರೂರನಾಗಿ ಮಾರ್ಪಟ್ಟಿದ್ದಿ,ನಿನ್ನ ಕೈಬಲದಿಂದ ನನ್ನನ್ನು ಹಿಂಸಿಸುತ್ತಿ. 22 ನನ್ನನ್ನು ಬಿರುಗಾಳಿಗೆ ಎತ್ತಿ ತೂರಿಬಿಟ್ಟು,ಅದರ ಆರ್ಭಟದಲ್ಲಿ ಮಾಯಮಾಡುತ್ತಿ. 23 ನೀನು ನನ್ನನ್ನು ಮರಣಕ್ಕೆ ಗುರಿಮಾಡಿ,ಸಮಸ್ತ ಜೀವಿಗಳು ಹೋಗಬೇಕಾದ ಮನೆಗೆ ಸೇರಿಸುವಿಯೆಂದು ನನಗೆ ಗೊತ್ತೇ ಇದೆ. 24 ಆದರೂ ನಾಶಕ್ಕೆ ಒಳಗಾದವನು ಕೈಚಾಚುವುದಿಲ್ಲವೋ?ಆಪತ್ತಿಗೆ ಒಳಪಟ್ಟವನು ಕೂಗಿಕೊಳ್ಳುವುದಿಲ್ಲವೋ? 25 ಕಷ್ಟಾನುಭವಿಯನ್ನು ಕಂಡು ನಾನು ಕಣ್ಣೀರಿಡಲಿಲ್ಲವೇ?ದಿಕ್ಕಿಲ್ಲದವನಿಗೆ ದುಃಖಿಸುವವನೂ ಆಗಿದ್ದೇನಷ್ಟೆ. 26 ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರುವಲ್ಲಿ ಕೇಡು ಬಂತು,ಬೆಳಕನ್ನು ಎದುರು ನೋಡುತ್ತಿರುವಾಗ ಕತ್ತಲಾಯಿತು. 27 ನನ್ನ ಹೃದಯವು ಕುದಿಯುತ್ತಿದೆ,ಅದಕ್ಕೆ ಶಾಂತಿಯಿಲ್ಲ; ಬಾಧೆಯ ದಿನಗಳು ನನಗೆ ಒದಗಿವೆ. 28 ಸಂತೈಸುವ ಸೂರ್ಯನಿಲ್ಲದೆ;ಮಂಕುಬಡಿದಂತೆ ಅಲೆಯುತ್ತಾಸಭೆಯ ಮಧ್ಯನಿಂತು ಅಂಗಲಾಡುತ್ತಿದ್ದೇನೆ.ಸಂಘದಲ್ಲಿ ನಿಂತು ಅಂಗಲಾಚಿಕೊಳ್ಳುತ್ತೇನೆ. 29 ನಾನು ನರಿಗಳ ತಮ್ಮನೂ,ಉಷ್ಟ್ರಪಕ್ಷಿಗಳ ಗೆಳೆಯನೂ ಆಗಿದ್ದೇನೆ. 30 ನನ್ನ ಚರ್ಮವು ಕರಿದಾಗಿ ಉದುರುತ್ತದೆ,ನನ್ನ ಎಲುಬುಗಳು ತಾಪದಿಂದ ಬೆಂದಿದೆ. 31 ಇದರಿಂದ ನನ್ನ ಕಿನ್ನರಿಯಲ್ಲಿ ಗೋಳಾಟವೂ,ನನ್ನ ಕೊಳಲಿನಲ್ಲಿ ಅಳುವ ಧ್ವನಿಯೂ ಕೇಳಿಸುತ್ತವೆ.

