Jeremiah 8 (BOKCV2)
1 “ ‘ಯೆಹೋವ ದೇವರು ಹೇಳುವುದೇನೆಂದರೆ, ಆ ಕಾಲದಲ್ಲಿ ಅವರು ಯೆಹೂದದ ಅರಸರ ಎಲುಬುಗಳನ್ನೂ, ಅದರ ಪ್ರಧಾನರ ಎಲುಬುಗಳನ್ನೂ, ಯಾಜಕರ ಎಲುಬುಗಳನ್ನೂ, ಪ್ರವಾದಿಗಳ ಎಲುಬುಗಳನ್ನೂ, ಯೆರೂಸಲೇಮಿನ ನಿವಾಸಿಗಳ ಎಲುಬುಗಳನ್ನೂ ಅವರ ಸಮಾಧಿಗಳೊಳಗಿಂದ ಹೊರಗೆ ತರುವರು. 2 ಅವರು ಪ್ರೀತಿ ಮಾಡಿದಂಥ, ಸೇವಿಸಿದಂಥ, ಹಿಂಬಾಲಿಸಿದಂಥ, ಹುಡುಕಿದಂಥ, ಆರಾಧಿಸಿದಂಥ, ಸೂರ್ಯನ ಮುಂದೆಯೂ, ಚಂದ್ರನ ಮುಂದೆಯೂ, ಸಮಸ್ತ ಆಕಾಶ ಸೈನ್ಯದ ಮುಂದೆಯೂ ಅವುಗಳನ್ನು ತೆರೆದಿಡುವರು; ಹೌದು, ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರವಾಗುವುವು. 3 ಈ ಕೆಟ್ಟ ಮನೆತನದವರನ್ನು ನಾನು ಯಾವಾವ ಸ್ಥಳಗಳಿಗೆ ಅಟ್ಟಿಬಿಡುವೆನೋ, ಅಲ್ಲೆಲ್ಲಾ ಇವರಲ್ಲಿ ಅಳಿದುಳಿದವರು ಜೀವಿಸುವುದಕ್ಕಿಂತ ಸಾವೇ ಲೇಸೆಂದು ಬಯಸುವರು ಎಂದು ಸೇನಾಧೀಶ್ವರ ಯೆಹೋವ ದೇವರು ನುಡಿಯುತ್ತಾರೆ.’ 4 “ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ:“ ‘ಅವರು ಬಿದ್ದು ಮತ್ತೆ ಏಳರೋ?ಹಿಂದಿರುಗಿದವನು ಮತ್ತೆ ಬರುವುದಿಲ್ಲವೋ? 5 ಹಾಗಾದರೆ ಈ ಯೆರೂಸಲೇಮಿನ ಜನರು ಎಂದಿಗೂಹಿಂದಿರುಗದಂತೆ ಏಕೆ ಬಿಟ್ಟು ಹೋಗಿದ್ದಾರೆ?ಮೋಸವನ್ನು ಬಿಗಿಯಾಗಿ ಹಿಡಿಯುತ್ತಾರೆ,ಹಿಂದಿರುಗುವುದಕ್ಕೆ ನಿರಾಕರಿಸುತ್ತಾರೆ. 6 ನಾನು ಕಿವಿಗೊಟ್ಟು ಕೇಳಿದೆನು.ಆದರೆ ಅವರು ಯಥಾರ್ಥವಾಗಿ ಮಾತನಾಡಲಿಲ್ಲ.ಯಾವನಾದರೂ, “ನಾನು ಎಂಥಾ ಕೆಲಸ ಮಾಡಿದ್ದೇನೆ,”ಎಂದುಕೊಂಡು ತನ್ನ ಕೆಟ್ಟತನದ ನಿಮಿತ್ತ ಪಶ್ಚಾತ್ತಾಪ ಪಡಲಿಲ್ಲ.ಕುದುರೆ ಯುದ್ಧಕ್ಕೆ ರಭಸವಾಗಿ ಓಡುವ ಪ್ರಕಾರ,ಪ್ರತಿಯೊಬ್ಬನೂ ತನ್ನ ದಾರಿಗೆ ತಿರುಗಿದ್ದಾನೆ. 7 ಹೌದು, ಆಕಾಶದಲ್ಲಿಯ ಬಕಪಕ್ಷಿಯುತನ್ನ ನಿಯಮಿತ ಕಾಲಗಳನ್ನು ತಿಳಿಯುತ್ತದೆ.ಪಾರಿವಾಳವೂ, ಬಾನಕ್ಕಿಯೂ, ಕೊಕ್ಕರೆಯೂತಮ್ಮ ಗಮನಾಗಮನದ ಸಮಯವನ್ನು ಗಮನಿಸುತ್ತವೆ.ಆದರೆ ನನ್ನ ಜನರು ಯೆಹೋವ ದೇವರುಅಪೇಕ್ಷಿಸುವುದನ್ನು ಅರಿಯರು. 8 “ ‘ “ನಾವು ಜ್ಞಾನಿಗಳು, ಯೆಹೋವ ದೇವರ ನಿಯಮವುನಮ್ಮ ಸಂಗಡ ಇದೆ,” ಎಂದು ನೀವು ಹೇಳುವುದು ಹೇಗೆ?ಇಗೋ, ನಿಶ್ಚಯವಾಗಿ ಆತನು ಅದನ್ನು ವ್ಯರ್ಥವಾಗಿ ಮಾಡಿದ್ದಾನೆ.ನಿಯಮಶಾಸ್ತ್ರಿಗಳ ಲೇಖನಿಯು ಮೋಸಕರವಾಗಿದೆ. 9 ಜ್ಞಾನಿಗಳು ನಾಚಿಕೊಂಡಿದ್ದಾರೆ.ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ.