2 Chronicles 23 (IRVK)

1 ಏಳನೆಯ ವರ್ಷದಲ್ಲಿ ಯೆಹೋಯಾದನು ಧೈರ್ಯತಂದುಕೊಂಡು ಯೆರೋಹಾಮನ ಮಗನಾದ ಅಜರ್ಯ, ಯೆಹೋಹಾನಾನನ ಮಗನಾದ ಇಷ್ಮಾಯೇಲ್, ಓಬೇದನ ಮಗನಾದ ಅಜರ್ಯ, ಅದಾಯನ ಮಗನಾದ ಮಾಸೇಯ, ಜಿಕ್ರಿಯ ಮಗನಾದ ಎಲೀಷಾಫಾಟ್ ಎಂಬ ಶತಾಧಿಪತಿಗಳೊಡನೆ ಒಪ್ಪಂದ ಮಾಡಿಕೊಂಡನು. 2 ಇವರು ಯೆಹೂದದಲ್ಲೆಲ್ಲಾ ಸಂಚರಿಸಿ ಎಲ್ಲಾ ಪಟ್ಟಣಗಳಿಂದ ಲೇವಿಯರನ್ನೂ, ಇಸ್ರಾಯೇಲರ ಗೋತ್ರ ಪ್ರಧಾನರನ್ನೂ ಒಟ್ಟುಗೂಡಿಸಲು ಅವರು ಯೆರೂಸಲೇಮಿಗೆ ಬಂದರು. 3 ಹೀಗೆ ಕೂಡಿ ಬಂದವರೆಲ್ಲರೂ ದೇವಾಲಯದಲ್ಲಿ ಅರಸನೊಂದಿಗೆ ಒಪ್ಪಂದ ಮಾಡಿಕೊಂಡರು. ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು, ಯೆಹೋವನು ದಾವೀದನ ಸಂತಾನದವರಿಗೆ ಮಾಡಿದ ವಾಗ್ದಾನಕ್ಕೆ ಅನುಸಾರವಾಗಿ ಅರಸನಾಗತಕ್ಕವನು ಇವನೇ. 4 ಈಗ ನೀವು ಮಾಡತಕ್ಕದ್ದು ಏನೆಂದರೆ: ಸಬ್ಬತ್ ದಿನದಂದು ದೇವಾಲಯದ ಸೇವೆಗೆ ಬರಬೇಕಾದ ಲೇವಿಯರಲ್ಲೂ, ಯಾಜಕರಲ್ಲೂ ಮೂರರಲ್ಲೊಂದು ಭಾಗದವರು ದೇವಸ್ಥಾನದ ದ್ವಾರಪಾಲಕರಾಗಿ ನಿಲ್ಲಬೇಕು. 5 ಇನ್ನೊಂದು ಭಾಗದವರು ಅರಸನ ಅರಮನೆಯನ್ನೂ, ಮತ್ತೊಂದು ಭಾಗದವರು ಯೆಸೋದ್ ಬಾಗಿಲನ್ನೂ ಕಾಯಬೇಕು. ಇತರ ಜನರೆಲ್ಲರೂ ಯೆಹೋವನ ಆಲಯದ ಪ್ರಾಕಾರದಲ್ಲೇ ಇರಬೇಕು. 6 ಯಾಜಕರೂ ಹಾಗು ಸೇವೆಯಲ್ಲಿರುವ ಲೇವಿಯರು ಹೊರತಾಗಿ ಯಾರೂ ಆಲಯದೊಳಗೆ ಬರಬಾರದು. ಏಕೆಂದರೆ ಅವರು ಪರಿಶುದ್ಧರಾಗಿರುವುದರಿಂದ ಬರಬಹುದು. ಉಳಿದ ಜನರೆಲ್ಲರೂ ಯೆಹೋವನ ಅಜ್ಞಾನುಸಾರವಾಗಿ ಹೊರಗಿರಬೇಕು. 7 ಲೇವಿಯರು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ನಿಂತು ಆಲಯದೊಳಕ್ಕೆ ನುಗ್ಗುವವರನ್ನು ಸಂಹರಿಸಬೇಕು. ಅರಸನು ಹೋಗಿ ಬರುವಾಗಲೆಲ್ಲಾ ಅವರು ಅವನ ಜೊತೆಯಲ್ಲೇ ಇರಬೇಕು” ಎಂದು ಹೇಳಿದನು. 