Isaiah 51 (BOKCV2)

1 ನೀತಿಯನ್ನು ಹಿಂಬಾಲಿಸುವವರೇ,ಯೆಹೋವ ದೇವರನ್ನು ಹುಡುಕುವವರೇ, ನನ್ನ ಕಡೆಗೆ ಕಿವಿಗೊಡಿರಿ.ನಿಮ್ಮನ್ನು ಯಾವ ಬಂಡೆಯೊಳಗಿಂದ ಒಡೆದು ಕಡಿದಿರುತ್ತಾರೋಮತ್ತು ಯಾವ ಗುಂಡಿಯೊಳಗಿಂದ ಅಗೆದಿರುತ್ತಾರೋ ಆ ಬಂಡೆಯಾದಾತನನ್ನು ನೋಡಿರಿ. 2 ನಿಮ್ಮ ತಂದೆಯಾದ ಅಬ್ರಹಾಮನನ್ನುಮತ್ತು ನಿಮ್ಮನ್ನು ಹೆತ್ತ ಸಾರಳನ್ನೂ ದೃಷ್ಟಿಸಿರಿ.ನಾನು ಅವನನ್ನು ಕರೆದಾಗ ಅವನು ಒಬ್ಬನೇ ಮನುಷ್ಯ,ನಾನು ಅವನನ್ನು ಆಶೀರ್ವದಿಸಿ, ವೃದ್ಧಿಗೊಳಿಸಿದೆನು. 3 ಯೆಹೋವ ದೇವರು ಚೀಯೋನನ್ನು ಸಂತೈಸೇ ಸಂತೈಸುವರು.ಅವರು ಅದರ ಹಾಳಾದ ಸ್ಥಳಗಳನ್ನು ಕರುಣೆಯಿಂದ ನೋಡುವರು.ಅದರ ಮರುಭೂಮಿಯನ್ನು ಏದೆನ್ ಹಾಗೆಯೂ,ಹಾಳು ಪ್ರದೇಶವನ್ನು ಯೆಹೋವ ದೇವರ ತೋಟದ ಹಾಗೆಯೂ ಮಾಡುವನು.ಅಲ್ಲಿ ಆನಂದವೂ, ಉಲ್ಲಾಸವೂ, ಉಪಕಾರ ಸ್ತುತಿಯೂ,ಇಂಪಾದ ಸ್ವರವೂ ಕಂಡು ಬರುವುವು. 4 ನನ್ನ ಜನರೇ, ಕೇಳಿರಿ.ನನ್ನ ಜನಾಂಗವೇ, ನನ್ನ ಕಡೆಗೆ ಕಿವಿಗೊಡಿರಿ.ಏಕೆಂದರೆ ನಿಯಮವು ನನ್ನಿಂದ ಹೊರಡುವುದುಮತ್ತು ನನ್ನ ನ್ಯಾಯವನ್ನು ಜನಾಂಗಕ್ಕೆ ಬೆಳಕನ್ನಾಗಿ ಮಾಡುವೆನು. 5 ನನ್ನ ನೀತಿಯು ತ್ವರೆಯಾಗಿ ಸಮೀಪಿಸಿತು.ನನ್ನ ರಕ್ಷಣೆಯು ಹೊರಟಿತುಮತ್ತು ನನ್ನ ಕೈ ಜನಾಂಗಕ್ಕೆ ನ್ಯಾಯವನ್ನು ತೀರಿಸುವುದು.ನನ್ನ ಭುಜದ ಮೇಲೆ ಭರವಸೆ ಇಟ್ಟು,ದ್ವೀಪಗಳು ನನಗೋಸ್ಕರ ಕಾದುಕೊಂಡಿರುತ್ತವೆ. 6 ಆಕಾಶಗಳ ಕಡೆಗೆ ನಿಮ್ಮ ಕಣ್ಣುಗಳನ್ನು ಎತ್ತಿರಿಮತ್ತು ಕೆಳಗಿರುವ ಭೂಮಿಯನ್ನು ನೋಡಿರಿ.ಏಕೆಂದರೆ ಆಕಾಶಗಳು ಹೊಗೆಯಂತೆ ಅಗೋಚರವಾಗುವುವು.ಭೂಮಿಯು ಹಳೆಯ ಬಟ್ಟೆಯಂತಾಗುವುದುಮತ್ತು ಅದರಲ್ಲಿ ವಾಸಿಸುವವರು ಸೊಳ್ಳೆಗಳೋಪಾದಿಯಲ್ಲಿ ಸಾಯುವರು.ಆದರೆ ನನ್ನ ರಕ್ಷಣೆಯು ಶಾಶ್ವತವಾಗಿರುವುದು,ನನ್ನ ನೀತಿಯು ಎಂದಿಗೂ ರದ್ದಾಗದು. 7 ನೀತಿಯನ್ನು ಅರಿತು, ನನ್ನ ನಿಯಮವನ್ನುಹೃದಯದಲ್ಲಿಟ್ಟುಕೊಂಡಿರುವ ಜನರೇ, ನನಗೆ ಕಿವಿಗೊಡಿರಿ.ಮನುಷ್ಯರ ನಿಂದೆಗೆ ಭಯಪಡಬೇಡಿರಿ,ಅವರ ದೂಷಣೆಗೆ ಹೆದರಬೇಡಿರಿ. 