Revelation 3 (BOKCV2)
1 “ಸಾರ್ದಿಸಿನಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ದೇವರ ಏಳು ಆತ್ಮಗಳನ್ನೂ ಏಳು ನಕ್ಷತ್ರಗಳನ್ನೂ ಹಿಡಿದುಕೊಂಡಿರುವವರು ಹೇಳುವುದೇನೆಂದರೆ: ನಾನು ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು. ಜೀವಿಸುವವನು ಎಂಬ ಹೆಸರು ನಿನಗಿದ್ದರೂ ಸತ್ತವನಾಗಿದ್ದೀಯೆ. 2 ಎಚ್ಚರವಾಗು, ಸಾಯುವ ಹಾಗಿರುವ ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳು ನನಗೆ ಪರಿಪೂರ್ಣವಾಗಿ ಕಂಡುಬರಲಿಲ್ಲ. 3 ಆದ್ದರಿಂದ ನೀನು ಹೊಂದಿದ ಉಪದೇಶವನ್ನೂ ಕೇಳಿದ ರೀತಿಯನ್ನೂ ಜ್ಞಾಪಿಸಿಕೊಂಡು, ಅದನ್ನು ಕೈಕೊಳ್ಳುವವನಾಗಿ ಪಶ್ಚಾತ್ತಾಪಪಡು, ನೀನು ಎಚ್ಚರವಾಗಿರದಿದ್ದರೆ, ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಎಂದು ನಿನಗೆ ಯಾವ ರೀತಿಯಲ್ಲಿಯೂ ತಿಳಿಯದು. 4 ಆದರೂ ತಮ್ಮ ವಸ್ತ್ರಗಳನ್ನು ಮೈಲಿಗೆ ಮಾಡಿಕೊಳ್ಳದಿರುವ ಕೆಲವು ಜನರು ಸಾರ್ದಿಸಿ ಪಟ್ಟಣದಲ್ಲಿ ಇದ್ದಾರೆ, ಅವರು ಯೋಗ್ಯರಾಗಿರುವುದರಿಂದ ಬಿಳಿವಸ್ತ್ರಗಳನ್ನು ಧರಿಸಿಕೊಂಡು ನನ್ನ ಜೊತೆಯಲ್ಲಿ ನಡೆಯುವರು. 5 ಜಯಹೊಂದುವವರಿಗೆ ಹೀಗೆ ಬಿಳಿಯ ವಸ್ತ್ರಗಳನ್ನು ಹೊದಿಸಲಾಗುವುದು. ಅವರ ಹೆಸರನ್ನು ಜೀವಬಾಧ್ಯರ ಪಟ್ಟಿಯಿಂದ ನಾನು ಅಳಿಸಿಬಿಡದೆ, ಅವರ ಹೆಸರನ್ನು ನನ್ನ ತಂದೆಯ ಮುಂದೆಯೂ ಅವರ ದೂತರ ಮುಂದೆಯೂ ಅರಿಕೆ ಮಾಡುವೆನು. 6 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ. 7 “ಫಿಲದೆಲ್ಫಿಯದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಪರಿಶುದ್ಧರೂ ಸತ್ಯವಂತರೂ ದಾವೀದನ ಬೀಗದ ಕೈಯುಳ್ಳವರೂ ಯಾರೂ ಮುಚ್ಚದಂತೆ ತೆರೆಯುವವರೂ ಯಾರೂ ತೆರೆಯದಂತೆ ಮುಚ್ಚುವವರೂ ಆಗಿರುವವರು ಹೇಳುವುದೇನೆಂದರೆ: 8 ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನಿನ್ನ ಶಕ್ತಿಯು ಸ್ವಲ್ಪವೇ ಆಗಿದ್ದರೂ ನೀನು ನನ್ನ ಹೆಸರನ್ನು ನಿರಾಕರಿಸದೆ, ನನ್ನ ವಾಕ್ಯವನ್ನು ಕಾಪಾಡಿಕೊಂಡಿದ್ದರಿಂದ, ನಿನ್ನೆದುರಿನಲ್ಲಿ ಒಂದು ದ್ವಾರವನ್ನು ತೆರೆದಿಟ್ಟಿದ್ದೇನೆ, ಅದನ್ನು ಯಾರೂ ಮುಚ್ಚಲಾರರು. 9 ತಾವು ಯೆಹೂದ್ಯರೆಂದು ಸುಳ್ಳಾಗಿ ಹೇಳಿಕೊಳ್ಳುವ ಸೈತಾನನ ಸಭಾಮಂದಿರದಿಂದ ಕೆಲವರು ಬಂದು ನಿನ್ನ ಪಾದಕ್ಕೆ ಬೀಳುವಂತೆಯೂ ನಿನ್ನನ್ನು ನಾನು ಪ್ರೀತಿಸಿದ್ದನ್ನು ತಿಳಿಯುವಂತೆಯೂ ಮಾಡುವೆನು. 10 ನೀನು ನನ್ನ ವಾಕ್ಯವನ್ನು ಸಹನೆಯಿಂದ ಕಾಪಾಡಿಕೊಂಡಿದ್ದರಿಂದ, ಭೂನಿವಾಸಿಗಳನ್ನು ಪರೀಕ್ಷಿಸಲು ಇಡೀ ಲೋಕದಲ್ಲೆಲ್ಲಾ ಬರಲಿರುವ ಶೋಧನೆಯ ಸಮಯದಲ್ಲಿ ನಾನು ಸಹ ನಿನ್ನನ್ನು ಸುರಕ್ಷಿತವಾಗಿಡುವೆನು. 11 ನಾನು ಬೇಗ ಬರುತ್ತೇನೆ. ನಿನ್ನ ಕಿರೀಟವನ್ನು ಯಾರೂ ಅಪಹರಿಸದಂತೆ ನಿನಗಿರುವುದನ್ನು ಹಿಡಿದುಕೊಂಡಿರು. 12 ಯಾರು ಜಯ ಹೊಂದುತ್ತಾರೋ, ಅವರನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಸ್ಥಾಪಿಸುವೆನು. ಅವರು ಎಂದಿಗೂ ಅದರೊಳಗಿಂದ ಹೊರಗೆ ಹೋಗುವುದಿಲ್ಲ. ನಾನು ನನ್ನ ದೇವರ ಹೆಸರನ್ನು ಪರಲೋಕದಲ್ಲಿರುವ ನನ್ನ ದೇವರಿಂದ ಇಳಿದು ಬರುವ ಹೊಸ ಯೆರೂಸಲೇಮಿನ ಹೆಸರನ್ನೂ ಹಾಗೂ ನನ್ನ ಹೊಸ ಹೆಸರನ್ನೂ ಅವರ ಮೇಲೆ ಬರೆಯುವೆನು. 