Isaiah 58 (IRVK)

1 ಸ್ವರವೆತ್ತಿ ಕೂಗು, ಸಂಕೋಚಪಡಬೇಡ,ಕೊಂಬಿನಂತೆ ಧ್ವನಿಗೈದು ನನ್ನ ಜನರಿಗೆ ಅವರ ದ್ರೋಹಗಳನ್ನು ತಿಳಿಯಪಡಿಸು. ಯಾಕೋಬ ವಂಶದವರಿಗೆ ಅವರ ಪಾಪಗಳನ್ನು ತಿಳಿಸು. 2 ಅವರಂತು ದಿನದಿನವೂ ನನ್ನ ದರ್ಶನಕ್ಕಾಗಿ ಬಂದು, ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಹೆಚ್ಚಳಪಡುತ್ತಾರೆ;ತನ್ನ ದೇವರ ನಿಯಮಗಳನ್ನು ಬಿಡದೆ ಧರ್ಮವನ್ನಾಚರಿಸುವ ಜನಾಂಗವೋ ಎಂಬಂತೆ,ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳಿಕೊಂಡು ದೇವದರ್ಶನದಲ್ಲಿ ಆನಂದಿಸುತ್ತಾರೆ. 3 “ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ; ನಮ್ಮ ಆತ್ಮವನ್ನು ಕುಂದಿಸಿಕೊಂಡಿದ್ದೇವೆ,ನೀನು ಗಮನಿಸದಿರುವುದೇಕೆ” ಅಂದುಕೊಳ್ಳುತ್ತಾರೆ.ಇಗೋ, ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ನಿತ್ಯದ ಕೆಲಸವನ್ನು ನಡೆಸಿ ನಿಮ್ಮ ಆಳುಗಳನ್ನು ದುಡಿತಕ್ಕೆ ಎಳೆಯುತ್ತೀರಿ. 4 ನೋಡಿರಿ, ನಿಮ್ಮ ಉಪವಾಸದ ಫಲವೇನೆಂದರೆ, ವ್ಯಾಜ್ಯ, ಕಲಹ, ಕೇಡಿನ ಗುದ್ದು ಇವುಗಳೇ. ನೀವು ಈಗ ಮಾಡುವ ಉಪವಾಸವು ನಿಮ್ಮ ಪ್ರಾರ್ಥನೆಯನ್ನು ಉನ್ನತಲೋಕಕ್ಕೆ ಮುಟ್ಟಿಸತಕ್ಕದ್ದಲ್ಲ. 5 ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವುದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದ್ದೋ,?ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣಿತಟ್ಟನ್ನೂ ಮತ್ತು ಬೂದಿಯನ್ನೂ ಆಸನಮಾಡಿಕೊಳ್ಳುವುದುಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ? 6 ನೋಡಿರಿ, ಕೇಡಿನ ಬಂಧನಗಳನ್ನು ಬಿಚ್ಚುವುದು, ನೊಗಹೊರಿಸುವ ಹುರಿಯನ್ನು ಕಳಚುವುದು,ಜಜ್ಜಿ ಹೋದವರನ್ನು ಬಿಡುಗಡೆ ಮಾಡುವುದು, ನೊಗಗಳನ್ನೆಲ್ಲಾ ಮುರಿಯುವುದು, 7 ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು,ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ಮನುಷ್ಯನಾಗಿರುವ ಯಾರಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವುದು,ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ. 