Proverbs 14 (IRVK)

1 ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು,ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ನಾಶಮಾಡುವಳು. 2 ಸರಳಮಾರ್ಗಿಯು ಯೆಹೋವನಿಗೆ ಭಯಪಡುವನು,ವಕ್ರಮಾರ್ಗಿಯು ಆತನನ್ನು ಅಸಡ್ಡೆಮಾಡುವನು. 3 ಮೂರ್ಖನ ಮಾತುಗಳು ಅವನ ಬೆನ್ನಿಗೆ ಬೆತ್ತ,ಜ್ಞಾನಿಗಳ ತುಟಿಗಳು ಅವರನ್ನು ಕಾಯುವವು. 4 ಎತ್ತುಗಳಿಲ್ಲದಿರುವಾಗ ಗೋದಲಿಯು ಶುದ್ಧ,ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ವೃದ್ಧಿಯಾಗುವುದು. 5 ಸತ್ಯಸಾಕ್ಷಿಯು ಸುಳ್ಳಾಡನು,ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು. 6 ಧರ್ಮನಿಂದಕನಲ್ಲಿ ಹುಡುಕಿದರೂ ಜ್ಞಾನವು ಸಿಕ್ಕದು,ವಿವೇಕಿಗೆ ತಿಳಿವಳಿಕೆಯು ಸುಲಭವಾಗಿ ದೊರೆಯುವುದು. 7 ನೀನು ಜ್ಞಾನಹೀನನ ಬಳಿಗೆ ಹೋದರೆ ಅವನ ತುಟಿಗಳಲ್ಲಿ ಯಾವ ತಿಳಿವಳಿಕೆಯನ್ನೂ ಕಾಣಲಾರೆ. 8 ಸನ್ಮಾರ್ಗವನ್ನು ಗ್ರಹಿಸಿಕೊಳ್ಳುವುದೇ ಜಾಣನ ಜ್ಞಾನ,ಮೂಢರ ಮೂರ್ಖತನ ಮೋಸಕರ. 9 ಮೂರ್ಖರನ್ನು ಅವರ ದೋಷವೇ ಹಾಸ್ಯಮಾಡುವುದು,ಯಥಾರ್ಥವಂತರಲ್ಲಿ (ದೇವರ) ದಯೆಯಿರುವುದು. 10 ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು,ಅವನ ಆನಂದದಲ್ಲಿಯೂ ಬೇರೆಯವರು ಪಾಲುಗಾರರಾಗುವುದಿಲ್ಲ. 11 ದುಷ್ಟರ ಮನೆಗೆ ನಾಶನ,ಶಿಷ್ಟರ ಗುಡಾರಕ್ಕೆ ಏಳಿಗೆ. 12 ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು.ಅದು ಕಟ್ಟಕಡೆಗೆ ಮರಣಮಾರ್ಗವೇ. 13 ನಗುವವನಿಗೂ ಮನೋವ್ಯಥೆಯುಂಟು,ಉಲ್ಲಾಸದ ಅಂತ್ಯವು ವ್ಯಾಕುಲವೇ. 14 ಭ್ರಷ್ಟನು ಕರ್ಮಫಲವನ್ನು ತಿಂದು ತಿಂದು ದಣಿಯುವನು,ಶಿಷ್ಟನು ತನ್ನಲ್ಲಿ ತಾನೇ ತೃಪ್ತನಾಗುವನು. 15 ಮೂಢನು ಯಾವ ಮಾತನ್ನಾದರೂ ನಂಬುವನು,ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು. 16 ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು,ಜ್ಞಾನಹೀನನು ಸೊಕ್ಕಿನಿಂದ ಭಯವನ್ನು ಲಕ್ಷಿಸನು. 