Deuteronomy 22 (IRVK)

1 ಸ್ವದೇಶದವನ ಎತ್ತಾಗಲಿ ಅಥವಾ ಕುರಿಯಾಗಲಿ ದಾರಿ ತಪ್ಪಿ ಹೋಗಿರುವುದನ್ನು ನೀವು ನೋಡಿಯೂ ನೋಡದಂತೆ ಅದನ್ನು ಬಿಟ್ಟು ಹೋಗಬಾರದು; ಅದನ್ನು ಅಟ್ಟಿಸಿಕೊಂಡು ಹೋಗಿ ಅವನಿಗೆ ಕೊಡಲೇಬೇಕು. 2 ಅವನು ನಿಮಗೆ ದೂರವಾಗಿದ್ದರೆ ಇಲ್ಲವೆ ಅವನು ಯಾರೋ ಎಂದು ನಿಮಗೆ ತಿಳಿಯದೆ ಹೋದರೆ, ಆ ಪಶುವನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ ನೀವು ಅದನ್ನು ಅವನಿಗೆ ಹಿಂತಿರುಗಿ ಕೊಡಬೇಕು. 3 ಅವನ ಕತ್ತೆಯಾಗಲಿ, ಬಟ್ಟೆಯಾಗಲಿ, ಅವನು ಕಳೆದುಕೊಂಡ ಯಾವ ವಸ್ತುವಾಗಲಿ ನಿಮಗೆ ಸಿಕ್ಕಿದರೆ ಹಾಗೆಯೇ ಮಾಡಬೇಕು; ನೋಡದಂತೆ ಇರಲೇ ಬಾರದು. 4 ಸ್ವದೇಶದವನ ಕತ್ತೆಯಾಗಲಿ ಅಥವಾ ಎತ್ತಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಕಾಣದವರಂತೆ ಹೋಗದೆ ಅವನಿಗೆ ಸಹಾಯಮಾಡಿ ಎಬ್ಬಿಸಬೇಕು. 5 ಸ್ತ್ರೀಯು ಪುರುಷವೇಷವನ್ನಾಗಲಿ ಅಥವಾ ಪುರುಷನು ಸ್ತ್ರೀವೇಷವನ್ನಾಗಲಿ ಹಾಕಿಕೊಳ್ಳಬಾರದು; ಹಾಗೆ ಮಾಡುವವರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯರು. 6 ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ಅಥವಾ ನೆಲದ ಮೇಲಾಗಲಿ ಇರುವ ಒಂದು ಪಕ್ಷಿಯ ಗೂಡಿನೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು, ಅವುಗಳ ಮೇಲೆ ತಾಯಿ ಹೊದಗಿರುವುದನ್ನು ಕಂಡರೆ ಮರಿಗಳನ್ನು ತೆಗೆದುಕೊಳ್ಳಬಹುದೇ ಹೊರತು ತಾಯಿಯನ್ನು ಹಿಡಿದುಕೊಳ್ಳಬಾರದು. 7 ನೀವು ಹೀಗೆ ನಡೆದುಕೊಂಡರೆ ನಿಮಗೆ ಶ್ರೇಯಸ್ಸು ಉಂಟಾಗುವುದು, ಮತ್ತು ಬಹುಕಾಲ ಬಾಳುವಿರಿ. 8 ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ಯಾವನಾದರೂ ಅದರ ಮಾಳಿಗೆಯಿಂದ ಬಿದ್ದು ನಿಮಗೆ ಜೀವಹತ್ಯ ದೋಷವುಂಟಾಗದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು. 9 ದ್ರಾಕ್ಷಿತೋಟಗಳಲ್ಲಿ ಬೇರೆ ವಿಧವಾದ ಬೀಜವನ್ನು ಬಿತ್ತಬಾರದು; ಹಾಗೆ ಮಾಡಿದರೆ ಯಾಜಕರು ಆ ಬೆಳೆಯನ್ನು, ದ್ರಾಕ್ಷಿಯ ಬೆಳೆಯನ್ನು ಅಂತೂ ಆ ತೋಟದ ಎಲ್ಲಾ ಬೆಳೆಯನ್ನು ದೇವರಿಗೆ ಸಮರ್ಪಿಸಬೇಕು. 