8 ಏಕೆಂದರೆ ನುಸಿಯು ಬಟ್ಟೆಯನ್ನು ತಿನ್ನುವಂತೆ,ಅವರನ್ನು ತಿಂದುಬಿಡುವುದುಮತ್ತು ಹುಳವು ಅವರನ್ನು ಉಣ್ಣೆಯಂತೆ ತಿನ್ನುವುದು.ಆದರೆ ನನ್ನ ನೀತಿಯು ಶಾಶ್ವತವಾಗಿರುವುದುಮತ್ತು ನನ್ನ ರಕ್ಷಣೆಯು ತಲತಲಾಂತರಗಳಿಗೂ ಇರುವುದು. 9 ಯೆಹೋವ ದೇವರ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಳ್ಳುಬಲವನ್ನು ಧರಿಸಿಕೋ.ಹಿಂದಿನ ಜನಾಂಗಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿಎಚ್ಚರವಿದ್ದಂತೆಯೇ ಎಚ್ಚರವಾಗು.ರಹಬನ್ನು ಕಡಿದುಬಿಟ್ಟದ್ದೂ,ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ? 10 ಸಮುದ್ರವನ್ನೂ, ದೊಡ್ಡ ಅಗಾಧದ ನೀರನ್ನೂ ಬತ್ತಿಸಿ,ವಿಮುಕ್ತರಾದವರು, ಹಾದು ಹೋಗುವುದಕ್ಕೆಸಮುದ್ರದ ತಳವನ್ನು ಮಾರ್ಗವನ್ನಾಗಿಮಾಡಿದಂಥವನು ನೀನಲ್ಲವೋ? 11 ಆದಕಾರಣ ಯೆಹೋವ ದೇವರು ವಿಮೋಚಿಸಿದವರು,ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು,ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು.ಅವರು ಹರ್ಷಾನಂದಗಳನ್ನು ಅನುಭವಿಸುವರು.ದುಃಖವೂ, ನಿಟ್ಟುಸಿರೂ ಓಡಿಹೋಗುವುವು. 12 “ನಾನೇ, ನಾನೇ ನಿಮ್ಮನ್ನು ಸಂತೈಸುವವನಾಗಿದ್ದೇನೆ.ಹಾಗಾದರೆ ಸಾಯುವ ಮನುಷ್ಯನಿಗೂ,ಹುಲ್ಲಿನಂತ್ತಿರುವ ಮಾನವನಿಗೂ ಭಯಪಡುವ ನೀನು ಯಾರು? 13 ಆಕಾಶವನ್ನು ಹಾಸಿ,ಭೂಮಿಯ ಅಸ್ತಿವಾರವನ್ನು ಹಾಕಿ,ನಿನ್ನನ್ನು ಉಂಟುಮಾಡಿದ ಯೆಹೋವ ದೇವರನ್ನು ನೀನು ಮರೆತುಬಿಟ್ಟು,ಹಿಂಸಕನ ಉಗ್ರಕ್ಕೆ ಎಡೆಬಿಡದೆಪ್ರತಿದಿನವೂ ಅವನು ನಾಶಪಡಿಸುವನೋ ಎಂಬಂತೆ ಅಂಜಿಕೊಂಡಿದ್ದೀಯಲ್ಲಾ,ಆ ಹಿಂಸಕನ ಕೋಪವು ಎಲ್ಲಿ? 14 ಸೆರೆಯಲ್ಲಿ ಕುಗ್ಗಿರುವವನು ತಾನು ಸಾಯದಂತೆಯೂ,ತನಗೆ ಆಹಾರದ ಕೊರತೆ ಇರದಂತೆಯೂ,ತಾನು ಬಿಡುಗಡೆ ಹೊಂದುವಂತೆಯೂ ಆತುರಪಡುತ್ತಾನೆ. 15 ಆದರೆ ತೆರೆಗಳು ಬೋರ್ಗರೆಯುವಾಗ,ಸಮುದ್ರವನ್ನು ವಿಭಾಗಿಸಿದ ನಿನ್ನ ದೇವರಾಗಿರುವ ಯೆಹೋವ ದೇವರು ನಾನೇ,ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು. 