Job 39 (BOKCV2)
1 “ಕಾಡುಮೇಕೆಗಳು ಈಯುವ ಕಾಲವನ್ನು ನೀನು ತಿಳಿದಿರುವೆಯಾ?ಜಿಂಕೆಗಳ ಹೆರಿಗೆಯನ್ನು ನೋಡಿರುವೆಯಾ? 2 ಅವುಗಳ ಗರ್ಭ ತುಂಬುವ ತಿಂಗಳುಗಳನ್ನು ಎಣಿಸಿರುವೆಯಾ?ಅವು ಈಯುವ ಕಾಲವನ್ನು ತಿಳಿದಿರುವಿಯೋ? 3 ಅವು ಬಗ್ಗಿ ಮರಿಗಳನ್ನು ಹಾಕುತ್ತವೆ;ಅದರ ಪ್ರಸವ ವೇದನೆಯನ್ನು ಮರೆತುಬಿಡುತ್ತವೆ. 4 ಅವುಗಳ ಮರಿಗಳು ಪುಷ್ಟಿಯಾಗಿ ಕಾಡಿನಲ್ಲಿ ಬೆಳೆಯುತ್ತವೆ;ಅವು ತಾಯಿಯನ್ನು ಅಗಲಿದ ಬಳಿಕ ತಿರುಗಿ ಬರುವುದಿಲ್ಲ. 5 “ಕಾಡುಕತ್ತೆಗೆ ಸ್ವತಂತ್ರವನ್ನು ಕೊಟ್ಟವರು ಯಾರು?ಕಾಡುಕತ್ತೆಯ ಕಟ್ಟನ್ನು ಬಿಚ್ಚಿದವರು ಯಾರು? 6 ಮರುಭೂಮಿಯನ್ನು ಅದರ ನಿವಾಸವನ್ನಾಗಿ ಕೊಟ್ಟಿರುವುದು ನಾನೇ.ಸವಳುಬಯಲನ್ನು ಅದರ ವಾಸ ಸ್ಥಳವಾಗಿಯೂ ನೇಮಿಸಿದ್ದು ನಾನೇ. 7 ಪಟ್ಟಣದ ಗದ್ದಲವನ್ನು ಕಾಡುಕತ್ತೆಯು ಧಿಕ್ಕರಿಸುತ್ತದೆ;ಅದು ಓಡಿಸುವವನ ಕೂಗನ್ನು ಲಕ್ಷಿಸುವುದಿಲ್ಲ. 8 ಬೆಟ್ಟಗಳಲ್ಲಿ ಕಂಡದ್ದೆಲ್ಲಾ ಅದರ ಮೇವು;ಹಸುರಾಗಿರುವುದನ್ನು ಎಲ್ಲಿದ್ದರೂ ಹುಡುಕುತ್ತಲೇ ಇರುವುದು. 9 “ಕಾಡುಕೋಣವು ನಿನ್ನ ಸೇವೆ ಮಾಡಲು ಎಂದಾದರೂ ಒಪ್ಪಿದೆಯೆ?ಅದು ರಾತ್ರಿಯಲ್ಲಿ ನಿನ್ನ ಗೋದಲಿಯ ಬಳಿಯಲ್ಲಿ ಉಳಿದುಕೊಂಡಿದೆಯೆ? 10 ಕಾಡುಕೋಣವನ್ನು ಹಗ್ಗದಿಂದ ನೇಗಿಲ ಸಾಲಿಗೆ ಕಟ್ಟಿರುವೆಯಾ?ಅದು ಕಣಿವೆಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೆ? 