Nahum 3 (IRVK)

1 ಅಯ್ಯೋ, ರಕ್ತಮಯ ಪಟ್ಟಣವೆ ನಿನ್ನ ಗತಿಯನ್ನು ಏನೆಂದು ಹೇಳಲಿ! ಅದು ಸುಳ್ಳಿನಿಂದಲೂ, ಸುಲಿಗೆಯಿಂದಲೂ ತುಂಬಿದೆ; ಕೊಳ್ಳೆಹೊಡೆಯುವುದನ್ನು ಬಿಡುವುದೇ ಇಲ್ಲ. 2 ಆಹಾ! ಚಾಟಿಯ ಚಟಚಟ ಶಬ್ದ, ಚಕ್ರಗಳ ಚೀತ್ಕಾರ, ಕುದುರೆಗಳ ಭರಧೌಡು, ರಥಗಳ ಹಾರಾಟ, 3 ರಾಹುತರ ರಭಸ, ಥಳಥಳಿಸುವ ಕತ್ತಿ, ಮಿಂಚುವ ಈಟಿ, ಅಸಂಖ್ಯಾತವಾಗಿ ಹತರಾದ ಸೈನಿಕರ ಶವಗಳ ಮಹಾರಾಶಿ, ಸತ್ತವರು ಲೆಕ್ಕವೇ ಇಲ್ಲ, ನುಗ್ಗುವವರು ಅವರ ಹೆಣಗಳನ್ನು ಎಡವುತ್ತಾರೆ. 4 ಅತಿಸುಂದರಿಯೂ, ಮಂತ್ರತಂತ್ರ ನಿಪುಣಳೂ ಜನಾಂಗಗಳನ್ನು ತನ್ನ ವೇಶ್ಯಾವಾಟಿಕೆಯಿಂದ ಕುಲಗಳನ್ನು ತನ್ನ ಮಂತ್ರತಂತ್ರಗಳಿಂದ ಗುಲಾಮತನಕ್ಕೆ ತಂದವಳೂ ಆದ ವೇಶ್ಯೆಯು ಲೆಕ್ಕವಿಲ್ಲದ ವೇಶ್ಯಾವಾಟಿಕೆಯ ನಿಮಿತ್ತ ಇದೆಲ್ಲಾ ಆಗುವುದು. 5 ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, “ಇಗೋ ನಾನು ನಿನಗೆ ವಿರುದ್ಧವಾಗಿದ್ದೇನೆ, ನಿನ್ನ ನೆರಿಗೆಯನ್ನು ನಿನ್ನ ಕಣ್ಣ ಮುಂದೆಯೇ ಕೀಳಿಸುವೆನು, ನಿನ್ನ ಬೆತ್ತಲೆತನವನ್ನು ಜನಾಂಗಗಳಿಗೆ ತೋರಿಸುವೆನು, ನಿನ್ನ ಅವಮಾನವನ್ನು ರಾಜ್ಯಗಳಿಗೆ ತೋರುವಂತೆ ಮಾಡುವೆನು. 6 ನಿನ್ನ ಮೇಲೆ ಹೊಲಸನ್ನು ಹಾಕಿ ಮಾನಕಳೆದು ನಿನ್ನನ್ನು ಎಲ್ಲರೂ ಪರಿಹಾಸ್ಯ ಮಾಡುವಂತೆ ಮಾಡುವೆನು. 7 ನಿನ್ನನ್ನು ನೋಡುವ ಪ್ರತಿಯೊಬ್ಬನು ನಿನ್ನ ಕಡೆಯಿಂದ ಓಡಿಹೋಗಿ, ‘ನಿನವೆಯೂ ಹಾಳಾಯಿತಲ್ಲಾ, ಅದಕ್ಕಾಗಿ ಯಾರು ಗೋಳಾಡುವರು?’ ನಿನ್ನನ್ನು ಸಂತೈಸುವವರು ನನಗೆ ಎಲ್ಲಿ ಸಿಕ್ಕಾರು?” ಅಂದುಕೊಳ್ಳುವನು. 8 ನೀನು ನೋ ಆಮೋನ್ ಪಟ್ಟಣಗಿಂತ ಭದ್ರವಾಗಿದ್ದೀಯೋ? ಅದು ನೈಲಿನ ಪ್ರವಾಹಗಳಲ್ಲಿ ನೆಲೆಯಾಗಿತ್ತು. ನೀರು ಅದನ್ನು ಸುತ್ತಿಕೊಂಡಿತ್ತು, ಮಹಾ ನದಿಯು ಅದಕ್ಕೆ ಪೌಳಿಗೋಡೆ, ಜಲಾಶಯವು ಅದರ ದುರ್ಗ. 9 ಕೂಷ್ ಮತ್ತು ಐಗುಪ್ತವು ಅದರ ಅಪಾರ ಬಲ, ಪೂಟರೂ, ಲೂಬ್ಯರೂ ಅದಕ್ಕೆ ಸಹಾಯಕರು. 10 ಆದರೂ ಅದು ಗಡೀಪಾರಾಗಿ ಸೆರೆಹೋಯಿತು; ಅದರ ಮಕ್ಕಳನ್ನು ಪ್ರತಿ ಬೀದಿಯ ಕೊನೆಯಲ್ಲಿ ಬಂಡೆಗೆ ಅಪ್ಪಳಿಸಿ ಬಿಟ್ಟರು; ಅದರ ಪ್ರಮುಖರನ್ನು ಬಂಧಿಸಿ ಚೀಟು ಹಾಕಿದರು, ಅದರ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಬಂಧಿಸಿದರು. 11 ನೀನೂ ಓಲಾಡುವಿ, ಬಳಲಿಹೋಗುವಿ; ನೀನೂ ಶತ್ರುವಿನ ನಿಮಿತ್ತ ಆಶ್ರಯವನ್ನು ಹುಡುಕುವಿ. 12 ನಿನ್ನ ಕೋಟೆಗಳೆಲ್ಲಾ ಮೊದಲು ಮಾಗಿದ ಹಣ್ಣುಳ್ಳ ಅಂಜೂರದ ಮರಗಳಂತಿರುವವು; ಆ ಮರಗಳನ್ನು ಅಲ್ಲಾಡಿಸಿದರೆ ಹಣ್ಣು ತಿನ್ನುವವನ ಬಾಯಿಗೆ ಬೀಳುವುದು. 13 ಆಹಾ! ನಿನ್ನಲ್ಲಿನ ಜನರು ಹೆಣ್ಣಿಗರು; ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ತೆರೆದು ಹಾಕಿವೆ; ಬೆಂಕಿಯು ನಿನ್ನ ಅಗುಳಿಗಳನ್ನು ನುಂಗಿಬಿಟ್ಟಿದೆ. 