16 ಆಕಾಶಗಳನ್ನು ನೆಡುವುದಕ್ಕೂ,ಭೂಮಿಯ ಅಸ್ತಿವಾರವನ್ನು ಹಾಕುವುದಕ್ಕೂ,ಚೀಯೋನಿಗೆ ನೀನು ನನ್ನ ಜನರೆಂದು ಹೇಳುವುದಕ್ಕೂ,ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿಟ್ಟು,ನನ್ನ ಕೈ ನೆರಳಿನಿಂದ ನಿನ್ನನ್ನು ಮುಚ್ಚಿದ್ದೇನೆ.” 17 ಯೆಹೋವ ದೇವರ ಕೈಯಿಂದ ಆತನಕೋಪದ ಪಾತ್ರೆಯನ್ನು ಕುಡಿದಯೆರೂಸಲೇಮೇ, ಎಚ್ಚರಗೊಳ್ಳು,ಎಚ್ಚರಗೊಳ್ಳು, ಎದ್ದೇಳು!ನೀನು ತತ್ತರಗೊಳಿಸುವಂಥ ಪಾತ್ರೆಯಲ್ಲಿದ್ದಮಡ್ಡಿಯನ್ನು ಕುಡಿದು ಹೀರಿಬಿಟ್ಟಿದ್ದೀ. 18 ಅವಳು ಹೆತ್ತ ಎಲ್ಲಾ ಪುತ್ರರಲ್ಲಿಅವಳನ್ನು ನಡೆಸುವುದಕ್ಕೆ ಒಬ್ಬನೂ ಇಲ್ಲ.ಅವಳು ಬೆಳೆಯಿಸಿದ ಎಲ್ಲಾ ಪುತ್ರರಲ್ಲಿ,ಅವಳ ಕೈಯನ್ನು ಹಿಡಿಯುವವನು ಒಬ್ಬನೂ ಇಲ್ಲ. 19 ಈ ಎರಡು ಸಂಗತಿಗಳು ನಿನಗೆ ಸಂಭವಿಸಿವೆ,ನಿನಗೋಸ್ಕರ ಚಿಂತಿಸುವವರು ಯಾರಿದ್ದಾರೆ?ನಾಶನವೋ ಸಂಹಾರವೋ ಕ್ಷಾಮವೋ ಖಡ್ಗವೋ,ಯಾರು ನಿನ್ನನ್ನು ಸಂತೈಸುವರು? 20 ನಿನ್ನ ಪುತ್ರರು ಮೂರ್ಛೆ ಹೋಗಿ,ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ,ಎಲ್ಲಾ ಬೀದಿಗಳು ಕೂಡುವ ಚೌಕಗಳಲ್ಲಿ ಅವರು ಬಿದ್ದಿದ್ದಾರೆ.ಅವರು ಯೆಹೋವ ದೇವರ ರೋಷದಿಂದಲೂ,ನಿನ್ನ ದೇವರ ಗದರಿಕೆಯಿಂದಲೂ ತುಂಬಿದ್ದಾರೆ. 21 ನೀನು ಹಿಂಸೆಗೊಳಗಾಗಿದ್ದೀ. ಕುಡಿದು ಅಮಲೇರಿದ್ದೀ.ಆದರೆ ದ್ರಾಕ್ಷಾರಸದಿಂದಲ್ಲ. ಆದ್ದರಿಂದ ಈಗ ಇದನ್ನು ಕೇಳು. 22 ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ,ನಿನ್ನ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ,“ನಾನು ನಿನ್ನ ಕೈಯೊಳಗಿಂದತತ್ತರಿಸುವಂಥ ಪಾತ್ರೆಯನ್ನೂ,ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ.ಇನ್ನು ಮೇಲೆ ನೀನು ಅದನ್ನು ತಿರುಗಿ ಕುಡಿಯುವುದೇ ಇಲ್ಲ. 23 ಆದರೆ ನಾವು ಹಾದುಹೋಗುವಂತೆ, ನೀನು ನೆಲಕ್ಕೆ ಬೀಳುಎಂದು ನಿನ್ನ ಪ್ರಾಣಕ್ಕೆ ಹೇಳಿ,ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆಮತ್ತು ನೀನು ಹಾದುಹೋದವರಿಗೆ ನಿನ್ನ ಶರೀರವನ್ನು ನೆಲದಂತೆಯೂ,ಬೀದಿಯಂತೆಯೂ ಮಾಡಿಕೊಂಡಿಯಲ್ಲಾ.”