11 ಅದರ ಶಕ್ತಿ ಹೆಚ್ಚಾಗಿರುವುದರಿಂದ ನೀನು ಕೆಲಸಕ್ಕಾಗಿ ಅದನ್ನೇ ನಂಬಿರುವೆಯಾ?ನಿನ್ನ ಭಾರವಾದ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯಾ? 12 ಅದು ನಿನ್ನ ಧಾನ್ಯ ತೆನೆಗಳನ್ನು ಮನೆಗೆ ತರುವುದೆಂದು ನಂಬುವೆಯಾ?ನಿನ್ನ ಕಣದಲ್ಲಿ ಕಾಳು ಕೂಡಿಸುವದೆಂದೂ ಅದನ್ನು ನಿರೀಕ್ಷಿಸುವೆಯಾ? 13 “ಉಷ್ಟ್ರಪಕ್ಷಿ ಸಂತೋಷದಿಂದ ರೆಕ್ಕೆ ಬಡಿಯುತ್ತದೆ.ಆದರೂ ಕೊಕ್ಕರೆಯ ರೆಕ್ಕೆ ಗರಿಗಳೊಂದಿಗೆಅವುಗಳನ್ನು ಹೋಲಿಸಲಾಗದು. 14 ಏಕೆಂದರೆ ಉಷ್ಟ್ರಪಕ್ಷಿಯು ತನ್ನ ಮೊಟ್ಟೆಗಳನ್ನು ನೆಲದಲ್ಲಿ ಬಿಟ್ಟು,ಕೇವಲ ಮರಳಿನಿಂದ ಅವುಗಳಿಗೆ ಕಾವು ಕೊಡುತ್ತದೆ. 15 ಜನರು ಕಾಲಿನಿಂದ ಮೊಟ್ಟೆಗಳನ್ನು ಮೆಟ್ಟಿಯಾರು,ಇಲ್ಲವೆ ಕಾಡುಮೃಗ ಅದನ್ನು ಅವುಗಳನ್ನು ತುಳಿದೀತು ಎಂಬ ಚಿಂತೆ ಆ ಪಕ್ಷಿಗೆ ಇಲ್ಲ. 16 ತನ್ನ ಮರಿಗಳನ್ನು ತನ್ನವುಗಳಲ್ಲ ಎಂಬಂತೆ ಕ್ರೂರವಾಗಿ ನಡೆಸುತ್ತದೆ;ಉಷ್ಟ್ರಪಕ್ಷಿಯು ತನ್ನ ಹೆರಿಗೆ ವ್ಯರ್ಥವಾದರೂ ಅದಕ್ಕೆ ಚಿಂತೆ ಇಲ್ಲ. 17 ಏಕೆಂದರೆ ದೇವರು ಉಷ್ಟ್ರಪಕ್ಷಿಗೆ ಜ್ಞಾನವನ್ನು ಮರೆಮಾಡಿ,ತಿಳುವಳಿಕೆಯನ್ನು ಅದಕ್ಕೆ ಕೊಡಲಿಲ್ಲವಷ್ಟೆ. 18 ಆದರೂ ಆ ಪಕ್ಷಿ ತನ್ನ ರೆಕ್ಕೆಗಳನ್ನು ಹರಡಿ ಓಡಿದಾಗ,ಅದು ಕುದುರೆ ಸವಾರನನ್ನು ಸಹ ನೋಡಿ ಅಣಕಿಸುತ್ತದೆ. 19 “ಯೋಬನೇ, ಕುದುರೆಗೆ ಶಕ್ತಿ ಕೊಟ್ಟವನು ನೀನೋ?ಅದರ ಕೊರಳಿಗೆ ಜುಟ್ಟುಗುಡುಗನ್ನು ಹೊದಿಸಿದವನು ನೀನೋ? 