Proverbs 14 (BOKCV2)
1 ಜ್ಞಾನಿಯಾದ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ;ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ. 2 ತನ್ನ ಯಥಾರ್ಥತೆಯಲ್ಲಿ ನಡೆಯುವವನು ಯೆಹೋವ ದೇವರಿಗೆ ಭಯಪಡುತ್ತಾನೆ,ಆದರೆ ಅವರನ್ನು ತಿರಸ್ಕರಿಸುವವರು ತಮ್ಮ ಮಾರ್ಗಗಳಲ್ಲಿ ಮೋಸ ಹೋಗುತ್ತಾರೆ. 3 ಬುದ್ಧಿಹೀನನ ಬಾಯಿಯಲ್ಲಿ ಗರ್ವದ ಅಂಕುರವಿದೆ,ಆದರೆ ಜ್ಞಾನವಂತರ ತುಟಿಗಳು ಅವರನ್ನು ಕಾಪಾಡುವುವು. 4 ಎತ್ತುಗಳು ಇಲ್ಲದೆ ಇರುವಲ್ಲಿ ಗೋದಲಿಯು ಶುಚಿಯಾಗಿರುತ್ತದೆ,ಆದರೆ ಎತ್ತಿನ ಬಲದಿಂದಲೇ ಬೆಳೆಯು ಹೇರಳವಾಗಿ ವೃದ್ಧಿಯಾಗುತ್ತದೆ. 5 ಪ್ರಾಮಾಣಿಕ ಸಾಕ್ಷಿಯು ಸುಳ್ಳಾಡನು,ಆದರೆ ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು. 6 ಅಪಹಾಸ್ಯ ಮಾಡುವವನು ಜ್ಞಾನವನ್ನು ಹುಡುಕಿದರೂ ಅದನ್ನು ಕಂಡುಕೊಳ್ಳುವುದಿಲ್ಲ,ಆದರೆ ವಿವೇಚಿಸುವವನಿಗೆ ಜ್ಞಾನವು ಸುಲಭವಾಗಿದೆ. 7 ನೀನು ಬುದ್ಧಿಹೀನನ ತುಟಿಗಳಲ್ಲಿ ಪರಿಜ್ಞಾನವನ್ನು ಕಾಣದೆ ಹೋದರೆ,ಅವನ ಬಳಿಯಿಂದ ಹೊರಟು ಹೋಗು. 8 ಜಾಣನ ಜ್ಞಾನವು ತನ್ನ ಮಾರ್ಗಗಳಿಗೆ ಆಲೋಚನೆ ನೀಡುತ್ತದೆ.ಮೂಢರ ಬುದ್ಧಿಹೀನತೆಯು ಮೋಸಕರ. 9 ಬುದ್ಧಿಹೀನರು ಪಾಪಪರಿಹಾರವನ್ನು ಅಪಹಾಸ್ಯ ಮಾಡುವರು,ಆದರೆ ನೀತಿವಂತರಿಗೆ ದಯೆಯಿದೆ. 10 ಹೃದಯಕ್ಕೆ ತನ್ನ ವ್ಯಥೆಯು ಗೊತ್ತು;ಪರನು ಅದರ ಸಂತೋಷದಲ್ಲಿ ಪಾಲಾಗುವುದಿಲ್ಲ. 11 ದುಷ್ಟರ ಮನೆಯು ನಾಶವಾಗುವುದು,ಆದರೆ ಯಥಾರ್ಥವಂತರ ಗುಡಾರವು ಏಳಿಗೆಯಾಗುವುದು. 12 ಮನುಷ್ಯ ದೃಷ್ಟಿಗೆ ಸರಿ ತೋರುವ ಒಂದು ಮಾರ್ಗವಿದೆ,ಆದರೆ ಅದರ ಅಂತ್ಯವು ಮರಣದ ಮಾರ್ಗಗಳೇ. 13 ನಗೆಯಲ್ಲಿಯೂ ಹೃದಯವು ದುಃಖದಿಂದ ಇರುವುದು,ಅದರ ಉಲ್ಲಾಸದ ಅಂತ್ಯವು ಸಂತಾಪವೇ. 14 ಭ್ರಷ್ಟನು ತನ್ನ ದುಷ್ಕರ್ಮಗಳಿಂದ ದಣಿಯನು,ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು. 15 ಅರಿವಿಲ್ಲದವರು ಯಾವ ಮಾತನ್ನಾದರೂ ನಂಬುತ್ತಾರೆ,ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು. 16 ಜ್ಞಾನಿಯು ಯೆಹೋವ ದೇವರಿಗೆ ಭಯಪಟ್ಟು ಕೆಟ್ಟತನದಿಂದ ದೂರ ಹೋಗುವನು,ಆದರೆ ಬುದ್ಧಿಹೀನನು ಯೋಚಿಸದೆ ಆತ್ಮವಿಶ್ವಾಸದಿಂದ ನಡೆಯುವನು. 17 ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ,ಜನರು ಕುಯುಕ್ತಿಯುಳ್ಳವನನ್ನು ಹಗೆ ಮಾಡುತ್ತಾರೆ. 18 ಅರಿವಿಲ್ಲದವರು ಮೂರ್ಖತನಕ್ಕೆ ಬಾಧ್ಯರಾಗುತ್ತಾರೆ,ಆದರೆ ಜಾಣರು ಪರಿಜ್ಞಾನದಿಂದ ಆವರಿಸುತ್ತಾರೆ. 19 ದುಷ್ಟರು ಒಳ್ಳೆಯವರಿಗೆ ಬಾಗುತ್ತಾರೆ,ದುಷ್ಟರು ನೀತಿವಂತರ ದ್ವಾರಗಳಲ್ಲಿ ಅಡ್ಡ ಬೀಳುತ್ತಾರೆ. 20 ಬಡವನು ಅವನ ನೆರೆಯವನಿಂದಲೇ ಕಡೆಗಣಿಸಲಾಗುವನು;ಆದರೆ ಐಶ್ವರ್ಯವಂತನಿಗೆ ಬಹುಜನ ಮಿತ್ರರು. 