In Other Versions

Isaiah 51 in the ANGEFD

Isaiah 51 in the ANTPNG2D

Isaiah 51 in the AS21

Isaiah 51 in the BAGH

Isaiah 51 in the BBPNG

Isaiah 51 in the BBT1E

Isaiah 51 in the BDS

Isaiah 51 in the BEV

Isaiah 51 in the BHAD

Isaiah 51 in the BIB

Isaiah 51 in the BLPT

Isaiah 51 in the BNT

Isaiah 51 in the BNTABOOT

Isaiah 51 in the BNTLV

Isaiah 51 in the BOATCB

Isaiah 51 in the BOATCB2

Isaiah 51 in the BOBCV

Isaiah 51 in the BOCNT

Isaiah 51 in the BOECS

Isaiah 51 in the BOGWICC

Isaiah 51 in the BOHCB

Isaiah 51 in the BOHCV

Isaiah 51 in the BOHLNT

Isaiah 51 in the BOHNTLTAL

Isaiah 51 in the BOICB

Isaiah 51 in the BOILNTAP

Isaiah 51 in the BOITCV

Isaiah 51 in the BOKCV

Isaiah 51 in the BOKHWOG

Isaiah 51 in the BOKSSV

Isaiah 51 in the BOLCB

Isaiah 51 in the BOLCB2

Isaiah 51 in the BOMCV

Isaiah 51 in the BONAV

Isaiah 51 in the BONCB

Isaiah 51 in the BONLT

Isaiah 51 in the BONUT2

Isaiah 51 in the BOPLNT

Isaiah 51 in the BOSCB

Isaiah 51 in the BOSNC

Isaiah 51 in the BOTLNT

Isaiah 51 in the BOVCB

Isaiah 51 in the BOYCB

Isaiah 51 in the BPBB

Isaiah 51 in the BPH

Isaiah 51 in the BSB

Isaiah 51 in the CCB

Isaiah 51 in the CUV

Isaiah 51 in the CUVS

Isaiah 51 in the DBT

Isaiah 51 in the DGDNT

Isaiah 51 in the DHNT

Isaiah 51 in the DNT

Isaiah 51 in the ELBE

Isaiah 51 in the EMTV

Isaiah 51 in the ESV

Isaiah 51 in the FBV

Isaiah 51 in the FEB

Isaiah 51 in the GGMNT

Isaiah 51 in the GNT

Isaiah 51 in the HARY

Isaiah 51 in the HNT

Isaiah 51 in the IRVA

Isaiah 51 in the IRVB

Isaiah 51 in the IRVG

Isaiah 51 in the IRVH

Isaiah 51 in the IRVK

Isaiah 51 in the IRVM

Isaiah 51 in the IRVM2

Isaiah 51 in the IRVO

Isaiah 51 in the IRVP

Isaiah 51 in the IRVT

Isaiah 51 in the IRVT2

Isaiah 51 in the IRVU

Isaiah 51 in the ISVN

Isaiah 51 in the JSNT

Isaiah 51 in the KAPI

Isaiah 51 in the KBT1ETNIK

Isaiah 51 in the KBV

Isaiah 51 in the KJV

