Job 33 (IRVK)

1 ಅದಿರಲಿ, ಯೋಬನೇ, ನನ್ನ ಮಾತನ್ನು ಕೇಳು, ನನ್ನ ಮಾತುಗಳಿಗೆಲ್ಲಾ ಕಿವಿಗೊಡು. 2 ಇಗೋ, ನನ್ನ ಬಾಯನ್ನು ತೆರೆದಿದ್ದೇನೆ, ನನ್ನನಾಲಿಗೆಯು ಬಾಯಿಯೊಳಗಿಂದ ಮಾತನಾಡುತ್ತಿದೆ. 3 ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುವವು,ನನ್ನ ತುಟಿಗಳು ತಿಳಿದುಕೊಂಡದ್ದನ್ನೇ ಸತ್ಯವಾಗಿ ಹೇಳುವವು. 4 ನಾನು ದೇವರಾತ್ಮನಿಂದಲೇ ನಿರ್ಮಿತನಾಗಿದ್ದೇನೆ,ನನ್ನ ಜೀವವು ಸರ್ವಶಕ್ತನಾದ ದೇವರ ಶ್ವಾಸದಿಂದುಂಟಾಗಿದೆ. 5 ನಿನಗೆ ಸಾಮರ್ಥ್ಯವಿದ್ದರೆ ನನಗೆ ಉತ್ತರಕೊಡು,ನನ್ನೆದುರಿನಲ್ಲಿಯೇ ವಾದವನ್ನು ಹೂಡಿ ನಿಂತುಕೋ. 6 ನೋಡು, ನಾನು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇದ್ದೇನೆ.ನಾನೂ ಜೇಡಿಮಣ್ಣಿನಿಂದ ರೂಪಿಸಲ್ಪಟ್ಟಿದ್ದೇನೆ. 7 ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು,ನನ್ನ ಒತ್ತಾಯವು ನಿನಗೆ ಹೊರೆಯಾಗಿರದು. 8 ನಿನ್ನ ನುಡಿಯ ಧ್ವನಿಯನ್ನು ಕೇಳಿದ್ದೇನೆ,ನನ್ನ ಕಿವಿಗೆ ಬಿದ್ದ ಈ ಮಾತುಗಳನ್ನು ಆಡಿದ್ದಿ, 9 ‘ನಾನು ಪರಿಶುದ್ಧನು, ನನ್ನೊಳಗೆ ದೋಷವಿಲ್ಲ, ನಾನು ನಿರ್ಮಲನು, ನನ್ನಲ್ಲಿ ಏನು ಪಾಪವಿಲ್ಲ. 10 ಆಹಾ, ಆತನು ನನ್ನಲ್ಲಿ ವಿರೋಧಕ್ಕೆ ಕಾರಣಗಳನ್ನು,ನನ್ನನ್ನು ಶತ್ರುವೆಂದು ಎಣಿಸಿಕೊಂಡಿದ್ದಾನೆ. 11 ನನ್ನ ಕಾಲುಗಳನ್ನು ಕೋಳಕ್ಕೆ ಹಾಕಿ,ನನ್ನ ಮಾರ್ಗಗಳನ್ನೆಲ್ಲಾ ಕಂಡುಕೊಂಡಿದ್ದಾನೆ’ ಎಂದು ಹೇಳಿದೆಯಲ್ಲಾ. 