ಇಗೋ, ಯೆಹೋವ ದೇವರ ವಾಕ್ಯವನ್ನು ನಿರಾಕರಿಸಿದ್ದಾರೆ.ಹಾಗಾದರೆ ಅವರಲ್ಲಿ ಯಾವ ಜ್ಞಾನವಿದೆ. 10 ಆದ್ದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ,ಅವರ ಹೊಲಗಳನ್ನು ಹೊಸ ಮಾಲಿಕನಿಗೆ ನಾನು ಕೊಟ್ಟುಬಿಡುವೆನು.ಏಕೆಂದರೆ, ಚಿಕ್ಕವನು ಮೊದಲುಗೊಂಡು ದೊಡ್ಡವರತನಕಅವರೆಲ್ಲರೂ ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ.ಪ್ರವಾದಿ ಮೊದಲುಗೊಂಡು ಯಾಜಕರವರೆಗೆಪ್ರತಿಯೊಬ್ಬನೂ ಮೋಸದಿಂದ ನಡೆದುಕೊಳ್ಳುತ್ತಾನೆ. 11 ಏಕೆಂದರೆ, ಅವರು ನನ್ನ ಜನರ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ.ಸಮಾಧಾನವಿಲ್ಲದಿರುವಾಗ, “ಸಮಾಧಾನ, ಸಮಾಧಾನ,” ಎಂದು ಹೇಳುತ್ತಾರೆ. 12 ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ?ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ, ಲಜ್ಜೆಯನ್ನೇ ಅರಿಯರು.ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು.ನಾನು ಅವರನ್ನು ದಂಡಿಸುವ ಕಾಲದಲ್ಲಿ,ಅವರು ಕೆಳಗೆ ಬೀಳುವರು,ಎಂದು ಯೆಹೋವ ದೇವರು ಹೇಳುತ್ತಾರೆ. 13 “ ‘ನಾನು ಅವರ ಫಸಲನ್ನು ನಿರ್ಮೂಲ ಮಾಡಿಬಿಡುವೆನು,ಎಂದು ಯೆಹೋವ ದೇವರು ಹೇಳುತ್ತಾರೆ.ದ್ರಾಕ್ಷಿ ಗಿಡದಲ್ಲಿ ದ್ರಾಕ್ಷಿ ಹಣ್ಣುಗಳು ಇರುವುದಿಲ್ಲ.ಅಂಜೂರ ಮರದಲ್ಲಿ ಅಂಜೂರ ಹಣ್ಣುಗಳು ಇರುವುದಿಲ್ಲ. ಎಲೆಯು ಬಾಡುವುದು.ನಾನು ಅವರಿಗೆ ಕೊಟ್ಟವುಗಳು ಅವರನ್ನು ಬಿಟ್ಟು ಹೋಗುವುವು.’ ” 14 ನಾವು ಏಕೆ ಸುಮ್ಮನೆ ಕೂತುಕೊಳ್ಳುತ್ತೇವೆ?ನೀವು ಕೂಡಿಕೊಳ್ಳಿರಿ,ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ,ಅಲ್ಲಿ ನಾಶವಾಗೋಣ.ಏಕೆಂದರೆ, ನಾವು ನಮ್ಮ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ ಕಾರಣ,ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ನಾಶಮಾಡಿ,ನಮಗೆ ವಿಷದ ನೀರನ್ನು ಕುಡಿಯಲು ಕೊಟ್ಟಿದ್ದಾರೆ. 15 ಸಮಾಧಾನಕ್ಕೆ ಕಾದುಕೊಂಡೆವು,ಆದರೆ ಒಳ್ಳೆಯದೇನೂ ಬರಲಿಲ್ಲ.ಆರೋಗ್ಯದ ಸಮಯಕ್ಕೆ ಕಾದಿದ್ದೆವು.ಆದರೆ ಇಗೋ, ಆತಂಕವನ್ನು ನೋಡುತ್ತೇವೆ. 16 ಅವನ ಕುದುರೆಗಳ ಶ್ವಾಸವುದಾನಿನಿಂದ ಕೇಳಿಸಿತು.ಅವನ ಬಲವಾದವುಗಳ ಕೆನೆತದಶಬ್ದದಿಂದ ದೇಶವೆಲ್ಲಾ ನಡುಗುತ್ತದೆ.ಏಕೆಂದರೆ, ಅವರುದೇಶವನ್ನೂ, ಅದರಲ್ಲಿರುವುದೆಲ್ಲವನ್ನೂ,ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ನುಂಗಲು ಬಂದಿದ್ದಾರೆ. 