10 ಎತ್ತನ್ನೂ ಮತ್ತು ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಿ ಉಳಬಾರದು. 11 ನಾರು ಹಾಗು ಉಣ್ಣೆಯೂ ಕೂಡಿರುವ ಬಟ್ಟೆಯನ್ನು ಹಾಕಿಕೊಳ್ಳಬಾರದು. 12 ನೀವು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಬೇಕು. 13 ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯನ್ನು ದ್ವೇಷಿಸಿ, ಅವಳ ವಿಷಯದಲ್ಲಿ ಇಲ್ಲಸಲ್ಲದ ಕೆಟ್ಟ ಮಾತುಗಳನ್ನು ಆಡಿ, 14 “ನಾನು ಇವಳನ್ನು ಮದುವೆಮಾಡಿಕೊಂಡೆನು; ಆದರೆ ಇವಳೊಡನೆ ಸಂಗಮಿಸಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು” ಎಂದು ಹೇಳಿ ಅವಳ ಹೆಸರನ್ನು ಕೆಡಿಸಿದರೆ, 15 ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕವಿಲ್ಲದವಳು ಎಂಬುವುದಕ್ಕೆ ನಿದರ್ಶನವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು. 16 ಆ ಸ್ತ್ರೀಯ ತಂದೆ ಅವರಿಗೆ, “ನಾನು ನನ್ನ ಮಗಳನ್ನು ಈ ಪುರುಷನಿಗೆ ಮದುವೆಮಾಡಿಕೊಟ್ಟ ಮೇಲೆ 17 ಇವನು ಅವಳನ್ನು ದ್ವೇಷಿಸಿ, ಪರಪುರುಷನ ಸಂಪರ್ಕ ಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳ ಹೆಸರನ್ನು ಅವಮಾನಪಡಿಸುತ್ತಾನೆ. ಇಗೋ ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುವುದಕ್ಕೆ ಇದೇ ಪ್ರಮಾಣ” ಎಂದು ಹೇಳಿ ಅವಳ ಹೊದಿಕೆಯನ್ನು ಆ ಊರಿನ ಹಿರಿಯರ ಮುಂದೆ ಇಡಬೇಕು. 18 ಆ ಊರಿನ ಹಿರಿಯರು ಅವನನ್ನು ಹಿಡಿಸಿ ಅವನನ್ನು ಹೊಡಿಸಬೇಕು. 19 ಇಸ್ರಾಯೇಲಳಾದ ಹೆಣ್ಣಿನ ವಿಷಯದಲ್ಲಿ ಆ ಪುರುಷನು ನಿರಾಧಾರವಾದ ತಪ್ಪು ಹೊರಿಸಿದ್ದರಿಂದ, ಅವನಿಗೆ ನೂರು ಶೆಕೆಲ್ ಬೆಳ್ಳಿ ದಂಡವನ್ನು ವಿಧಿಸಿ, ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು. ಮತ್ತು ಅವನು ಆ ಸ್ತ್ರೀಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ. 20 ಆದರೆ ಆ ಹೆಣ್ಣು ವಿವಾಹಕ್ಕೆ ಮುಂಚೆ ದೈಹಿಕವಾಗಿ ಪುರುಷಸಂಪರ್ಕ ಮಾಡಿದ್ದು ನಿಜ ಎಂದು ತಿಳಿದುಬಂದರೆ, 21 ಅವಳು ತಂದೆಯ ಅಧೀನದಲ್ಲಿರುವಾಗಲ್ಲೇ ಪರಪುರುಷನೊಡನೆ ಸಂಪರ್ಕಮಾಡಿ ಇಸ್ರಾಯೇಲರೊಳಗೆ ದುರಾಚಾರವನ್ನು ನಡಿಸಿದ್ದರಿಂದ, ಅವರು ಅವಳನ್ನು ತಂದೆಯ ಮನೆಯ ಬಾಗಿಲಿಗೆ ಕರೆಯಿಸಬೇಕು; ಊರಿನವರೆಲ್ಲರು ಅವಳನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ನಿವಾರಿಸಿಕೊಳ್ಳಬೇಕು. 