Psalms 120 (IRVK)
undefined ಯಾತ್ರಾಗೀತೆ. 1 ನನ್ನ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು;ಆತನು ಸದುತ್ತರವನ್ನು ದಯಪಾಲಿಸಿದನು. 2 ಯೆಹೋವನೇ, ಸುಳ್ಳು ಬಾಯಿಯೂ,ವಂಚಿಸುವ ನಾಲಿಗೆ ಉಳ್ಳವರಿಂದ ನನ್ನನ್ನು ಬಿಡಿಸು. 3 ವಂಚಿಸುವ ನಾಲಿಗೆಯೇ, ದೇವರು ನಿನಗೇನು ಕೊಡಬೇಕು?ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು? 4 ಶೂರನ ಹದವಾದ ಬಾಣಗಳನ್ನೂ,ಜಾಲಿಯ ಕೆಂಡಗಳನ್ನೂ ನಿನಗೆ ಕೊಡುವರು. 5 ಅಯ್ಯೋ, ನಾನು ಮೇಷೆಕಿನವರಲ್ಲಿ ತಂಗಬೇಕಲ್ಲಾ!ಕೇದಾರಿನವರ ಪಾಳೆಯಗಳಲ್ಲಿ ವಾಸಿಸಬೇಕಾಯಿತಲ್ಲಾ! 6 ಸಮಾಧಾನವನ್ನು ದ್ವೇಷಿಸುವವರೊಳಗೆ,ಇದ್ದು ಇದ್ದು ಸಾಕಾಯಿತು. 7 ನಾನು ಸಮಾಧಾನಪ್ರಿಯನು;ಅವರೋ, ನಾನು ಮಾತನಾಡಿದರೆ ಯುದ್ಧಕ್ಕೆ ಬರುತ್ತಾರೆ.