8 ಲೇವಿಯ ಎಲ್ಲಾ ಯೆಹೂದ್ಯರೂ ಯಾಜಕನಾದ ಯೆಹೋಯಾದನ ಆಜ್ಞೆಯಂತೆ ನಡೆದುಕೊಂಡರು. ಅವನು ಸಬ್ಬತ್ ದಿನದಲ್ಲಿ ಸೇವಾ ವಿಮುಕ್ತರಾದ ವರ್ಗಗಳವರನ್ನು ಕಳುಹಿಸಿಬಿಡಲಿಲ್ಲ; ಆದುದರಿಂದ ಪ್ರತಿಯೊಬ್ಬನು ಸಬ್ಬತ್ ದಿನ ಮನೆಗೆ ಹೋಗಬೇಕಾಗಿದ್ದ ಮತ್ತು ಬರಬೇಕಾಗಿದ್ದ ತನ್ನ ಕೈಕೆಳಗಿನವರನ್ನು ಸೇರಿಸಿಕೊಂಡನು. 9 ದೇವಾಲಯದಲ್ಲಿಟ್ಟಿದ್ದ ಅರಸನಾದ ದಾವೀದನ ಬರ್ಜಿ, ಗುರಾಣಿ, ಖೇಡ್ಯಗಳೇ ಮುಂತಾದ ಆಯುಧಗಳನ್ನು ಯಾಜಕನಾದ ಯೆಹೋಯಾದನು ಶತಾಧಿಪತಿಗಳಿಗೆ ಕೊಟ್ಟನು. 10 ಆಯುಧಪಾಣಿಗಳಾದ ಎಲ್ಲಾ ಜನರನ್ನು ಅರಸನ ಸುತ್ತಲೂ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಯಜ್ಞವೇದಿಯ ವರೆಗೂ ಸಾಲಾಗಿ ನಿಲ್ಲಿಸಿದನು. 11 ಆಮೇಲೆ ಯೆಹೋಯಾದನ ಮಕ್ಕಳು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ಅಭಿಷೇಕ ಮಾಡಿದರು. ಕೂಡಲೆ ಜನರು, “ಅರಸನು ಚಿರಂಜೀವಿಯಾಗಿರಲಿ” ಎಂದು ಹರಸಿದರು. 12 ಜನರು ಅತ್ತಿತ್ತ ಓಡಾಡುತ್ತಾ ಅರಸನನ್ನು ಹರಸುವ ಗದ್ದಲವನ್ನು ಅತಲ್ಯಳು ಕೇಳಿ ಅವರು ಇದ್ದ ಯೆಹೋವನ ಆಲಯಕ್ಕೆ ಬಂದಳು. 13 ಅಲ್ಲಿ ಅರಸನು ಬಾಗಿಲಿನ ಬಳಿಯಲ್ಲಿರುವ ರಾಜಸ್ತಂಭದ ಹತ್ತಿರ ನಿಂತಿದ್ದನು. ಅಧಿಪತಿಗಳು ಹಾಗೂ ತುತ್ತೂರಿಗಳನ್ನು ಊದುವವರೂ ಅರಸನ ಹತ್ತಿರ ಇದ್ದರು; ಸಾಧಾರಣ ಜನರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಗಾಯಕರು ವಾದ್ಯಗಳನ್ನು ನುಡಿಸುತ್ತಾ ಕೀರ್ತನೆಗಳನ್ನು ಹಾಡುತ್ತಿದ್ದರು. ಇದನ್ನು ಕಂಡಕೂಡಲೆ ಅತಲ್ಯಳು ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ, ದ್ರೋಹ” ಎಂದು ಕೂಗಿದಳು. 14 ಆಗ ಯಾಜಕನಾದ ಯೆಹೋಯಾದನು ಸೇನಾನಿಗಳಾದ ಶತಾಧಿಪತಿಗಳನ್ನು ಹೊರಗೆ ಕರೆದುಕೊಂಡು ಹೋಗಿ ಅವರಿಗೆ, “ಈಕೆಯನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿರಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಸಾಗಿಸಿಕೊಂಡು ಹೊರಗೆ ತಳ್ಳಲಿ; ಮತ್ತು ಈಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ” ಎಂದು ಆಜ್ಞಾಪಿಸಿದನು. 