Revelation 16 (IRVK)
1 ಆಗ ಆಲಯದೊಳಗಿಂದ ಬಂದ ಮಹಾಧ್ವನಿಯನ್ನು ನಾನು ಕೇಳಿದೆನು. ಅದು ಆ ಏಳು ಮಂದಿ ದೇವದೂತರಿಗೆ, “ನೀವು ಹೋಗಿ ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿಯಿರಿ” ಎಂದು ಹೇಳಿತು. 2 ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು. 3 ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು. ಅದು ಸತ್ತ ಮನುಷ್ಯನ ರಕ್ತದ ಹಾಗಾಯಿತು ಮತ್ತು ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು. 4 ಮೂರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ ಅವುಗಳ ನೀರು ರಕ್ತವಾಯಿತು. 5 ಆ ಮೇಲೆ ಜಲಾಧಿಪತಿಯಾದ ದೂತನು, “ನೀನು ಇರುವಾತನೂ ಇದ್ದಾತನೂ ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ. 6 ಅವರು ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದ್ದರಿಂದ, ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು. 7 ಆ ಮೇಲೆ ಯಜ್ಞವೇದಿಯು ಮಾತನಾಡುತ್ತಾ, “ದೇವರಾದ ಕರ್ತನೇ ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ” ಎಂದು ಹೇಳುವುದನ್ನು ಕೇಳಿದೆನು. 8 ನಾಲ್ಕನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು. 9 ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ದೂಷಿಸಿದಲ್ಲದೆ, ಅವರು ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ. 10 ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ ಸಿಂಹಾಸನದ ಮೇಲೆ ಸುರಿಯಲು ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು, 11 ತಮ್ಮ ಯಾತನೆಗಳಿಗಾಗಿಯೂ ಹುಣ್ಣುಗಳ ದೆಸೆಯಿಂದಲೂ ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಮಾನಸಾಂತರ ಹೊಂದಲಿಲ್ಲ. 12 ಆರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಯೂಫ್ರೆಟಿಸ್ ಎಂಬ ಮಹಾ ನದಿಯಲ್ಲಿ ಸುರಿಯಲು, ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ ಅದರ ನೀರು ಬತ್ತಿಹೋಯಿತು. 13 ಆಗ ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು. 14 ಇವು ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದ ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು. 15 “ಇಗೋ ಕಳ್ಳನು ಬರುವಂತೆ ಬರುತ್ತೇನೆ. ತಾನು ಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆ ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು.” 16 ಆಗ ಅವು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ ಅರ್ಮಗೆದ್ದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಕೂಡಿಸಿದವು. 17 ಏಳನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ವಾಯುಮಂಡಲದ ಮೇಲೆ ಸುರಿಯಲು ಆಗ ಆಲಯದ ಸಿಂಹಾಸನದಿಂದ ಮಹಾಧ್ವನಿಯು ಉಂಟಾಗಿ “ಸಂಭವಿಸಿ ಆಯಿತು” ಎಂದು ಹೇಳಿತು. 18 ಆಗ ಮಿಂಚುಗಳೂ, ನಾದಗಳೂ, ಗುಡುಗುಗಳೂ ಉಂಟಾದವು ಇದಲ್ಲದೆ ಮಹಾ ಭೂಕಂಪವಾಯಿತು. ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ. 19 ಮಹಾ ಪಟ್ಟಣವು ಮೂರು ಭಾಗವಾಗಿ ಬಿರಿಯಿತು ಮತ್ತು ಜನಾಂಗಗಳ ಪಟ್ಟಣಗಳು ಬಿದ್ದವು. ಆಗ ದೇವರು ತನ್ನ ಸನ್ನಿಧಿಯಲ್ಲಿ ಬಾಬೆಲನ್ನು ಜ್ಞಾಪಿಸಿಕೊಂಡು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕೊಟ್ಟನು. 20 ಆಗ ಪ್ರತಿಯೊಂದು ದ್ವೀಪವು ಓಡಿಹೋಗಿ ಮರೆಯಾದವು ಬೆಟ್ಟಗಳು ಕಾಣದಂತಾದವು. 21 ಮತ್ತು ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಅಲಿಕಲ್ಲು ಸುಮಾರು ನಲ್ವತ್ತು ಕಿಲೊಗ್ರಾಮಿನಷ್ಟು ತೂಕವಾಗಿತ್ತು. ಆ ಆಲಿಕಲ್ಲಿನ ಮಳೆಯ ಉಪದ್ರವವು ಬಹಳ ವಿಪರೀತವಾದ್ದರಿಂದ ಆ ಮಳೆಯಲ್ಲಿ ಸಿಕ್ಕಿಕೊಂಡ ಮನುಷ್ಯರು ದೇವರನ್ನು ದೂಷಿಸಿದರು.