17 “ನಾನು ನಿಮ್ಮಲ್ಲಿ ವಿಷಸರ್ಪಗಳನ್ನು ಮಂತ್ರಕ್ಕೆ ಅಧೀನವಾಗದ ನಾಗಗಳನ್ನೂ ಕಳುಹಿಸುತ್ತೇನೆ.ಅವು ನಿಮ್ಮನ್ನು ಕಚ್ಚುವವು,”ಎಂದು ಯೆಹೋವ ದೇವರು ಹೇಳುತ್ತಾರೆ. 18 ದುಃಖದ ನಿಮಿತ್ತ ನನ್ನನ್ನು ಆಧರಿಸಿ ಕೊಳ್ಳಲು ನಾನು ಮನಸ್ಸು ಮಾಡಿದಾಗ,ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ. 19 ದೂರದೇಶದಿಂದ ನನ್ನ ಜನರು ಕೂಗುವ ಮೊರೆಯಿದು:“ಯೆಹೋವ ದೇವರು ಚೀಯೋನಿನಲ್ಲಿ ಇಲ್ಲವೋ?ಅವಳ ಅರಸನು ಅವಳಲ್ಲಿ ಇಲ್ಲವೋ?” ಎಂಬುದೇ ಆದರೂ ಅವರು ತಮ್ಮ ವಿಗ್ರಹಗಳಿಂದಲೂ,ವಿಚಿತ್ರವಾದ ವ್ಯರ್ಥತ್ವಗಳಿಂದಲೂ ನನಗೆ ಕೋಪವನ್ನೆಬ್ಬಿಸಿದ್ದು ಏಕೆ? 20 “ಸುಗ್ಗಿ ಮುಗಿಯಿತು.ಬೇಸಿಗೆ ಕಾಲ ತೀರಿತು.ನಾವಾದರೋ ರಕ್ಷಣೆ ಹೊಂದಲಿಲ್ಲ.” 21 ನನ್ನ ಜನರು ತುಳಿತಕ್ಕೆ ಒಳಗಾದದ್ದರಿಂದ ನಾನೂ ತುಳಿತಕ್ಕೆ ಒಳಗಾದೆನು.ದುಃಖಿಸಿದೆನು. ಭಯವು ನನ್ನನ್ನು ಹಿಡಿಯಿತು. 22 ಗಿಲ್ಯಾದಿನಲ್ಲಿ ಮುಲಾಮು ಇಲ್ಲವೋ?ಅಲ್ಲಿ ವೈದ್ಯನಿಲ್ಲವೋ?ಹಾಗಾದರೆ ನನ್ನ ಜನರ ಗಾಯಕ್ಕೆ ಏಕೆ ಸ್ವಸ್ಥತೆ ಇಲ್ಲ?
In Other Versions
Jeremiah 8 in the ANGEFD
Jeremiah 8 in the ANTPNG2D
Jeremiah 8 in the AS21
Jeremiah 8 in the BAGH
Jeremiah 8 in the BBPNG
Jeremiah 8 in the BBT1E
Jeremiah 8 in the BDS
Jeremiah 8 in the BEV
Jeremiah 8 in the BHAD
Jeremiah 8 in the BIB
Jeremiah 8 in the BLPT
Jeremiah 8 in the BNT
Jeremiah 8 in the BNTABOOT
Jeremiah 8 in the BNTLV
Jeremiah 8 in the BOATCB
Jeremiah 8 in the BOATCB2
Jeremiah 8 in the BOBCV
Jeremiah 8 in the BOCNT
Jeremiah 8 in the BOECS
Jeremiah 8 in the BOGWICC
Jeremiah 8 in the BOHCB
Jeremiah 8 in the BOHCV
Jeremiah 8 in the BOHLNT
Jeremiah 8 in the BOHNTLTAL
Jeremiah 8 in the BOICB
Jeremiah 8 in the BOILNTAP
Jeremiah 8 in the BOITCV
Jeremiah 8 in the BOKCV
Jeremiah 8 in the BOKHWOG
Jeremiah 8 in the BOKSSV
Jeremiah 8 in the BOLCB