Isaiah 51 in the KNFD

Isaiah 51 in the LBA

Isaiah 51 in the LBLA

Isaiah 51 in the LNT

Isaiah 51 in the LSV

Isaiah 51 in the MAAL

Isaiah 51 in the MBV

Isaiah 51 in the MBV2

Isaiah 51 in the MHNT

Isaiah 51 in the MKNFD

Isaiah 51 in the MNG

Isaiah 51 in the MNT

Isaiah 51 in the MNT2

Isaiah 51 in the MRS1T

Isaiah 51 in the NAA

Isaiah 51 in the NASB

Isaiah 51 in the NBLA

Isaiah 51 in the NBS

Isaiah 51 in the NBVTP

Isaiah 51 in the NET2

Isaiah 51 in the NIV11

Isaiah 51 in the NNT

Isaiah 51 in the NNT2

Isaiah 51 in the NNT3

Isaiah 51 in the PDDPT

Isaiah 51 in the PFNT

Isaiah 51 in the RMNT

Isaiah 51 in the SBIAS

Isaiah 51 in the SBIBS

Isaiah 51 in the SBIBS2

Isaiah 51 in the SBICS

Isaiah 51 in the SBIDS

Isaiah 51 in the SBIGS

Isaiah 51 in the SBIHS

Isaiah 51 in the SBIIS

Isaiah 51 in the SBIIS2

Isaiah 51 in the SBIIS3

Isaiah 51 in the SBIKS

Isaiah 51 in the SBIKS2

Isaiah 51 in the SBIMS

Isaiah 51 in the SBIOS

Isaiah 51 in the SBIPS

Isaiah 51 in the SBISS

Isaiah 51 in the SBITS

Isaiah 51 in the SBITS2

Isaiah 51 in the SBITS3

Isaiah 51 in the SBITS4

Isaiah 51 in the SBIUS

Isaiah 51 in the SBIVS

Isaiah 51 in the SBT

Isaiah 51 in the SBT1E

Isaiah 51 in the SCHL

Isaiah 51 in the SNT

Isaiah 51 in the SUSU

Isaiah 51 in the SUSU2

Isaiah 51 in the SYNO

Isaiah 51 in the TBIAOTANT

Isaiah 51 in the TBT1E

Isaiah 51 in the TBT1E2

Isaiah 51 in the TFTIP

Isaiah 51 in the TFTU

Isaiah 51 in the TGNTATF3T

Isaiah 51 in the THAI

Isaiah 51 in the TNFD

Isaiah 51 in the TNT

Isaiah 51 in the TNTIK

Isaiah 51 in the TNTIL

Isaiah 51 in the TNTIN

Isaiah 51 in the TNTIP

Isaiah 51 in the TNTIZ

Isaiah 51 in the TOMA

Isaiah 51 in the TTENT

Isaiah 51 in the UBG

Isaiah 51 in the UGV

Isaiah 51 in the UGV2

Isaiah 51 in the UGV3

Isaiah 51 in the VBL

Isaiah 51 in the VDCC

Isaiah 51 in the YALU

Isaiah 51 in the YAPE

Isaiah 51 in the YBVTP

Isaiah 51 in the ZBP