21 ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪಮಾಡುತ್ತಾನೆ,ಬಡವರ ಮೇಲೆ ಕನಿಕರ ತೋರಿಸುವವನು ಧನ್ಯನು. 22 ಕೆಟ್ಟದ್ದನ್ನು ಕಲ್ಪಿಸುವವರು ದಾರಿ ತಪ್ಪುವುದಿಲ್ಲವೇ?ಆದರೆ ಒಳ್ಳೆಯದನ್ನು ಕಲ್ಪಿಸುವವರಿಗೆ ಪ್ರೀತಿ ಸತ್ಯತೆಯು ಇರುವುವು. 23 ಎಲ್ಲಾ ಪ್ರಯಾಸದಲ್ಲಿ ಲಾಭವಿದೆ,ಹರಟೆ ಮಾತು ಬಡತನಕ್ಕೆ ಮಾತ್ರ ದಾರಿ. 24 ಜ್ಞಾನವಂತರ ಕಿರೀಟವೇ ಅವರ ಸಂಪತ್ತು,ಆದರೆ ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವನ್ನು ನೀಡುತ್ತದೆ. 25 ಸತ್ಯಸಾಕ್ಷಿಯು ಪ್ರಾಣಗಳನ್ನು ರಕ್ಷಿಸುತ್ತಾನೆ,ಸುಳ್ಳುಸಾಕ್ಷಿಯು ಮೋಸಗಾರನು. 26 ಯೆಹೋವ ದೇವರಿಗೆ ಭಯಪಡುವವನು ಭದ್ರಕೋಟೆಯನ್ನು ಹೊಂದಿದ್ದಾನೆ.ಆತನ ಮಕ್ಕಳಿಗೆ ಆಶ್ರಯವು ಇರುವುದು. 27 ಯೆಹೋವ ದೇವರ ಭಯವು ಜೀವದ ಬುಗ್ಗೆಯಾಗಿದೆ.ಅದು ಮನುಷ್ಯನನ್ನು ಮರಣದ ಪಾಶಗಳಿಂದ ತಿರುಗಿಸುತ್ತದೆ. 28 ಜನಸಮೂಹದಲ್ಲಿ ಅರಸನ ಘನತೆ ಇದೆ.ಆದರೆ ಜನರ ಕೊರತೆಯಲ್ಲಿ ರಾಜಪುತ್ರನ ನಾಶ. 29 ತಾಳ್ಮೆಯುಳ್ಳವನು ಬಹು ವಿವೇಕಿ,ಮುಂಗೋಪಿಯು ಮೂರ್ಖತನವನ್ನು ಎತ್ತಿಹಿಡಿಯುವನು. 30 ಶಾಂತ ಹೃದಯವು ದೇಹಕ್ಕೆ ಜೀವ;ಆದರೆ ಮತ್ಸರವು ಎಲುಬುಗಳಿಗೆ ಕ್ಷಯ. 31 ಬಡವರನ್ನು ಹಿಂಸಿಸುವವನು, ತನ್ನ ಸೃಷ್ಟಿಕರ್ತನನ್ನು ಹೀನೈಸುವನು,ಆದರೆ ಬಡವರನ್ನು ಕನಿಕರಿಸುವವನು ದೇವರನ್ನು ಸನ್ಮಾನಿಸುವನು. 32 ದುಷ್ಟನು ತನ್ನ ಆಪತ್ಕಾಲದಲ್ಲಿ ಹಾಳಾಗುತ್ತಾನೆ,ಆದರೆ ನೀತಿವಂತನಿಗೆ ಮರಣದಲ್ಲಿಯೂ ಆಶ್ರಯ ಇದೆ. 33 ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆಯಾಗಿದೆ,ಆದರೆ ಮೂರ್ಖರಲ್ಲಿ ಜ್ಞಾನವು ಕಂಡುಬರುವುದಿಲ್ಲ. 34 ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ;ಆದರೆ ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ. 35 ಜ್ಞಾನವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ;ಆದರೆ ಮಾನಗೇಡಿ ಸೇವಕನ ಮೇಲೆ ಅರಸನ ಕೋಪ ಎರಗುತ್ತದೆ.
In Other Versions
Proverbs 14 in the ANGEFD
Proverbs 14 in the ANTPNG2D
Proverbs 14 in the AS21
Proverbs 14 in the BAGH
Proverbs 14 in the BBPNG
Proverbs 14 in the BBT1E
Proverbs 14 in the BDS
Proverbs 14 in the BEV
Proverbs 14 in the BHAD
Proverbs 14 in the BIB
Proverbs 14 in the BLPT
Proverbs 14 in the BNT
Proverbs 14 in the BNTABOOT
Proverbs 14 in the BNTLV
Proverbs 14 in the BOATCB
Proverbs 14 in the BOATCB2
Proverbs 14 in the BOBCV
Proverbs 14 in the BOCNT