14 ಮುತ್ತಿಗೆಯ ಕಾಲಕ್ಕೆ ನೀರನ್ನು ಸೇದಿಟ್ಟುಕೋ, ನಿನ್ನ ಕೋಟೆಗಳನ್ನು ಬಲಪಡಿಸಿಕೋ; ಮಣ್ಣಿಗೆ ಇಳಿ, ಜೇಡಿಮಣ್ಣನ್ನು ತುಳಿ, ಇಟ್ಟಿಗೆಯ ಅಚ್ಚನ್ನು ಹಿಡಿ. 15 ಇದ್ದಲ್ಲಿಯೇ ಬೆಂಕಿಯು ನಿನ್ನನ್ನು ನುಂಗುವುದು. ಕತ್ತಿಯು ನಿನ್ನನ್ನು ಕಡಿದುಬಿಡುವುದು, ಮಿಡತೆಗಳೋಪಾದಿಯಲ್ಲಿ ನುಂಗಲ್ಪಡುವಿ; ನಿನ್ನ ಜನಸಂಖ್ಯೆಯು ಮಿಡತೆಗಳಷ್ಟು ಅಸಂಖ್ಯಾತವಾಗಲಿ, ಗುಂಪುಮಿಡತೆಗಳಷ್ಟು ಅಪರಿಮಿತವಾಗಲಿ, 16 ನಿನ್ನ ವರ್ತಕರ ಸಂಖ್ಯೆಯನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿಸಿದ್ದೀ; ಆದರೆ, ಮಿಡತೆಯು ರೆಕ್ಕೆಗಳ ಪರೆಯನ್ನು ಹರಿದುಕೊಂಡು ಹಾರಿಹೋಗಿ ಬಿಡುವುದಷ್ಟೇ. 17 ನಿನ್ನ ಪ್ರಭುಗಳು ಮಿಡತೆಯಂತಿದ್ದಾರೆ, ಮಿಡತೆಯ ದಂಡು ಚಳಿಗಾಲದಲ್ಲಿ ಬೇಲಿಗಳೊಳಗೆ ಇಳಿದಿದ್ದು, ಹೊತ್ತು ಹುಟ್ಟಿದಾಗ ಓಡಿಹೋಗಿ ಯಾರಿಗೂ ಗೊತ್ತಾಗದ ಸ್ಥಳದಲ್ಲಿ ಅಡಗುವ ಪ್ರಕಾರ ನಿನ್ನ ಸೇನಾಪತಿಗಳು ಮಾಯವಾಗುತ್ತಾರೆ. 18 ಅಶ್ಶೂರದ ಅರಸನೇ, ನಿನ್ನ ದೇಶಪಾಲಕರು ದೀರ್ಘ ನಿದ್ರೆ ಮಾಡುತ್ತಿದ್ದಾರೆ; ನಿನ್ನ ಮಹನೀಯರು ದೀರ್ಘನಿದ್ದೆಯಲ್ಲಿದ್ದಾರೆ; ನಿನ್ನ ಪ್ರಜೆಗಳು ಬೆಟ್ಟಗಳಲ್ಲಿ ಚದರಿದ್ದಾರೆ, ಅವರನ್ನು ಕೂಡಿಸುವವರು ಯಾರೂ ಇಲ್ಲ. 19 ನಿನ್ನ ಗಾಯವು ಗುಣಹೊಂದದು, ನಿನ್ನ ಗಾಯವು ತೀವ್ರವೇ. ನಿನ್ನ ವಿನಾಶದ ಸುದ್ದಿಯನ್ನು ಕೇಳಿದವರೆಲ್ಲರೂ ನಿನಗೆ ಚಪ್ಪಾಳೆ ಹಾಕಿ ನಗುತ್ತಾರೆ; ನಿನ್ನ ಕೆಡುಕಿಗೆ ನಿತ್ಯವೂ ಗುರಿಯಾಗದವರು ಯಾರೂ ಇಲ್ಲ.

