Exodus 15 (BOKCV2)
1 ಆಗ ಮೋಶೆ ಮತ್ತು ಇಸ್ರಾಯೇಲರು ಯೆಹೋವ ದೇವರಿಗೆ ಈ ಹಾಡನ್ನು ಹಾಡಿದರು:“ನಾನು ಯೆಹೋವ ದೇವರಿಗೆ ಹಾಡುತ್ತೇನೆ.ಏಕೆಂದರೆ ಅವರು ಪ್ರಭಾವದಿಂದ ಜಯಶಾಲಿಯಾದರು.ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ದಬ್ಬಿದ್ದಾರೆ. 2 “ಯೆಹೋವ ದೇವರು ನನ್ನ ಬಲವೂ ಕೀರ್ತನೆಯೂ ಆಗಿದ್ದಾರೆ;ಅವರು ನನ್ನ ರಕ್ಷಣೆಯಾದರು;ಅವರು ನನ್ನ ದೇವರು, ಅವರನ್ನು ಕೊಂಡಾಡುವೆನು;ಅವರು ನನ್ನ ತಂದೆಯ ದೇವರು, ನಾನು ಅವರನ್ನು ಘನಪಡಿಸುವೆನು. 3 ಯೆಹೋವ ದೇವರು ಯುದ್ಧವೀರರು;ಯೆಹೋವ ದೇವರು ಎಂಬುದೇ ಅವರ ಹೆಸರು. 4 ಅವರು ಫರೋಹನ ರಥಗಳನ್ನೂ,ಅವನ ಸ್ಯೆನ್ಯವನ್ನೂ ಸಮುದ್ರದಲ್ಲಿ ಅಲ್ಲಾಡಿಸಿ ಎಸೆದಿದ್ದಾರೆ.ಫರೋಹನ ಅತ್ಯುತ್ತಮ ಅಧಿಕಾರಿಗಳು ಸಹಕೆಂಪು ಸಮುದ್ರದಲ್ಲಿ ಮುಳುಗಿ ಹೋದರು. 5 ಆಳವಾದ ಜಲರಾಶಿ ಅವರನ್ನು ಮುಚ್ಚಿಕೊಂಡವು.ಅವರು ಕಲ್ಲಿನಂತೆ ಸಮುದ್ರದ ತಳಕ್ಕೆ ಮುಳುಗಿದರು. 6 ಯೆಹೋವ ದೇವರೇ, ನಿಮ್ಮ ಬಲಗೈಶಕ್ತಿಯಲ್ಲಿ ಮಹಿಮೆಯುಳ್ಳದ್ದಾಗಿದೆ;ಯೆಹೋವ ದೇವರೇ, ನಿಮ್ಮ ಬಲಗೈಶತ್ರುವನ್ನು ಜಜ್ಜಿ ಪುಡಿ ಮಾಡಿತು. 7 “ನಿಮ್ಮ ಮಹತ್ತಾದ ಘನತೆಯಲ್ಲಿನಿಮಗೆ ವಿರೋಧವಾಗಿ ಎದ್ದವರನ್ನು ಕೆಡವಿಬಿಟ್ಟಿರುವಿರಿ.ನಿಮ್ಮ ಕೋಪವು ಬೆಂಕಿಯಂತೆ ಕಾರಿದೆ;ಅದು ಅವರನ್ನು ಕೋಲಿನಂತೆ ದಹಿಸಿತು. 8 ನೀವು ಬೀಸಿದ ಬಿರುಸಾದ ಗಾಳಿಯಿಂದನೀರು ಒಟ್ಟುಗೂಡಿದವು.ಪ್ರವಾಹಗಳು ರಾಶಿಯಂತೆ ನಿಂತವು.ಜಲರಾಶಿಗಳು ಸಮುದ್ರದ ಮಧ್ಯದಲ್ಲಿ ಗಟ್ಟಿಯಾದವು. 9 ಶತ್ರುವು ಹೆಮ್ಮೆಯಿಂದ ಹೀಗೆ ಮಾತನಾಡಿಕೊಳ್ಳುತ್ತಿದ್ದರು,‘ನಾನು ಹಿಂದಟ್ಟುವೆನು, ಅವರನ್ನು ಹಿಡಿಯುವೆನು,ನಾನು ಅವರ ಕೊಳ್ಳೆಯನ್ನು ಹಂಚುವೆನು;ನನ್ನ ಆಶೆಗಳು ಅವರಿಂದ ತೃಪ್ತಿ ಹೊಂದುವುವು;ನಾನು ನನ್ನ ಖಡ್ಗವನ್ನು ಹಿರಿಯುವೆನು;ನನ್ನ ಕೈ ಅವರನ್ನು ಸಂಹಾರ ಮಾಡುವುದು.’ 10 ನೀವು ನಿಮ್ಮ ಶ್ವಾಸ ಊದಿದಾಗಸಮುದ್ರವು ಅವರನ್ನು ನುಂಗಿಕೊಂಡಿತು.ಅವರು ಸೀಸದಂತೆಮಹಾಸಾಗರದಲ್ಲಿ ಮುಳುಗಿ ಹೋದರು. 11 ಯೆಹೋವ ದೇವರೇ,ನಿಮ್ಮ ಹಾಗೆ ಯಾರಿದ್ದಾರೆ?ಪರಿಶುದ್ಧತ್ವದಲ್ಲಿ ವೈಭವ ಹೊಂದಿದವರೂ,ಮಹಿಮೆಯಲ್ಲಿ ಅತಿಶಯರೂ,ಅದ್ಭುತಗಳನ್ನು ಮಾಡುವವರೂ ಆದನಿಮ್ಮ ಹಾಗೆ ಯಾರಿದ್ದಾರೆ? 12 “ನೀವು ನಿಮ್ಮ ಬಲಗೈಯನ್ನು ಚಾಚಲುಭೂಮಿಯು ಅವರನ್ನು ನುಂಗಿತು. 