In Other Versions
Revelation 16 in the ANGEFD
Revelation 16 in the ANTPNG2D
Revelation 16 in the AS21
Revelation 16 in the BAGH
Revelation 16 in the BBPNG
Revelation 16 in the BBT1E
Revelation 16 in the BDS
Revelation 16 in the BEV
Revelation 16 in the BHAD
Revelation 16 in the BIB
Revelation 16 in the BLPT
Revelation 16 in the BNT
Revelation 16 in the BNTABOOT
Revelation 16 in the BNTLV
Revelation 16 in the BOATCB
Revelation 16 in the BOATCB2
Revelation 16 in the BOBCV
Revelation 16 in the BOCNT
Revelation 16 in the BOECS
Revelation 16 in the BOGWICC
Revelation 16 in the BOHCB
Revelation 16 in the BOHCV
Revelation 16 in the BOHLNT
Revelation 16 in the BOHNTLTAL
Revelation 16 in the BOICB
Revelation 16 in the BOILNTAP
Revelation 16 in the BOITCV
Revelation 16 in the BOKCV
Revelation 16 in the BOKCV2
Revelation 16 in the BOKHWOG
Revelation 16 in the BOKSSV
Revelation 16 in the BOLCB
Revelation 16 in the BOLCB2
Revelation 16 in the BOMCV
Revelation 16 in the BONAV
Revelation 16 in the BONCB
Revelation 16 in the BONLT
Revelation 16 in the BONUT2
Revelation 16 in the BOPLNT
Revelation 16 in the BOSCB
Revelation 16 in the BOSNC
Revelation 16 in the BOTLNT
Revelation 16 in the BOVCB
Revelation 16 in the BOYCB
Revelation 16 in the BPBB
Revelation 16 in the BPH
Revelation 16 in the BSB
Revelation 16 in the CCB
Revelation 16 in the CUV
Revelation 16 in the CUVS
Revelation 16 in the DBT
Revelation 16 in the DGDNT
Revelation 16 in the DHNT
Revelation 16 in the DNT
Revelation 16 in the ELBE
Revelation 16 in the EMTV
Revelation 16 in the ESV
Revelation 16 in the FBV
Revelation 16 in the FEB
Revelation 16 in the GGMNT
Revelation 16 in the GNT
Revelation 16 in the HARY
Revelation 16 in the HNT
Revelation 16 in the IRVA
Revelation 16 in the IRVB
Revelation 16 in the IRVG
Revelation 16 in the IRVH
Revelation 16 in the IRVM
Revelation 16 in the IRVM2
Revelation 16 in the IRVO
Revelation 16 in the IRVP
Revelation 16 in the IRVT
Revelation 16 in the IRVT2
Revelation 16 in the IRVU
Revelation 16 in the ISVN
Revelation 16 in the JSNT
Revelation 16 in the KAPI
Revelation 16 in the KBT1ETNIK
Revelation 16 in the KBV
Revelation 16 in the KJV
Revelation 16 in the KNFD
Revelation 16 in the LBA
Revelation 16 in the LBLA
Revelation 16 in the LNT
Revelation 16 in the LSV
Revelation 16 in the MAAL
Revelation 16 in the MBV
Revelation 16 in the MBV2
Revelation 16 in the MHNT
Revelation 16 in the MKNFD
Revelation 16 in the MNG
Revelation 16 in the MNT
Revelation 16 in the MNT2
Revelation 16 in the MRS1T
Revelation 16 in the NAA
Revelation 16 in the NASB
Revelation 16 in the NBLA
Revelation 16 in the NBS
Revelation 16 in the NBVTP
Revelation 16 in the NET2
Revelation 16 in the NIV11
Revelation 16 in the NNT
Revelation 16 in the NNT2
Revelation 16 in the NNT3
Revelation 16 in the PDDPT
Revelation 16 in the PFNT
Revelation 16 in the RMNT
Revelation 16 in the SBIAS
Revelation 16 in the SBIBS
Revelation 16 in the SBIBS2
Revelation 16 in the SBICS
Revelation 16 in the SBIDS
Revelation 16 in the SBIGS
Revelation 16 in the SBIHS
Revelation 16 in the SBIIS
Revelation 16 in the SBIIS2
Revelation 16 in the SBIIS3
Revelation 16 in the SBIKS
Revelation 16 in the SBIKS2
Revelation 16 in the SBIMS
Revelation 16 in the SBIOS
Revelation 16 in the SBIPS
Revelation 16 in the SBISS
Revelation 16 in the SBITS
Revelation 16 in the SBITS2
Revelation 16 in the SBITS3
Revelation 16 in the SBITS4
Revelation 16 in the SBIUS
Revelation 16 in the SBIVS
Revelation 16 in the SBT
Revelation 16 in the SBT1E
Revelation 16 in the SCHL
Revelation 16 in the SNT
Revelation 16 in the SUSU
Revelation 16 in the SUSU2
Revelation 16 in the SYNO
Revelation 16 in the TBIAOTANT
Revelation 16 in the TBT1E
Revelation 16 in the TBT1E2
Revelation 16 in the TFTIP
Revelation 16 in the TFTU
Revelation 16 in the TGNTATF3T
Revelation 16 in the THAI
Revelation 16 in the TNFD
Revelation 16 in the TNT
Revelation 16 in the TNTIK
Revelation 16 in the TNTIL
Revelation 16 in the TNTIN
Revelation 16 in the TNTIP
Revelation 16 in the TNTIZ
Revelation 16 in the TOMA
Revelation 16 in the TTENT
Revelation 16 in the UBG
Revelation 16 in the UGV
Revelation 16 in the UGV2
Revelation 16 in the UGV3
Revelation 16 in the VBL
Revelation 16 in the VDCC
Revelation 16 in the YALU
Revelation 16 in the YAPE
Revelation 16 in the YBVTP
Revelation 16 in the ZBP