Proverbs 14 in the BOECS
Proverbs 14 in the BOGWICC
Proverbs 14 in the BOHCB
Proverbs 14 in the BOHCV
Proverbs 14 in the BOHLNT
Proverbs 14 in the BOHNTLTAL
Proverbs 14 in the BOICB
Proverbs 14 in the BOILNTAP
Proverbs 14 in the BOITCV
Proverbs 14 in the BOKCV
Proverbs 14 in the BOKHWOG
Proverbs 14 in the BOKSSV
Proverbs 14 in the BOLCB
Proverbs 14 in the BOLCB2
Proverbs 14 in the BOMCV
Proverbs 14 in the BONAV
Proverbs 14 in the BONCB
Proverbs 14 in the BONLT
Proverbs 14 in the BONUT2
Proverbs 14 in the BOPLNT
Proverbs 14 in the BOSCB
Proverbs 14 in the BOSNC
Proverbs 14 in the BOTLNT
Proverbs 14 in the BOVCB
Proverbs 14 in the BOYCB
Proverbs 14 in the BPBB
Proverbs 14 in the BPH
Proverbs 14 in the BSB
Proverbs 14 in the CCB
Proverbs 14 in the CUV
Proverbs 14 in the CUVS
Proverbs 14 in the DBT
Proverbs 14 in the DGDNT
Proverbs 14 in the DHNT
Proverbs 14 in the DNT
Proverbs 14 in the ELBE
Proverbs 14 in the EMTV
Proverbs 14 in the ESV
Proverbs 14 in the FBV
Proverbs 14 in the FEB
Proverbs 14 in the GGMNT
Proverbs 14 in the GNT
Proverbs 14 in the HARY
Proverbs 14 in the HNT
Proverbs 14 in the IRVA
Proverbs 14 in the IRVB
Proverbs 14 in the IRVG
Proverbs 14 in the IRVH
Proverbs 14 in the IRVK
Proverbs 14 in the IRVM
Proverbs 14 in the IRVM2
Proverbs 14 in the IRVO
Proverbs 14 in the IRVP
Proverbs 14 in the IRVT
Proverbs 14 in the IRVT2
Proverbs 14 in the IRVU
Proverbs 14 in the ISVN
Proverbs 14 in the JSNT
Proverbs 14 in the KAPI
Proverbs 14 in the KBT1ETNIK
Proverbs 14 in the KBV
Proverbs 14 in the KJV
Proverbs 14 in the KNFD
Proverbs 14 in the LBA
Proverbs 14 in the LBLA
Proverbs 14 in the LNT
Proverbs 14 in the LSV
Proverbs 14 in the MAAL
Proverbs 14 in the MBV
Proverbs 14 in the MBV2
Proverbs 14 in the MHNT
Proverbs 14 in the MKNFD