22 ಯಾವನಾದರೂ ಇನ್ನೊಬ್ಬನ ಹೆಂಡತಿಯೊಡನೆ ವ್ಯಭಿಚಾರಮಾಡಿದ್ದು ತಿಳಿದುಬಂದರೆ ಆ ಸ್ತ್ರೀ ಮತ್ತು ಪುರುಷರಿಬ್ಬರಿಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ಇಸ್ರಾಯೇಲರ ಮಧ್ಯದಿಂದ ತೆಗೆದುಹಾಕಬೇಕು. 23 ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಯಾವನಾದರೂ ಊರೊಳಗೆ ಮರುಳುಗೊಳಿಸಿ ಸಂಗಮಿಸಿದರೆ, 24 ನೀವು ಅವರಿಬ್ಬರನ್ನೂ ಊರುಬಾಗಿಲಿನ ಹೊರಕ್ಕೆ ಕರೆತಂದು ಕಲ್ಲೆಸೆದು ಕೊಲ್ಲಬೇಕು. ಒಬ್ಬನಿಗೆ ನಿಶ್ಚಿತಳಾದ ಸ್ತ್ರೀಯನ್ನು ಕೆಡಿಸಿದ್ದರಿಂದ ಆ ಪುರುಷನಿಗೂ, ಊರಲ್ಲಿದ್ದು ರಕ್ಷಣೆಗಾಗಿ ಕೂಗಿಕೊಳ್ಳದೆ ಹೋದುದರಿಂದ ಆ ಸ್ತ್ರೀಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು. 25 ಆದರೆ ಆ ಪುರುಷನು ನಿಶ್ಚಿತಳಾದ ಆ ಸ್ತ್ರೀಯನ್ನು ಅಡವಿಯಲ್ಲಿ ಬಲಾತ್ಕಾರದಿಂದ ಸಂಗಮಿಸಿದ್ದರೆ ಪುರುಷನಿಗೆ ಮಾತ್ರ ಮರಣಶಿಕ್ಷೆಯಾಗಬೇಕು. 26 ಆ ಸ್ತ್ರೀಗೆ ಯಾವ ಶಿಕ್ಷೆಯೂ ಆಗಬಾರದು; ಅವಳಲ್ಲಿ ಮರಣ ಶಿಕ್ಷೆಗೆ ಪಾತ್ರವಾದ ಅಪರಾಧವೇನೂ ಇಲ್ಲ. ಒಬ್ಬ ಮನುಷ್ಯನು ಮತ್ತೊಬ್ಬನ ಮೇಲೆ ಬಿದ್ದು ಕೊಲ್ಲುವುದು ಹೇಗೋ ಈ ಸಂಗತಿಯೂ ಹಾಗೆಯೇ ಎಂದು ತಿಳಿಯಬೇಕು. 27 ಆ ಸ್ತ್ರೀಯು ಅಡವಿಯಲ್ಲೇ ಅವನ ಕೈಗೆ ಸಿಕ್ಕಿದ್ದರಿಂದ ಅವಳು ಕೂಗಿಕೊಂಡರೂ ತಪ್ಪಿಸುವವರು ಇರಲಿಲ್ಲ. 28 ಯಾರಿಗೂ ನಿಶ್ಚಯವಾಗದೆ ಇರುವ ಸ್ತ್ರೀಯನ್ನು ಒಬ್ಬನು ಹಿಡಿದು ಸಂಗಮಿಸಿದ್ದು ತಿಳಿದು ಬಂದರೆ, 29 ಅವನು ಅವಳನ್ನು ಮಾನಭಂಗಪಡಿಸಿದ್ದರಿಂದ, ಅವಳ ತಂದೆಗೆ ಐವತ್ತು ಶೆಕೆಲ್ ಬೆಳ್ಳಿಯನ್ನು ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು. ಅವನು ಬದುಕುವ ತನಕ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ. 30 ತಂದೆಗೆ ಹೆಂಡತಿಯಾದವಳನ್ನು ಸಂಗಮಿಸಲೇ ಬಾರದು; ಅದು ತಂದೆಗೆ ಅಪಮಾನಪಡಿಸಿದ ಹಾಗಾಗುವುದು.