Jeremiah 8 in the BOLCB2
Jeremiah 8 in the BOMCV
Jeremiah 8 in the BONAV
Jeremiah 8 in the BONCB
Jeremiah 8 in the BONLT
Jeremiah 8 in the BONUT2
Jeremiah 8 in the BOPLNT
Jeremiah 8 in the BOSCB
Jeremiah 8 in the BOSNC
Jeremiah 8 in the BOTLNT
Jeremiah 8 in the BOVCB
Jeremiah 8 in the BOYCB
Jeremiah 8 in the BPBB
Jeremiah 8 in the BPH
Jeremiah 8 in the BSB
Jeremiah 8 in the CCB
Jeremiah 8 in the CUV
Jeremiah 8 in the CUVS
Jeremiah 8 in the DBT
Jeremiah 8 in the DGDNT
Jeremiah 8 in the DHNT
Jeremiah 8 in the DNT
Jeremiah 8 in the ELBE
Jeremiah 8 in the EMTV
Jeremiah 8 in the ESV
Jeremiah 8 in the FBV
Jeremiah 8 in the FEB
Jeremiah 8 in the GGMNT
Jeremiah 8 in the GNT
Jeremiah 8 in the HARY
Jeremiah 8 in the HNT
Jeremiah 8 in the IRVA
Jeremiah 8 in the IRVB
Jeremiah 8 in the IRVG
Jeremiah 8 in the IRVH
Jeremiah 8 in the IRVK
Jeremiah 8 in the IRVM
Jeremiah 8 in the IRVM2
Jeremiah 8 in the IRVO
Jeremiah 8 in the IRVP
Jeremiah 8 in the IRVT
Jeremiah 8 in the IRVT2
Jeremiah 8 in the IRVU
Jeremiah 8 in the ISVN
Jeremiah 8 in the JSNT
Jeremiah 8 in the KAPI
Jeremiah 8 in the KBT1ETNIK
Jeremiah 8 in the KBV
Jeremiah 8 in the KJV
Jeremiah 8 in the KNFD
Jeremiah 8 in the LBA
Jeremiah 8 in the LBLA
Jeremiah 8 in the LNT
Jeremiah 8 in the LSV
Jeremiah 8 in the MAAL
Jeremiah 8 in the MBV
Jeremiah 8 in the MBV2
Jeremiah 8 in the MHNT
Jeremiah 8 in the MKNFD
Jeremiah 8 in the MNG
Jeremiah 8 in the MNT
Jeremiah 8 in the MNT2
Jeremiah 8 in the MRS1T
Jeremiah 8 in the NAA
Jeremiah 8 in the NASB
Jeremiah 8 in the NBLA