13 ನೀವು ವಿಮೋಚಿಸಿದ ಜನರನ್ನುನೀವು ನಿಮ್ಮ ಪ್ರೀತಿಯಿಂದ ನಡೆಸಿದ್ದೀರಿ.ನೀವು ಅವರನ್ನು ನಿಮ್ಮ ಬಲದಿಂದನಿಮ್ಮ ಪರಿಶುದ್ಧ ನಿವಾಸಕ್ಕೆ ನಡೆಸಿದ್ದೀರಿ. 14 ಜನರು ಇದನ್ನು ಕೇಳಿದಾಗ ಭಯಪಡುವರು.ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವುದು. 15 ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳುವರು;ಕಂಪನವು ಮೋವಾಬಿನ ಬಲಿಷ್ಠರನ್ನು ಹಿಡಿಯುವುದು;ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು. 16 ಭಯವೂ ಹೆದರಿಕೆಯೂ ಅವರಿಗಾಗುವುದು;ನಿಮ್ಮ ಜನರು ದಾಟಿ ಹೋಗುವವರೆಗೆ ಯೆಹೋವ ದೇವರೇ,ನೀವು ಕೊಂಡುಕೊಂಡ ಜನರು ದಾಟಿಹೋಗುವವರೆಗೆನಿಮ್ಮ ಬಾಹುವಿನ ದೊಡ್ಡಸ್ತಿಕೆಯಿಂದಅವರು ಕಲ್ಲಿನಂತೆ ಸ್ತಬ್ಧರಾಗಿರುವರು. 17 ಅವರನ್ನು ಒಳಗೆ ಬರಮಾಡಿ, ಯೆಹೋವ ದೇವರೇ,ನಿಮ್ಮ ಕೈಗಳು ಸ್ಥಾಪಿಸಿದ ಪರಿಶುದ್ಧ ನಿವಾಸದಲ್ಲಿಯೂಯೆಹೋವ ದೇವರೇ, ನೀವು ವಾಸಿಸುವುದಕ್ಕೆ ಮಾಡಿಕೊಂಡಿರುವನಿಮ್ಮ ಸ್ವತ್ತಾಗಿರುವ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿರಿ. 18 “ಯೆಹೋವ ದೇವರುಯುಗಯುಗಾಂತರಗಳವರೆಗೆ ಆಳುವರು.” 19 ಫರೋಹನ ಕುದುರೆಗಳು ಅವನ ರಥಗಳ ಮತ್ತು ಸವಾರರ ಸಂಗಡ ಸಮುದ್ರದೊಳಗೆ ಬಂದಾಗ, ಯೆಹೋವ ದೇವರು ಸಮುದ್ರದ ನೀರನ್ನು ಅವರ ಮೇಲೆ ತಿರುಗಿ ಬರಮಾಡಿದರು. ಆದರೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿನ ಒಣನೆಲದ ಮೇಲೆ ದಾಟಿಹೋದರು. 20 ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋದರಿ ಮಿರ್ಯಾಮಳು ಕೈಯಲ್ಲಿ ತಾಳವನ್ನು ತೆಗೆದುಕೊಂಡಳು. ಸ್ತ್ರೀಯರೆಲ್ಲರೂ ತಾಳಗಳನ್ನು ಹಿಡಿದುಕೊಂಡು ನಾಟ್ಯವಾಡುತ್ತಾ, ಆಕೆಯನ್ನು ಹಿಂಬಾಲಿಸಿ ಹೊರಹೊರಟರು. 21 ಮಿರ್ಯಾಮಳು ಅವರಿಗೆ ಹೀಗೆ ಹಾಡಿದಳು:“ಯೆಹೋವ ದೇವರಿಗೆ ನೀವು ಹಾಡಿರಿ,ಅವರು ಮಹೋನ್ನತದಲ್ಲಿದ್ದಾರೆ;ಕುದುರೆಯನ್ನೂ ಸವಾರರನ್ನೂಸಮುದ್ರದಲ್ಲಿ ಮುಣುಗಿಸಿಬಿಟ್ಟರು.” 22 ಆಮೇಲೆ ಮೋಶೆಯು ಇಸ್ರಾಯೇಲರನ್ನು ಕೆಂಪು ಸಮುದ್ರದಿಂದ ನಡೆಸಿದನು. ಅವರು ಶೂರಿನ ಮರುಭೂಮಿಯೊಳಗೆ ಹೋದರು. ಅವರು ಮರುಭೂಮಿಯಲ್ಲಿ ಮೂರು ದಿನಗಳು ಪ್ರಯಾಣಮಾಡಿದರೂ ನೀರನ್ನು ಕಂಡುಕೊಳ್ಳಲಿಲ್ಲ. 23 ಅವರು ಮಾರಾ ಎಂಬಲ್ಲಿಗೆ ಬಂದ ಮೇಲೆ ಅಲ್ಲಿಯ ನೀರನ್ನು ಕುಡಿಯಲಾರದೆ ಇದ್ದರು; ಅದು ಕಹಿಯಾಗಿತ್ತು. ಆದಕಾರಣ ಅದರ ಹೆಸರು “ಮಾರಾ” ಎಂದು ಕರೆಯಲಾಯಿತು. 