12 ಇಗೋ, ನೀನು ಹೀಗೆ ಹೇಳಿದ್ದು ನ್ಯಾಯವಲ್ಲವೆಂಬುದೇ ನನ್ನ ಉತ್ತರ,ದೇವರು ಮನುಷ್ಯನಿಗಿಂತ ದೊಡ್ಡವನಾಗಿದ್ದಾನಷ್ಟೆ. 13 ಆತನು ನಿನ್ನ ಮಾತುಗಳಲ್ಲಿ ಒಂದಕ್ಕಾದರೂ ಉತ್ತರ ದಯಪಾಲಿಸನೆಂಬುದಾಗಿ,ನೀನು ಆತನೊಂದಿಗೆ ವ್ಯಾಜ್ಯವಾಡುವುದೇಕೆ? 14 ದೇವರು ಮಾತನಾಡುವ ರೀತಿ ಒಂದುಂಟು ಹೌದು, ಎರಡೂ ಉಂಟು,ಮನುಷ್ಯನಾದರೋ ಲಕ್ಷಿಸುವುದಿಲ್ಲ. 15 ಮನುಷ್ಯರಿಗೆ ಗಾಢನಿದ್ರೆಯು ಉಂಟಾದಾಗಲೂ,ಹಾಸಿಗೆಯ ಮೇಲೆ ಮಲಗಿದಾಗ ಜೊಂಪುಹತ್ತಿದಾಗಲೂ ಆತನು ಸ್ವಪ್ನದಲ್ಲಿ ರಾತ್ರಿಯ ಕನಸಿನಲ್ಲಿ, 16 ಅವರ ಕಿವಿಗಳನ್ನು ತೆರೆದು, ಅವರಿಗೆ ಶಿಕ್ಷಾವಚನವನ್ನು ಉಪದೇಶಿಸಿ ಅದಕ್ಕೆ ಮುದ್ರೆ ಹಾಕುವನು. 17 ಹೀಗೆ ಮನುಷ್ಯನನ್ನು ಅವನ ದುಷ್ಕಾರ್ಯದಿಂದ ತಪ್ಪಿಸುವನು,ಮಾನವನಿಗೆ ಗರ್ವವನ್ನು ಮರೆಮಾಡುವನು. 18 ಅವನ ಆತ್ಮವನ್ನು ಅಧೋಲೋಕಕ್ಕೆ ಬೀಳದಂತೆ ತಡೆದು,ಅವನ ಜೀವವನ್ನು ದೈವಾಸ್ತ್ರದಿಂದ ಅಳಿದು ಹೋಗದ ಹಾಗೆ ನಿಲ್ಲಿಸುವನು. 19 ಇದಲ್ಲದೆ ಸಂಕಟದಿಂದಲೂ, ನಿತ್ಯವಾದ ಎಲುಬುಗಳ ನೋವಿನಿಂದಲೂ,ಮನುಷ್ಯನು ಹಾಸಿಗೆಯ ಮೇಲೆ ಶಿಕ್ಷಿಸಲ್ಪಡುವನು. 20 ಅವನ ಜೀವವು ಆಹಾರಕ್ಕೆ ಬೇಸರಗೊಳ್ಳುವುದು,ಅವನ ಆತ್ಮವು ಮೃಷ್ಟಾನ್ನಕ್ಕೂ ಅಸಹ್ಯಪಡುವುದು. 21 ಅವನ ಮಾಂಸವು ಕ್ಷಯಿಸಿ ಕಾಣದೆ ಹೋಗುವುದು,ಕಾಣದಿದ್ದ ಅವನ ಎಲುಬುಗಳು ಬಯಲಾಗುವವು. 22 ಅವನ ಆತ್ಮವು ಅಧೋಲೋಕವನ್ನು ಸಮೀಪಿಸುವುದು,ಅವನ ಪ್ರಾಣವು ಸಂಹಾರದೂತರಿಗೆ ಹತ್ತಿರವಾಗುವುದು. 