In Other Versions

Deuteronomy 22 in the ANGEFD

Deuteronomy 22 in the ANTPNG2D

Deuteronomy 22 in the AS21

Deuteronomy 22 in the BAGH

Deuteronomy 22 in the BBPNG

Deuteronomy 22 in the BBT1E

Deuteronomy 22 in the BDS

Deuteronomy 22 in the BEV

Deuteronomy 22 in the BHAD

Deuteronomy 22 in the BIB

Deuteronomy 22 in the BLPT

Deuteronomy 22 in the BNT

Deuteronomy 22 in the BNTABOOT

Deuteronomy 22 in the BNTLV

Deuteronomy 22 in the BOATCB

Deuteronomy 22 in the BOATCB2

Deuteronomy 22 in the BOBCV

Deuteronomy 22 in the BOCNT

Deuteronomy 22 in the BOECS

Deuteronomy 22 in the BOGWICC

Deuteronomy 22 in the BOHCB

Deuteronomy 22 in the BOHCV

Deuteronomy 22 in the BOHLNT

Deuteronomy 22 in the BOHNTLTAL

Deuteronomy 22 in the BOICB

Deuteronomy 22 in the BOILNTAP

Deuteronomy 22 in the BOITCV

Deuteronomy 22 in the BOKCV

Deuteronomy 22 in the BOKCV2

Deuteronomy 22 in the BOKHWOG

Deuteronomy 22 in the BOKSSV

Deuteronomy 22 in the BOLCB

Deuteronomy 22 in the BOLCB2

Deuteronomy 22 in the BOMCV

Deuteronomy 22 in the BONAV

Deuteronomy 22 in the BONCB

Deuteronomy 22 in the BONLT

Deuteronomy 22 in the BONUT2

Deuteronomy 22 in the BOPLNT

Deuteronomy 22 in the BOSCB

Deuteronomy 22 in the BOSNC

Deuteronomy 22 in the BOTLNT

Deuteronomy 22 in the BOVCB

Deuteronomy 22 in the BOYCB

Deuteronomy 22 in the BPBB

Deuteronomy 22 in the BPH

Deuteronomy 22 in the BSB

Deuteronomy 22 in the CCB

Deuteronomy 22 in the CUV

Deuteronomy 22 in the CUVS

Deuteronomy 22 in the DBT

Deuteronomy 22 in the DGDNT

Deuteronomy 22 in the DHNT

Deuteronomy 22 in the DNT

Deuteronomy 22 in the ELBE

Deuteronomy 22 in the EMTV

Deuteronomy 22 in the ESV

Deuteronomy 22 in the FBV

Deuteronomy 22 in the FEB

Deuteronomy 22 in the GGMNT

Deuteronomy 22 in the GNT

Deuteronomy 22 in the HARY

Deuteronomy 22 in the HNT

Deuteronomy 22 in the IRVA

Deuteronomy 22 in the IRVB

Deuteronomy 22 in the IRVG

Deuteronomy 22 in the IRVH

Deuteronomy 22 in the IRVM

Deuteronomy 22 in the IRVM2

Deuteronomy 22 in the IRVO

Deuteronomy 22 in the IRVP

Deuteronomy 22 in the IRVT

Deuteronomy 22 in the IRVT2

Deuteronomy 22 in the IRVU

Deuteronomy 22 in the ISVN

Deuteronomy 22 in the JSNT

Deuteronomy 22 in the KAPI

Deuteronomy 22 in the KBT1ETNIK

Deuteronomy 22 in the KBV

Deuteronomy 22 in the KJV