Proverbs 14 in the MNG
Proverbs 14 in the MNT
Proverbs 14 in the MNT2
Proverbs 14 in the MRS1T
Proverbs 14 in the NAA
Proverbs 14 in the NASB
Proverbs 14 in the NBLA
Proverbs 14 in the NBS
Proverbs 14 in the NBVTP
Proverbs 14 in the NET2
Proverbs 14 in the NIV11
Proverbs 14 in the NNT
Proverbs 14 in the NNT2
Proverbs 14 in the NNT3
Proverbs 14 in the PDDPT
Proverbs 14 in the PFNT
Proverbs 14 in the RMNT
Proverbs 14 in the SBIAS
Proverbs 14 in the SBIBS
Proverbs 14 in the SBIBS2
Proverbs 14 in the SBICS
Proverbs 14 in the SBIDS
Proverbs 14 in the SBIGS
Proverbs 14 in the SBIHS
Proverbs 14 in the SBIIS
Proverbs 14 in the SBIIS2
Proverbs 14 in the SBIIS3
Proverbs 14 in the SBIKS
Proverbs 14 in the SBIKS2
Proverbs 14 in the SBIMS
Proverbs 14 in the SBIOS
Proverbs 14 in the SBIPS
Proverbs 14 in the SBISS
Proverbs 14 in the SBITS
Proverbs 14 in the SBITS2
Proverbs 14 in the SBITS3
Proverbs 14 in the SBITS4
Proverbs 14 in the SBIUS
Proverbs 14 in the SBIVS
Proverbs 14 in the SBT
Proverbs 14 in the SBT1E
Proverbs 14 in the SCHL
Proverbs 14 in the SNT
Proverbs 14 in the SUSU
Proverbs 14 in the SUSU2
Proverbs 14 in the SYNO
Proverbs 14 in the TBIAOTANT
Proverbs 14 in the TBT1E
Proverbs 14 in the TBT1E2
Proverbs 14 in the TFTIP
Proverbs 14 in the TFTU
Proverbs 14 in the TGNTATF3T
Proverbs 14 in the THAI
Proverbs 14 in the TNFD
Proverbs 14 in the TNT
Proverbs 14 in the TNTIK
Proverbs 14 in the TNTIL
Proverbs 14 in the TNTIN
Proverbs 14 in the TNTIP
Proverbs 14 in the TNTIZ
Proverbs 14 in the TOMA
Proverbs 14 in the TTENT
Proverbs 14 in the UBG
Proverbs 14 in the UGV
Proverbs 14 in the UGV2
Proverbs 14 in the UGV3
Proverbs 14 in the VBL
Proverbs 14 in the VDCC
Proverbs 14 in the YALU
Proverbs 14 in the YAPE
Proverbs 14 in the YBVTP
Proverbs 14 in the ZBP