13 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ. 14 “ಲವೊದಿಕೀಯದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಆಮೆನ್ ಎಂಬವರೂ ನಂಬಿಗಸ್ತರೂ ಸತ್ಯಸಾಕ್ಷಿಯೂ ದೇವರಿಂದಾದ ಸೃಷ್ಟಿಗೆ ಒಡೆಯರೂ ಆಗಿರುವವರು ಹೇಳುವುದೇನೆಂದರೆ: 15 ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನೀನು ತಣ್ಣಗೂ ಇಲ್ಲ, ಬಿಸಿಯೂ ಇಲ್ಲ, ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು. 16 ನೀನು ಬಿಸಿಯಾಗಲೀ, ತಣ್ಣಗಾಗಲೀ ಇಲ್ಲದೆ ಉಗುರುಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರಿ ಬಿಡುವೆನು. 17 ಏಕೆಂದರೆ ನೀನು ನಿನ್ನ ವಿಷಯದಲ್ಲಿ, ‘ನಾನು ಐಶ್ವರ್ಯವಂತನು, ನಾನು ಸಂಪಾದಕನಾಗಿದ್ದೇನೆ ಮತ್ತು ಕೊರತೆ ನನಗಿಲ್ಲ,’ ಎಂದು ಹೇಳಿಕೊಳ್ಳುತ್ತಿ. ಆದರೆ ನೀನು ಕೇವಲ ದುರವಸ್ಥೆಯುಳ್ಳವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬೆತ್ತಲೆಯಾದವನು ಎಂಬುದನ್ನು ತಿಳಿಯದೆ ಇದ್ದೀ. 18 ನೀನು ಸಿರಿವಂತನಾಗುವಂತೆ ಬೆಂಕಿಯಲ್ಲಿ ಪುಟಕ್ಕೆ ಹಾಕಿದ ಚಿನ್ನವನ್ನೂ ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಧರಿಸಿಕೊಳ್ಳುವುದಕ್ಕಾಗಿ ಬಿಳಿ ವಸ್ತ್ರಗಳನ್ನೂ ಕಣ್ಣು ಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವುದಕ್ಕಾಗಿ ಮುಲಾಮನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಾನು ನಿನಗೆ ಬುದ್ಧಿ ಹೇಳುತ್ತೇನೆ. 19 ನಾನು ಯಾರನ್ನು ಪ್ರೀತಿಸುತ್ತೇನೋ, ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀನು ಆಸಕ್ತನಾಗಿರು, ಪಶ್ಚಾತ್ತಾಪಪಡು. 20 ಇಗೋ, ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ. ಯಾರಾದರೂ ನನ್ನ ಸ್ವರವನ್ನು ಕೇಳಿ, ಬಾಗಿಲನ್ನು ತೆರೆದರೆ, ನಾನು ಪ್ರವೇಶ ಮಾಡಿ, ಆ ವ್ಯಕ್ತಿಯ ಸಂಗಡ ಊಟಮಾಡುವೆನು. ಅವರೂ ನನ್ನ ಸಂಗಡ ಊಟಮಾಡುವರು. 21 ನಾನು ಜಯಹೊಂದಿ, ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕುಳಿತುಕೊಂಡ ಹಾಗೆ, ಜಯಶಾಲಿಯಾದವನನ್ನು ನನ್ನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವೆನು. 22 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ.”
In Other Versions
Revelation 3 in the ANGEFD
Revelation 3 in the ANTPNG2D
Revelation 3 in the AS21
Revelation 3 in the BAGH
Revelation 3 in the BBPNG
Revelation 3 in the BBT1E
Revelation 3 in the BDS
Revelation 3 in the BEV
Revelation 3 in the BHAD
Revelation 3 in the BIB
