Revelation 9 (IRVK)

1 ಐದನೆಯ ದೇವದೂತನು ತುತ್ತೂರಿಯನ್ನೂದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ಅಧೋಲೋಕಕ್ಕೆ ಹೋಗುವ ಕೂಪದ ಬೀಗದ ಕೈ ಕೊಡಲ್ಪಟ್ಟಿತು. 2 ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು. ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾಗಿ ಹೋದವು. 3 ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಹೊರಟುಬಂದವು. ಭೂಮಿಯಲ್ಲಿರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಯಿತು. 4 ಭೂಮಿಯ ಮೇಲಿರುವ ಹುಲ್ಲನ್ನಾಗಲಿ ಯಾವ ಹಣ್ಣು ತರಕಾರಿಗಳನ್ನಾಗಲಿ, ಮರವನ್ನಾಗಲಿ ನಾಶಮಾಡದೆ, ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ನಾಶಮಾಡಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು. 5 ಅವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು. 6 ಆ ಕಾಲದಲ್ಲಿ ಮನುಷ್ಯರು ಮರಣವನ್ನು ಬಯಸುವರು, ಆದರೆ ಅದು ಪ್ರಾಪ್ತವಾಗುವುದಿಲ್ಲ. ಸಾಯಬೇಕೆಂದು ಕೋರುವರು, ಆದರೆ ಮೃತ್ಯುವು ಅವರನ್ನು ಬಿಟ್ಟು ಓಡಿಹೋಗುವುದು. 7 ಆ ಮಿಡತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆಯೂ, ಅವುಗಳ ಮುಖಗಳು ಮನುಷ್ಯರ ಮುಖಗಳಂತೆಯೂ ಇದ್ದವು. 8 ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು. 9 ಅವುಗಳಿಗೆ ಉಕ್ಕಿನ ಕವಚಗಳಂತಿದ್ದ ಕವಚಗಳು ಇದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ರಥಾಶ್ವಗಳ ಶಬ್ದದಂತೆ ಇತ್ತು. 10 ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ, ಕೊಂಡಿಗಳೂ ಇದ್ದವು. ಮನುಷ್ಯರನ್ನು ಐದು ತಿಂಗಳುಗಳವರೆಗೂ ಪೀಡಿಸುವ ಸಾಮರ್ಥ್ಯವು ಅವುಗಳ ಬಾಲಗಳಲ್ಲಿಯೇ ಇರುವುದು. 11 ಅಧೋಲೋಕದ ಅಧಿಕಾರಿಯಾದ ದೂತನೇ ಅವುಗಳನ್ನಾಳುವ ಅರಸನು. ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ, ಗ್ರೀಕ್ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರುಂಟು. 12 ಮೊದಲನೆಯ ವಿಪತ್ತು ಕಳೆದು ಹೋಯಿತು. ಇಗೋ, ಇನ್ನೂ ಎರಡು ವಿಪತ್ತುಗಳು ಅದರ ಬೆನ್ನಹಿಂದೆಯೇ ಬಂದವು. 13 ಆರನೆಯ ದೇವದೂತನು ತುತ್ತೂರಿಯನ್ನೂದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ಯಜ್ಞವೇದಿಯ ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು. 14 ಅದು ತುತ್ತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ, “ಯೂಫ್ರೆಟಿಸ್ ಎಂಬ ಮಹಾ ನದಿಯ ಬಳಿಯಲ್ಲಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು. 15 ಆಗ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವುದಕ್ಕಾಗಿ ಗಂಟೆ, ದಿನ, ತಿಂಗಳು, ವರ್ಷ ಎಲ್ಲವನ್ನೂ ನಿಗದಿಮಾಡಲಾಗಿತ್ತು. ಅದಕ್ಕೆ ಸಿದ್ಧರಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಡುಗಡೆ ಮಾಡಲಾಯಿತು. 16 ಕುದುರೆ ದಂಡಿನವರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು. 17 ನಾನು ದರ್ಶನದಲ್ಲಿ ಕಂಡ ಕುದುರೆಗಳ ಮತ್ತು ಸವಾರರ ವಿವರಣೆ ಹೇಗಿತ್ತೆಂದರೆ, ಸವಾರರ ಕವಚಗಳ ಬಣ್ಣವು ಬೆಂಕಿ, ಹೊಗೆ, ಗಂಧಕ ಇವುಗಳ ಬಣ್ಣದ ಹಾಗಿತ್ತು ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು. 18 ಅವುಗಳ ಬಾಯಿಂದ ಹೊರಟ ಆ ಬೆಂಕಿ, ಹೊಗೆ, ಗಂಧಕ ಎಂಬ ಮೂರು ಉಪದ್ರವಗಳಿಂದ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗವು ಹತವಾಯಿತು. 19 ಆ ಕುದುರೆಗಳ ಸಾಮರ್ಥ್ಯವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇದ್ದವು. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದಲೇ ಕೇಡನ್ನುಂಟುಮಾಡುವುದು. 20 ಉಪದ್ರವಗಳಿಂದ ಸಾಯದೆ ಉಳಿದ ಜನರು ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ದೇವರ ಕಡೆಗೆ ತಿರುಗಲಿಲ್ಲ. ಅವರು ಭೂತ, ಪ್ರೇತಗಳ ಪೂಜೆಯನ್ನೂ ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ ಮೊದಲಾದವುಗಳಿಂದ ಮಾಡಲ್ಪಟ್ಟ ನೋಡಲಾರದೆ, ಕೇಳಲಾರದೆ, ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ. 21 ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, ಮಾಟ, ಜಾರತ್ವ, ಕಳ್ಳತನ ಇವುಗಳೊಳಗೆ ಒಂದನ್ನೂ ಬಿಡದೆ ಮಾನಸಾಂತರಪಡಲಿಲ್ಲ.