24 ಆದ್ದರಿಂದ ಜನರು, “ನಾವು ಏನು ಕುಡಿಯೋಣ?” ಎಂದು ಹೇಳಿ, ಮೋಶೆಗೆ ವಿರೋಧವಾಗಿ ಗೊಣಗುಟ್ಟಿದರು. 25 ಅವನು ಯೆಹೋವ ದೇವರಿಗೆ ಮೊರೆಯಿಟ್ಟನು. ಯೆಹೋವ ದೇವರು ಅವನಿಗೆ ಒಂದು ಗಿಡವನ್ನು ತೋರಿಸಿದರು. ಅವನು ಅದನ್ನು ನೀರಿನಲ್ಲಿ ಹಾಕಿದಾಗ, ನೀರು ಸಿಹಿಯಾಗಿ ಬಿಟ್ಟಿತು.ಅಲ್ಲಿ ದೇವರು ಅವರಿಗಾಗಿ ಒಂದು ನಿಯಮವನ್ನೂ ಒಂದು ಶಾಸನವನ್ನೂ ಮಾಡಿದರು. ಅಲ್ಲಿಯೇ ದೇವರು ಅವರನ್ನು ಪರೀಕ್ಷಿಸಿದರು. 26 ದೇವರು, “ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ಶ್ರದ್ಧೆಯಿಂದ ಕಿವಿಗೊಟ್ಟು, ಅವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ, ಅವರ ಆಜ್ಞೆಗಳಿಗೆ ಕಿವಿಗೊಟ್ಟು, ಅವರ ನಿಯಮಗಳನ್ನು ಕೈಗೊಂಡರೆ, ಈಜಿಪ್ಟಿನ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿಮ್ಮ ಮೇಲೆ ಬರಮಾಡುವುದಿಲ್ಲ. ನಿಮ್ಮನ್ನು ಸ್ವಸ್ಥಪಡಿಸುವ ಯೆಹೋವ ದೇವರು ನಾನೇ ಆಗಿದ್ದೇನೆ,” ಎಂದು ಪ್ರಕಟಪಡಿಸಿದರು. 27 ತರುವಾಯ ಇಸ್ರಾಯೇಲರು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದವು. ಅವರು ಆ ನೀರಿನ ಬಳಿಯಲ್ಲಿ ಇಳಿದುಕೊಂಡರು.
In Other Versions
Exodus 15 in the ANGEFD
Exodus 15 in the ANTPNG2D
Exodus 15 in the AS21
Exodus 15 in the BAGH
Exodus 15 in the BBPNG
Exodus 15 in the BBT1E
Exodus 15 in the BDS
Exodus 15 in the BEV
Exodus 15 in the BHAD
Exodus 15 in the BIB
Exodus 15 in the BLPT
Exodus 15 in the BNT
Exodus 15 in the BNTABOOT
Exodus 15 in the BNTLV
Exodus 15 in the BOATCB
Exodus 15 in the BOATCB2
Exodus 15 in the BOBCV
Exodus 15 in the BOCNT
Exodus 15 in the BOECS
Exodus 15 in the BOGWICC
Exodus 15 in the BOHCB
Exodus 15 in the BOHCV
Exodus 15 in the BOHLNT
Exodus 15 in the BOHNTLTAL
Exodus 15 in the BOICB
Exodus 15 in the BOILNTAP
Exodus 15 in the BOITCV
Exodus 15 in the BOKCV