20 ಮಿಡತೆಯ ಹಾಗೆ ಅದನ್ನು ಹಾರುವಂತೆ ಮಾಡಿದವನು ನೀನೋ?ಅದರ ಕೆನೆತದ ಪ್ರಭಾವ ಭಯಂಕರವಾಗಿದೆಯಲ್ಲಾ? 21 ಕುದುರೆಯು ನೆಲವನ್ನು ಕೆರೆಯುತ್ತಾ ತನ್ನ ಶಕ್ತಿಯಲ್ಲಿ ಹಿಗ್ಗುತ್ತದೆ;ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೊರಡುತ್ತದೆ. 22 ಭಯವನ್ನು ಕಂಡು ನಗುತ್ತದೆ; ಯಾವುದಕ್ಕೂ ಹೆದರುವುದಿಲ್ಲ;ಖಡ್ಗಕ್ಕೆ ಸಹ ಹಿಂದೆಗೆಯುವುದಿಲ್ಲ. 23 ಅದರ ಮೇಲೆ ಬತ್ತಳಿಕೆಯೂ,ಪ್ರಜ್ವಲಿಸುವ ಭಲ್ಲೆಯೂ, ಭರ್ಜಿಯೂ ಥಳಥಳಿಸುತ್ತವೆ. 24 ಕುದುರೆ ಕಹಳೆಯ ನಾದವನ್ನು ಕೇಳಿದರೂಭೀಕರ ಉತ್ಸಾಹದಲ್ಲಿ ನೆಲನುಂಗುವಂತೆ ನಿಲ್ಲದೆ ಓಡುತ್ತದೆ. 25 ರಣಕಹಳೆ ಮೊಳಗಿದಾಗ ಕುದುರೆ ಕೆನೆಯುತ್ತದೆ.ಅದು ಅಧಿಪತಿಗಳ ಗರ್ಜನೆಯನ್ನೂ ಕಾಳಗದ ಆರ್ಭಟವನ್ನೂದೂರದಿಂದಲೇ ಮೂಸಿ ನೋಡಿ ತಿಳಿಯುತ್ತದೆ. 26 “ಯೋಬನೇ, ಗಿಡುಗವು ತನ್ನ ರೆಕ್ಕೆಗಳನ್ನು ಹರಡಿ,ದಕ್ಷಿಣದ ಕಡೆಗೆ ಹಾರುವುದು ನಿನ್ನ ಜ್ಞಾನದಿಂದಲೋ? 27 ರಣಹದ್ದು ಎತ್ತರಕ್ಕೆ ಹಾರುವುದೂ,ಉನ್ನತ ಸ್ಥಳದಲ್ಲಿ ಗೂಡುಕಟ್ಟುವುದು ನಿನ್ನ ಅಪ್ಪಣೆಯಿಂದಲೋ? 28 ಅದು ಬಂಡೆಯ ಸಂದುಗಳಲ್ಲಿ ರಾತ್ರಿಯನ್ನು ಕಳೆಯುತ್ತದೆ;ಶಿಲಾಶಿಖರದ ದುರ್ಗಗಳಲ್ಲಿಯೂ ಅದು ತಂಗುತ್ತದೆ. 29 ಅಲ್ಲಿಂದಲೇ ಆಹಾರವನ್ನು ಹುಡುಕುತ್ತದೆ;ಅದರ ಕಣ್ಣುಗಳು ದೂರದಿಂದಲೇ ನೋಡುತ್ತವೆ. 30 ಅದರ ಮರಿಗಳು ತಂದ ಬೇಟೆಯನ್ನು ತಿಂದುಬಿಡುತ್ತವೆ;ಹೆಣ ಬಿದ್ದಲ್ಲಿಯೇ ರಣಹದ್ದು ಇರುವುದು.”