In Other Versions

Nahum 3 in the ANGEFD

Nahum 3 in the ANTPNG2D

Nahum 3 in the AS21

Nahum 3 in the BAGH

Nahum 3 in the BBPNG

Nahum 3 in the BBT1E

Nahum 3 in the BDS

Nahum 3 in the BEV

Nahum 3 in the BHAD

Nahum 3 in the BIB

Nahum 3 in the BLPT

Nahum 3 in the BNT

Nahum 3 in the BNTABOOT

Nahum 3 in the BNTLV

Nahum 3 in the BOATCB

Nahum 3 in the BOATCB2

Nahum 3 in the BOBCV

Nahum 3 in the BOCNT

Nahum 3 in the BOECS

Nahum 3 in the BOGWICC

Nahum 3 in the BOHCB

Nahum 3 in the BOHCV

Nahum 3 in the BOHLNT

Nahum 3 in the BOHNTLTAL

Nahum 3 in the BOICB

Nahum 3 in the BOILNTAP

Nahum 3 in the BOITCV

Nahum 3 in the BOKCV

Nahum 3 in the BOKCV2

Nahum 3 in the BOKHWOG

Nahum 3 in the BOKSSV

Nahum 3 in the BOLCB

Nahum 3 in the BOLCB2

Nahum 3 in the BOMCV

Nahum 3 in the BONAV

Nahum 3 in the BONCB

Nahum 3 in the BONLT

Nahum 3 in the BONUT2

Nahum 3 in the BOPLNT

Nahum 3 in the BOSCB

Nahum 3 in the BOSNC

Nahum 3 in the BOTLNT

Nahum 3 in the BOVCB

Nahum 3 in the BOYCB

Nahum 3 in the BPBB

Nahum 3 in the BPH

Nahum 3 in the BSB

Nahum 3 in the CCB

Nahum 3 in the CUV

Nahum 3 in the CUVS

Nahum 3 in the DBT

Nahum 3 in the DGDNT

Nahum 3 in the DHNT

Nahum 3 in the DNT

Nahum 3 in the ELBE

Nahum 3 in the EMTV

Nahum 3 in the ESV

Nahum 3 in the FBV

Nahum 3 in the FEB

Nahum 3 in the GGMNT

Nahum 3 in the GNT

Nahum 3 in the HARY

Nahum 3 in the HNT

Nahum 3 in the IRVA

Nahum 3 in the IRVB

Nahum 3 in the IRVG

Nahum 3 in the IRVH

Nahum 3 in the IRVM

Nahum 3 in the IRVM2

Nahum 3 in the IRVO

Nahum 3 in the IRVP

Nahum 3 in the IRVT

Nahum 3 in the IRVT2

Nahum 3 in the IRVU

Nahum 3 in the ISVN

Nahum 3 in the JSNT

Nahum 3 in the KAPI

Nahum 3 in the KBT1ETNIK

Nahum 3 in the KBV

Nahum 3 in the KJV

Nahum 3 in the KNFD

Nahum 3 in the LBA

Nahum 3 in the LBLA

Nahum 3 in the LNT

Nahum 3 in the LSV

Nahum 3 in the MAAL

Nahum 3 in the MBV

Nahum 3 in the MBV2

Nahum 3 in the MHNT

Nahum 3 in the MKNFD

Nahum 3 in the MNG

Nahum 3 in the MNT

Nahum 3 in the MNT2

Nahum 3 in the MRS1T

Nahum 3 in the NAA

Nahum 3 in the NASB

Nahum 3 in the NBLA

Nahum 3 in the NBS

Nahum 3 in the NBVTP

Nahum 3 in the NET2

Nahum 3 in the NIV11

Nahum 3 in the NNT

Nahum 3 in the NNT2

Nahum 3 in the NNT3

Nahum 3 in the PDDPT

Nahum 3 in the PFNT

Nahum 3 in the RMNT

Nahum 3 in the SBIAS

Nahum 3 in the SBIBS

Nahum 3 in the SBIBS2

Nahum 3 in the SBICS

Nahum 3 in the SBIDS

Nahum 3 in the SBIGS

Nahum 3 in the SBIHS

Nahum 3 in the SBIIS

Nahum 3 in the SBIIS2

Nahum 3 in the SBIIS3

Nahum 3 in the SBIKS

Nahum 3 in the SBIKS2

Nahum 3 in the SBIMS

Nahum 3 in the SBIOS

Nahum 3 in the SBIPS

Nahum 3 in the SBISS

Nahum 3 in the SBITS

Nahum 3 in the SBITS2

Nahum 3 in the SBITS3

Nahum 3 in the SBITS4

Nahum 3 in the SBIUS

Nahum 3 in the SBIVS

Nahum 3 in the SBT

Nahum 3 in the SBT1E

Nahum 3 in the SCHL

Nahum 3 in the SNT

Nahum 3 in the SUSU

Nahum 3 in the SUSU2

Nahum 3 in the SYNO

Nahum 3 in the TBIAOTANT

Nahum 3 in the TBT1E

Nahum 3 in the TBT1E2

Nahum 3 in the TFTIP

Nahum 3 in the TFTU

Nahum 3 in the TGNTATF3T

Nahum 3 in the THAI

Nahum 3 in the TNFD

Nahum 3 in the TNT

Nahum 3 in the TNTIK

Nahum 3 in the TNTIL

Nahum 3 in the TNTIN

Nahum 3 in the TNTIP

Nahum 3 in the TNTIZ

Nahum 3 in the TOMA

Nahum 3 in the TTENT

Nahum 3 in the UBG

Nahum 3 in the UGV

Nahum 3 in the UGV2

Nahum 3 in the UGV3

Nahum 3 in the VBL

Nahum 3 in the VDCC

Nahum 3 in the YALU

Nahum 3 in the YAPE

Nahum 3 in the YBVTP

Nahum 3 in the ZBP