17 ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುವನು, ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು. 18 ಮೂರ್ಖರಿಗೆ ಮೂರ್ಖತನವೇ ಸ್ವತ್ತು,ಜಾಣರಿಗೆ ಜ್ಞಾನವೇ ಕಿರೀಟ. 19 ಕೆಟ್ಟವರು ಒಳ್ಳೆಯವರಿಗೆ ಬಾಗುವರು,ದುಷ್ಟರು ಶಿಷ್ಟರ ಬಾಗಿಲಲ್ಲಿ ಅಡ್ಡಬೀಳುವರು. 20 ಬಡವನು ನೆರೆಯವನಿಗೂ ಅಸಹ್ಯ,ಧನವಂತನಿಗೆ ಬಹು ಜನ ಮಿತ್ರರು. 21 ನೆರೆಯವನನ್ನು ತಿರಸ್ಕರಿಸುವವನು ದೋಷಿ,ದರಿದ್ರನನ್ನು ಕನಿಕರಿಸುವವನು ಧನ್ಯನು. 22 ಕುಯುಕ್ತಿಯುಳ್ಳವರು ದಾರಿತಪ್ಪಿದವರೇ ಸರಿ,ಒಳ್ಳೆಯದನ್ನು ಕಲ್ಪಿಸುವವರು ಪ್ರೀತಿಸತ್ಯತೆಗಳಿಗೆ ಪಾತ್ರರು. 23 ಶ್ರಮೆಯಿಂದ ಸಮೃದ್ಧಿ,ಹರಟೆಯಿಂದ ಕೊರತೆ. 24 ಜ್ಞಾನಿಗಳ ಜ್ಞಾನಕಿರೀಟವೇ ಅವರ ಶ್ರೇಷ್ಠ ಸಂಪತ್ತು,ಜ್ಞಾನಹೀನರ ಮೂರ್ಖತನವು ಬರೀ ಮೂರ್ಖತನವೇ. 25 ಸತ್ಯಸಾಕ್ಷಿಯು ಪ್ರಾಣರಕ್ಷಕ,ಸುಳ್ಳುಸಾಕ್ಷಿಯು ವಂಚಕ. 26 ಯೆಹೋವನಿಗೆ ಭಯಪಡುವುದರಿಂದ ಕೇವಲ ನಿರ್ಭಯ,ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವುದು. 27 ಯೆಹೋವನ ಭಯ ಜೀವದ ಬುಗ್ಗೆ,ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು ಅದು ಸಾಧನವಾಗಿದೆ. 28 ಪ್ರಜೆಗಳ ವೃದ್ಧಿ ರಾಜನ ಮಹಿಮೆ,ಪ್ರಜೆಗಳ ನಾಶ ಪ್ರಭುವಿಗೆ ಭಯ. 29 ದೀರ್ಘಶಾಂತನು ಕೇವಲ ಬುದ್ಧಿವಂತನು,ಮುಂಗೋಪಿಯು ಮೂರ್ಖತನವನ್ನು ಧ್ವಜವಾಗಿ ಎತ್ತುವನು. 30 ಶಾಂತಗುಣವು ದೇಹಕ್ಕೆ ಜೀವಾಧಾರವು,ಕ್ರೋಧವು ಎಲುಬಿಗೆ ಕ್ಷಯವು. 31 ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು,ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು. 32 ದುಷ್ಟನು ವಿಪತ್ತಿಗೊಳಗಾಗಿ ಹಾಳಾಗುವನು,ಶಿಷ್ಟನು ಮರಣಕಾಲದಲ್ಲಿಯೂ ಆಶ್ರಯಹೊಂದುವನು. 33 ವಿವೇಕಿಯ ಹೃದಯ ಜ್ಞಾನಾಶ್ರಯ,ಜ್ಞಾನಹೀನನ ಹೃದಯದಲ್ಲಿ ಅದು ಕಾಣದು. 34 ಪ್ರಜೆಗೆ ಧರ್ಮವು ಉನ್ನತಿ,ಅಧರ್ಮವು ಅವಮಾನ. 35 ಜಾಣನಾದ ಸೇವಕನಿಗೆ ರಾಜನ ಕೃಪೆ,ಮಾನಗೇಡಿಗೆ ರಾಜನ ರೌದ್ರ.