15 ಅವರು ಆಕೆಯನ್ನು ಹಿಡಿದು ಅರಸನ ಅರಮನೆಗೆ ಹೋಗುವ ಕುದುರೆ ಬಾಗಿಲಿನ ತನಕ ಒಯ್ದು, ಅವಳನ್ನು ಕೊಂದು ಹಾಕಿದರು. 16 ಆ ನಂತರ ಯೆಹೋಯಾದನು ಎಲ್ಲಾ ಜನರನ್ನೂ, ಅರಸನನ್ನೂ ಪ್ರೇರೇಪಿಸಿ ತಾವೆಲ್ಲರೂ ಯೆಹೋವನ ಪ್ರಜೆಗಳಾಗಿರುವೆವೆಂದು ಅವರೊಡನೆ ಪ್ರಮಾಣ ಮಾಡಿದನು. 17 ತರುವಾಯ ಜನರೆಲ್ಲರೂ ಬಾಳನ ಕ್ಷೇತ್ರಕ್ಕೆ ಹೋಗಿ ಪೂಜಾರಿಯಾದ ಮತ್ತಾನನನ್ನು ಯಜ್ಞವೇದಿಗಳ ಎದುರಿನಲ್ಲಿಯೇ ಕೊಂದುಹಾಕಿದನು; ಆ ಕ್ಷೇತ್ರವನ್ನೂ ಅದರಲ್ಲಿದ್ದ ಯಜ್ಞವೇದಿ ಹಾಗೂ ವಿಗ್ರಹಗಳನ್ನೂ ಒಡೆದುಹಾಕಿ ಹಾಳುಮಾಡಿ ಬಿಟ್ಟರು. 18 ಯೆಹೋಯಾದನು ಲೇವಿಯರಾದ ಯಾಜಕರ ಕೈಕೆಳಗೆ ಯೆಹೋವನ ಆಲಯದ ಕಾವಲುಗಾರರನ್ನು ನೇಮಿಸಿದನು. ದಾವೀದನು ಆ ಯಾಜಕರನ್ನು ಯೆಹೋವನ ಆಲಯದ ಸೇವೆಗಾಗಿ ವರ್ಗವರ್ಗಗಳಾಗಿ ವಿಭಾಗಿಸಿದ್ದನು. ದಾವೀದನು ನೇಮಿಸಿದ್ದ ಉತ್ಸಾಹ ಗಾಯನದೊಡನೆ ಮೋಶೆಯ ಧರ್ಮಶಾಸ್ತ್ರಾನುಸಾರ ಯೆಹೋವನಿಗೆ ಸರ್ವಾಂಗಹೋಮ ಸಮರ್ಪಣೆ ಮಾಡುವುದೇ ಅವರ ಕರ್ತವ್ಯವಾಗಿತ್ತು. 19 ಯಾವ ವಿಷಯದಲ್ಲಾದರೂ ಅಶುದ್ಧನಾದವನು ಯೆಹೋವನ ಆಲಯವನ್ನು ಪ್ರವೇಶಿಸದಂತೆ ಯೆಹೋಯಾದನು ಆಯಾ ಬಾಗಿಲುಗಳಲ್ಲಿ ದ್ವಾರಪಾಲಕರನ್ನಿರಿಸಿದನು. 20 ಆಮೇಲೆ ಅವನು ಶತಾಧಿಪತಿಗಳು, ಶ್ರೀಮಂತರು, ಜನನಾಯಕರು ಹಾಗೂ ಸಾಧಾರಣ ಜನರು ಇವರೊಡನೆ ಅರಸನನ್ನು ಯೆಹೋವನ ಆಲಯದಿಂದ ಮೇಲಣ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು. 21 ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು; ಪಟ್ಟಣವು ಶಾಂತವಾಯಿತು; ಅತಲ್ಯಳನ್ನು ಕತ್ತಿಯಿಂದ ಸಂಹರಿಸಿದರು.