Deuteronomy 22 in the KNFD

Deuteronomy 22 in the LBA

Deuteronomy 22 in the LBLA

Deuteronomy 22 in the LNT

Deuteronomy 22 in the LSV

Deuteronomy 22 in the MAAL

Deuteronomy 22 in the MBV

Deuteronomy 22 in the MBV2

Deuteronomy 22 in the MHNT

Deuteronomy 22 in the MKNFD

Deuteronomy 22 in the MNG

Deuteronomy 22 in the MNT

Deuteronomy 22 in the MNT2

Deuteronomy 22 in the MRS1T

Deuteronomy 22 in the NAA

Deuteronomy 22 in the NASB

Deuteronomy 22 in the NBLA

Deuteronomy 22 in the NBS

Deuteronomy 22 in the NBVTP

Deuteronomy 22 in the NET2

Deuteronomy 22 in the NIV11

Deuteronomy 22 in the NNT

Deuteronomy 22 in the NNT2

Deuteronomy 22 in the NNT3

Deuteronomy 22 in the PDDPT

Deuteronomy 22 in the PFNT

Deuteronomy 22 in the RMNT

Deuteronomy 22 in the SBIAS

Deuteronomy 22 in the SBIBS

Deuteronomy 22 in the SBIBS2

Deuteronomy 22 in the SBICS

Deuteronomy 22 in the SBIDS

Deuteronomy 22 in the SBIGS

Deuteronomy 22 in the SBIHS

Deuteronomy 22 in the SBIIS

Deuteronomy 22 in the SBIIS2

Deuteronomy 22 in the SBIIS3

Deuteronomy 22 in the SBIKS

Deuteronomy 22 in the SBIKS2

Deuteronomy 22 in the SBIMS

Deuteronomy 22 in the SBIOS

Deuteronomy 22 in the SBIPS

Deuteronomy 22 in the SBISS

Deuteronomy 22 in the SBITS

Deuteronomy 22 in the SBITS2

Deuteronomy 22 in the SBITS3

Deuteronomy 22 in the SBITS4

Deuteronomy 22 in the SBIUS

Deuteronomy 22 in the SBIVS

Deuteronomy 22 in the SBT

Deuteronomy 22 in the SBT1E

Deuteronomy 22 in the SCHL

Deuteronomy 22 in the SNT

Deuteronomy 22 in the SUSU

Deuteronomy 22 in the SUSU2

Deuteronomy 22 in the SYNO

Deuteronomy 22 in the TBIAOTANT

Deuteronomy 22 in the TBT1E

Deuteronomy 22 in the TBT1E2

Deuteronomy 22 in the TFTIP

Deuteronomy 22 in the TFTU

Deuteronomy 22 in the TGNTATF3T

Deuteronomy 22 in the THAI

Deuteronomy 22 in the TNFD

Deuteronomy 22 in the TNT

Deuteronomy 22 in the TNTIK

Deuteronomy 22 in the TNTIL

Deuteronomy 22 in the TNTIN

Deuteronomy 22 in the TNTIP

Deuteronomy 22 in the TNTIZ

Deuteronomy 22 in the TOMA

Deuteronomy 22 in the TTENT

Deuteronomy 22 in the UBG

Deuteronomy 22 in the UGV

Deuteronomy 22 in the UGV2

Deuteronomy 22 in the UGV3

Deuteronomy 22 in the VBL

Deuteronomy 22 in the VDCC

Deuteronomy 22 in the YALU

Deuteronomy 22 in the YAPE

Deuteronomy 22 in the YBVTP

Deuteronomy 22 in the ZBP