In Other Versions

Proverbs 14 in the ANGEFD

Proverbs 14 in the ANTPNG2D

Proverbs 14 in the AS21

Proverbs 14 in the BAGH

Proverbs 14 in the BBPNG

Proverbs 14 in the BBT1E

Proverbs 14 in the BDS

Proverbs 14 in the BEV

Proverbs 14 in the BHAD

Proverbs 14 in the BIB

Proverbs 14 in the BLPT

Proverbs 14 in the BNT

Proverbs 14 in the BNTABOOT

Proverbs 14 in the BNTLV

Proverbs 14 in the BOATCB

Proverbs 14 in the BOATCB2

Proverbs 14 in the BOBCV

Proverbs 14 in the BOCNT

Proverbs 14 in the BOECS

Proverbs 14 in the BOGWICC

Proverbs 14 in the BOHCB

Proverbs 14 in the BOHCV

Proverbs 14 in the BOHLNT

Proverbs 14 in the BOHNTLTAL

Proverbs 14 in the BOICB

Proverbs 14 in the BOILNTAP

Proverbs 14 in the BOITCV

Proverbs 14 in the BOKCV

Proverbs 14 in the BOKCV2

Proverbs 14 in the BOKHWOG

Proverbs 14 in the BOKSSV

Proverbs 14 in the BOLCB

Proverbs 14 in the BOLCB2

Proverbs 14 in the BOMCV

Proverbs 14 in the BONAV

Proverbs 14 in the BONCB

Proverbs 14 in the BONLT

Proverbs 14 in the BONUT2

Proverbs 14 in the BOPLNT

Proverbs 14 in the BOSCB

Proverbs 14 in the BOSNC

Proverbs 14 in the BOTLNT

Proverbs 14 in the BOVCB

Proverbs 14 in the BOYCB

Proverbs 14 in the BPBB

Proverbs 14 in the BPH

Proverbs 14 in the BSB

Proverbs 14 in the CCB

Proverbs 14 in the CUV

Proverbs 14 in the CUVS

Proverbs 14 in the DBT

Proverbs 14 in the DGDNT

Proverbs 14 in the DHNT

Proverbs 14 in the DNT

Proverbs 14 in the ELBE

Proverbs 14 in the EMTV

Proverbs 14 in the ESV

Proverbs 14 in the FBV

Proverbs 14 in the FEB

Proverbs 14 in the GGMNT

Proverbs 14 in the GNT

Proverbs 14 in the HARY

Proverbs 14 in the HNT

Proverbs 14 in the IRVA

Proverbs 14 in the IRVB

Proverbs 14 in the IRVG

Proverbs 14 in the IRVH

Proverbs 14 in the IRVM

Proverbs 14 in the IRVM2

Proverbs 14 in the IRVO

Proverbs 14 in the IRVP

Proverbs 14 in the IRVT

Proverbs 14 in the IRVT2

Proverbs 14 in the IRVU

Proverbs 14 in the ISVN

Proverbs 14 in the JSNT

Proverbs 14 in the KAPI

Proverbs 14 in the KBT1ETNIK

Proverbs 14 in the KBV

Proverbs 14 in the KJV

Proverbs 14 in the KNFD

Proverbs 14 in the LBA

Proverbs 14 in the LBLA

Proverbs 14 in the LNT

Proverbs 14 in the LSV

Proverbs 14 in the MAAL

Proverbs 14 in the MBV

Proverbs 14 in the MBV2

Proverbs 14 in the MHNT

Proverbs 14 in the MKNFD

Proverbs 14 in the MNG

Proverbs 14 in the MNT

Proverbs 14 in the MNT2

Proverbs 14 in the MRS1T

Proverbs 14 in the NAA

Proverbs 14 in the NASB

Proverbs 14 in the NBLA

Proverbs 14 in the NBS

Proverbs 14 in the NBVTP

Proverbs 14 in the NET2

Proverbs 14 in the NIV11

Proverbs 14 in the NNT

Proverbs 14 in the NNT2

Proverbs 14 in the NNT3

Proverbs 14 in the PDDPT

Proverbs 14 in the PFNT

Proverbs 14 in the RMNT

Proverbs 14 in the SBIAS

Proverbs 14 in the SBIBS

Proverbs 14 in the SBIBS2

Proverbs 14 in the SBICS

Proverbs 14 in the SBIDS

Proverbs 14 in the SBIGS

Proverbs 14 in the SBIHS

Proverbs 14 in the SBIIS

Proverbs 14 in the SBIIS2

Proverbs 14 in the SBIIS3

Proverbs 14 in the SBIKS

Proverbs 14 in the SBIKS2

Proverbs 14 in the SBIMS

Proverbs 14 in the SBIOS

Proverbs 14 in the SBIPS

Proverbs 14 in the SBISS

Proverbs 14 in the SBITS

Proverbs 14 in the SBITS2

Proverbs 14 in the SBITS3

Proverbs 14 in the SBITS4

Proverbs 14 in the SBIUS

Proverbs 14 in the SBIVS

Proverbs 14 in the SBT

Proverbs 14 in the SBT1E

Proverbs 14 in the SCHL

Proverbs 14 in the SNT

Proverbs 14 in the SUSU

Proverbs 14 in the SUSU2

Proverbs 14 in the SYNO

Proverbs 14 in the TBIAOTANT

Proverbs 14 in the TBT1E

Proverbs 14 in the TBT1E2

Proverbs 14 in the TFTIP

Proverbs 14 in the TFTU

Proverbs 14 in the TGNTATF3T

Proverbs 14 in the THAI

Proverbs 14 in the TNFD

Proverbs 14 in the TNT

Proverbs 14 in the TNTIK

Proverbs 14 in the TNTIL

Proverbs 14 in the TNTIN

Proverbs 14 in the TNTIP

Proverbs 14 in the TNTIZ

Proverbs 14 in the TOMA

Proverbs 14 in the TTENT

Proverbs 14 in the UBG

Proverbs 14 in the UGV

Proverbs 14 in the UGV2

Proverbs 14 in the UGV3

Proverbs 14 in the VBL

Proverbs 14 in the VDCC

Proverbs 14 in the YALU

Proverbs 14 in the YAPE

Proverbs 14 in the YBVTP

Proverbs 14 in the ZBP