In Other Versions

2 Chronicles 23 in the ANGEFD

2 Chronicles 23 in the ANTPNG2D

2 Chronicles 23 in the AS21

2 Chronicles 23 in the BAGH

2 Chronicles 23 in the BBPNG

2 Chronicles 23 in the BBT1E

2 Chronicles 23 in the BDS

2 Chronicles 23 in the BEV

2 Chronicles 23 in the BHAD

2 Chronicles 23 in the BIB

2 Chronicles 23 in the BLPT

2 Chronicles 23 in the BNT

2 Chronicles 23 in the BNTABOOT

2 Chronicles 23 in the BNTLV

2 Chronicles 23 in the BOATCB

2 Chronicles 23 in the BOATCB2

2 Chronicles 23 in the BOBCV

2 Chronicles 23 in the BOCNT

2 Chronicles 23 in the BOECS

2 Chronicles 23 in the BOGWICC

2 Chronicles 23 in the BOHCB

2 Chronicles 23 in the BOHCV

2 Chronicles 23 in the BOHLNT

2 Chronicles 23 in the BOHNTLTAL

2 Chronicles 23 in the BOICB

2 Chronicles 23 in the BOILNTAP

2 Chronicles 23 in the BOITCV

2 Chronicles 23 in the BOKCV

2 Chronicles 23 in the BOKCV2

2 Chronicles 23 in the BOKHWOG

2 Chronicles 23 in the BOKSSV

2 Chronicles 23 in the BOLCB

2 Chronicles 23 in the BOLCB2

2 Chronicles 23 in the BOMCV

2 Chronicles 23 in the BONAV

2 Chronicles 23 in the BONCB

2 Chronicles 23 in the BONLT

2 Chronicles 23 in the BONUT2

2 Chronicles 23 in the BOPLNT

2 Chronicles 23 in the BOSCB

2 Chronicles 23 in the BOSNC

2 Chronicles 23 in the BOTLNT

2 Chronicles 23 in the BOVCB

2 Chronicles 23 in the BOYCB

2 Chronicles 23 in the BPBB

2 Chronicles 23 in the BPH

2 Chronicles 23 in the BSB

2 Chronicles 23 in the CCB

2 Chronicles 23 in the CUV

2 Chronicles 23 in the CUVS

2 Chronicles 23 in the DBT

2 Chronicles 23 in the DGDNT

2 Chronicles 23 in the DHNT

2 Chronicles 23 in the DNT

2 Chronicles 23 in the ELBE

2 Chronicles 23 in the EMTV

2 Chronicles 23 in the ESV

2 Chronicles 23 in the FBV

2 Chronicles 23 in the FEB

2 Chronicles 23 in the GGMNT

2 Chronicles 23 in the GNT

2 Chronicles 23 in the HARY

2 Chronicles 23 in the HNT

2 Chronicles 23 in the IRVA

2 Chronicles 23 in the IRVB

2 Chronicles 23 in the IRVG

2 Chronicles 23 in the IRVH

2 Chronicles 23 in the IRVM

2 Chronicles 23 in the IRVM2

2 Chronicles 23 in the IRVO

2 Chronicles 23 in the IRVP

2 Chronicles 23 in the IRVT

2 Chronicles 23 in the IRVT2

2 Chronicles 23 in the IRVU

2 Chronicles 23 in the ISVN

2 Chronicles 23 in the JSNT

2 Chronicles 23 in the KAPI

2 Chronicles 23 in the KBT1ETNIK

2 Chronicles 23 in the KBV

2 Chronicles 23 in the KJV