In Other Versions
Job 39 in the ANGEFD
Job 39 in the ANTPNG2D
Job 39 in the AS21
Job 39 in the BAGH
Job 39 in the BBPNG
Job 39 in the BBT1E
Job 39 in the BDS
Job 39 in the BEV
Job 39 in the BHAD
Job 39 in the BIB
Job 39 in the BLPT
Job 39 in the BNT
Job 39 in the BNTABOOT
Job 39 in the BNTLV
Job 39 in the BOATCB
Job 39 in the BOATCB2
Job 39 in the BOBCV
Job 39 in the BOCNT
Job 39 in the BOECS
Job 39 in the BOGWICC
Job 39 in the BOHCB
Job 39 in the BOHCV
Job 39 in the BOHLNT
Job 39 in the BOHNTLTAL
Job 39 in the BOICB
Job 39 in the BOILNTAP
Job 39 in the BOITCV
Job 39 in the BOKCV
Job 39 in the BOKHWOG
Job 39 in the BOKSSV
Job 39 in the BOLCB
Job 39 in the BOLCB2
Job 39 in the BOMCV
Job 39 in the BONAV
Job 39 in the BONCB
Job 39 in the BONLT
Job 39 in the BONUT2
Job 39 in the BOPLNT
Job 39 in the BOSCB
Job 39 in the BOSNC
Job 39 in the BOTLNT
Job 39 in the BOVCB
Job 39 in the BOYCB
Job 39 in the BPBB
Job 39 in the BPH
Job 39 in the BSB
Job 39 in the CCB
Job 39 in the CUV
Job 39 in the CUVS
Job 39 in the DBT
Job 39 in the DGDNT
Job 39 in the DHNT
Job 39 in the DNT
Job 39 in the ELBE
Job 39 in the EMTV
Job 39 in the ESV
Job 39 in the FBV
Job 39 in the FEB
Job 39 in the GGMNT
Job 39 in the GNT
Job 39 in the HARY
Job 39 in the HNT
Job 39 in the IRVA
Job 39 in the IRVB
Job 39 in the IRVG
Job 39 in the IRVH
Job 39 in the IRVK
Job 39 in the IRVM
Job 39 in the IRVM2
Job 39 in the IRVO
Job 39 in the IRVP
Job 39 in the IRVT
Job 39 in the IRVT2
Job 39 in the IRVU
Job 39 in the ISVN
Job 39 in the JSNT
Job 39 in the KAPI
Job 39 in the KBT1ETNIK
Job 39 in the KBV
Job 39 in the KJV
Job 39 in the KNFD
Job 39 in the LBA
Job 39 in the LBLA
Job 39 in the LNT
Job 39 in the LSV
Job 39 in the MAAL
Job 39 in the MBV
Job 39 in the MBV2
Job 39 in the MHNT
Job 39 in the MKNFD
Job 39 in the MNG
Job 39 in the MNT
Job 39 in the MNT2
Job 39 in the MRS1T
Job 39 in the NAA
Job 39 in the NASB
Job 39 in the NBLA
Job 39 in the NBS
Job 39 in the NBVTP
Job 39 in the NET2
Job 39 in the NIV11
Job 39 in the NNT
Job 39 in the NNT2
Job 39 in the NNT3
Job 39 in the PDDPT
Job 39 in the PFNT
Job 39 in the RMNT
Job 39 in the SBIAS
Job 39 in the SBIBS
Job 39 in the SBIBS2
Job 39 in the SBICS
Job 39 in the SBIDS
Job 39 in the SBIGS
Job 39 in the SBIHS
Job 39 in the SBIIS
Job 39 in the SBIIS2
Job 39 in the SBIIS3
Job 39 in the SBIKS
Job 39 in the SBIKS2
Job 39 in the SBIMS
Job 39 in the SBIOS
Job 39 in the SBIPS
Job 39 in the SBISS
Job 39 in the SBITS
Job 39 in the SBITS2
Job 39 in the SBITS3
Job 39 in the SBITS4
Job 39 in the SBIUS
Job 39 in the SBIVS
Job 39 in the SBT
Job 39 in the SBT1E
Job 39 in the SCHL
Job 39 in the SNT
Job 39 in the SUSU
Job 39 in the SUSU2
Job 39 in the SYNO
Job 39 in the TBIAOTANT
Job 39 in the TBT1E
Job 39 in the TBT1E2
Job 39 in the TFTIP
Job 39 in the TFTU
Job 39 in the TGNTATF3T
Job 39 in the THAI
Job 39 in the TNFD
Job 39 in the TNT
Job 39 in the TNTIK
Job 39 in the TNTIL
Job 39 in the TNTIN
Job 39 in the TNTIP
Job 39 in the TNTIZ
Job 39 in the TOMA
Job 39 in the TTENT
Job 39 in the UBG
Job 39 in the UGV
Job 39 in the UGV2
Job 39 in the UGV3
Job 39 in the VBL
Job 39 in the VDCC
Job 39 in the YALU
Job 39 in the YAPE
Job 39 in the YBVTP
Job 39 in the ZBP