Jeremiah 8 in the NBS
Jeremiah 8 in the NBVTP
Jeremiah 8 in the NET2
Jeremiah 8 in the NIV11
Jeremiah 8 in the NNT
Jeremiah 8 in the NNT2
Jeremiah 8 in the NNT3
Jeremiah 8 in the PDDPT
Jeremiah 8 in the PFNT
Jeremiah 8 in the RMNT
Jeremiah 8 in the SBIAS
Jeremiah 8 in the SBIBS
Jeremiah 8 in the SBIBS2
Jeremiah 8 in the SBICS
Jeremiah 8 in the SBIDS
Jeremiah 8 in the SBIGS
Jeremiah 8 in the SBIHS
Jeremiah 8 in the SBIIS
Jeremiah 8 in the SBIIS2
Jeremiah 8 in the SBIIS3
Jeremiah 8 in the SBIKS
Jeremiah 8 in the SBIKS2
Jeremiah 8 in the SBIMS
Jeremiah 8 in the SBIOS
Jeremiah 8 in the SBIPS
Jeremiah 8 in the SBISS
Jeremiah 8 in the SBITS
Jeremiah 8 in the SBITS2
Jeremiah 8 in the SBITS3
Jeremiah 8 in the SBITS4
Jeremiah 8 in the SBIUS
Jeremiah 8 in the SBIVS
Jeremiah 8 in the SBT
Jeremiah 8 in the SBT1E
Jeremiah 8 in the SCHL
Jeremiah 8 in the SNT
Jeremiah 8 in the SUSU
Jeremiah 8 in the SUSU2
Jeremiah 8 in the SYNO
Jeremiah 8 in the TBIAOTANT
Jeremiah 8 in the TBT1E
Jeremiah 8 in the TBT1E2
Jeremiah 8 in the TFTIP
Jeremiah 8 in the TFTU
Jeremiah 8 in the TGNTATF3T
Jeremiah 8 in the THAI
Jeremiah 8 in the TNFD
Jeremiah 8 in the TNT
Jeremiah 8 in the TNTIK
Jeremiah 8 in the TNTIL
Jeremiah 8 in the TNTIN
Jeremiah 8 in the TNTIP
Jeremiah 8 in the TNTIZ
Jeremiah 8 in the TOMA
Jeremiah 8 in the TTENT
Jeremiah 8 in the UBG
Jeremiah 8 in the UGV
Jeremiah 8 in the UGV2
Jeremiah 8 in the UGV3
Jeremiah 8 in the VBL
Jeremiah 8 in the VDCC
Jeremiah 8 in the YALU
Jeremiah 8 in the YAPE
Jeremiah 8 in the YBVTP
Jeremiah 8 in the ZBP