2 Chronicles 23 in the KNFD

2 Chronicles 23 in the LBA

2 Chronicles 23 in the LBLA

2 Chronicles 23 in the LNT

2 Chronicles 23 in the LSV

2 Chronicles 23 in the MAAL

2 Chronicles 23 in the MBV

2 Chronicles 23 in the MBV2

2 Chronicles 23 in the MHNT

2 Chronicles 23 in the MKNFD

2 Chronicles 23 in the MNG

2 Chronicles 23 in the MNT

2 Chronicles 23 in the MNT2

2 Chronicles 23 in the MRS1T

2 Chronicles 23 in the NAA

2 Chronicles 23 in the NASB

2 Chronicles 23 in the NBLA

2 Chronicles 23 in the NBS

2 Chronicles 23 in the NBVTP

2 Chronicles 23 in the NET2

2 Chronicles 23 in the NIV11

2 Chronicles 23 in the NNT

2 Chronicles 23 in the NNT2

2 Chronicles 23 in the NNT3

2 Chronicles 23 in the PDDPT

2 Chronicles 23 in the PFNT

2 Chronicles 23 in the RMNT

2 Chronicles 23 in the SBIAS

2 Chronicles 23 in the SBIBS

2 Chronicles 23 in the SBIBS2

2 Chronicles 23 in the SBICS

2 Chronicles 23 in the SBIDS

2 Chronicles 23 in the SBIGS

2 Chronicles 23 in the SBIHS

2 Chronicles 23 in the SBIIS

2 Chronicles 23 in the SBIIS2

2 Chronicles 23 in the SBIIS3

2 Chronicles 23 in the SBIKS

2 Chronicles 23 in the SBIKS2

2 Chronicles 23 in the SBIMS

2 Chronicles 23 in the SBIOS

2 Chronicles 23 in the SBIPS

2 Chronicles 23 in the SBISS

2 Chronicles 23 in the SBITS

2 Chronicles 23 in the SBITS2

2 Chronicles 23 in the SBITS3

2 Chronicles 23 in the SBITS4

2 Chronicles 23 in the SBIUS

2 Chronicles 23 in the SBIVS

2 Chronicles 23 in the SBT

2 Chronicles 23 in the SBT1E

2 Chronicles 23 in the SCHL

2 Chronicles 23 in the SNT

2 Chronicles 23 in the SUSU

2 Chronicles 23 in the SUSU2

2 Chronicles 23 in the SYNO

2 Chronicles 23 in the TBIAOTANT

2 Chronicles 23 in the TBT1E

2 Chronicles 23 in the TBT1E2

2 Chronicles 23 in the TFTIP

2 Chronicles 23 in the TFTU

2 Chronicles 23 in the TGNTATF3T

2 Chronicles 23 in the THAI

2 Chronicles 23 in the TNFD

2 Chronicles 23 in the TNT

2 Chronicles 23 in the TNTIK

2 Chronicles 23 in the TNTIL

2 Chronicles 23 in the TNTIN

2 Chronicles 23 in the TNTIP

2 Chronicles 23 in the TNTIZ

2 Chronicles 23 in the TOMA

2 Chronicles 23 in the TTENT

2 Chronicles 23 in the UBG

2 Chronicles 23 in the UGV

2 Chronicles 23 in the UGV2

2 Chronicles 23 in the UGV3

2 Chronicles 23 in the VBL

2 Chronicles 23 in the VDCC

2 Chronicles 23 in the YALU

2 Chronicles 23 in the YAPE

2 Chronicles 23 in the YBVTP

2 Chronicles 23 in the ZBP