Revelation 3 in the BLPT
Revelation 3 in the BNT
Revelation 3 in the BNTABOOT
Revelation 3 in the BNTLV
Revelation 3 in the BOATCB
Revelation 3 in the BOATCB2
Revelation 3 in the BOBCV
Revelation 3 in the BOCNT
Revelation 3 in the BOECS
Revelation 3 in the BOGWICC
Revelation 3 in the BOHCB
Revelation 3 in the BOHCV
Revelation 3 in the BOHLNT
Revelation 3 in the BOHNTLTAL
Revelation 3 in the BOICB
Revelation 3 in the BOILNTAP
Revelation 3 in the BOITCV
Revelation 3 in the BOKCV
Revelation 3 in the BOKHWOG
Revelation 3 in the BOKSSV
Revelation 3 in the BOLCB
Revelation 3 in the BOLCB2
Revelation 3 in the BOMCV
Revelation 3 in the BONAV
Revelation 3 in the BONCB
Revelation 3 in the BONLT
Revelation 3 in the BONUT2
Revelation 3 in the BOPLNT
Revelation 3 in the BOSCB
Revelation 3 in the BOSNC
Revelation 3 in the BOTLNT
Revelation 3 in the BOVCB
Revelation 3 in the BOYCB
Revelation 3 in the BPBB
Revelation 3 in the BPH
Revelation 3 in the BSB
Revelation 3 in the CCB
Revelation 3 in the CUV
Revelation 3 in the CUVS
Revelation 3 in the DBT
Revelation 3 in the DGDNT
Revelation 3 in the DHNT
Revelation 3 in the DNT
Revelation 3 in the ELBE
Revelation 3 in the EMTV
Revelation 3 in the ESV
Revelation 3 in the FBV
Revelation 3 in the FEB
Revelation 3 in the GGMNT
Revelation 3 in the GNT
Revelation 3 in the HARY
Revelation 3 in the HNT
Revelation 3 in the IRVA
Revelation 3 in the IRVB
Revelation 3 in the IRVG
Revelation 3 in the IRVH
Revelation 3 in the IRVK
Revelation 3 in the IRVM
Revelation 3 in the IRVM2
Revelation 3 in the IRVO
Revelation 3 in the IRVP
Revelation 3 in the IRVT
Revelation 3 in the IRVT2
Revelation 3 in the IRVU
Revelation 3 in the ISVN
Revelation 3 in the JSNT
Revelation 3 in the KAPI
Revelation 3 in the KBT1ETNIK
Revelation 3 in the KBV
Revelation 3 in the KJV
Revelation 3 in the KNFD
Revelation 3 in the LBA
Revelation 3 in the LBLA
Revelation 3 in the LNT
Revelation 3 in the LSV
Revelation 3 in the MAAL