8 ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಮೂಡಿ ಬರುವುದು,ನಿಮ್ಮ ಕ್ಷೇಮವು ಬೇಗನೆ ಬೆಳೆಯುವುದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿರುವುದು,ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವುದು. 9 ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ, “ಇಗೋ, ಇದ್ದೇನೆ” ಅನ್ನುವನು.ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನು, ಇನ್ನೊಬ್ಬರನ್ನು ದೂಷಣೆಗೆ ಗುರಿಮಾಡಿ ತೋರುವ ಬೆರಳನ್ನು, ಕೆಡುಕಿನ ನುಡಿಯನ್ನು ಬಿಟ್ಟು, 10 ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ, ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ,ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವುದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವುದು. 11 ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡೆಸುತ್ತಾ,ಮರುಭೂಮಿಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ, ನಿಮ್ಮ ಎಲುಬುಗಳನ್ನು ಬಲಗೊಳಿಸುವನು;ನೀವು ತಂಪಾದ ತೋಟಕ್ಕೂ, ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ. 12 ನಿಮ್ಮ ಸಂತಾನದವರು ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ಪುನಃ ಕಟ್ಟುವರು.ನೀವು ತಲತಲಾಂತರಗಳಿಂದ ಹಾಳುಬಿದ್ದಿರುವ ಅಸ್ತಿವಾರಗಳ ಮೇಲೆ ಕಟ್ಟಡಗಳನ್ನು ಎಬ್ಬಿಸುವಿರಿ;“ಬಿದ್ದ ಗೋಡೆಯನ್ನು ಕಟ್ಟುವ ಜನಾಂಗ, ಹಾದಿಗಳನ್ನು ತಿರುಗಾಡುವ ಸ್ಥಿತಿಗೆ ತರುವ ಜನಾಂಗ”ಎಂಬ ಬಿರುದುಗಳು ನಿಮಗುಂಟಾಗುವವು. 13 ನೀವು ಸಬ್ಬತ್ ದಿನವನ್ನು ಅಗಮ್ಯವಾದದ್ದೆಂದು ತಿಳಿದು, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ನಿತ್ಯದ ಕೆಲಸವನ್ನು ಮಾಡದೆ,ಸ್ವಇಚ್ಛೆಯಂತೆ ನಡೆಯದೆ, ಸ್ವಕಾರ್ಯದಲ್ಲಿ ನಿರತರಾಗದೆ, ಹರಟೆಹರಟದೆ,ಯೆಹೋವನ ಸಬ್ಬತ್ ಎಂಬ ಪರಿಶುದ್ಧದಿನವು ಉಲ್ಲಾಸಕರವೂ, ಮಾನ್ಯವೂ ಆದದ್ದೆಂದು ಘನಪಡಿಸಿದರೆ, 14 ಆಗ ನೀವು ಯೆಹೋವನಲ್ಲಿ ಉಲ್ಲಾಸಪಡುವಿರಿ ಮತ್ತು ನಾನು ನಿಮ್ಮನ್ನು ಭೂಮಿಯ ಉನ್ನತವಾದ ಪ್ರದೇಶಗಳ ಮೇಲೆ ಹತ್ತಿಸಿ,ನಿಮ್ಮ ಪಿತೃವಾದ ಯಾಕೋಬನ ಸ್ವತ್ತನ್ನು ನೀವು ಅನುಭವಿಸುವಂತೆ ಮಾಡುವೆನು.ಯೆಹೋವನೇ ಇದನ್ನು ನುಡಿದಿದ್ದಾನೆ.