23 ಮನುಷ್ಯನ ಕರ್ತವ್ಯವನ್ನು ತೋರಿಸತಕ್ಕ ಸಹಸ್ರ ದೇವದೂತರಲ್ಲಿ ಒಬ್ಬನುಅವನಿಗೆ ಮಧ್ಯಸ್ಥನಾಗಿ ಬೇಡುವುದರಿಂದ, 24 ದೇವರು ಒಂದು ವೇಳೆ ಆ ಮನುಷ್ಯನನ್ನು ಮೆಚ್ಚಿ ಈಡು ದೊರಕುವಂತೆ ಮಾಡಿ,‘ಅಧೋಲೋಕಕ್ಕೆ ಇಳಿಯದಂತೆ ಇವನನ್ನು ರಕ್ಷಿಸು’ ಎಂದು ಅಪ್ಪಣೆಕೊಟ್ಟರೆ, 25 ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವುದು.ಅವನು ಪುನಃ ಎಳೆತನದ ಚೈತನ್ಯವನ್ನು ಅನುಭವಿಸುವನು. 26 ಅವನು ದೇವರನ್ನು ಪ್ರಾರ್ಥಿಸಿ ಆತನ ಒಲುಮೆಗೆ ಪಾತ್ರನಾಗಿ,ಆತನ ದರ್ಶನ ಮಾಡಿ ಉತ್ಸಾಹದಿಂದ ಧ್ವನಿಗೈದು,ತಿರುಗಿ ಆತನಿಂದ ನೀತಿವಂತನೆಂದು ಎನ್ನಿಸಿಕೊಳ್ಳುವನು. 27 ಅವನು ಮನುಷ್ಯರ ಮುಂದೆ ನಿಂತು, ‘ನಾನು ಪಾಪ ಮಾಡಿ ನ್ಯಾಯವನ್ನು ಕೆಡಿಸಿದ್ದರೂ,ಆತನು ಮುಯ್ಯಿತೀರಿಸಲಿಲ್ಲ. 28 ನನ್ನ ಆತ್ಮವನ್ನು ಅಧೋಲೋಕಕ್ಕೆ ಹೋಗದಂತೆ ವಿಮೋಚಿಸಿದ್ದಾನೆ,ನನ್ನ ಜೀವವು ಬೆಳಕನ್ನು ಕಾಣುತ್ತಿರುವುದು’ ಎಂದು ಕೀರ್ತನೆ ಹಾಡುವನು. 29 ದೇವರು ಎರಡು ಸಾರಿ, ಹೌದು ಮೂರು ಸಾರಿ ಈ ಕಾರ್ಯಗಳನ್ನೆಲ್ಲಾ ಮಾಡುವನು. 30 ನೋಡು, ಮನುಷ್ಯನ ಆತ್ಮವು ಅಧೋಲೋಕದಿಂದ ಹಿಂದಿರುಗಿ,ಜೀವಲೋಕದ ಬೆಳಕನ್ನು ಅನುಭವಿಸುವಂತೆ ಮಾಡುವನು 31 ಯೋಬನೇ, ನನ್ನ ಕಡೆಗೆ ಗಮನವಿಟ್ಟು ಕೇಳು, ಮೌನವಾಗಿರು,ನಾನೇ ಮಾತನಾಡುವೆನು. 32 ನೀನು ಏನಾದರೂ ಹೇಳಬೇಕೆಂದಿದ್ದರೆ ನನಗೆ ಉತ್ತರವಾಗಿ ಹೇಳು,ಮಾತನಾಡು, ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಆಶೆ. 33 ಇಲ್ಲವಾದರೆ ನೀನೇ ನನಗೆ ಕಿವಿಗೊಟ್ಟು ಮೌನವಾಗಿರು,ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.”