Revelation 3 in the MBV
Revelation 3 in the MBV2
Revelation 3 in the MHNT
Revelation 3 in the MKNFD
Revelation 3 in the MNG
Revelation 3 in the MNT
Revelation 3 in the MNT2
Revelation 3 in the MRS1T
Revelation 3 in the NAA
Revelation 3 in the NASB
Revelation 3 in the NBLA
Revelation 3 in the NBS
Revelation 3 in the NBVTP
Revelation 3 in the NET2
Revelation 3 in the NIV11
Revelation 3 in the NNT
Revelation 3 in the NNT2
Revelation 3 in the NNT3
Revelation 3 in the PDDPT
Revelation 3 in the PFNT
Revelation 3 in the RMNT
Revelation 3 in the SBIAS
Revelation 3 in the SBIBS
Revelation 3 in the SBIBS2
Revelation 3 in the SBICS
Revelation 3 in the SBIDS
Revelation 3 in the SBIGS
Revelation 3 in the SBIHS
Revelation 3 in the SBIIS
Revelation 3 in the SBIIS2
Revelation 3 in the SBIIS3
Revelation 3 in the SBIKS
Revelation 3 in the SBIKS2
Revelation 3 in the SBIMS
Revelation 3 in the SBIOS
Revelation 3 in the SBIPS
Revelation 3 in the SBISS
Revelation 3 in the SBITS
Revelation 3 in the SBITS2
Revelation 3 in the SBITS3
Revelation 3 in the SBITS4
Revelation 3 in the SBIUS
Revelation 3 in the SBIVS
Revelation 3 in the SBT
Revelation 3 in the SBT1E
Revelation 3 in the SCHL
Revelation 3 in the SNT
Revelation 3 in the SUSU
Revelation 3 in the SUSU2
Revelation 3 in the SYNO
Revelation 3 in the TBIAOTANT
Revelation 3 in the TBT1E
Revelation 3 in the TBT1E2
Revelation 3 in the TFTIP
Revelation 3 in the TFTU
Revelation 3 in the TGNTATF3T
Revelation 3 in the THAI
Revelation 3 in the TNFD
Revelation 3 in the TNT
Revelation 3 in the TNTIK
Revelation 3 in the TNTIL
Revelation 3 in the TNTIN
Revelation 3 in the TNTIP
Revelation 3 in the TNTIZ
Revelation 3 in the TOMA
Revelation 3 in the TTENT
Revelation 3 in the UBG
Revelation 3 in the UGV
Revelation 3 in the UGV2
Revelation 3 in the UGV3
Revelation 3 in the VBL
Revelation 3 in the VDCC
Revelation 3 in the YALU
Revelation 3 in the YAPE
Revelation 3 in the YBVTP
Revelation 3 in the ZBP