In Other Versions

Revelation 9 in the ANGEFD

Revelation 9 in the ANTPNG2D

Revelation 9 in the AS21

Revelation 9 in the BAGH

Revelation 9 in the BBPNG

Revelation 9 in the BBT1E

Revelation 9 in the BDS

Revelation 9 in the BEV

Revelation 9 in the BHAD

Revelation 9 in the BIB

Revelation 9 in the BLPT

Revelation 9 in the BNT

Revelation 9 in the BNTABOOT

Revelation 9 in the BNTLV

Revelation 9 in the BOATCB

Revelation 9 in the BOATCB2

Revelation 9 in the BOBCV

Revelation 9 in the BOCNT

Revelation 9 in the BOECS

Revelation 9 in the BOGWICC

Revelation 9 in the BOHCB

Revelation 9 in the BOHCV

Revelation 9 in the BOHLNT

Revelation 9 in the BOHNTLTAL

Revelation 9 in the BOICB

Revelation 9 in the BOILNTAP

Revelation 9 in the BOITCV

Revelation 9 in the BOKCV

Revelation 9 in the BOKCV2

Revelation 9 in the BOKHWOG

Revelation 9 in the BOKSSV

Revelation 9 in the BOLCB

Revelation 9 in the BOLCB2

Revelation 9 in the BOMCV

Revelation 9 in the BONAV

Revelation 9 in the BONCB

Revelation 9 in the BONLT

Revelation 9 in the BONUT2

Revelation 9 in the BOPLNT

Revelation 9 in the BOSCB

Revelation 9 in the BOSNC

Revelation 9 in the BOTLNT

Revelation 9 in the BOVCB

Revelation 9 in the BOYCB

Revelation 9 in the BPBB

Revelation 9 in the BPH

Revelation 9 in the BSB

Revelation 9 in the CCB

Revelation 9 in the CUV

Revelation 9 in the CUVS

Revelation 9 in the DBT

Revelation 9 in the DGDNT

Revelation 9 in the DHNT

Revelation 9 in the DNT

Revelation 9 in the ELBE

Revelation 9 in the EMTV

Revelation 9 in the ESV

Revelation 9 in the FBV

Revelation 9 in the FEB

Revelation 9 in the GGMNT

Revelation 9 in the GNT

Revelation 9 in the HARY

Revelation 9 in the HNT

Revelation 9 in the IRVA

Revelation 9 in the IRVB

Revelation 9 in the IRVG

Revelation 9 in the IRVH

Revelation 9 in the IRVM

Revelation 9 in the IRVM2

Revelation 9 in the IRVO

Revelation 9 in the IRVP

Revelation 9 in the IRVT

Revelation 9 in the IRVT2

Revelation 9 in the IRVU

Revelation 9 in the ISVN

Revelation 9 in the JSNT

Revelation 9 in the KAPI

Revelation 9 in the KBT1ETNIK

Revelation 9 in the KBV

Revelation 9 in the KJV