In Other Versions

Isaiah 58 in the ANGEFD

Isaiah 58 in the ANTPNG2D

Isaiah 58 in the AS21

Isaiah 58 in the BAGH

Isaiah 58 in the BBPNG

Isaiah 58 in the BBT1E

Isaiah 58 in the BDS

Isaiah 58 in the BEV

Isaiah 58 in the BHAD

Isaiah 58 in the BIB

Isaiah 58 in the BLPT

Isaiah 58 in the BNT

Isaiah 58 in the BNTABOOT

Isaiah 58 in the BNTLV

Isaiah 58 in the BOATCB

Isaiah 58 in the BOATCB2

Isaiah 58 in the BOBCV

Isaiah 58 in the BOCNT

Isaiah 58 in the BOECS

Isaiah 58 in the BOGWICC

Isaiah 58 in the BOHCB

Isaiah 58 in the BOHCV

Isaiah 58 in the BOHLNT

Isaiah 58 in the BOHNTLTAL

Isaiah 58 in the BOICB

Isaiah 58 in the BOILNTAP

Isaiah 58 in the BOITCV

Isaiah 58 in the BOKCV

Isaiah 58 in the BOKCV2

Isaiah 58 in the BOKHWOG

Isaiah 58 in the BOKSSV

Isaiah 58 in the BOLCB

Isaiah 58 in the BOLCB2

Isaiah 58 in the BOMCV

Isaiah 58 in the BONAV

Isaiah 58 in the BONCB

Isaiah 58 in the BONLT

Isaiah 58 in the BONUT2

Isaiah 58 in the BOPLNT

Isaiah 58 in the BOSCB

Isaiah 58 in the BOSNC

Isaiah 58 in the BOTLNT

Isaiah 58 in the BOVCB

Isaiah 58 in the BOYCB

Isaiah 58 in the BPBB

Isaiah 58 in the BPH

Isaiah 58 in the BSB

Isaiah 58 in the CCB

Isaiah 58 in the CUV

Isaiah 58 in the CUVS

Isaiah 58 in the DBT

Isaiah 58 in the DGDNT

Isaiah 58 in the DHNT

Isaiah 58 in the DNT

Isaiah 58 in the ELBE

Isaiah 58 in the EMTV

Isaiah 58 in the ESV

Isaiah 58 in the FBV

Isaiah 58 in the FEB

Isaiah 58 in the GGMNT

Isaiah 58 in the GNT

Isaiah 58 in the HARY

Isaiah 58 in the HNT

Isaiah 58 in the IRVA

Isaiah 58 in the IRVB

Isaiah 58 in the IRVG

Isaiah 58 in the IRVH

Isaiah 58 in the IRVM

Isaiah 58 in the IRVM2

Isaiah 58 in the IRVO

Isaiah 58 in the IRVP

Isaiah 58 in the IRVT

Isaiah 58 in the IRVT2

Isaiah 58 in the IRVU

Isaiah 58 in the ISVN

Isaiah 58 in the JSNT

Isaiah 58 in the KAPI

Isaiah 58 in the KBT1ETNIK

Isaiah 58 in the KBV

Isaiah 58 in the KJV

Isaiah 58 in the KNFD

Isaiah 58 in the LBA

Isaiah 58 in the LBLA

Isaiah 58 in the LNT

Isaiah 58 in the LSV

Isaiah 58 in the MAAL

Isaiah 58 in the MBV

Isaiah 58 in the MBV2

Isaiah 58 in the MHNT

Isaiah 58 in the MKNFD

Isaiah 58 in the MNG

Isaiah 58 in the MNT

Isaiah 58 in the MNT2

Isaiah 58 in the MRS1T

Isaiah 58 in the NAA

Isaiah 58 in the NASB

Isaiah 58 in the NBLA

Isaiah 58 in the NBS

Isaiah 58 in the NBVTP

Isaiah 58 in the NET2

Isaiah 58 in the NIV11

Isaiah 58 in the NNT

Isaiah 58 in the NNT2

Isaiah 58 in the NNT3

Isaiah 58 in the PDDPT

Isaiah 58 in the PFNT

Isaiah 58 in the RMNT

Isaiah 58 in the SBIAS

Isaiah 58 in the SBIBS

Isaiah 58 in the SBIBS2

Isaiah 58 in the SBICS

Isaiah 58 in the SBIDS

Isaiah 58 in the SBIGS

Isaiah 58 in the SBIHS

Isaiah 58 in the SBIIS

Isaiah 58 in the SBIIS2

Isaiah 58 in the SBIIS3

Isaiah 58 in the SBIKS

Isaiah 58 in the SBIKS2

Isaiah 58 in the SBIMS

Isaiah 58 in the SBIOS

Isaiah 58 in the SBIPS

Isaiah 58 in the SBISS

Isaiah 58 in the SBITS

Isaiah 58 in the SBITS2

Isaiah 58 in the SBITS3

Isaiah 58 in the SBITS4

Isaiah 58 in the SBIUS

Isaiah 58 in the SBIVS

Isaiah 58 in the SBT

Isaiah 58 in the SBT1E

Isaiah 58 in the SCHL

Isaiah 58 in the SNT

Isaiah 58 in the SUSU

Isaiah 58 in the SUSU2

Isaiah 58 in the SYNO

Isaiah 58 in the TBIAOTANT

Isaiah 58 in the TBT1E

Isaiah 58 in the TBT1E2

Isaiah 58 in the TFTIP

Isaiah 58 in the TFTU

Isaiah 58 in the TGNTATF3T

Isaiah 58 in the THAI

Isaiah 58 in the TNFD

Isaiah 58 in the TNT

Isaiah 58 in the TNTIK

Isaiah 58 in the TNTIL

Isaiah 58 in the TNTIN

Isaiah 58 in the TNTIP

Isaiah 58 in the TNTIZ

Isaiah 58 in the TOMA

Isaiah 58 in the TTENT

Isaiah 58 in the UBG

Isaiah 58 in the UGV

Isaiah 58 in the UGV2

Isaiah 58 in the UGV3

Isaiah 58 in the VBL

Isaiah 58 in the VDCC

Isaiah 58 in the YALU

Isaiah 58 in the YAPE

Isaiah 58 in the YBVTP

Isaiah 58 in the ZBP