Exodus 15 in the BOKHWOG
Exodus 15 in the BOKSSV
Exodus 15 in the BOLCB
Exodus 15 in the BOLCB2
Exodus 15 in the BOMCV
Exodus 15 in the BONAV
Exodus 15 in the BONCB
Exodus 15 in the BONLT
Exodus 15 in the BONUT2
Exodus 15 in the BOPLNT
Exodus 15 in the BOSCB
Exodus 15 in the BOSNC
Exodus 15 in the BOTLNT
Exodus 15 in the BOVCB
Exodus 15 in the BOYCB
Exodus 15 in the BPBB
Exodus 15 in the BPH
Exodus 15 in the BSB
Exodus 15 in the CCB
Exodus 15 in the CUV
Exodus 15 in the CUVS
Exodus 15 in the DBT
Exodus 15 in the DGDNT
Exodus 15 in the DHNT
Exodus 15 in the DNT
Exodus 15 in the ELBE
Exodus 15 in the EMTV
Exodus 15 in the ESV
Exodus 15 in the FBV
Exodus 15 in the FEB
Exodus 15 in the GGMNT
Exodus 15 in the GNT
Exodus 15 in the HARY
Exodus 15 in the HNT
Exodus 15 in the IRVA
Exodus 15 in the IRVB
Exodus 15 in the IRVG
Exodus 15 in the IRVH
Exodus 15 in the IRVK
Exodus 15 in the IRVM
Exodus 15 in the IRVM2
Exodus 15 in the IRVO
Exodus 15 in the IRVP
Exodus 15 in the IRVT
Exodus 15 in the IRVT2
Exodus 15 in the IRVU
Exodus 15 in the ISVN
Exodus 15 in the JSNT
Exodus 15 in the KAPI
Exodus 15 in the KBT1ETNIK
Exodus 15 in the KBV
Exodus 15 in the KJV
Exodus 15 in the KNFD
Exodus 15 in the LBA
Exodus 15 in the LBLA
Exodus 15 in the LNT
Exodus 15 in the LSV
Exodus 15 in the MAAL
Exodus 15 in the MBV
Exodus 15 in the MBV2
Exodus 15 in the MHNT
Exodus 15 in the MKNFD
Exodus 15 in the MNG
Exodus 15 in the MNT
Exodus 15 in the MNT2
Exodus 15 in the MRS1T
Exodus 15 in the NAA
Exodus 15 in the NASB