Revelation 9 in the KNFD

Revelation 9 in the LBA

Revelation 9 in the LBLA

Revelation 9 in the LNT

Revelation 9 in the LSV

Revelation 9 in the MAAL

Revelation 9 in the MBV

Revelation 9 in the MBV2

Revelation 9 in the MHNT

Revelation 9 in the MKNFD

Revelation 9 in the MNG

Revelation 9 in the MNT

Revelation 9 in the MNT2

Revelation 9 in the MRS1T

Revelation 9 in the NAA

Revelation 9 in the NASB

Revelation 9 in the NBLA

Revelation 9 in the NBS

Revelation 9 in the NBVTP

Revelation 9 in the NET2

Revelation 9 in the NIV11

Revelation 9 in the NNT

Revelation 9 in the NNT2

Revelation 9 in the NNT3

Revelation 9 in the PDDPT

Revelation 9 in the PFNT

Revelation 9 in the RMNT

Revelation 9 in the SBIAS

Revelation 9 in the SBIBS

Revelation 9 in the SBIBS2

Revelation 9 in the SBICS

Revelation 9 in the SBIDS

Revelation 9 in the SBIGS

Revelation 9 in the SBIHS

Revelation 9 in the SBIIS

Revelation 9 in the SBIIS2

Revelation 9 in the SBIIS3

Revelation 9 in the SBIKS

Revelation 9 in the SBIKS2

Revelation 9 in the SBIMS

Revelation 9 in the SBIOS

Revelation 9 in the SBIPS

Revelation 9 in the SBISS

Revelation 9 in the SBITS

Revelation 9 in the SBITS2

Revelation 9 in the SBITS3

Revelation 9 in the SBITS4

Revelation 9 in the SBIUS

Revelation 9 in the SBIVS

Revelation 9 in the SBT

Revelation 9 in the SBT1E

Revelation 9 in the SCHL

Revelation 9 in the SNT

Revelation 9 in the SUSU

Revelation 9 in the SUSU2

Revelation 9 in the SYNO

Revelation 9 in the TBIAOTANT

Revelation 9 in the TBT1E

Revelation 9 in the TBT1E2

Revelation 9 in the TFTIP

Revelation 9 in the TFTU

Revelation 9 in the TGNTATF3T

Revelation 9 in the THAI

Revelation 9 in the TNFD

Revelation 9 in the TNT

Revelation 9 in the TNTIK

Revelation 9 in the TNTIL

Revelation 9 in the TNTIN

Revelation 9 in the TNTIP

Revelation 9 in the TNTIZ

Revelation 9 in the TOMA

Revelation 9 in the TTENT

Revelation 9 in the UBG

Revelation 9 in the UGV

Revelation 9 in the UGV2

Revelation 9 in the UGV3

Revelation 9 in the VBL

Revelation 9 in the VDCC

Revelation 9 in the YALU

Revelation 9 in the YAPE

Revelation 9 in the YBVTP

Revelation 9 in the ZBP