In Other Versions

Job 33 in the ANGEFD

Job 33 in the ANTPNG2D

Job 33 in the AS21

Job 33 in the BAGH

Job 33 in the BBPNG

Job 33 in the BBT1E

Job 33 in the BDS

Job 33 in the BEV

Job 33 in the BHAD

Job 33 in the BIB

Job 33 in the BLPT

Job 33 in the BNT

Job 33 in the BNTABOOT

Job 33 in the BNTLV

Job 33 in the BOATCB

Job 33 in the BOATCB2

Job 33 in the BOBCV

Job 33 in the BOCNT

Job 33 in the BOECS

Job 33 in the BOGWICC

Job 33 in the BOHCB

Job 33 in the BOHCV

Job 33 in the BOHLNT

Job 33 in the BOHNTLTAL

Job 33 in the BOICB

Job 33 in the BOILNTAP

Job 33 in the BOITCV

Job 33 in the BOKCV

Job 33 in the BOKCV2

Job 33 in the BOKHWOG

Job 33 in the BOKSSV

Job 33 in the BOLCB

Job 33 in the BOLCB2

Job 33 in the BOMCV

Job 33 in the BONAV

Job 33 in the BONCB

Job 33 in the BONLT

Job 33 in the BONUT2

Job 33 in the BOPLNT

Job 33 in the BOSCB

Job 33 in the BOSNC

Job 33 in the BOTLNT

Job 33 in the BOVCB

Job 33 in the BOYCB

Job 33 in the BPBB

Job 33 in the BPH

Job 33 in the BSB

Job 33 in the CCB

Job 33 in the CUV

Job 33 in the CUVS

Job 33 in the DBT

Job 33 in the DGDNT

Job 33 in the DHNT

Job 33 in the DNT

Job 33 in the ELBE

Job 33 in the EMTV

Job 33 in the ESV

Job 33 in the FBV

Job 33 in the FEB

Job 33 in the GGMNT

Job 33 in the GNT

Job 33 in the HARY

Job 33 in the HNT

Job 33 in the IRVA

Job 33 in the IRVB

Job 33 in the IRVG

Job 33 in the IRVH

Job 33 in the IRVM

Job 33 in the IRVM2

Job 33 in the IRVO

Job 33 in the IRVP

Job 33 in the IRVT

Job 33 in the IRVT2

Job 33 in the IRVU

Job 33 in the ISVN

Job 33 in the JSNT

Job 33 in the KAPI

Job 33 in the KBT1ETNIK

Job 33 in the KBV

Job 33 in the KJV

Job 33 in the KNFD

Job 33 in the LBA

Job 33 in the LBLA

Job 33 in the LNT

Job 33 in the LSV

Job 33 in the MAAL

Job 33 in the MBV

Job 33 in the MBV2

Job 33 in the MHNT

Job 33 in the MKNFD

Job 33 in the MNG

Job 33 in the MNT

Job 33 in the MNT2

Job 33 in the MRS1T

Job 33 in the NAA

Job 33 in the NASB

Job 33 in the NBLA

Job 33 in the NBS

Job 33 in the NBVTP

Job 33 in the NET2

Job 33 in the NIV11

Job 33 in the NNT

Job 33 in the NNT2

Job 33 in the NNT3

Job 33 in the PDDPT

Job 33 in the PFNT

Job 33 in the RMNT

Job 33 in the SBIAS

Job 33 in the SBIBS

Job 33 in the SBIBS2

Job 33 in the SBICS

Job 33 in the SBIDS

Job 33 in the SBIGS

Job 33 in the SBIHS

Job 33 in the SBIIS

Job 33 in the SBIIS2

Job 33 in the SBIIS3

Job 33 in the SBIKS

Job 33 in the SBIKS2

Job 33 in the SBIMS

Job 33 in the SBIOS

Job 33 in the SBIPS

Job 33 in the SBISS

Job 33 in the SBITS

Job 33 in the SBITS2

Job 33 in the SBITS3

Job 33 in the SBITS4

Job 33 in the SBIUS

Job 33 in the SBIVS

Job 33 in the SBT

Job 33 in the SBT1E

Job 33 in the SCHL

Job 33 in the SNT

Job 33 in the SUSU

Job 33 in the SUSU2

Job 33 in the SYNO

Job 33 in the TBIAOTANT

Job 33 in the TBT1E

Job 33 in the TBT1E2

Job 33 in the TFTIP

Job 33 in the TFTU

Job 33 in the TGNTATF3T

Job 33 in the THAI

Job 33 in the TNFD

Job 33 in the TNT

Job 33 in the TNTIK

Job 33 in the TNTIL

Job 33 in the TNTIN

Job 33 in the TNTIP

Job 33 in the TNTIZ

Job 33 in the TOMA

Job 33 in the TTENT

Job 33 in the UBG

Job 33 in the UGV

Job 33 in the UGV2

Job 33 in the UGV3

Job 33 in the VBL

Job 33 in the VDCC

Job 33 in the YALU

Job 33 in the YAPE

Job 33 in the YBVTP

Job 33 in the ZBP