Exodus 15 in the NBLA
Exodus 15 in the NBS
Exodus 15 in the NBVTP
Exodus 15 in the NET2
Exodus 15 in the NIV11
Exodus 15 in the NNT
Exodus 15 in the NNT2
Exodus 15 in the NNT3
Exodus 15 in the PDDPT
Exodus 15 in the PFNT
Exodus 15 in the RMNT
Exodus 15 in the SBIAS
Exodus 15 in the SBIBS
Exodus 15 in the SBIBS2
Exodus 15 in the SBICS
Exodus 15 in the SBIDS
Exodus 15 in the SBIGS
Exodus 15 in the SBIHS
Exodus 15 in the SBIIS
Exodus 15 in the SBIIS2
Exodus 15 in the SBIIS3
Exodus 15 in the SBIKS
Exodus 15 in the SBIKS2
Exodus 15 in the SBIMS
Exodus 15 in the SBIOS
Exodus 15 in the SBIPS
Exodus 15 in the SBISS
Exodus 15 in the SBITS
Exodus 15 in the SBITS2
Exodus 15 in the SBITS3
Exodus 15 in the SBITS4
Exodus 15 in the SBIUS
Exodus 15 in the SBIVS
Exodus 15 in the SBT
Exodus 15 in the SBT1E
Exodus 15 in the SCHL
Exodus 15 in the SNT
Exodus 15 in the SUSU
Exodus 15 in the SUSU2
Exodus 15 in the SYNO
Exodus 15 in the TBIAOTANT
Exodus 15 in the TBT1E
Exodus 15 in the TBT1E2
Exodus 15 in the TFTIP
Exodus 15 in the TFTU
Exodus 15 in the TGNTATF3T
Exodus 15 in the THAI
Exodus 15 in the TNFD
Exodus 15 in the TNT
Exodus 15 in the TNTIK
Exodus 15 in the TNTIL
Exodus 15 in the TNTIN
Exodus 15 in the TNTIP
Exodus 15 in the TNTIZ
Exodus 15 in the TOMA
Exodus 15 in the TTENT
Exodus 15 in the UBG
Exodus 15 in the UGV
Exodus 15 in the UGV2
Exodus 15 in the UGV3
Exodus 15 in the VBL
Exodus 15 in the VDCC
Exodus 15 in the YALU
Exodus 15 in the YAPE
Exodus 15 in the YBVTP
Exodus 15 in the ZBP