In Other Versions

Job 30 in the ANGEFD

Job 30 in the ANTPNG2D

Job 30 in the AS21

Job 30 in the BAGH

Job 30 in the BBPNG

Job 30 in the BBT1E

Job 30 in the BDS

Job 30 in the BEV

Job 30 in the BHAD

Job 30 in the BIB

Job 30 in the BLPT

Job 30 in the BNT

Job 30 in the BNTABOOT

Job 30 in the BNTLV

Job 30 in the BOATCB

Job 30 in the BOATCB2

Job 30 in the BOBCV

Job 30 in the BOCNT

Job 30 in the BOECS

Job 30 in the BOGWICC

Job 30 in the BOHCB

Job 30 in the BOHCV

Job 30 in the BOHLNT

Job 30 in the BOHNTLTAL

Job 30 in the BOICB

Job 30 in the BOILNTAP

Job 30 in the BOITCV

Job 30 in the BOKCV

Job 30 in the BOKCV2

Job 30 in the BOKHWOG

Job 30 in the BOKSSV

Job 30 in the BOLCB

Job 30 in the BOLCB2

Job 30 in the BOMCV

Job 30 in the BONAV

Job 30 in the BONCB

Job 30 in the BONLT

Job 30 in the BONUT2

Job 30 in the BOPLNT

Job 30 in the BOSCB

Job 30 in the BOSNC

Job 30 in the BOTLNT

Job 30 in the BOVCB

Job 30 in the BOYCB

Job 30 in the BPBB

Job 30 in the BPH

Job 30 in the BSB

Job 30 in the CCB

Job 30 in the CUV

Job 30 in the CUVS

Job 30 in the DBT

Job 30 in the DGDNT

Job 30 in the DHNT

Job 30 in the DNT

Job 30 in the ELBE

Job 30 in the EMTV

Job 30 in the ESV

Job 30 in the FBV

Job 30 in the FEB

Job 30 in the GGMNT

Job 30 in the GNT

Job 30 in the HARY

Job 30 in the HNT

Job 30 in the IRVA

Job 30 in the IRVB

Job 30 in the IRVG

Job 30 in the IRVH

Job 30 in the IRVM

Job 30 in the IRVM2

Job 30 in the IRVO

Job 30 in the IRVP

Job 30 in the IRVT

Job 30 in the IRVT2

Job 30 in the IRVU

Job 30 in the ISVN

Job 30 in the JSNT

Job 30 in the KAPI

Job 30 in the KBT1ETNIK

Job 30 in the KBV

Job 30 in the KJV

Job 30 in the KNFD

Job 30 in the LBA

Job 30 in the LBLA

Job 30 in the LNT

Job 30 in the LSV

Job 30 in the MAAL

Job 30 in the MBV

Job 30 in the MBV2

Job 30 in the MHNT

Job 30 in the MKNFD

Job 30 in the MNG

Job 30 in the MNT

Job 30 in the MNT2

Job 30 in the MRS1T

Job 30 in the NAA

Job 30 in the NASB

Job 30 in the NBLA

Job 30 in the NBS

Job 30 in the NBVTP

Job 30 in the NET2

Job 30 in the NIV11

Job 30 in the NNT

Job 30 in the NNT2

Job 30 in the NNT3

Job 30 in the PDDPT

Job 30 in the PFNT

Job 30 in the RMNT

Job 30 in the SBIAS

Job 30 in the SBIBS

Job 30 in the SBIBS2

Job 30 in the SBICS

Job 30 in the SBIDS

Job 30 in the SBIGS

Job 30 in the SBIHS

Job 30 in the SBIIS

Job 30 in the SBIIS2

Job 30 in the SBIIS3

Job 30 in the SBIKS

Job 30 in the SBIKS2

Job 30 in the SBIMS

Job 30 in the SBIOS

Job 30 in the SBIPS

Job 30 in the SBISS

Job 30 in the SBITS

Job 30 in the SBITS2

Job 30 in the SBITS3

Job 30 in the SBITS4

Job 30 in the SBIUS

Job 30 in the SBIVS

Job 30 in the SBT

Job 30 in the SBT1E

Job 30 in the SCHL

Job 30 in the SNT

Job 30 in the SUSU

Job 30 in the SUSU2

Job 30 in the SYNO

Job 30 in the TBIAOTANT

Job 30 in the TBT1E

Job 30 in the TBT1E2

Job 30 in the TFTIP

Job 30 in the TFTU

Job 30 in the TGNTATF3T

Job 30 in the THAI

Job 30 in the TNFD

Job 30 in the TNT

Job 30 in the TNTIK

Job 30 in the TNTIL

Job 30 in the TNTIN

Job 30 in the TNTIP

Job 30 in the TNTIZ

Job 30 in the TOMA

Job 30 in the TTENT

Job 30 in the UBG

Job 30 in the UGV

Job 30 in the UGV2

Job 30 in the UGV3

Job 30 in the VBL

Job 30 in the VDCC

Job 30 in the YALU

Job 30 in the YAPE

Job 30 in the YBVTP

Job 30 in the ZBP